ENGLISH   |   KANNADA

Blogದಿನಾಂಕ:11.03.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :12.03.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 334       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ಕೃಷ್ಣರಾಜ ಠಾಣೆ.

ಪಿರ್ಯಾದಿ  ಲೋಕೇಶ್  ರವರು  ಅಗ್ರಹಾರ  ಸರ್ಕಲ್  ನಲ್ಲಿರುವ  ವಾಣಿವಿಲಾಸ  ಮಾರ್ಕೆಟ್‌ಗೆ  ಸೇರಿದ  ಬಿಲ್ಡಿಂಗ್‌‌ನಲ್ಲಿ  ಐಶ್ವರ್ಯ  ಪ್ರೂಟ್  ಸ್ಟಾಲ್  ಹಣ್ಣಿನ  ಅಂಗಡಿಯನ್ನು  ದಿನಾಂಕ: 10/03/18  ರಂದು  ರಾತ್ರಿ  10-00  ಗಂಟೆಗೆ  ವ್ಯಾಪಾರ  ಮುಗಿಸಿ  ಅಂಗಡಿಯ  ಶೆಲ್ಟರ್  ಹಾಕಿಕೊಂಡು  ಹೋಗಿ  ದಿನಾಂಕ;11/03/2018  ರಂದು  ಬೆಳಿಗ್ಗೆ8-00  ಗಂಟೆಗೆ  ಬಂದು  ಅಂಗಡಿಯ  ಮುಂದಿನ  ಶೆಲ್ಟರನ್ನು  ತೆಗೆದು  ಒಳಗೆ  ಹೋಗಿ  ನೋಡಲಾಗಿ  ಯಾರೋ  ಕಳ್ಳರು  ಮಹಡಿಯ  ಮೇಲಿಂದ  ಬಿಲ್ಡಿಂಗ್‌ನಿಂದ  ಕೆಳಗೆ  ಇಳಿಯಲು  ಇರುವ  ಕಬ್ಬಿಣದ  ಏಣಿಯಿಂದ  ಕೆಳಗೆ  ಬಂದು  ಬಾಗಿಲನ್ನು  ಮೀಟಿ  ಬಾಗಿಲಿನ   ಕೆಳಗಿನ   ಪಟ್ಟಿಯನ್ನು  ಮುರಿದು  ಅಂಗಡಿಯ  ಒಳಗೆ  ಬಂದು  ಕ್ಯಾಷ್  ಬಾಕ್ಸ್ ನಲ್ಲಿದ್ದ ಸು.  98,000/- ರೂಗಳನ್ನು  ಹಾಗೂ  ಚಿಲ್ಲರೆಹಣ7.300/-ರೂಗಳನ್ನು  ಯಾರೋ  ಕಳ್ಳತನ  ಮಾಡಿದ್ದು  ಪತ್ತೆ  ಮಾಡಿ  ಕ್ರಮ ಜರುಗಸಲು  ನೀಡಿದ  ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ,

ಪಿರ್ಯಾದಿ ಚಿನ್ಮಯಿ, ದಟ್ಟಗಳ್ಳಿ ರವರು ಆರೋಪಿ ನಿತಿನ್ ರವರನ್ನು  ದಿನಾಂಕ:19.06.2017 ರಂದು  ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಮಾತುಕತೆಯಲ್ಲಿ ಆರೋಪಿಗಳಾದ  ರೂಪ, ವಿಜಯ್ ಕುಮಾರ್, ಮೋಹನ್ ರವರ ಬೇಡಿಕೆಯಂತೆ 5 ಲಕ್ಷ ರೂ ನಗದು ಹಾಗೂ 150 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಕೊಟ್ಟು, ಸುಮಾರು 20 ಲಕ್ಷ ರೂಗಳನ್ನು ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದು, ಮದುವೆಯ ನಂತರ ಆರೋಪಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಹೆಚ್ಚಿನ ವರದಕ್ಷಿಣೆಯಾಗಿ 5 ಲಕ್ಷ ರೂ ಹಣವನ್ನು ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

03

ಕೆ ಆರ್ ಸಂಚಾರ ಠಾಣೆ.

ದಿನಾಂಕ ;10/11-03-2018 ರಂದು ರಾತ್ರಿ 02.30 ಗಂಟೆಯಲ್ಲಿ ಪಿರ್ಯಾದಿ ಎಂ.ಪಿ ಗಗನ್‌ ಎಂಬುವರ  ಸ್ನೇಹಿತ  ಮಹಂತ್‌.ಬಿ.ಚಿಕ್ಕಾಡೆ  ಎಂಬುವರು  ಪಿರ್ಯಾದಿಯನ್ನು ಅವರ ಸುಜುಕಿ ಆಕ್ಸಿಸ್‌ ಸ್ಕೂಟರ್ ನಂKA-09-EW-0639  ರಲ್ಲಿ  ಕರೆದುಕೊಂಡು ವಿಶ್ವಮಾನವ ಜೋಡಿ ರಸ್ತೆಯಲ್ಲಿ ಬೇಕ್‌ ಪಾಯಿಂಟ್ ಕಡೆಯಿಂದ  ಮಹಂತ್‌.ಬಿ.ಚಿಕ್ಕಾಡೆ   ಸ್ಕುಟರ್‌ನ್ನು ಅತೀವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದು, 17 ನೇ ಮೇನ್‌ ರಸ್ತೆ ಜಂಕ್ಷನ್‌ ಹತ್ತಿರ  ಹರ್ಷ ಆಸ್ಪತ್ರೆ ಎದುರು  ರಸ್ತೆಯಲ್ಲಿ ತೀರಾ ಬಲಕ್ಕೆ ಚಾಲನೆ ಮಾಡಿದಾಗ  ಸ್ಕೂಟರ್ ರಸ್ತೆ ವಿಭಜಕದ ಸಿಮೆಂಟ್‌ ಕಟ್ಟೆಗೆ ಡಿಕ್ಕಿಯಾಗಿದ್ದು ನಂತರ ನಿಯಂತ್ರಣ ತಪ್ಪಿ   ಇಬ್ಬರು  ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದಾಗ  ಮಹಂತ್‌.ಬಿ.ಚಿಕ್ಕಾಡೆ  ಗೆ ತಲೆ ಮುಖಕ್ಕೆ ತೀವ್ರ ಗಾಯವಾಗಿದ್ದು  ಪಿರ್ಯಾದಿ  ಎಂ.ಪಿ ಗಗನ್‌ಗೆ   ಎಡಕಾಲಿಗೆ ಏಟಾಗಿದ್ದು  ಸಾರ್ವಜನಿಕರು ಉಪಚರಿಸಿ ಅಂಬ್ಯೂಲೆನ್ಸ್‌ ನಲ್ಲಿ  ಇಬ್ಬರನ್ನು ಕೆ.ಆರ್. ಆಸ್ಪತ್ರೆಗೆ ಕಳುಹಿಸಿದಾಗ  ಮಹಂತ್‌.ಬಿ.ಚಿಕ್ಕಾಡೆ  ಯನ್ನು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು  ಇದರ ಬಗ್ಗೆ ಕಾನೂನು ಕ್ರಮ ಜರುಗಸಲು ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ;10-03-2018 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಪಿರ್ಯಾದಿ ಸಲ್ಮ ಬಾನು ರವರು ಮಗಳಾದ ನೂರ್ ಮಹಮ್ಮದಿಯ ಜೊತೆಯಲ್ಲಿ ಪೈವ್  ಲೈಟ್ ವೃತ್ತದ ಹತ್ತಿರ ನಡೆದುಕೊಂಡು ಗೌರ್ನಮೆಂಟ್ ಹೌಸ್ ಕಾಂಪೌಂಡ್ ಕಡೆಯಿಂದ  ಕಾವೇರಿ ಎಂಪೋರಿಯಂ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ, ಪೈವ್ ಲೈಟ್  ವೃತ್ತ ಕಡೆಯಿಂದ ವೇಗವಾಗಿ ಬಂದ ದ್ವಿಚಕ್ರ (ನಂಬರ್ ಗೊತ್ತಿರುವುದಿಲ್ಲ)ವಾಹನದ ಚಾಲಕ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿರ್ಲಕ್ಷತೆಯಿಂದ ಪಿರ್ಯಾದಿಯವರ ಹಿಂಬಾಗ ನಡೆದುಕೊಂಡು ಹೋಗುತ್ತಿದ್ದ ಮಗಳಾದ ನೂರ್ ಮಹಮ್ಮದಿ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರ ಮಗಳು ಕೆಳಗೆ ಬಿದ್ದು ಮುಖಕ್ಕೆ ಪೆಟ್ಟಾಗಿದ್ದು, ಪಿರ್ಯಾದಿಯವರು ಗಾಯಗೊಂಡಿದ್ದ ಮಗಳನ್ನು ಸಾರ್ವಜನಿಕರ ಸಹಾಯದಿಂದ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಸದರಿ ಬೈಕ್ ಸವಾರನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥ ಸಂಚಾರ ಠಾಣೆ.

ದಿನಾಂಕ:-11/03/18  ರಂದು  ರಾತ್ರಿ  ಸುಮಾರು  9.00 ಗಂಟೆಯಲ್ಲಿ ಪಿರ್ಯಾದಿ  ಸೈಯದ್  ಅಹಮ್ಮದ್  ರವರ  ಮಗ  ಸೈಯದ್ ಶಹಬಾಜ್ ರವರ  ಕೆಎ.09.ಆರ್.3200  ನಂಬರಿನ  ಮೋಟಾರ್ ಸೈಕಲ್  ನಲ್ಲಿ   ರಾಜೀವ್ ನಗರ  ಸೇರುವ  ನಮಾಜ್ ಬೋರೆ  ಜಂಕ್ಷನ್  ನಲ್ಲಿ  ರಸ್ತೆಯನ್ನು ದಾಟಿ ಹೋಗುತ್ತಿದ್ದ ವೇಳೆ  ರಿಂಗ್  ರಸ್ತೆಯಲ್ಲಿ ಸಾತಗಳ್ಳಿ ಡಿಪೋ ಕಡೆಯಿಂದ ಕೆಎ.51.ಎಎ..305 ನಂಬರಿನ ಮಿನಿ ಬಸ್ಸನ್ನು ಅದರ ಚಾಲಕ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ  ಚಾಲನೆ ಮಾಡಿಕೊಂಡು  ಬಂದು  ಪಿರ್ಯಾದಿ ಮಗನ  ಮೋ.ಸೈಕಲ್  ಗೆ ಡಿಕ್ಕಿ  ಮಾಡಿದ ಪರಿಣಾಮ  ಬಸ್ಸು  ನಿಯಂತ್ರಣ  ತಪ್ಪಿ ಮೊಗಚಿಕೊಂಡಿದ್ದು  ಬಸ್ಸಿನಲ್ಲಿದ್ದ  ಕೆಲವರಿಗೆ  ಪೆಟ್ಟಾಗಿದ್ದು,  ತುಂಬಾ  ಪೆಟ್ಟಾಗಿದ್ದ  ಪಿರ್ಯಾದಿ ಮಗ ಸೈಯದ್  ಶಹಬಾಜ್  ರವರನ್ನು  ಚಿಕಿತ್ಸೆಗೆ  ನಾರಾಯಣ  ಹೃದಯಾಲಯ  ಆಸ್ಪತ್ರೆಗೆ ಕರೆದುಕೊಂಡು  ಬಂದು  ಸೇರಿಸಿದ್ದು  ಸದರಿ  ಬಸ್  ಚಾಲಕನ  ವಿರುದ್ದ  ಕ್ರಮ  ಜರುಗಿಸಲು  ನೀಡಿದ  ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

01

ಹೆಬ್ಬಾಳ್ ಠಾಣೆ.

ಪಿರ್ಯಾದಿ ರುಕ್ಕು ರವರು ನೀಡಿದ ದೂರೆಂದರೆ, ಪಿರ್ಯಾದಿ ತಮ್ಮನಾದ ಸುಬ್ರಮಣಿ, 19 ವರ್ಷ ರವರು ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ನಿಧಿ ಇಂಡಸ್ಟ್ರೀಸ್ ನಲ್ಲಿ ಪಂಚಿಂಗ್ ಮೆಷಿನ್ ಆಪರೇಟರ್‌ ಆಗಿ ಕಳೆದ 1 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ದಿ;11/03/2018 ರಂದು  ಬೆಳಿಗ್ಗೆ ಸುಮಾರು 10.30 ಗಂಟೆ ಸಮಯದಲ್ಲಿ ಕೆಲಸ ಮಾಡುತ್ತಿದ್ದಾಗ ಪಂಚಿಂಗ್ ಮೆಷಿನ್ ಗೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದು,  ಸದರಿ  ನಿಧಿ ಇಂಡಸ್ಟ್ರೀಸ್‌ನ ಮಾಲೀಕರಾದ ಅಂಬರೀಶ್ ರವರ ನಿರ್ಲಕ್ಷತನದಿಂದ ಸುರಕ್ಷತಗೆ ಸಂಬಂಧಿಸಿದ  ತಲೆಗೆ ಹೆಲ್ಮೆಟ್‌, ಬಾಡಿ ಪ್ರೊಟೆಕ್ಟರ್, ಕೈಗಳಿಗೆ ಗ್ಲೌಸ್‌, ಕಾಲಿಗೆ ಶೂಗಳನ್ನು ನೀಡದೇ ಪಂಚಿಂಗ್ ಮೆಷಿನ್ ಕೆಲಸಕ್ಕೆ ವಹಿಸಿ  ತೀವ್ರ ನಿರ್ಲಕ್ಷತನ ಮತ್ತು ಅಜಾಗರೂಕತೆಯನ್ನು ತೋರಿಸಿದ್ದರಿಂದ ನನ್ನ ತಮ್ಮ ಸುಬ್ರಮಣಿ ಮೆಷಿನ್‌‌ಗೆ ಸಿಕ್ಕಿಹಾಕಿಂಡ ಮೃತನಾಗಿರುತ್ತಾನೆ, ಆದ್ದರಿಂದ ಇಂಡಸ್ಟ್ರೀಸ್‌ನ ಮಾಲೀಕರಾದ ಅಂಬರೀಶ್ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                MYSURU CITY TRAFFIC VIOLATION CASES

 

                                     DATE  :11-03-2018

SLNO

                  HEADS

                          NO. OF CASES

DR

KR

NR

SN

VV

TOTAL

1

TOTAL NUMBER OF FTVRS

511

520

427

503

440

2401

2

TOTAL NUMBER OF CRR'S

278

235

324

254

258

1349

3

TOTAL FINE AMOUNT COLLECTED

31,100

28,500

35,100

27300

28,800

150,800

4

POLICE NOTICE ISSUED

0

8

0

0

0

8

5

PARKING TAGS

2

20

0

0

17

39

6

FATAL

0

0

0

0

0

0

7

NON FATAL

0

0

1

0

1

2

8

INTERCEPTOR CASES

0

95

180

50

0

325

9

SUSPENSION OF D.L.

0

0

0

0

0

0

11

Sec 283 IPC CASES

0

0

0

0

1

1

12

Sec 353 IPC CASES

0

0

0

0

0

0

13

TOWING CASES

0

0

0

0

15

15Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com