ENGLISH   |   KANNADA

Blog



ದಿನಾಂಕ:04.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:05.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 133       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಮಂಡಿ ಠಾಣೆ.

ದಿ;02/05/2018 ರಂದು ರಾತ್ರಿ 08 ಗಂಡೆಯಲ್ಲಿ ಪಿರ್ಯಾದಿ ಕೃಷ್ಣಪ್ಪ ರವರು ರೈಲ್ವೇ ಸ್ಟೇಷನ್ ನಿಂದ ಬಸದ ನಿಲ್ದಣಕ್ಕೆ ತೆರಳುವ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಇಬ್ಬರು ಅಪರಿಚಿತರು ಬಂದು ಪಿರ್ಯಾದಿಯ ಒಪ್ಪೋ ಎಫ್7 ಮೊಬೈಲ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು 

4

ಹಲ್ಲೆ ಪ್ರಕರಣ      

03

ಎನ್ ಆರ್ ಠಾಣೆ.

ದಿನಾಂಕ:02.05.2018 ರಂದುರಾತ್ರಿ 10.30 ಗಂಟೆಯ ಸಮಯದಲ್ಲಿ ಫಿರ್ಯಾದಿ ಉಸ್ನಾಖಾನಂ, #77, ಹುಡ್ಕೋ, ಬನ್ನಿಮಂಟಪ ರವರ  ಗಂಡನಾದ ಸೈಯದ್ ಶುಹೇಬ್ ಅಹಮ್ಮದ್ ರವರಿಗೆ ಆಸ್ತಿಯ ವಿಚಾರದಲ್ಲಿ ಅಬ್ದುಲ್ ರೆಹಮಾನ್ ಖಾನ್ ಮತ್ತು ಅವರ ಮಕ್ಕಳಾದ ಸತ್ತಾರ್ ಖಾನ್ @ ಮನ್ನಾನ್ ಮತ್ತು ಆದ್ನಾನ್ ರವರುಗಳು ಫಿರ್ಯಾದಿ  ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಣದ ರಾಡುನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿಜಯನಗರ ಠಾಣೆ.

ದಿನಾಂಕ;04/05/18 ರಂದು 19-15 ಗಂಟೆಗೆ ಪಿರ್ಯಾದಿ ರಜತ್, #501, ಹೊಸ ಬೀದಿ ಹಿನ್ ಕಲ್ ರವರು  ನೀಡಿದ ದೂರೇನೆಂದರೆ, ಪಿರ್ಯಾದಿ ಮನೆಯ  ಪಕ್ಕದಲ್ಲಿ ಮಧು @ ಜೋಗಿ ಮಧು ಮತ್ತು ರೇಣುಕ ಎಂಬುವರು ವಾಸವಾಗಿದ್ದು, ಆಗಾಗ್ಗೆ ಇವರುಗಳು ಜಗಳ ಮಾಡುತ್ತಿದ್ದು,  ದಿನಾಂಕ 03/05/18 ರಂದು ರಾತ್ರಿ ಸುಮಾರು 10-40 ಗಂಟೆಯಲ್ಲಿ ಪಿರ್ಯಾದಿ  ತಾಯಿ ವಿನುತ ರವರು ಮನೆಯ ಹೊರಗಡೆ ಬಟ್ಟೆ ತೊಳೆಯುತ್ತಿದ್ದಾಗ ಆರೋಪಿ ಮಧು ಇಷ್ಟು ಹೊತ್ತಿನಲ್ಲಿ ಬಟ್ಟೆ ತೊಳೆಯ ಬೇಡಿ ಎಂದು ಗಲಾಟೆ ತೆಗೆದು ಲಾಂಗ್ ಅನ್ನು ತೋರಿಸಿದ್ದು, ಆಗ ಪಿರ್ಯಾದಿ  ಈ ಬಗ್ಗೆ ಮಧುವನ್ನು ಪ್ರಶ್ನಿಸಿದಾಗ ನನ್ನ ಮುಂದೆ ಮಾತನಾಡಲು ಎಷ್ಟು ಧೈರ್ಯ ನಿನಗೆ ಎಂದು ಲಾಂಗ್ ನಿಂದ ಕೊಲೆ ಮಾಡಲು ಮುಂದಾದಾಗ ಪಿರ್ಯಾದಿ ಎಡ ಗೈ ಗೆ ಪೆಟ್ಟಾಗಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ವಳರಿಯನ್ ಡಿಸೋಜ ರವರು ದಿ:03-05-2018 ರಂದು ರಾತ್ರಿ ರಿಂಗ್‌ ರಸ್ತೆ ಮಾರ್ಗವಾಗಿ ಕೆಎ-46-ಎಂ-3262 ಕಾರಿನಲ್ಲಿ ಹೋಗುತ್ತಿದ್ದಾಗ ಶ್ರೀರಾಂಪುರದ ಬಳಿ ಸ್ಕೂಟರ್‌ನಲ್ಲಿ ಒಬ್ಬ ಅಪರಿಚಿತ ವ್ಯಕ್ತಿ  ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದು, ಅವರನ್ನು ತಪ್ಪಿಸುವ ಸಲುವಾಗಿ ಡಿವೈಡರ್‌‌ ಮೇಲೆ ಕಾರನ್ನು ಹತ್ತಿಸಿದಾಗ ತಕ್ಷಣ ಅಲ್ಲೇ ನಿಂತಿದ್ದ ಯೋಗೇಶ, ಮೋಸಿನ್ & ಹೇಮಂತ್ 3 ಜನ ಆರೋಪಿಗಳು ಕಾರಿನ ಬಳಿ ಬಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು, ಕಾರಿನಿಂದ ಹೊರಗೆ ಎಳೆದುಕೊಂಡು ಕಲ್ಲಿನಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿ  ಕಾರಿನ ಎರಡು ಮಿರರ್‌‌‌ ಹಾಗೂ ಕಾರಿನ ಮುಂಭಾಗದ ಗಾಜಿಗೆ ಹೊಡೆದು 50,000/-ರೂಗಳಷ್ಟು ನಷ್ಟವುಂಟು ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:-03-05-2018 ರಂದು ಮದ್ಯಾಹ್ನ 3-20 ಗಂಟೆಯಲ್ಲಿ ಪಿರ್ಯಾದಿ ಸಿದ್ದಯ್ಯ ರವರ ಮಗನಾದ ರವಿ ಎಸ್ ರವರು ಜೆ.ಕೆ ಟೈರ್ಸ್  ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗಲು  KA-06, ES-1723 ನಂಬರ್ ನ ಪಲ್ಸರ್ ಬೈಕ್ ನ್ನು ಕೆ.ಆರ್.ಎಸ್ ರಸ್ತೆಯಲ್ಲಿ ಆಕಾಶವಾಣಿ ವೃತ್ತದ ಬಳಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ದೋಬಿ ಘಾಟ್ ಕಡೆಯಿಂದ KA-01, ME-6116 ಟಾಟಾ ಇಂಡಿಕಾ ಕಾರ್ ನ್ನು ಅದರ ಚಾಲಕ ನಿತೀಶ್ ಎಲ್ ರಾವ್ ಎಂಬುವವನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ರವಿ ಚಾಲನೆ ಮಾಡುತ್ತಿದ್ದ ಸ್ಕೂಟರ್ ನ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ರವಿ ರವರು ಬೈಕ್ ಸಮೇತ ಕೆಳಕ್ಕೆ ಬಿದ್ದು, ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಸದರಿ ಕಾರ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ 04.05.2018 ರಂದು ಪಿರ್ಯಾದಿ ಶಿವರಾಮಯ್ಯ,ಎಎಸ್ಐ  ರವರು ಮದ್ಯಾಹ್ನ 2.30 ಗಂಟೆಯ ಸಮಯದಲ್ಲಿ ಠಾಣಾ ಸರಹದ್ದು ಮೈಸೂರು-ಹುಣಸೂರು ಜೋಡಿ ರಸ್ತೆ ಪಡುವಾರಹಳ್ಳಿ ಸಿಗ್ನಲ್ ಪಾಯಿಂಟ್ ಬಳಿ ಸಂಚಾರ ನಿಯಮ ಉಲ್ಲಂಘಣೆ ಮಾಡುವ ವಾಹನ ಸವಾರರ ತಪಾಸಣೆ ಕರ್ತವ್ಯದಲ್ಲಿರುವಾಗ. ಇದೇ ಸಮಯಕ್ಕೆ ಸೆಂಟ್ ಜೋಸೆಪ್ ಸರ್ಕಲ್ ಕಡೆಯಿಂದ ಸಿಟಿ ಕಡೆಗೆ ಅಪಾಚಿ ಮೋಟಾರ್ ಸೈಕಲ್ ನಂಬರ್  KA-10-W-1646 ನ್ನು ಅದರ ಚಾಲಕ ಆಕ್ಷಯ್ ಎಂಬುವರು ಹಲ್ಮೇಟ್ ಧರಿಸದೆ ಅತಿವೇಗ, ಅಜಾಗರುಕತೆ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರು ವಾಹನ ನಿಲ್ಲಿಸಲು ಮಾಡಿದರೂ  ಸಹ ಮೋಟಾರ್ ಸೈಕಲ್ ಸವಾರ ಇನ್ನಷ್ಟು ವಾಹನದ ವೇಗವನ್ನು ಹೆಚ್ಚಿಸಿ ವಾಹನ ನಿಯಂತ್ರಣ ಕಳೆದುಕೊಂಡು ಸ್ವತಃ ತಾನೆ ವಾಹನದ ಸಮೇತ ಕೆಳಕ್ಕೆ ಬಿದ್ದು ಪೆಟ್ಟಾಗಿದ್ದು ಮುಂದಿನ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ-04-05-2018 ರಂದು ಮಧ್ಯಾಹ್ನ 3.50 ಗಂಟೆ ಸಮಯದಲ್ಲಿ ಪಿರ್ಯಾದಿ ಲತಾ ರವರ ಮಗಳು ಸಿಂಚನಾ ತನ್ನ ದ್ವಿಚಕ್ರ ವಾಹನ  ನಂ KA-11-EH-7809 ನ್ನು ಜನರಲ್ ತಿಮ್ಮಯ  ರಸ್ತೆಯ ಕಡೆಯಿಂದ ಚಾಲನೆ ಮಾಡಿಕೊಂಡು ಬಂದು ವಿಜಯನಗರ 3 ನೇ ಹಂತದ ಕಡೆಗೆ ಹೋಗಲು ಐಶ್ವರ್ಯ ಪೆಟ್ರೋಲ್ ಬಂಕ್ ಜಂಕ್ಷನ್ ನಲ್ಲಿ  ಹುಣಸೂರು-ಮೈಸೂರು ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ ಇದೇ ಸಮಯಕ್ಕೆ ಮೈಸೂರು ಸಿಟಿ  ಕಡೆಯಿಂದ ಹುಣಸೂರು ಕಡೆಗೆ ಬುಲೇಟ್ ಕಾರ್ ನಂ KA-12-N-4435 ಇದನ್ನು ಪೊನ್ನಪ್ಪ ಎಂಬುವನು ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಿಂಚನಾ ಚಾಲನೆ ಮಾಡುತ್ತಿದ್ದ ಸ್ಕೂಟರ್ ಗೆ ಎಡಭಾಗದಿಂದ ಡಿಕ್ಕಿ ಮಾಡಿದ ಪರಿಣಾಮ ವಾಹನ ಸಮೇತ ಕೆಳಕ್ಕೆ ಬಿದ್ದು ಸಿಂಚಾನಳ  ತಲೆಗೆ ಬಲಭುಜಕ್ಕೆ  ತೀವ್ರವಾದ ಪೆಟ್ಟಾಗಿದ್ದು ಚಿಕಿತ್ಸೆಗೆ ಐಶ್ವರ್ಯ ಆಸ್ಪತ್ರೆ ಕರೆತಂದಿದ್ದು ಈ ಅಪಘಾತಕ್ಕೆ ಕಾರಣವಾದ ಕಾರು  ಚಾಲಕ ಪೊನ್ನಪ್ಪ  ವಿರುದ್ದ  ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;02.04.2018 ರಂದು ರಾತ್ರಿ 10.15 ಗಂಟೆ ಸಮಯದಲ್ಲಿ ಪಿರ್ಯಾದಿ ವಿಕಾಸ್ ರವರ ತಂದೆ ಮಹದೇವಸ್ವಾಮಿ ರವರು ಗಾಯತ್ರಿಪುರಂ ಬಸ್ ಸ್ಟಾಪ್ ನಿಂದ ಕ್ಯಾತಮಾರನಹಳ್ಳಿ ರಸ್ತೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಸಂದೇಶ್ ನಾಗರಾಜ್ ಬಸ್ ಸ್ಟಾಪ್ ಕಡೆಯಿಂದ ಸ್ಕೂಟರ್ ನಂಬರ್ ಕೆಎ-55 ಯು -9435 ರ ಚಾಲಕ ಮೋಹನ್ ರವರು ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ತಂದೆಗೆ ಡಿಕ್ಕಿಮಾಡಿದ ಪರಿಣಾಮ ಅವರು ರಸ್ತೆ ಮೇಲೆ ಬಿದ್ದು ಅವರಿಗೆ ಬಲಸೊಂಟಕ್ಕೆ ಪೆಟ್ಟಾಗಿದ್ದು ಅವರನ್ನು ಗೋಪಾಲಗೌಡ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ನಂತರ ಸದರಿ ಸವಾರನ ವಿರುದ್ದ ಕ್ರಮ ಜರುಗಿಸಲು ತಡವಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

02

ಮಂಡಿ ಠಾಣೆ.

ದಿ: 04/05/18 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಚಾ.ವಿ.ಸ.ನಿ.ನಿ ಘಟಕ-01 ರ ನೌಕರರಾದ ವಿರೇಂದ್ರ ನಾಯಕ್ ಮತ್ತು ಜಿ.ರವಿ ರವರುಗಳಿಗೆ ಕೈಲಾಸಪುರಂ ನಲ್ಲಿ ಕಂದಾಯ ವಸೂಲಾತಿ ಕರ್ತವ್ಯ ನೇಮಕವಾಗಿದ್ದು, ಅದರಂತೆ ಸದರಿಯವರುಗಳು ಕೈಲಾಸಪುರಂನ ಗೌರಮ್ಮ ಎಂಬುವವರ ಮನೆ ಬಳಿ ಬಂದು ಬಾಕಿ ಇದ್ದ 9034/-ರೂ.ಗಳ ಹಣವನ್ನು ಕಟ್ಟುವಂತೆ ತಿಳಿಸಿ, ಇಲ್ಲದಿದ್ದಲ್ಲಿ ವಿದ್ಯುತ್ ಕಡಿತಗೊಳಿಸುವುದಾಗಿ ತಿಳಿಸಿ, ವಿದ್ಯುತ್ ಕಡಿತ ಮಾಡಲು ಹೋದಾಗ ಏಕಾಏಕಿ ಗೌರಮ್ಮ ರವರ ಮನೆಯೊಳಗಿದ್ದ ಸುಮಾರು 25-30 ವರ್ಷದ ಹುಡುಗನೊಬ್ಬ, ನೌಕರ ವಿರೇಂದ್ರ ನಾಯಕ್ ರವರಿಗೆ  ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಪಿರ್ಯಾದಿ ಶ್ರೀ ಮಧು, ಕಿರಿಯ ಇಂಜಿನಿಯರ್ ರವರು ನೀಡಿದ ದೂರು.  

ವಿದ್ಯಾರಣ್ಯಪುರಂ ಠಾಣೆ,

ಫಿರ್ಯಾದಿ ಎಂ.ಆರ್.ನಾಗಲಕ್ಷ್ಮಿ ಮನೆ ನಂ 955, 30ನೇ ಕ್ರಾಸ್‌, 4ನೇ ಮೇನ್‌, ವಿದ್ಯಾರಣ್ಯಪುರಂ, ರವರು ನೀಡಿದ ದೂರೆಂದರೆ, ಅವರ  ಗಂಡ ನಾರಾಯಣಪ್ಪ  ರವರು   ಆಟೋ ಡ್ರೈವರ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ;04-05-2018 ರಂದು ಸಂಜೆ 5-30 ಗಂಟೆಯಲ್ಲಿ ವಿದ್ಯಾರಣ್ಯಪುರಂನ ಮಾರುತಿ ಟಿಂಬರ್ಸ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ-45-2452 ಗೂಡ್ಸ್‌ ಆಟೋದಲ್ಲಿ ಮಾರುತಿ ಟಿಂಬರ್ಸ್‌ನ ಒಳಗೆ ನಡೆಯುತ್ತಿದ್ದ ಕಟ್ಟಡಕ್ಕೆ ಕಬ್ಬಿಣವನ್ನು ತುಂಬಿಕೊಂಡು ಹೋಗುತ್ತಿದ್ದು ಅನಾಮತ್ತಾಗಿ ಕಬ್ಬಿಣದ ರಾಡುಗಳು ಮತ್ತು ಆಟೋ ನಾರಾಯಣಪ್ಪ ರವರ ಮೇಲೆ ಬಿದ್ದು ಮೃತ ಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ನೀಡಿದ ದೂರು.

 

                                   MYSURU CITY TRAFFIC VIOLATION CASES

 

                                  DATE  :05-05-2018

SLNO

             HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

-

-

01

03

-

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

11

Sec 283 IPC CASES

-

-

-

-

 

-

12

Sec 353 IPC CASES

-

-

-

-

 

-

13

TOWING CASES

4

31

12

10

8

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com