ENGLISH   |   KANNADA

Blogದಿನಾಂಕ;12.09.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.09.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 316       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಉದಯಗಿರಿ ಠಾಣೆ.

ಪಿರ್ಯಾದಿ ಶಂಕರ್ , #126, ಮುನೇಶ್ವರನಗರ ರವರು ದಿ;10/09/2017 ರಂದು ಬೆಳಗ್ಗೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ನಂತರ ರಾತ್ರಿ ವಾಪಸ್ ಬಂದು ನೋಡಲಾಗಿ ಯಾರೋ ಕಳ್ಳರು ಸದರಿ ಮನೆಯ ಮುಂಭಾಗಿಲನ್ನು ಮೀಟಿ ಬೀರಿನಲ್ಲಿಟ್ಟಿದ್ದ 50 ಗ್ರಾಂ ಚಿನ್ನದ ವಸ್ತುಗಳು, 01 ಬೆಳ್ಳಿ ಕಾಲು ಚೈನ್, 01 ಸ್ಯಾಮ್ ಸಂಗ್ ಮೊಬೈಲ್ & ನಗದು ಒಟ್ಟು ಬೆಲೆ 1,40,000 ರೂ ನ್ನು ಕಳ್ಳತನ ಮಾಡಿದ್ದು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ವಿ ವಿ ಪುರಂ ಠಾಣೆ.

ದಿನಾಂಕ:09.09.17 ರಂದು 10.30 ಗಂಟೆ ಪಿರ್ಯಾದಿ ಹರೀಶ್ ಕುಮಾರ್, ಬೃಂದಾವನ ಬಡಾವಣೆ ರವರ ಮನೆಯ ಬಳಿ ತಮ್ಮ ಯಮಹಾ ಆರ್ ಎಕ್ಸ್ ನಂ. ಕೆಎ-09 ವಿ-5019 ಬೈಕ್‌ ನ್ನು ಲಾಕ್‌ ಮಾಡಿ ನಿಲ್ಲಿಸಿ ದಿನಾಂಕ:10.0917 ರಂದು ಬೆಳಿಗ್ಗೆ ನೋಡಲಾಗಿ ಬೈಕ್‌ ಕಳುವಾಗಿದ್ದು ಕಳ್ಳತನ ವಾಗಿರುವ ಬೈಕ್ ನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

ಉದಯಗಿರಿ ಠಾಣೆ.

ಪಿರ್ಯಾದಿ ಹಬೀಬ್ ಅಹಮ್ಮದ್ ರವರು ತಮ್ಮ ಹೊಂಡಾ ಆಕ್ಟಿವಾ ನಂ. ಕೆಎ-55 ಎಲ್-4301 ನ್ನು #02, ಎಂ ಐ ಜಿ, ಬಿಲಾಲ್ ಮಸೀದಿ ರಸ್ತೆ, ಉದಯಗಿರಿ ಮನೆಯ ಬಳಿ ದಿ09/09/2017 ರಂದು ನಿಲ್ಲಿಸಿ ನಂತರ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ದೇವರಾಜ ಸಂಚಾರ ಠಾಣೆ.

ದಿನಾಂಕ;11-09-2017ರಂದು ಸಂಜೆ 4-15 ಗಂಟೆ ಸಮಯದಲ್ಲಿ ಪಿರ್ಯಾದಿ ಪ್ರಮೋದ್ ರವರು  ಬಜಾಜ್ ಮೋಟರ್ ಸೈಕಲ್ ನಂಬರ್ ಕೆ.ಎ 09 ಇ.ಹೆಚ್. 5723 ರಲ್ಲಿ ಅವರ ಸ್ನೇಹಿತರಾದ ಸುಧೀಂದ್ರ ರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಕೆ.ಅರ್ ಅಸ್ವತ್ರೆ ಅರ್.ಎಂ.ಒ. ಬಿಲ್ಡಿಂಗ್ ಹತ್ತಿರ ಜಯದೇವ ಅಸ್ವತ್ರೆ ಕಡೆಗೆ ಹೋಗುವಾಗ  ಕೆ.ಅರ್ ಅಸ್ವತ್ರೆ ಎಸ್.ಅರ್. ರಸ್ತೆ ಕಡೆಗೆ ಆದಂತೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮಾರುತಿ  ಕಾರ್ ನಂಬರ್ ಕೆ.ಎ 45 ಎಂ.3263 ರ  ಚಾಲಕ ಕಾರ್ ಅನ್ನು ಏಕಾಏಕಿ ಚಾಲನೆ ಮಾಡಿಕೊಂಡು ಬೈಕ್ ಸವಾರರ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿಯವರ ಸ್ನೇಹಿತರಾದ ಸುಧೀಂದ್ರ ರವರ ಎಡಕಾಲಿಗೆ ಪೆಟ್ಟಾಗಿದ್ದು,  ಸದರಿ ಚಾಲಕನ  ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು  ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ;11/09/2017 ರಂದು ಬೆಳಿಗ್ಗೆ 10;30 ಗಂಟೆಯಲ್ಲಿ  ಪಿರ್ಯಾದಿ ತಿರುಮಲಾಚಾರ್ ರವರ ಮಗ ಮುರುಳಿ ರವರು ಬುಲೆಟ್ ಮೋಟಾರ್ ಸೈಕಲ್ ನಂ KA-09-HJ-4501 ಇದನ್ನು ಆಕಾಶ್ ವಾಣಿ ಸರ್ಕಲ್ ಕಡೆಯಿಂದ ಯಾದವಗಿರಿ ಕಡೆಗೆ ಹೋಗಲು ಪದಕಿ ಇಂಡಸ್ರ್ಡಿಯಲ್ ಗ್ಯಾಸ್ ಕಛೇರಿ ಬಳಿ ಹೋಗುತ್ತಿರುವಾಗ ಇದೆ ಸಮಯಕ್ಕೆ ಎದುರುಗಡೆಯಿಂದ ಬಂದ ಮೋಟಾರ್ ಸೈಕಲ್ ನಂ KA-55-H-1720 ಇದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುರುಳಿಯವರು ಚಾಲನೆ ಮಾಡುತ್ತಿದ್ದ ಬುಲೆಟ್ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮುರುಳಿಯವರ ಎಡತೊಡೆಗೆ ತೀವ್ರ ಪೆಟ್ಟಾಗಿ ಮೂಳೆ  ಮುರಿದು ಚಿಕಿತ್ಸೆಗೆ ಕಾಮಾಕ್ಷಿ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಚಿಕಿತ್ಸೆಯ ಉಸ್ತುವಾರಿಯಲ್ಲಿದ್ದ ಕಾರಣ ಪಿರ್ಯಾದಿಯವರು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಮೇಲ್ಕಂಡ ಮೋಟಾರ್ ಸೈಕಲ್ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು.

10

ವಂಚನೆ ಪ್ರಕರಣ 

01

ಸರಸ್ವತಿಪುರಂ ಠಾಣೆ,

ಫಿರ್ಯಾದಿ ನಾಗರತ್ನ ರವರು  ದಿನಾಂಕ:12/9/2017 ರಂದು ಬೆಳಿಗ್ಗೆ ಸುಮಾರು 8-55 ಗಂಟೆಗೆ ಕೃಷ್ಣಧಾಮಕ್ಕೆ ಬಂದು ಗೇಟ್ ಒಳಗೆ ಪ್ರವೇಶಿಸುತ್ತಿದ್ದಾಗ ಗೇಟ್ ಪಕ್ಕದಲ್ಲೇ ಇಬ್ಬರು ಅಪರಿಚಿತ ವ್ಯಕ್ತಿಗಳು ನಿಂತಿದ್ದು ಪಿರ್ಯಾದಿಯನ್ನು ಕರೆದು ನೀವು ಹೀಗೆ ಚಿನ್ನವನ್ನು ಹಾಕಿಕೊಂಡು ಹೋಗುವುದು ಸರಿಯಲ್ಲ, ನೀವು ನ್ಯೂಸ್ ಪೇಪರ್ ನಲ್ಲಿ ಎಲ್ಲಾ ನೋಡಿದ್ದೀರಾ ಚಿನ್ನ ಧರಿಸಿಕೊಂಡು ಹೋಗುವರನ್ನು  ಹೆದರಿಸಿ ಚಿನ್ನವನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ, ನಿಮಗೆ ಜ್ಞಾನ ಬೇಡವೆ ಎಂದು  ಹೇಳಿ, ನಾವು ಪೊಲೀಸಿನವರು ನೀವು ಹೀಗೆ ಚಿನ್ನವನ್ನು ಹಾಕಿಕೊಂಡು ಹೋಗೋದು ಬೇಡ ನೀವು ಹಾಕಿಕೊಂಡಿರುವ ಚಿನ್ನದ ಚೈನು, ಮತ್ತು ಚಿನ್ನದ ಬಳೆಯನ್ನು ಬಿಚ್ಚಿಕೊಡಿ ನಾವು ಒಂದು ಕವರ್ ನಲ್ಲಿ ಹಾಕಿಕೊಡುವುದಾಗಿ ಹೇಳಿದ್ದು ಪಿರ್ಯಾದಿಯು ಅವರು ಹೇಳುತ್ತಿದ್ದ ವಿಚಾರವು ಸತ್ಯವೆಂದು ತಿಳಿದು, ಧರಿಸಿದ್ದ ಚಿನ್ನದ ಚೈನು ಸುಮಾರು 60 ಗ್ರಾಂ ತೂಕದ್ದು ಮತ್ತು 4 ಚಿನ್ನದ ಬಳೆ ಸುಮಾರು 60 ಗ್ರಾ ತೂಕದ್ದು ಇವುಗಳನ್ನು ಬಿಚ್ಚಿಕೊಟ್ಟಿದ್ದು ಒಂದು ಪೇಪರ್ ನಲ್ಲಿ ಚಿನ್ನದ ಚೈನು ಮತ್ತು ಬಳೆಗಳನ್ನು ಹಾಕಿರುವುದಾಗಿ ತಿಳಿಸಿ, ಪೇಪರ್ ಸುತ್ತಿ ಪಿರ್ಯಾದಿ ಕೈಗೆ ನೀಡಿದರು.ಸ್ವಲ್ಪ ಮುಂದೆ ಹೋಗಿ ಪೇಪರ್ ನ್ನು ತೆರೆದು ನೋಡಿದಾಗ  ಅದರಲ್ಲಿ ನನ್ನ 60 ಗ್ರಾಂ ತೂಕದ 4 ಬಳೆಗಳು ಇದ್ದು, ಸುಮಾರು 60 ಗ್ರಾಂ ತೂಕದ ಚಿನ್ನದ ಚೈನು ಇರಲಿಲ್ಲ. ಆದ್ದರಿಂದ ಪಿರ್ಯಾದಿಯ ಗಮನವನ್ನು ಬೇರೆಡೆ ಸೆಳೆದು, ವಂಚಿಸಿದ್ದು ಸದರಿ ಆರೋಪಿಗಳ  ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ದೇವರಾಜ ಠಾಣೆ.

ಪಿರ್ಯಾದಿ ಅಮರ್ ಸಿಂಗ್ ಮತ್ತು ಅವರ ತಮ್ಮ ಪ್ರದೀಪ್ ಸಿಂಗ್ ರವರು ಅರಸು ರಸ್ತೆಯ #87 ರ ಮೈ ಟಾರ್ಪಾಲಿನ್ಸ್ ಎಂಬ ಬ್ಯಾಗ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಈಗ್ಗೆ 6 ವರ್ಷದ ಹಿಂದೆ ಇದೇ ಅಂಗಡಿಯನ್ನು ಸುರೇಶ್ & ಲಕ್ಷ್ಮಿನಾರಾಯಣ ಎಂಬುವರಿಗೆ 10.00.000/-ರೂಗಳಿಗೆ ಭೋಗ್ಯಕ್ಕೆ ನೀಡಿದ್ದು, ಈ ನಡುವೆ ಸುರೇಶ್ ರವರು ಮೃತ ಪಟ್ಟಿರುತ್ತಾರೆ. ಅಂಗಡಿಯ ವಾಯಿದೆ ಮುಗಿದ್ದಿದ್ದರಿಂದ ಸುರೇಶ್ ರವರ ಪತ್ನಿ ರೂಪ ಮತ್ತು ಲಕ್ಷ್ಮಿ ನಾರಾಯಣ ರವರಿಗೆ ಭೋಗ್ಯದ ಹಣವನ್ನು ಹಿಂದಿರುಗಿಸಿ ಅಂಗಡಿಯನ್ನು ಬಿಡಿಸಿಕೊಂಡು, ವ್ಯಾಪಾರ ಮಾಡುತ್ತಿದ್ದು ಈ ನಡುವೆ ರೂಪ & ಲಕ್ಷ್ಮಿನಾರಾಯಣ ರವರು ಅಂಗಡಿಗೆ ಬಂಡವಾಳವಾಗಿ 30 ಲಕ್ಷ ಸಾಲವನ್ನು ಸುರೇಶ್ ಮಾಡಿದ್ದು, ಅದನ್ನು ಹಿಂದಿರುಗಿಸುವಂತೆ ಪಿರ್ಯಾದಿಗೆ ಕೇಳಿದ್ದು, ಆತ ಮಾಡಿದ ಸಾಲವನ್ನು ನಾವೇಕೆ ಕಟ್ಟಬೇಕೆಂದು ಪಿರ್ಯಾದುದಾರರು ವಿರೋಧಿಸಿದ್ದಕ್ಕೆ, ದಿನಾಂಕ 11.09.2017 ರಂದು ರಾತ್ರಿ 9.00 ಗಂಟೆಗೆ ಲಕ್ಷ್ಮಿನಾರಾಯಣ, ರೂಪ, ಕುಮಾರ ಮತ್ತು ಗುರುರಾಜ್ ರವರು ಅಂಗಡಿಗೆ ಬಂದು ಗಲಾಟೆ ಮಾಡಿ, ಪಿರ್ಯಾದುದಾರರ ತಮ್ಮ ಪ್ರದೀಪ್ ಸಿಂಗ್ ರವರ ಕತ್ತಿನ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

                                 MYSURU CITY TRAFFIC VIOLATION CASES

 

                                         DATE  :12-09-2017

SLNO

           HEADS

                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

165

317

444

-

-

926

2

TOTAL NUMBER OF CRR'S

649

738

747

534

726

3,394

3

TOTAL FINE AMOUNT COLLECTED

74,200

86,600

77,100

58,300

90,200

386,400

4

POLICE NOTICE ISSUED

-

-

-

-

-

-

5

PARKING TAGS

-

-

5

-

-

5

6

FATAL

-

 

-

-

-

-

7

NON FATAL

-

 

1

-

1

2

8

INTERCEPTOR CASES

-

30

150

-

-

180

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

20

-

-

-

20Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com