ENGLISH   |   KANNADA

Blog



ದಿನಾಂಕ:12.03.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :13.03.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.ದಿನಾಂಕ:12.03.2018ರ

Daily Crime Report

No of views: 153       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ವಿಜಯನಗರ ಠಾಣೆ.

ದಿನಾಂಕ 10/03/18 ರಂದು ಸಂಜೆ ಸುಮಾರು 1630 ಗಂಟೆಯಲ್ಲಿ  ಶಿವಕುಮಾರ್ ಮತ್ತು ಅರುಣ್ ರವರು ಹಿನ್ ಕಲ್ ನ  ನನ್ನೇಶ್ವರ ದೇವಸ್ಥಾನದ ಬಳಿ ಇರುವ ನಿವೇಶನದಲ್ಲಿ ಕಾಮಗಾರಿಯನ್ನು ಮಾಡುತ್ತಿದ್ದು  ಪಿರ್ಯಾದಿ ರಾಜು ಮತ್ತು ಗ್ರಾಮಸ್ಥರು  ಸೇರಿ ಶಿವಕುಮಾರ್ ಮತ್ತು ಅರುಣ್ ರವರಿಗೆ ಪ್ರಾಧಿಕಾರದಲ್ಲಿ ಈ ವಿಚಾರದ ಬಗ್ಗೆ ಇತ್ಯರ್ಥ ಬಾಕಿ ಇದ್ದು, ಅಲ್ಲಿಯವರೆವಿಗೂ ಕಾಮಗಾರಿಗಳನ್ನು ಮಾಡಬೇಡಿ ಎಂದು ತಿಳಿಸಿದಾಗ ಬಸವೇಗೌಡ ರವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ, ತಳ್ಳಿ ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು, ಎಲ್ಲರನ್ನು ಉದ್ದೇಶಿಸಿ ಈ ಸೈಟ್ ವಿಚಾರಕ್ಕೆ ಬಂದರೆ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

04

ಎನ್ ಆರ್ ಠಾಣೆ.

ದಿನಾಂಕ;12/03/18 ರಂದು ಬೆಳಿಗ್ಗೆ 0600 ಗಂಟೆಗೆ ಪಿರ್ಯಾದಿ ಮೋಸಸ್ ಜಯಶಂಕರ್, #876, 02 ಕ್ರಾಸ್, ಕಲ್ಪವೃಕ್ಷನಗರ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ಸಂಜೆ 1650 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೇಗ ಮುರಿದು ಮನೆಯಲ್ಲಿದ್ದ 115 ಗ್ರಾಂ ತೂಕದ ಒಡವೆಗಳು ಅಂದಾಜು ಬೆಲೆ 2,50,000/- ರೂ.ಗಳು ಆಗಿದ್ದು, ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಆರೋಪಿಗಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು.

ನಜರ್ ಬಾದ್ ಠಾಣೆ.

ಪಿರ್ಯಾದಿ ಪುನಿತ್ ಕುಮಾರ್ ಜೈನ್, #860, 13 ನೇ ಕ್ರಾಸ್ ವಿನಯ ಮಾರ್ಗ ರವರು ತಮ್ಮ ಮನೆಯ ರೂಂ ನ ಬೀರುವಿನಲ  ಬಾಕ್ಸ್ ನಲ್ಲಿ   ಇಟ್ಟಿದ್ದ 220 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಇಟ್ಟಿದ್ದು ದಿನಾಂಕ;27/02/18 ರಂದು ನೋಡಿದಾಗ ಕಳ್ಳತನವಾಗಿದ್ದು ದಿನಾಂಕ;ರವರು 12/02/18 ರಿಂದ 18/02/18 ರವರೆಗೆ ಆಲನಹಳ್ಳಿ ವಾಸಿ ಸಿದ್ದಮ್ಮ ಮನೆಗೆಲಸ ಮಾಡಿದ್ದು ನಂತರ ಕೆಲಸಕ್ಕೆ ಬಂದಿರುವುದಿಲ್ಲಾ ಆದ್ದರಿಂದ ಸಿದ್ದಮ್ಮ ನ ಮೇಲೆ ಅನುಮಾನವಿದ್ದು ವಿಚಾರಣೆಗೆ ಒಳಪಡಿಸಿ ಪತ್ತೆ ಮಾಡಿಕೊಡಲು ನೀಡಿದ ದೂರು.

ಸರಸ್ವತಿಪುರಂ ಠಾಣೆ,

ದಿನಾಂಕ;12.03.2018 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿ ಗಜೇಂದ್ರ, #541, ಬ್ಯಾಂಕರ್ಸ್ ಕಾಲೋನಿ ರವರು  ತಮ್ಮ ಮನೆಗೆ  ಬೀಗವನ್ನು ಹಾಕಿಕೊಂಡು ಹೋಗಿ ಮದ್ಯಾಹ್ನ 13-30 ಗಂಟೆಯ ಸಮಯದಲ್ಲಿ ಮನೆಯ ಬಳಿ ಬಂದಾಗ ಯಾರೋ ಕಳ್ಳರು ಮನೆಯ ಬೀಗವನ್ನು ಒಡೆದು, ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ 1,00,000/- ರೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ಕುವೆಂಪುನಗರ ಠಾಣೆ.

ದಿನಾಂಕ;12/08/18 ರಂದು ಬೆಳಿಗ್ಗೆ 1100 ಗಂಟೆಗೆ ಪಿರ್ಯಾದಿ ಹೇಮಲತಾ, #4334, ಜೆ ಬ್ಲಾಕ್, ಕನಕದಾಸ ನಗರ ರವರು  ತಮ್ಮ ಮನೆಗೆ ಬೀಗ ಹಾಕಿಕೊಂಡು ಸಿಟಿಗೆ ಹೋಗಿದ್ದು ಮಧ್ಯಾಹ್ನ 0300 ಗಂಟಗೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗವನ್ನು ಮೀಟಿ ಬೆಡ್ ರೂಮ್ ನಲ್ಲಿದ್ದ ಗಾಡ್ರೇಜ್ ಬೀರುವಿನಲ್ಲಿದ್ದ 10,000/-ರೂ. ನಗದು ಮತ್ತು(ಒಟ್ಟು ಸುಮಾರು 166 ಗ್ರಾಮ್ ತೂಕದ ಚಿನ್ನದ ಒಡವೆಗಳು ಒಟ್ಟು 1ಕೆಜಿ 500 ಗ್ರಾಮ್ ತೂಕದ ಬೆಳ್ಳಿಯ ಪದಾರ್ಥಗಳು) ಅಂದಾಜು ಬೆಲೆ 3,75,000/- ರೂ. ಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.  

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ದೇವರಾಜ ಸಂಚಾರ ಠಾಣೆ.

ದಿನಾಂಕ:11.03.2018 ರಂದು ಸಂಜೆ 1610 ಗಂಟೆಯ ಸಮಯದಲ್ಲಿಪಿರ್ಯಾದಿ ಮಂಜು  ಮತ್ತು ಅವರ ಸ್ನೇಹಿತೆ ಪೂರ್ಣಿಮ ರವರು  ನಾನ್ ಸ್ಟಾಪ್ ಗೇಟ್ ಹತ್ತಿರ ನಡೆದುಕೊಂಡು  ಇರ್ವಿನ್ ರಸ್ತೆ ಕಡೆಗೆ ಹೋಗುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ನಂ.ಕೆಎ10 ಎಫ್ 0276 ನಿಂತಿದ್ದು ಅದರ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ಸ್ಟಾಂಡ್ ಒಳಗಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ19 ಎಫ್ 3272 ರ ಚಾಲಕ ಬಸ್ ನಿಲ್ದಾಣದಿಂದ ಹೊರಗಡೆ ಬಂದು ನಿರ್ಲಕ್ಷತೆಯಿಂದ ಯಾವುದೇ ಸೂಚನೆ ನೀಡದೇ  ಬಸ್ ಅನ್ನು ಏಕಾ ಏಕಿ ಎಡಕ್ಕೆ ತಿರುಗಿಸಿದ್ದರಿಂದ  ಬಸ್ಸಿನ ಹಿಂಬಾಗದ ಬಲಬಾಗದ ಬಾಡಿ ನಿಂತಿದ್ದ ಬಸ್ಸಿನ ಎಡಬಾಗದ ಬಾಡಿಗೆ  ಪಿರ್ಯಾದಿಯವರು  ಮತ್ತು ಪೂರ್ಣಿಮಾ ಇಬ್ಬರು ಸಿಕ್ಕಿಕೊಂಡು  ಎರಡು ಬಸ್ಸಿನ ಬಾಡಿಯಿಂದ ಇಬ್ಬರಿಗೂ ಒತ್ತಿದ್ದು ಪಿರ್ಯಾದಿ ಮತ್ತು ಅವರ ಸ್ನೇಹಿತೆ ಪೂರ್ಣಿಮಾ ರವರಿಗೆ  ಬೆನ್ನಿಗೆ ಪೆಟ್ಟಾಗಿದ್ದು,ಜೆ.ಎಸ್.ಎಸ್. ಅಸ್ವತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲುಮಾಡಿದ್ದು, ಈ ಅಪಘಾತಕ್ಕೆ ಕಾರಣನಾದ ಬಸ್  ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ: 11.03.2018 ರಂದು ರಾತ್ರಿ 2150  ಗಂಟೆಯ ಸಮಯದಲ್ಲಿ ಪಿರ್ಯಾದಿ ಮರೀಗೌಡ ರವರು  ಕಳಿಂಗ ಬಾರ್ ಮುಂಬಾಗದ ರಸ್ತೆಯಲ್ಲಿ ನಡೆದುಕೊಂಡು ಸಯ್ಯಾಜಿರಾವ್ ರಸ್ತೆ ಕಡೆಗೆ ಹೋಗುತ್ತಿದ್ದಾಗ ಸಯ್ಯಾಜಿರಾವ್ ರಸ್ತೆ ಕಡೆಯಿಂದ  ಕಾರ್  ನಂಬರ್ ಕೆ.ಎ-13 ಎ-4093 ರ ಚಾಲಕ  ಕಾರ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿರ್ಲಕ್ಷತೆಯಿಂದ ಪಿರ್ಯಾದಿಯವರಿಗೆ ಡಿಕ್ಕಿ ಮಾಡಿದ ಪರಿಣಾಮ  ಪಿರ್ಯಾದಿಯವರು ಕೆಳಗೆ ಬಿದ್ದು ಜ್ಞಾನ ತಪ್ಪಿದ ಅವರನ್ನು ಕಾರ್ ಚಾಲಕ ಚಿಕಿತ್ಸೆ ಬಗ್ಗೆ ಕೆ.ಅರ್. ಅಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಅಪಘಾತ ಮಾಡಿದ ಸದರಿ ಕಾರು ಚಾಲಕನವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;11.03.2018  ರಂದು ಮದ್ಯಾಹ್ನ 1.30  ಗಂಟೆ  ಸಮಯದಲ್ಲಿ ಪಿರ್ಯಾದಿ  ಸಚಿನ್ ಗೌಡ ರವರು   ತಮ್ಮ ಮೋಟಾರ್  ಸೈಕಲ್ ನಂಬರ್ ಕೆಎ-55  ಡಬ್ಲ್ಯೂ- 7121  ರಲ್ಲಿ  ಹಿಂಬದಿಯಲ್ಲಿ ಅವರ   ಚಿಕ್ಕಮ್ಮರವರಾದ ರೇಣುಕಾ  ರವರನ್ನು  ಕೂರಿಸಿಕೊಂಡು ಎಂ ಎಂ ರಸ್ತೆ ಮಲೇಮಹದೇಶ್ವರ ದೇವಸ್ಥಾನದ ಮಾರ್ಗವಾಗಿ  ಚಾಲನೆ ಮಾಡಿಕೊಂಡು ಸಿಟಿ ಗೆ  ಹೋಗುತ್ತಿದ್ದ ವೇಳೆ ಹಿಂದಿನಿಂದ ಮಾರುತಿ  ವ್ಯಾನ್  ನಂಬರ್ ಕೆಎ-55  ಎಂ-3064  ರ ಚಾಲಕ  ಆತಿವೇಗ  ಮತ್ತು  ಅಜಾಗರೂಕತೆಯಿಂದಚಾಲನೆ   ಮಾಡಿಕೊಂಡುಬಂದು ಪಿರ್ಯಾದಿ  ಮೋಟಾರ್  ಸೈಕಲ್ ಗೆ  ಡಿಕ್ಕಿಮಾಡಿದ   ಪರಿಣಾಮ  ,ಪಿರ್ಯಾದಿ  ಹಾಗು  ಆವರ ಚಿಕ್ಕಮ್ಮ ಇಬ್ಬರು  ವಾಹನ ಸಮೇತ  ರಸ್ತೆ ಮೇಲೆ  ಬಿದ್ದು ಪೆಟ್ಟಾಗಿದ್ದು ಗೋಪಾಲಗೌಡ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದು  ಸದರಿ  ಕಾರ್  ಚಾಲಕನ  ವಿರುದ್ದ  ಕ್ರಮ  ಜರುಗಿಸಲು  ನೀಡಿದ  ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ವಿಜಯನಗರ ಠಾಣೆ.

ಪಿರ್ಯಾದಿ ಶಿವಕುಮಾರ್ ರವರು ನೀಡಿದ ದೂರೆಂದರೆ, ದಿನಾಂಕ;12/03/18 ರಂದು 1800 ಗಂಟೆಗೆ ಹಿನ್ ಕಲ್ ನ ಇಮ್ಯಾಕ್ಯುಲೇಟ್ ಹಾರ್ಟ್ ಕಾನ್ವೆಂಟ್ ನ ಶಾಲಾ ನಿವೇಶಕ್ಕೆ ಆರೋಪಿಗಳಾದ ಲೋಹಿತ್ ಅರಸ್, ನಳಿನಿ ಅರಸ್, ರಾಜು & ಇತರೆ 30 ಜನರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮುತ್ತಿಗೆ ಹಾಕಿ ಕಲ್ಲು ತೂರಟ ನಡೆಸಿ ಶಾಲಾ ಆವರಣದಲ್ಲಿ ಅಳವಡಿಸಿದ್ದ ಸಿ.ಸಿ ಕ್ಯಾಮೆರವನ್ನು, ಕಂಪೌಂಡ್ ಬೇಲಿಯನ್ನು  ಜಖಂಗೊಳಿಸಿ ಇದನ್ನು ತಮ್ಮ ಮೊಬೈಲ್ ನಲ್ಲಿ  ಶಾಲಾ ಸಿಬ್ಬಂದಿಯೊಬ್ಬರು ಸೆರೆ ಹಿಡಿಯುತ್ತಿದ್ದಾಗ ಅವರ ನೊಬೈಲ್ ಅನ್ನು ಕಸಿದುಕೊಂಡು ಕೊಲೆ ಬೆದರಿಕೆ ಹಾಕಿದ್ದು. ಸದರಿ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರು.

 

                            MYSURU CITY TRAFFIC VIOLATION CASES

 

                                               DATE  :12-03-2018

SLNO

                HEADS

                   NO. OF CASES

DR

KR

NR

SN

VV

TOTAL

1

TOTAL NUMBER OF FTVRS

511

520

427

503

440

2401

2

TOTAL NUMBER OF CRR'S

278

235

324

254

258

1349

3

TOTAL FINE AMOUNT COLLECTED

31,100

28,500

35,100

27300

28,800

150,800

4

POLICE NOTICE ISSUED

0

8

0

0

0

8

5

PARKING TAGS

2

20

0

0

17

39

6

FATAL

0

0

0

0

0

0

7

NON FATAL

0

0

1

0

1

2

8

INTERCEPTOR CASES

0

95

180

50

0

325

9

SUSPENSION OF D.L.

0

0

0

0

0

0

11

Sec 283 IPC CASES

0

0

0

0

1

1

12

Sec 353 IPC CASES

0

0

0

0

0

0

13

TOWING CASES

0

0

0

0

15

15



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com