ENGLISH   |   KANNADA

Blogದಿನಾಂಕ:11.04.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.04.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 203       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ನವೀನ್ ರವರು  ದಿ;11/04/2018 ರಂದು ಮದ್ಯಾಹ್ನ  ವಿದ್ಯಾರಣ್ಯಪುರಂನ ಸಂಗೀತಾ ಬಾರ್  ಬಳಿ  ನಿಂತಿರುವಾಗ ಹಳೆಯ ದ್ವೇಷದಿಂದ ಆರೋಪಿಗಳಾದ ಮಹದೇವ, ಯಶವಂತ & ಭೀಮ ರವರು  ಪಿರ್ಯಾದಿಯ ಮೇಲೆ ಏಕಾ ಏಕಿ ಹಲ್ಲೆ ಮಾಡಿ ಚಾಕುವಿನಿಂದ ಇರಿದು ರಕ್ತ ಗಾಯವಾಗಿ ಪ್ರಾಣ ಬೆದರಿಕೆ ಹಾಕಿದ್ದು ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರ ಮ ಕೈಗೊಳ್ಳಬೇಕೆಂದು ನೀಡಿದ ದೂರು.

5

ಮನೆಕಳವುಪ್ರಕರಣ

01

ಉದಯಗಿರಿ ಠಾಣೆ.

ಪಿರ್ಯಾದಿ ಟಾಮ್ ಜೋಸೆಫ್, #253, ಕಪಲಾ ಮುಖ್ಯ ರಸ್ತೆ, ವಿದ್ಯಾಶಂಕರ ಬಡಾವಣೆ ರವರು ದಿನಾಂಕ;08-04-2018 ರಂದು ಬೆಳಿಗ್ಗೆ 6-00 ಗಂಟೆಗೆ  ಕುಟುಂಬ ಸಮೇತ ಅವರ ಸ್ವಂತ ಊರಾದ ಕೇರಳಕ್ಕೆ ಹೋಗಿದ್ದು, ಒಂದು ಕೀಯನ್ನು ಮನೆ ಕೆಲಸದಾಕೆ ವಿಜಯಾ ಎಂಬಾಕೆಗೆ ಕೊಟ್ಟಿದ್ದು ಸರಿಯಷ್ಟೆ. ದಿನಾಂಕ: 11-04-18 ರಂದು ಬೆಳಿಗ್ಗೆ ಸುಮಾರು 8-00 ಗಂಟೆಗೆ ಪಿರ್ಯಾದಿಯ ಸ್ನೇಹಿತರಾದ ಶೀಲಾಮೋಹನ್ ರವರು ಪೋನ್ ಮಾಡಿ ನಿಮ್ಮ ಮನೆ ಕೆಲಸದವರಾದ ವಿಜಯರವರು ಇಂದು ಬೆಳಿಗ್ಗೆ 7-00 ಗಂಟೆಗೆ ಮನೆ ಕೆಲಸಕ್ಕೆ ಬಂದಾಗ ನಿಮ್ಮ ಮನೆಯ ಬಾಗಿಲು ತೆರೆದಿದ್ದು ಯಾರೋ ಕಳ್ಳರು ಒಳಗೆ ನುಗ್ಗಿ  ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆಂದು ತಿಳಿಸಿದ್ದು, ಪಿರ್ಯಾದಿಯವರು ತಕ್ಷಣ ಕೇರಳದಿಂದ ಹೊರಟು ರಾತ್ರಿ 8-30 ಗಂಟೆಗೆ ಬಂದು ನೋಡಿದಾಗ ಮುಂಬಾಗಿಲು ಜಖಂಗೊಂಡು ತೆರೆದಿದ್ದು, ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ 160 ಗ್ರಾಂ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಲಕ್ಷ್ಮೀಪುರಂ ಠಾಣೆ.

ದಿ;07/04/2018 ರಂದು  ಪಿರ್ಯಾದಿ ಕಪನಯ್ಯ ರವರು ತಮ್ಮ ಹೀರೋ ಹೋಂಡಾ ನಂ. ಕೆಎ-09 ಇಎ-6384 ನ್ನು ಬೆಳಗ್ಗೆ 10 ಗಂಟೆಗೆ ಬುದ್ದ ವಿಹಾರದ ಮುಂದೆ ನಿಲ್ಲಿಸಿ ನಂತರ ಸಂಜೆ ಬಂದು ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಎನ್ ಆರ್ ಸಂಚಾರ ಠಾಣೆ.

ದಿನಾಂಕ:10.04.2018 ರಂದು ರಾತ್ರಿ ಸುಮಾರು 10-30 ಗಂಟೆಯಲ್ಲಿ ಪಿರ್ಯಾದಿ ವಸೀಂ ಖಾನ್ ರವರು ಕಾರ್ ನಂಬರ್ ಕೆಎ-50-7279 ರಲ್ಲಿ ತಮ್ಮ ಸ್ನೇಹಿತರಾದ ನಯಾಜ್ ರವರನ್ನು ಕೂರಿಸಿಕೊಂಡು ರಿಂಗ್ ರಸ್ತೆಯಲ್ಲಿ  ನಾರಯಣ ಹೃದಯಾಲಯ ಆಸ್ಪತ್ರೆ ಕಡೆಯಿಂದ ಪುಷ್ಪಾಶ್ರಮ ಜಂಕ್ಷನ್ ಕಡೆಗೆ ಚಾಲನೆ ಮಾಡಿಕೊಂಡು ಗ್ಲೋಬಲ್ ಗ್ರಾನೈಟ್ ಬಳಿ ಹೋಗುತ್ತಿದ್ದಾಗ ಇದೇ ಸಮಯಕ್ಕೆ ವಾಜೀದ್ ಪಾಷ ರವರು ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ನಂಬರ್ ಕೆಎ-11-ಬಿ-1165 ರಲ್ಲಿ  ಹಮೀದ್ ಖಾನ್ @ ಇಮ್ರಾನ್, 28 ವರ್ಷ ಮತ್ತು ಸೈಯದ್ ಅಲೀಂ, 21 ವರ್ಷ ರವರನ್ನು ಕೂರಿಸಿಕೊಂಡು ಕಾರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು 'ಬಂದು ಪಿರ್ಯಾದಿಯವರ ಕಾರನ್ನು ಎಡಭಾಗದಿಂದ ಓವರ್ ಟೇಕ್ ಮಾಡುವಾಗ ಪಿರ್ಯಾದಿಯವರ ಕಾರಿಗೆ ಡಿಕ್ಕಿಮಾಡಿ ಕಾರಿನ ವೇಗವನ್ನು ನಿಯಂತ್ರಿಸಲಾರದೇ ರಸ್ತೆಯ ಎಡಭಾಗದ ರಸ್ತೆ ವಿಭಜಕದ ಮೇಲಿದ್ದ ವಿದ್ಯುಚ್ಚಕ್ತಿ ಕಂಬಕ್ಕೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿಯವರ ಕಾರು ಸಹ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಮಾಡಿ ನಿಂತಿದ್ದು, ಡಿಕ್ಕಿಮಾಡಿದ ಕಾರಿನ ಚಾಲಕರಾದ ವಾಜೀದ್ ಪಾಷರಿಗೆ ಮುಖಕ್ಕೆ, ಕಾಲಿಗೆ ಮತ್ತು ಸೊಂಟಕ್ಕೆ ಪೆಟ್ಟಾಗಿದ್ದು ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹಮೀದ್ ಖಾನ್ @ ಇಮ್ರಾನ್ ಗೆ ತಲೆಗೆ, ಮೈ ಕೈ ಗೆ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಡಿಕ್ಕಿಮಾಡಿದ ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಸೈಯದ್ ಅಲೀಂಗೆ ತಲೆಗೆ, ಮುಖಕ್ಕೆ, ಮೈ ಕೈ ಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗಾಗಿ ನಾರಯಣ ಹೃದಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಗಾಯಾಳು ಹಮೀದ್ ಖಾನ್ @ ಇಮ್ರಾನ್ ರವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಆದುದರಿಂದ ಈ ಅಪಘಾತಕ್ಕೆ ಕಾರಣನಾದ ವಾಜೀದ್ ಪಾಷರವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ಪಿರ್ಯಾದಿ ರಮೇಶ್ ರವರು ನೀಡಿದ ದೂರೆಂದರೆ, ದಿನಾಂಕ:11/04/2018 ರಂದು ಬೆಳಗಿನ ಜಾವ ಸುಮಾರು 05.30 ಗಂಟೆಯಲ್ಲಿ ನ್ಯೂ ಮೈಸೂರು-ಬೆಂಗಳೂರು ರಸ್ತೆಯನ್ನು ಸುಮಾರು 35-40 ವರ್ಷದ ಅಪರಿಚಿತ ಗಂಡಸು ಸೆಂಟ್ ಫಿಲೋಮಿನಾ ಕಾಲೇಜು ಫುಟ್ಬಾಲ್ ಮೈದಾನದ ಬಳಿ ರಸ್ತೆಯನ್ನು ನಡೆದುಕೊಂಡು ದಾಟುತ್ತಿದ್ದಾಗ ಇದೇ ಸಮಯಕ್ಕೆ ಎಲ್.ಐ,ಸಿ ವೃತ್ತದ ಕಡೆಯಿಂದ ಜೆ.ಎಸ್.ಎಸ್ ಮೆಡಿಕಲ್ ಕಾಲೇಜು ಕಡೆಗೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾರದೇ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿಮಾಡಿ ಬೀಳಿಸಿ ಆತನ ತಲೆಯ ಮೇಲೆ ಚಕ್ರವನ್ನು ಹರಿಸಿಕೊಂಡು ಹೊರಟು ಹೋದ ಪರಿಣಾಮ ಅಪರಿಚಿತ ಗಂಡಸಿನ ತಲೆಯು ಜಜ್ಜಿಹೋಗಿದ್ದು,  ಆತ ಸ್ಥಳದಲ್ಲೆ ಮೃತ ಪಟ್ಟಿದ್ದು ಈ ಅಪಘಾತಕ್ಕೆ ಕಾರಣನಾದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

01

ವಿಜಯನಗರ ಠಾಣೆ.

ಪಿರ್ಯಾದಿ ಶೃತಿ ರವರು ಎಸ್.ಬಿ.ಐ ಬ್ಯಾಂಕ್ ನಲ್ಲಿ 1,75,000/- ಹಣವನ್ನು ತೆಗೆದುಕೊಂಡು ತಮ್ಮ ಮೋ/ಸೈ ನಲ್ಲಿ ಬೆಳವಾಡಿ ಮುಖ್ಯ ರಸ್ತೆಯಲ್ಲಿ ಹೋಗುವಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ನಿಮ್ಮ ಮೊ/ಸೈ ನಿಂದ ಹಣ ಕೆಳಗಡೆ ಬೀಳುತ್ತಿದೆ ಎಂದು ಹೇಳಿ 10 ರೂ ಮುಖ ಬೆಲೆಯ 07 ನೋಟುಗಳು ಕೆಳಗಡೆ ಬಿದ್ದಿದ್ದು ಅದನ್ನು ತೆಗೆದು ಕೊಳ್ಳಲು ಪಿರ್ಯಾದಿಯು ಮೊ/ಸೈ ನಿಂದ ಕೆಳಗಡೆ ಇಳಿದಾಗ ಅಪರಿಚಿತ ವ್ಯಕ್ತಿಗಳು ಮೊ/ಸೈ ನಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದು ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                              MYSURU CITY TRAFFIC VIOLATION CASES

 

                                         DATE  :11-04-2018

SLNO

            HEADS

                          NO. OF CASES

DR

KR

NR

SN

VV

TOTAL

1

TOTAL NUMBER OF FTVRS

90

150

200

210

-

650

2

TOTAL NUMBER OF CRR'S

306

537

367

520

519

2,249

3

TOTAL FINE AMOUNT COLLECTED

33,200

58,600

38,100

54,700

56,400

2,41,000

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

 

-

-

-

-

7

NON FATAL

-

 

-

-

-

-

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

11

Sec 283 IPC CASES

-

-

-

-

 

-

12

Sec 353 IPC CASES

-

-

-

-

 

-

13

TOWING CASES

58

42

16

11

16

143Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com