ENGLISH   |   KANNADA

Blog



ದಿನಾಂಕ:09.04.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.04.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 51       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಮಂಡಿ ಠಾಣೆ,

ಪಿರ್ಯಾದಿ ಮಾದೇಶ ರವರು  ದಿ: 08-04-18 ರಂದು ರಾತ್ರಿ ಕಬೀರ್ ರಸ್ತೆಯಲ್ಲಿ ಹೋಗುವಾಗ, 04 ಜನ ಅಪರಿಚಿತ ಹುಡುಗರು ಪಿರ್ಯಾದಿಯನ್ನು ಅಡ್ಡಗಟ್ಟಿ , ಅವರಲ್ಲಿ ಒಬ್ಬ ಚಾಕು ತೋರಿಸಿ ಹಲ್ಲೆ ಮಾಡಿ, ಪರ್ಸ್ ನಲ್ಲಿದ್ದ 1400/-ರೂ.ಹಣ. ಒಂದು ಲೆನೆವೋ ಟಚ್ ಸ್ಕ್ರೀನ್ ಮೊಬೈಲ್ ಪೋನ್ ಮತ್ತು ಪರ್ಸ್ ಕಿತ್ತುಕೊಂಡು ಪರ್ಸ್ ನಲ್ಲಿದ್ದ ಎಸ್.ಬಿ.ಐ ಎಟಿಎಂ ಕಾರ್ಡ್ ನೋಡಿ, ಸ್ಕೂಟರ್ ನಲ್ಲಿ ಸಯ್ಯಾಜಿರಾವ್ ರಸ್ತೆ ಮಾರ್ಕೆಟ್ ಎದುರು ಇರುವ ಎಟಿಎಂ ಗೆ ಕರೆದುಕೊಂಡು ಹೋಗಿ 1000/-ರೂ.ಹಣ ಡ್ರಾ ಮಾಡಿಸಿಕೊಂಡು, ಎಟಿಎಂ ಕಾರ್ಡ್ ಕಿತ್ತುಕೊಂಡು ಪಿನ್ ನಂಬರ್ ಪಡೆದು ಪಿರ್ಯಾದಿಯನ್ನು ಬಿಟ್ಟು ಹೋಗಿದ್ದು, 04 ಜನರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನೀಡಿದ ದೂರು.

4

ಹಲ್ಲೆ ಪ್ರಕರಣ      

01

ನರಸಿಂಹರಾಜ ಠಾಣೆ.

ದಿಃ-೦8.೦4.2018 ರಂದು 04-30 ಗಂಟೆ ಸಮಯದಲ್ಲಿ ಪಿರ್ಯಾದಿ ಸುರೇಶ್ ರವರು ಸುಬಾಷ್ನಗರದ ಬಿ.ಬಿ.ಆಯಿಷಾ ಆಸ್ಪತ್ರೆಯ ಮುಂಭಾಗವಿರುವ ಪಾರ್ಕ್ನಲ್ಲಿ ಕುಳಿತ್ತಿದ್ದಾಗ ಆರೋಪಿಗಳಾದ ನಿಂಗರಾಜು, ಶಿವರಾಜು, ಗರುರಾಜು ರವರು ಪಿರ್ಯಾದಿಯೊಂದಿಗೆ  ಜಗಳ ತೆಗೆದು ಅವಾಚ್ಯ ಶಬ್ದಗಳೀಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಕಾವ್ಯ, # ಹೆಚ್ ಐ ಜಿ-44, ಬ್ಯಾಂಕರ್ಸ್ ಕಾಲೋನಿ, ಶಾರದಾ ದೇವಿ ನಗರ  ರವರು ದಿನಾಂಕ:25/03/2018 ರಂದು ತಮ್ಮ ಮನೆಯನ್ನು ಅರವಿಂದನಗರ ದಿಂದ ಶಾರದಾದೇವಿನಗರಕ್ಕೆ ಶಿಫ್ಟ್ ಮಾಡಿ ಮನೆಯ ಸಾಮಾನುಗಳನ್ನು ಜೋಡಿಸಲು ಸಹಾಯಕ್ಕಾಗಿ ತಮ್ಮ ಗೆಳತಿಯಾದ ಮುದ್ದಮ್ಮ ಕನ್ನಿಕೆ ಹಾಗೂ ತಮ್ಮ ಮನೆಯಲ್ಲಿ ಕೆಲಸಮಾಡುತ್ತಿದ್ದ ಯಶೋಧ ಎಂಬಾಕೆಯನ್ನು ಕರೆದುಕೊಂಡು ಮನೆಯ ಸಾಮಾನುಗಳನ್ನು  ಸಂಜೆ 6.00 ಗಂಟೆವರೆಗೂ ಜೋಡಿಸಿ, ಕೆಲಸ ಮುಗಿದ ನಂತರ ಯಶೋಧಳನ್ನು ವಾಪಸ್ ತಮ್ಮ ಮನೆಗೆ ಕಳುಹಿಸಿರುತ್ತಾರೆ. ಸ್ವಲ್ಪ ಸಮಯದ ನಂತರ ಮನೆಯನ್ನು ಪರಿಶೀಲಿಸಿ ನೋಡಲಾಗಿ ಮನೆಯಲ್ಲಿಟ್ಟಿದ್ದ, ಮುದ್ದಮ್ಮ ಕನ್ನಿಕೆ ರವರಿಗೆ ಸೇರಿದ 4.000 ರೂ ಬೆಲೆ ಬಾಳುವ ಸ್ಯಾಮ್ ಸಂಗ್ ಪ್ರೊ ಆನ್-5 ಹಾಗೂ ಪಿರ್ಯಾದುದಾರರಿಗೆ ಸೇರಿದ 40.000 ರೂ ನಗದು ಹಣ ಕಾಣೆಯಾಗಿದ್ದು, ಯಶೋದ ಎಂಬಾಕೆಯೇ ಕಳ್ಳತನಮಾಡಿಕೊಂಡು ಹೋಗಿದ್ದು, ಆಕೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ದೇವರಾಜ ಠಾಣೆ.

ಪಿರ್ಯಾದಿ ವೆಂಕಟೇಶ ರವರು  ದಿನಾಂಕ 02/04/2018 ರಂದು ಬೆಳಿಗ್ಗೆ 11.30 ಗಂಟೆಯ ಸಮಯದಲ್ಲಿ  ಕೆಎ-02/ಹೆಚ್‌ಜಿ-5702 ಹಿರೋ ಸ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಲ್ಲಿ ಕೆ.ಆರ್‌ ಆಸ್ಪತ್ರೆಗೆ ಬಂದಿದ್ದು, ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಆಸ್ಪತ್ರೆಯ ಒಳಗೆ ಹೋಗಿ ವಾಪಸ್ಸು 12-30 ಗಂಟೆಯ ಸಮಯದಲ್ಲಿ ಬಂದು ನೋಡಿದಾಗ  ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;08.04.2018  ರಂದು  ಸಂಜೆ  4.10  ಗಂಟೆ ಸಮಯದಲ್ಲಿ  ಪಿರ್ಯಾದಿ  ಮಹಮ್ಮದ್ ಮುನಾವರ್  ರವರು ತಮ್ಮ  ಮೋಟಾರ್  ಸೈಕಲ್  ನಂ ಕೆಎ-55  ಡಬ್ಯೂ 6622  ರಲ್ಲಿ ತಮ್ಮ  ಚಿಕ್ಕಮ್ಮ  ರವರನ್ನು  ಕೂರಿಸಿಕೊಂಡು ರಿಂಗ್ ರಸ್ತೆ ಕಡೆಯಿಂದ  ನಾರಾಯಣ  ಹೃದಯಾಲಯದ ಕಡೆಗೆ ಚಾಲನೆ  ಮಾಡಿಕೊಂಡು  ಹೋಗುತ್ತಿದ್ದ ಸಮಯದಲ್ಲಿ   ಯಾಸೀನ್  ಮಸೀದಿ  ರಸ್ತೆ  ಜಂಕ್ಷನ್ ಬಳಿ  ಪಿರ್ಯಾದಿ  ರವರ ಹಿಂದಿನಿಂದ  ಕಾರ್  ನಂಬರ್ ಕೆಎ 05 ಎಂಡಿ 7869  ರ ಚಾಲಕ  ತನ್ನ  ಕಾರನ್ನು ಆತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು  ಬಂದು  ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ   ಮೋಟಾರ್ ಸೈಕಲ್ ಸಮೇತ ಬಿದ್ದು ಪಿರ್ಯಾದಿ ರವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪಿರ್ಯಾದಿ  ಚಿಕ್ಕಮ್ಮನಿಗೆ  ತಲೆ  ಹಿಂಭಾಗ, ಪೆಟ್ಟಾಗಿ ಅವರನ್ನು ನಾರಾಯಣ ಹೃದಯಾಲಯ  ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲು ಮಾಡಿದ್ದು ನಂತರ   ಪಿರ್ಯಾದಿರವರು  ಡಿಕ್ಕಿ ಮಾಡಿ  ನಿಲ್ಲಿಸದೆ ಹೊರಟು  ಹೋದ ಸದರಿ  ಕಾರ್  ಚಾಲಕನ ವಿರುದ್ದ ಕಾನೂನು  ರೀತ್ಯಾ  ಕ್ರಮ ಜರುಗಿಸಬೇಕೆಂದು ನೀಡಿದ  ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                   MYSURU CITY TRAFFIC VIOLATION CASES

 

                                   DATE  :09-04-2018

SLNO

            HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

65

110

455

267

58

955

2

TOTAL NUMBER OF CRR'S

289

405

366

436

569

2,065

3

TOTAL FINE AMOUNT COLLECTED

31,900

45,100

38,200

46,400

61,900

2,23,500

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

 

-

-

-

-

7

NON FATAL

-

 

-

-

-

-

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

11

Sec 283 IPC CASES

-

-

-

-

 

-

12

Sec 353 IPC CASES

-

-

-

-

 

-

13

TOWING CASES

46

 

15

6

-

67



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com