ENGLISH   |   KANNADA

Blog



ದಿನಾಂಕ:07.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 132       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ.

ದಿನಾಂಕ:06/05/2018 ರಂದು ಸಂಜೆ 5-00 ಗಂಟೆಯಲ್ಲಿ ಪಿರ್ಯಾದಿ ತರುನ್ಮಾ, ಕೆ ಇ ಬಿ ಕಾಲೋನಿ ರವರ ಗಂಡನಾದ ನಹೀಂ ಅಹಮ್ಮದ್ ಹಣ ಮತ್ತು ಒಡವೆ ತರುವ ವಿಚಾರದಲ್ಲಿ ಗಲಾಟೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ಅತ್ತೆ ರಜಿಯಾ ಶಾಲನ್‌ ರವರು ಸಹ ಜೀವ ಬೆದರಿಕೆಯನ್ನು ಹಾಕಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಕೆ ಆರ್ ಸಂಚಾರ ಠಾಣೆ.

ದಿನಾಂಕ:05-05-2018 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಪಿರ್ಯಾದಿ  ಜಲಜಾಕ್ಷಿ.ಪಿ.ಎಂ ರವರು ತಮ್ಮ ಸಹೋದರನ ಜೊತೆ ಹೀರೋಹೋಂಡಾ ಸಿಬಿಜೆಡ್‌‌ ಮೋಟಾರ್ ಸೈಕಲ್‌ ನಂ. ಕೆಎ-55-ಎಲ್‌‌-3698 ರಲ್ಲಿ ಹಿಂಭಾಗ ಕೂತು ಹೋಗುತ್ತಿರುವಾಗ ರಾಮಕೃಷ್ಣನಗರ, ಚದುರಂಗ ರಸ್ತೆಯಲ್ಲಿ ಆಂದೋಲನ ಸರ್ಕಲ್‌ ಕಡೆಯಿಂದ ಟಿ.ಕೆ.ಲೇಔಟ್‌‌ ಕಡೆಗೆ ಚಾಲನೆ ಮಾಡಿಕೊಂಡು ತಿಬ್ಬಾದೇವಿ ಸರ್ಕಲ್‌ ನಲ್ಲಿ ಹೋಗುತ್ತಿದ್ದಾಗ ಅವರ ಎಡಭಾಗದಿಂದ ಹೈಟೆಕ್ಷನ್‌ ರಸ್ತೆಯಲ್ಲಿ ಶಾರದಾದೇವಿನಗರದ ಕಡೆಯಿಂದ ಮಾರುತಿ ಸ್ವಿಪ್ಟ್‌ ಕಾರ್ ನಂ. ಕೆಎ-09-ಎಂಬಿ-6169 ವಾಹವನ್ನು ಅದರ ಚಾಲಕನು ವೇಗವಾಗಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ವಾಹನದ ಹಿಂಭಾಗಕ್ಕೆ ಡಿಕ್ಕಿ ಮಾಡಿದಾಗ ಪಿರ್ಯಾದಿ ಮತ್ತು ಜಲಜಾಕ್ಷಿ ಇಬ್ಬರು ಬಿದ್ದು ಪೆಟ್ಟಾಗಿದ್ದು ಸದರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

01

ವಿ ವಿ ಪುರಂ ಠಾಣೆ.

ಪಿರ್ಯಾದಿ ವಿವೇಕ್ ಭಟ್ &  ಪತ್ನಿ ರಂಜಿನಿ ಭಟ್ ರವರು  ಕೃಷ್ಣ ಎಂಬಾತನಿಗೆ ಈ ಹಿಂದೆ 20,00,000 /- ರೂ ಗಳನ್ನು ನೀಡಿದ್ದು ಸದರಿ ಹಣವನ್ನು ಕೇಳಲು ದಿ:-02-05-18 ರಂದು ರಾತ್ರಿ 10-30 ರ ಸಮಯದಲ್ಲಿ ಗೋಕುಲಂ ನಲ್ಲಿರುವ ಅವರ  ಮನೆಯ ಹತ್ತಿರ ಹೋದಾಗ ಕೃಷ್ಣನು ಮನೆಯ ಹತ್ತಿರ ಬೇಡ ಆದಿತ್ಯ ಆಸ್ಪತ್ರೆಯ ಹತ್ತಿರ ಬನ್ನಿ ಎಂದು ತಿಳಿಸಿದ್ದು ಸದರಿ ಸ್ಥಳಕ್ಕೆ ಹೋದಾಗ ಕೃಷ್ಣ ಹಾಗೂ ಆತನ ಸ್ನೇಹಿತರು ಪಿರ್ಯಾದಿ  ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದು ಆ ಸಮಯದಲ್ಲಿ ಕಾರ್ ಗ್ಲಾಸ್ ನ್ನು ಹೊಡೆದು ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ನಜರ್ ಬಾದ್ ಠಾಣೆ.

ಪಿರ್ಯಾದಿ ಶಿವೇಂದ್ರ ರವರು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ-07-05-2018 ರಂದು ಬೆಳಿಗ್ಗೆ 10-45 ರಿಂದ 11-30 ಗಂಟೆ ಸಮಯದಲ್ಲಿ ಗಾಯಿತ್ರಿಪುರಂ 1 ನೇ ಹಂತದಲ್ಲಿ ಜನರನ್ನು ಸಂಪರ್ಕಿಸಿ ರಾಜಕೀಯದ ಬಗ್ಗೆ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದಾಗ ಆ ಸಮಯದಲ್ಲಿ ಕಾಂಗ್ರೇಸ್ ಪಕ್ಷದವರು ಗಾಯಿತ್ರಿಪುರಂನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದು ಅಲ್ಲಿಗೆ ಬಂದು ಪಿರ್ಯಾದುದಾರರನ್ನು ಮುಂದೆ ಹೋಗದಂತೆ ತಡೆದು ನೀವು ಯಾರು ಏನು ಬರೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿ, ಪಿರ್ಯಾದುದಾರರ ಹತ್ತಿರ ಇದ್ದ ನೋಟ್ ಬುಕ್ ಮತ್ತು ಪೆನ್ನನ್ನು ಕಿತ್ತುಕೊಂಡು, ನೀವು ಏನಕ್ಕೆ ಈ ತರ ವರದಿ ಮಾಡುತ್ತಿದ್ದೀರ? ನೀವು ಏನೇನೊ ಬರೆದುಕೊಂಡು ವರದಿ ಮಾಡುತ್ತೀರ ಎಂದು ಹೇಳಿ ನೀವು ತನ್ವೀರ್ ಸೇಠ್ ಹತ್ತಿರ ಮಾತನಾಡಿಯೇ ಹೋಗಬೇಕು ಎಂದು ಹೇಳಿ ಪಿರ್ಯಾದುದಾರರನ್ನು ಶಿವಲಿಂಗಪ್ಪ ಮತ್ತು 10 ಜನ ಬೆಂಬಲಿಗರು ಹಿಡಿದುಕೊಂಡು ನೀವು ತನ್ವೀರ್ ಸೇಠ್ ಭೇಟಿಯಾಗದೆ ಈ ಏರಿಯಾ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ಬೆದರಿಕೆ ಹಾಕಿ, ಗಾಯಿತ್ರಿಪುರಂನಲ್ಲಿ ತನ್ವೀರ್ ಸೇಠ್ ರವರು ಪ್ರಚಾರ ಮಾಡುತ್ತಿದ್ದ ಮನೆಗೆ ಎಳೆದುಕೊಂಡು ಹೋಗಿ ತನ್ವೀರ್ ಸೇಠ್ರವರ ಹತ್ತಿರ ಬಿಟ್ಟಿದ್ದು ಅಲ್ಲಿ ತನ್ವೀರ್ ಸೇಠ್ರವರು 20 ನಿಮಿಷಗಳ ಕಾಲ ಪಿರ್ಯಾದುದಾರರನ್ನು ಮಾತನಾಡಿಸಿ  ತನ್ವೀರ್ ಸೇಠ್ ಹಾಗೂ ಅವರ ಬೆಂಬಲಿಗರು ಬೆದರಿಕೆ ಹಾಕಿದ್ದು ಸದರಿ ವ್ಯಕ್ತಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ನೀಡಿದ ದೂರು.            

 

                              MYSURU CITY TRAFFIC VIOLATION CASES

 

                                         DATE  :07-05-2018

SLNO

            HEADS

                NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

01

-

-

-

02

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

4

31

12

10

8

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com