ENGLISH   |   KANNADA

Blog



ದಿನಾಂಕ:06.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 59       No of Comments: 0

1

ಕೊಲೆ ಪ್ರಕರಣ

01

ಸರಸ್ವತಿಪುರಂ ಠಾಣೆ.

ದಿ;05/05/2018 ರಂದು ಪಿರ್ಯಾದಿ ಮಹೇಶ್ ಸಿಪಿಸಿ-04 ರವರು ರಾತ್ರಿ  ಗಸ್ತು ಕರ್ತವ್ಯಕ್ಕೆ ನೇಮಕಗೊಂಡಿದ್ದು ಅದರಂತೆ  ರಾತ್ರಿ ಸುಮಾರು 1-00 ಗಂಟೆಗೆ ವಾಗ್ದೇವಿನಗರ, ಬ್ರಹ್ಮಸ್ಥಾನ ಕಲ್ಯಾಣ ಮಂಟಪದ ಮುಂದೆ ಸಾನ್ವಿ ಬಿಲ್ಡರ್ಸ್ ಅಂಡ್ ಕನ್ಸಲ್ಟೆಂಟ್ಸ್ ಆಫೀಸ್ ಇದ್ದು, ಈ ಕಚೇರಿಯ ಮುಂದೆ ಇರುವ ಮೆಟ್ಟಿಲಿನ ಕೆಳಗೆ ಒಬ್ಬ ಸುಮಾರು 65 ರಿಂದ 70 ವರ್ಷದ ಅಪರಿಚಿತ ವ್ಯಕ್ತಿಯು ಮಲಗಿರುವಂತೆ ಇದ್ದು, ಆತನ ಬಳಿ ಹೋಗಿ ನೋಡಲಾಗಿ ಆ ವ್ಯಕ್ತಿಯು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದು ಆ ವ್ಯಕ್ತಿಯ ಪಕ್ಕದಲ್ಲಿ ಒಂದು ಕಲ್ಲು ರಕ್ತಸಿಕ್ತವಾಗಿ ಬಿದ್ದಿರುವುದು ಕಂಡು ಬಂದಿದ್ದು ಯಾರೋ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.  

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

03

ಮಹಿಳಾ ಠಾಣೆ.

ಪಿರ್ಯಾದಿ ಸಂಗೀತಾ, #355, 10 ನೇ ಕ್ರಾಸ್, ಚಾಮುಂಡಿ ಬೆಟ್ಟದ ರಸ್ತೆ ರವರು  ದಿ:02.08.2002 ರಂದು ಆರೋಪಿ ರವಿಕುಮಾರ್ ಎಂಬುವವರನ್ನು ಮದುವೆಯಾಗಿದ್ದು, ಮದುವೆಯಾದಾಗಿನಿಂದಲೂ ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡಿ  ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 06.05.18 ರಂದು ರಾತ್ರಿ ಸಮಯ ಸುಮಾರು 1-30 ಗಂಟೆಯಲ್ಲಿ ಆರೋಪಿಯು ಕುಡಿದು ಬಂದು ಪಿರ್ಯಾದಿಗೆ ಬಾಯಿಗೆ ಬಂದಂತೆ ಬೈದು, ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿಜಯನಗರ ಠಾಣೆ.

ಪಿರ್ಯಾದಿ ಶಿವಣ್ಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 05/05/18 ರಂದು ಪಿರ್ಯಾದಿ ಮತ್ತು ಆರೋಪಿಗಳಾದ ಗವಿಗೌಡ, ನವೀನ, ಕಾರ್ತಿಕ್,  ವೆಂಕಟೇಶ ಎಂಬುವರಿಗೆ ಚಿತ್ರನಟ ದರ್ಶನ್ ಚುನಾವಣ ಪ್ರಚಾರಕ್ಕೆ ಬೆಳವಾಡಿಗೆ ಬರುವ ವಿಚಾರದಲ್ಲಿ ಗಲಾಟೆಯಾಗಿದ್ದು, ಇದೇ ದ್ವೇಷವನ್ನು ಇಟ್ಟುಕೊಂಡು ದಿನಾಂಕ;06/05/18 ರಂದು ಬೆಳಗಿನ ಜಾವ 01-00 ಗಂಟೆಯಲ್ಲಿ  ಸದರಿ ಆರೋಪಿಗಳು ಬೆಳವಾಡಿಯಲ್ಲಿರುವ ಪಿರ್ಯಾದಿ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರ ಮೊಬೈಲ್ ಫೋನ್ ಹೊಡೆದು ಹಾಕಿ, ದೊಣ್ಣೆಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರು.

ಅಶೋಕಪುರಂ ಠಾಣೆ.

ದಿನಾಂಕಃ-06.05.2018 ರಂದು ರಾತ್ರಿ 1915 ಕ್ಕೆ ಪಿರ್ಯಾದಿ ಪುನೀತ್ ತಮ್ಮ ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅವರ ತಂಗಿಯ ಗಂಡ ವಿಜಯ್ ತನ್ನ ಹೆಂಡತಿಯೊಂದಿಗೆ ಮಾತನಾಡಬೇಕೆಂದು ಕುಗಾಡುತ್ತಿದ್ದಾಗ ಪಿರ್ಯಾದಿ ನಿರಾಕಾರಿಸಿದ್ದರಿಂದ ಅವರನ್ನು ಮಾತನಾಡಬೇಕೆಂದು ಚಿನ್ನಗಿರಿ ಕೊಪ್ಪಲ್ ಸಮುದಾಯ ಭವನದ ಬಳಿ ಕರೆದುಕೊಂಡು ಬಂದು ಮಾತಿಗೆ ಮಾತು ಬೆಳೆದು ಸುಮಾರು 03.00 ಗಂಟೆಗೆ ಮನೆಗೆ ಹೊರಡುವಾಗ  ಅಲ್ಲೇ ಬಿದ್ದಿದ್ದ ಸೌದೆ ಸೀಳಿನಿಂದ ತಲೆಗೆ ಕೈಗೆ ಹೊಡೆದು ಹಲ್ಲೆ ಮಾಡಿ ರಕ್ತ ಗಾಯವಾಗಿದ್ದು ಸದರಿ ಆರೋಪಿ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ದೇವರಾಜ ಸಂಚಾರ ಠಾಣೆ.

ದಿ;06/05/2018 ರಂದು ಪಿರ್ಯಾದಿ ನಂದೀಶ್ ರವರು ಬೈಕ್ ನಂಬರ್ ಕೆ.ಎ 09 ಹೆಚ್.ಎ 3785  ಅನ್ನು ಚಾಲನೆ ಮಾಡಿಕೊಂಡು  ಬೈಕ್ ಹಿಂಬದಿಯಲ್ಲಿ ಅನಿಲ್ ಕುಮಾರ್ ಮತ್ತು ಸತೀಶ್ ರವರನ್ನು ಕೂರಿಸಿಕೊಂಡು ಮೂರು ಜನರು ದಾಸಪ್ಪ ವೃತ್ತದ ಕಡೆಯಿಂದ ಮೆಟ್ರೋಪೂಲ್ ಕಡೆಗೆ ಹೋಗುತ್ತಿದ್ದಾಗ, ಮಯೂರ ಯಾತ್ರಿ ನಿವಾಸ ಮುಂಭಾಗ ಪಿರ್ಯಾದಿ ಹಿಂಬಾಗದಿಂದ ಬಂದ ಬಸ್ ನಂಬರ್ ಕೆ.ಎ 01 ಡಿ. 3315  ರ ಚಾಲಕ ಬಸ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು  ಯಾತ್ರಿ ನಿವಾಸದ ಒಳಗೆ ಹೋಗಲು ಬಸ್ ಅನ್ನು ಏಕಾಏಕಿ ಎಡಕ್ಕೆ ತಿರುಗಿಸಿ ಪಿರ್ಯಾದಿಯವರ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಮತ್ತು ಹಿಂಭಾಗ ಕುಳಿತಿದ್ದ ಅನಿಲ್ ಕುಮಾರ್ ಮತ್ತು ಸತೀಶ್ ಮೂರು ಜನರು ಕೆಳಗೆ ಬಿದ್ದು ಪಿರ್ಯಾದಿಯವರಿಗೆ ಬಲಭುಜಕ್ಕೆ ಮತ್ತು ಬಲ ಮಂಡಿಗೆ ಪೆಟ್ಟಾಗಿದ್ದು.ಅನಿಲ್ ಕುಮಾರ್ ರವರಿಗೆ ಬಲ ಕಾಲಿಗೆ ಪೆಟ್ಟಾಗಿದ್ದು, ಸತೀಶ್ ರವರಿಗೆ ತಲೆಗೆ ಪೆಟ್ಟಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು  ಈ ಅಪಘಾತಕ್ಕೆ ಕಾರಣವಾದ ಸದರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು,

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ;06.05.2018 ರಂದು ಬೆಳಿಗಿನ ಜಾವ 1.15 ಗಂಟೆಯ ಸಮಯದಲ್ಲಿ ಪಿರ್ಯಾದಿ ಬಾಲರಾಜು ರವರು ಪ್ಯಾಸೆಂಜರ್ ಆಟೋರೀಕ್ಷಾ ನಂಬರ್ KA-09-A-9939  ರಲ್ಲಿ ಪ್ರಯಾಣಿಕರಾಗಿ ಕುಳಿತುಕೊಂಡು ವಾಹನವನ್ನು ಶಂಕರ್ ಎಂಬುವರು ಚಾಲನೆ ಮಾಡಿಕೊಂಡು ಹಿನಕಲ್ ಕಡೆಯಿಂದ ಸಿಟಿ ಕಡೆಗೆ ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂಬಾಗ ಹೋಗುತ್ತಿದ್ದ ಒಂದು ಸ್ಕೂಟರ್ ಗೆ ಡಿಕ್ಕಿ ಮಾಡಿ ಮಾಡಿದ ಪರಿಣಾಮ ಆಟೋಪಲ್ಟಿಯಾಗಿ ಆಟೋಚಾಲಕ ಹಾಗು ಪಿರ್ಯಾದಿಯವರು ಇಬ್ಬರು ಕೆಳಕ್ಕೆ ಬಿದ್ದು ಸ್ಕೂಟರ್ ಚಾಲಕನಿಗೆ  ಹಾಗು ಪಿರ್ಯಾದಿಯವರಿಗೆ ಸಣ್ಣಪುಟ್ಟ ತರಚಿದ ಗಾಯಾವಾಗಿ ಆಟೋ ಚಾಲಕನಿಗೆ ತಲೆಗೆ ತೀವ್ರ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಕೆ ಆರ್ ಆಸ್ಪತ್ರೆಗೆ ಸೇರಿಸಿದ್ದು ಈ ಅಪಘಾತಕ್ಕೆ ಕಾರಣನಾದ ಪ್ಯಾಸೆಂಜರ್ ಆಟೋರೀಕ್ಷಾ ಚಾಲಕನ   ಶಂಕರ್ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ದೇವರಾಜ ಸಂಚಾರ ಠಾಣೆ,

ದಿನಾಂಕ;03-05-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಪಿರ್ಯಾದಿ ಯವರ ಯಜಮಾನರಾದ  ಕೃಷ್ಣ ರವರು ಬುಲೇಟ್ ಮೋಟರ್ ಸೈಕಲ್ ನಂಬರ್ ಕೆ.ಎ 11 ಇ.ಹೆಚ್. 7010 ರಲ್ಲಿ ಕೆ.ಅರ್. ಎಸ್. ರಸ್ತೆ ಕಡೆಯಿಂದ ದನ್ವಂತರಿ ರಸ್ತೆ ಕಡೆಗೆ ಹೋಗಲು ದಾಸಪ್ಪ ವೃತ್ತದ ಹತ್ತಿರ ಹೋಗುತ್ತಿರುವಾಗ ರೈಲ್ವೆ ಸ್ಟೇಷನ್ ಕಡೆಯಿಂದ ಕಾರ್ ನಂಬರ್ ಕೆ.ಎ 13 ಪಿ 2460  ರ ಚಾಲಕ ಕಾರ್ ನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಬುಲೇಟ್ ಗೆ ಡಿಕ್ಕಿ ಮಾಡಿದ ಪರಿಣಾಮ ಕೃಷ್ಣ ರವರು  ಕೆಳಗೆ ಬಿದ್ದು ಎಡಕಾಲಿಗೆ ಪೆಟ್ಟಾಗಿದ್ದು ಸಾರ್ವಜನಿಕರು ಅವರನ್ನು ಚಿಕಿತ್ಸೆ ಬಗ್ಗೆ ಬೃಂದಾವನ ಅಸ್ವತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ  ಕೊಡಿಸಿದ್ದು  ಸದರಿ ಕಾರಿನ ಚಾಲಕನ ವಿರುದ್ದ ಕ್ರಮ ಜರುಗಿಸಲು ತಡವಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

02

ಕೆ ಆರ್ ಠಾಣೆ.

ಪಿರ್ಯಾದಿ ಡಾ.ಮಂಜುನಾಥ್ ರವರು ನೀಡಿದ ದೂರೆಂದರೆ,ಮೈಸೂರು ತಾಲ್ಲೂಕು ವರುಣಾ ಹೋಬಳಿಯ ಚಿಟ್ನಹಳ್ಳಿ ಗ್ರಾಮದ ಸರ್ವೇ ನಂ-245 ಮತ್ತು 247 ರ ಜಮೀನುಗಳಿಗೆ ಸಂಬಂಧಿಸಿದಂತೆ ಸಿ.ಆರ್.ರಾಧಾಕೃಷ್ಣ ಭಟ್ ಮತ್ತು ಮಹೇಶ್ ಎಂಬುವರು ಜಮೀನನ್ನು ರೈತರಿಂದ ಕೊಡಿಸುವುದಾಗಿ ಪಿರ್ಯಾದಿಯನ್ನು  ನಂಬಿಸಿ, ಮೊದಲು 10 ಲಕ್ಷ ಹಣ ಪಡದುಕೊಂಡು, 2012 ನೇ ಸಾಲಿನಲ್ಲಿ ಕೆ ಆರ್ ಮೊಹಲ್ಲಾದ ವಾಸುದೇವ ನೋಟರಿ ಕಛೇರಿಯಲ್ಲಿ ನಕಲಿ ಕರಾರು ಪತ್ರ ಮಾಡಿಸಿ, ಇಲ್ಲಿಯ ತನಕ ಹಂತ ಹಂತವಾಗಿ ಒಟ್ಟು 70 ಲಕ್ಷ ರೂಗಳನ್ನು ಪಡೆದುಕೊಂಡು ಇಲ್ಲಿಯವರೆಗೂ ಸಿಗದೆ ವಂಚಿಸಿರುತ್ತಾರೆ. ಬ್ಯಾಂಕಿನ ಖಾತೆಯಿಂದ ಆರ್ಟಿಜಿಎಸ್ ಮೂಲಕ ಮಹೇಶ್ ಖಾತೆ ಜಮ ಆಗಿರುತ್ತೆ. ಹಣವನ್ನು ಹಿಂತಿರುಗಿಸಿ ಎಂದು ಕೇಳಿದಾಗ, ಸಿ.ಆರ್.ರಾಧಕೃಷ್ಣ ಭಟ್ ಹಾಗೂ ಮಹೇಶ ರವರುಗಳು ಅವಾಚ್ಯ ಶಬ್ದಗಳಿಂದ  ಬೈದು, ನಿನಗೆ ಯಾವುದೇ ಹಣ ನೀಡುವುದಿಲ್ಲ, ನೀನೇನಾದರು ಎಲ್ಲಾದರು ಅಪಸ್ವರ ಎತ್ತಿದರೆ ಈ ಗನ್ನಿಂದಲೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಗನ್ಅನ್ನು ಪಿರ್ಯಾದಿ  ಹಣೆಯ ಮೇಲೆ ಇಟ್ಟು ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಸಂಬಂಧ ಈಗಾಗಲೆ ದಿ: 20/02/2018 ರಂದು ಮಾನ್ಯ ಕಮಿಷನರ್ ರವರ ಕಛೇರಿಯಲ್ಲಿ ದೂರು ನೀಡಿದ್ದು, ಆ ದೂರಿನ ವಿಚಾರಣೆಯು ಕೆ.ಆರ್.ಪೊಲೀಸ್ ಠಾಣೆಯಲ್ಲಿ ವಿಚಾರಣಾ ಹಂತದಲ್ಲಿರುತ್ತದೆ. ಆದರೆ  ದಿ:06/05/2018 ರಂದು ಮದ್ಯಾಹ್ನ 12-45 ಗಂಟೆಯಲ್ಲಿ ಪಿರ್ಯಾದಿ  ಮೊಬೈಲ್ ಗೆ  ರಾಧಕೃಷ್ಣ ಭಟ್ ಪೋನ್ಮಾಡಿ ನೀನು ದೂರನ್ನು ವಾಪಸ್ ತೆಗೆದು ಕೊಳ್ಳದಿದ್ದರೆ ಆ ದಿನ ಗನ್ ತೋರಿಸಿದ್ದು, ಈಗ ನಿನ್ನನ್ನು ಶೂಟ್ ಮಾಡಿ ಮುಗಿಸಿ ಬಿಡುತ್ತೇನೆಂದು ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಲಕ್ಷ್ಮೀಪುರಂ ಠಾಣೆ.

ಫಿರ್ಯಾದಿ ಶಿವರಾಜು ರವರಿಗೆ ಮಧುಕರ್ ಎಂಬುವರು ಕ್ಯೂ-ನೆಟ್ ಎಂಬ ಕಂಪನಿಯ ಬಗ್ಗೆ ತಿಳಿಸಿ ಈ ಕಂಪನಿಯ ಪ್ರಾಡಕ್ಟ್ ಗಳನ್ನು ಮಾರಾಟ ಮಾಡಿದರೆ ಅರ್ಧದಷ್ಟು ಕಮೀಷನ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ.  ಎಂದು ಹೇಳಿ  ಫಿರ್ಯಾದುದಾರರಿಂದ 3000/-ರೂ ಪಡೆದುಕೊಂಡು ನಂತರ ಕಂಪನಿ ಪಾಲುದಾರಿಕೆಗೆಂದು ಹೇಳಿ 33000/-ರೂ ಹಣ ಕೇಳಿದಾಗ ಫಿರ್ಯಾದುದಾರರು 2 ಕಂತುಗಳಲ್ಲಿ ಹಣವನ್ನು ನೀಡಿದ್ದಲ್ಲದೆ ತನ್ನ ಸ್ನೇಹಿತರಾದ ಇಂದ್ರ, ಮಲ್ಲೇಶ್, ಮಹೇಶ್ ರವರುಗಳಿಂದಲೂ ಹಣವನ್ನು ಮಧುಕರ್ ಮತ್ತು ಅವರ ಸ್ನೇಹಿತರಿಗೆ ಕೊಡಿಸಿದಾಗ ಗಣೇಶ್ ಹಣದ ಭದ್ರತೆಗೆಂದು ಹೇಳಿ ರಶೀತಿಯನ್ನು ಬರೆದು ಸಹಿ ಮಾಡಿಕೊಟ್ಟಿರುತ್ತಾರೆ ನಂತರ ಫಿರ್ಯಾದುದಾರರಿಗಾಗಲಿ ಅಥವಾ ಅವರ ಸ್ನೇಹಿತರಿಗಾಗಲಿ ಯಾವುದೇ ಕಮೀಷನ್ ಹಣ ಬರದಿದ್ದಾಗ ಹಾಗೂ ದಿಗ್ವಿಜಯ ಟಿವಿಯಲ್ಲಿ ಕ್ಯೂನೆಟ್ ಕಂಪನಿಯ ಮೋಸದ ಬಗ್ಗೆ ಪ್ರಸಾರವಾದಾಗ ಫಿರ್ಯಾದುದಾರರು ಮಧುಕರ್ ರವರಿಗೆ ತಾವು ನೀಡಿರುವ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಮಧುಕರ್ ಮತ್ತು ಅವರ ಸ್ನೇಹಿತರಾದ ಗಣೇಶ್,ಶಾಂತರಾಜು ರವರುಗಳು ಫಿರ್ಯಾದಿಗೆ ಏಕಲವ್ಯ ಸರ್ಕಲ್ ಬಳಿ ಬರಲು ಹೇಳಿದಾಗ ಫಿರ್ಯಾದುದಾರರು ಅಲ್ಲಿಗೆ ಬಂದಾಗ ನಿನಗೆ ಯಾವ ಹಣ ಕೊಡುವುದು ನಿನ್ನ ಹಣವನ್ನು ಕಂಪನಿಗೆ ಕೊಟ್ಟಿದ್ದೀವಿ,ಕಂಪನಿಯಿಂದ ಹಣವನ್ನು ತೆಗೆದುಕೋ, ಮತ್ತೆ ಹಣ ಕೇಳಿದರೆ ನಿನ್ನನ್ನು ಮುಗಿಸಿ ಬಿಡುತ್ತೇವೆಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಜಯಕುಮಾರ್ ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಮ್-03 ರವರು  ದಿನಾಂಕ:06/05/2018 ರಂದು ಸಂಜೆ ಸುಮಾರು 0515 ಗಂಟೆಗೆ ಬೋಗಾದಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದಾಗ  ಬಸವೇಗೌಡ, ಪಕ್ಷೇತರ ಅಭ್ಯರ್ಥಿ, ಚಾಮುಂಡೇಶ್ವರಿ ಕ್ಷೇತ್ರ ರವರ ಕಾರನ್ನು ತಪಾಸಣೆ ಮಾಡಲು ನಿಲ್ಲಿಸಿದಾಗ ಸದರಿ ರವರು ಆಕ್ಷೇಪಣೆ ವ್ಯಕ್ತಪಡಿಸಿ ಕರ್ತವ್ಯದಲ್ಲಿದ್ದ ಪಿರ್ಯಾದಿ  ಮತ್ತು ಪೊಲೀಸ್ ಸಿಬ್ಬಂದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸದರಿ ವಾಹನವನ್ನು ತಪಾಸಣೆ ಮಾಡಲು ಅಡ್ಡಿಪಡಿಸಿರುತ್ತಾರೆ ಹಾಗೂ ತಮ್ಮ ವಾಹನವನ್ನು ಅಡ್ಡಿಪಡಿಸಲು ನಿಮಗೆ ಅಧಿಕಾರ ನೀಡಿದವರು ಯಾರೆಂದು ನಿಂದಿಸಿ ಕರ್ತವ್ಯಕ್ಕೆ ಟಡ್ಡಿಪಡಿಸಿದ್ದು ಸದರಿ ರವರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು,

 

                                MYSURU CITY TRAFFIC VIOLATION CASES

 

                                       DATE  :06-05-2018

SLNO

            HEADS

                       NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

02

-

-

-

01

03

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

11

Sec 283 IPC CASES

-

-

-

-

 

-

12

Sec 353 IPC CASES

-

-

-

-

 

-

13

TOWING CASES

4

31

12

10

8

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com