ENGLISH   |   KANNADA

Blog



ದಿನಾಂಕ:08.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 173       No of Comments: 1

1

ಕೊಲೆ ಪ್ರಕರಣ

01

ವಿಜಯನಗರ ಠಾಣೆ

ದಿನಾಂಕ 08/05/18 ರಂದು ಪಿರ್ಯಾದಿ ಕೃಷ್ಣ ಸಿ.ಹೆಚ್.ಸಿ ರವರು ಗರುಡ ಕರ್ತವ್ಯದಲ್ಲಿದ್ದು ಠಾಣಾ ಸರಹದ್ದಿನಲ್ಲಿ ಕರ್ತವ್ಯ ದಲ್ಲಿದ್ದಾಗ  ಬೆಳಗಿನ ಜಾವ ಸುಮಾರು 06-30 ಗಂಟೆಗೆ ಕಂಟ್ರೋಲ್ ರೂಂ ನಿಂದ ನಿಸ್ತಂತು ಮೂಲಕ ಕೂರ್ಗಳ್ಳಿ ಕೆರೆಯ ಬಳಿ ಗಂಡಸ್ಸಿನ ಶವ ಬಿದ್ದಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಹೋಗುವಂತೆ ತಿಳಿಸಿದ ಮೇರೆಗೆ ಪಿರ್ಯಾದಿ  ಗರುಡಾ ವಾಹನದಲ್ಲಿ 06-45 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಕೂರ್ಗಳ್ಳಿ ಕೆರೆಯ ಎದುರು ಬಸ್ತೀಪುರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ  55 ವರ್ಷ ವಯಸ್ಸಿನ ಗಂಡಸ್ಸಿನ ಶವವು ಮಕಾಡೆಯಾಗಿ ಬಿದ್ದಿದ್ದು, ಕತ್ತಿನಲ್ಲಿ ಯಾವುದೋ ವಸ್ತುವಿನಿಂದ ಕತ್ತು ಬಿಗಿದಿರುವ ಗುರುತು ಹಾಗೂ ಎರಡೂ ಕಣ್ಣುಗಳು ಮುಚ್ಚಿದ್ದು, ಬಲಗಣ್ಣಿನ ಮೇಲೆ ಗುದ್ದಿರುವ ಗಾಯದ ಗುರುತು ಇದ್ದು, ಕಣ್ಣುಗಳು ಊದಿಕೊಂಡಿರುವುದು  ಕಂಡು ಬಂದಿರುತ್ತದೆ. ಸದರಿ ಆಸಾಮಿಯನ್ನು ಯಾರೋ ಕೊಲೆ ಮಾಡಿ ಸಾಕ್ಷಿ  ನಾಶಮಾಡುವ ಉದ್ದೇಶದಿಂದ ಕೂರ್ಗಳ್ಳಿ ಕೆರೆಯ ಬಳಿ ರಸ್ತೆಯ ಬದಿಯಲ್ಲಿ ಬಿಸಾಕಿರುವುದು ಕಂಡುಬಂದಿದ್ದು ಕಾನೂನು ಕ್ರಮ ಕೈಗೊಳ್ಳುವಂತೆ ಠಾಣೆಗೆ ನೀಡಿದ ದೂರು. 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ನಜರ್ ಬಾದ್ ಠಾಣೆ

ದಿನಾಂಕ-08-05-2018 ರಂದು ಮಧ್ಯಾಹ್ನ 12-30 ರಿಂದ 12-45 ಗಂಟೆ ಸಮಯದಲ್ಲಿ ಪಿರ್ಯಾದಿ ಕಲಂದರ್ ಖಾನ್   ಮತ್ತು ಅವರ ಮಗ  ನಂ. 482 3 ನೇ ಕ್ರಾಸ್ ಮಸೀದಿ ರಸ್ತೆ ನಜರ್ ಬಾದ್ ಮನೆಯಲ್ಲಿದ್ದಾಗ ಸೋಮು, ನವೀನ ಹಾಗೂ ಅಭಿರವರು ಪಿರ್ಯಾದುದಾರರ ಮನೆಯ ಹತ್ತಿರ ಬಂದು ಪಿರ್ಯಾದುದಾರರ ಮಗ ಮೊಹಮ್ಮದ್ ಅಮೀರ್ಖಾನ್ ರವರನ್ನು ಹೊರಗೆ ಕರೆದಾಗ ಮೊಹಮ್ಮದ್ ಅಮೀರ್ಖಾನ್  ಮನೆಯಿಂದ ಹೊರಗೆ ಬಂದ ತಕ್ಷಣ ಸೋಮು, ನವೀನ ಹಾಗೂ ಅಭಿರವರು ಏಕಾಏಕಿ ಮೊಹಮ್ಮದ್ ಅಮೀರ್ಖಾನ್ ಜೊತೆ ಗಲಾಟೆಮಾಡಿ ಸೋಮು ಎಂಬುವವನು ಬೈಕ್ ಕೀಯಿಂದ ಮೊಹಮ್ಮದ್ ಅಮೀರ್ಖಾನ್ ತಲೆಗೆ ಹಲ್ಲೆ ಮಾಡಿದ್ದು ಬೈಕ್ ಕೀ ಜೊತೆಯಲ್ಲಿ ಒಂದು ಚಾಕು ಇದ್ದು ಅದರಿಂದ ಹಲ್ಲೆ ಮಾಡಿದ್ದರಿಂದ ತಲೆಗೆ ರಕ್ತಗಾಯವಾಗಿದ್ದು  ಸದರಿ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ನರಸಿಂಹ ರಾಜ ಸಂಚಾರ ಠಾಣೆ

ದಿನಾಂಕ 08-05-2018 ರಂದು ಬೆಳಿಗ್ಗೆ ಸುಮಾರು 06-30 ಗಂಟೆಯಲ್ಲಿ ಪಿರ್ಯಾದಿ ಮೋಹನ್ ರವರು  ತಂದೆಚಾಮುಂಡೇಗೌಡರವರು  ಸ್ಕೂಟರ್ ನಂಬರ್  ಕೆಎ-09 ಇಕ್ಯೂ -3384 ರಲ್ಲಿ  ಕೂರಿಸಿಕೊಂಡು  ಚಾಲನೆ ಮಾಡಿಕೊಂಡು ಮೈಸೂರು ಬೆಂಗಳೂರು ರಸ್ತೆಯಲ್ಲಿ ಸಿದ್ದಲಿಂಗಪುರದಿಂದ ನಾಗನಹಳ್ಳಿ ಕ್ರಾಸ್ ಕಡೆಗೆ  ಹೋಗುತ್ತಿದ್ದಾಗ  ಇದೇ ವೇಳೆಗೆ ಹಿಂಭಾಗದಿಂದ ಆಪೆ ಗೂಡ್ಸ್ ಆಟೋರಿಕ್ಷಾ ನಂಬರ್ ನಂಬರ್ KA-52 A-2924 ರ ಚಾಲಕ ವಿಜಯ್ ಕುಮಾರ್ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಚಾಮುಂಡೇ ಗೌಡರ ಸ್ಕೂಟರ್ಗೆ ಡಿಕ್ಕಿ ಮಾಡಿದಾಗ ಸ್ಕೂಟರ್ ಸಮೇತ  ಕೆಳಗೆ ಬಿದ್ದು ಚಾಮುಂಡೇಗೌಡರ   ತಲೆಗೆ, ಮುಖಕ್ಕೆ, ಮೈಕೈಗೆ ಪೆಟ್ಟಾಗಿ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಿದ್ದು  ಈ ಅಪಘಾತದ ಬಗ್ಗೆ ಕಾನೂನು ಕ್ರಮ ಜರುಗಿಸಿ ಎಂದು ಠಾಣೆಗೆ ನೀಡಿದ ದೂರು.

ಕೃಷ್ಣರಾಜ ಸಂಚಾರ ಠಾಣೆ     

ದಿನಾಂಕ: 08-05-2018 ರಂದು ಬೆಳಿಗ್ಗೆ 05-15 ಗಂಟೆ ಸಮಯದಲ್ಲಿ ದಿಲಾಕ್ಷ @ ಸೂರ್ಯ ಎಂಬುವನು ಫೋರ್ಡ ಎಕೋಸ್ಪೋರ್ಟ ಕಾರ್‌ ನಂ. ಕೆಎ-03-ಎಇ-4024 ರಲ್ಲಿ ಜೀವನ್‌‌, ಶರತ್‌, ಸಂದೀಪ್‌‌ ಮತ್ತು ಪ್ರೀತಮ್‌ ರವರನ್ನು ಕೂರಿಸಿಕೊಂಡು ಬೋಗಾದಿ ಸಿಗ್ನಲ್‌ ಕಡೆಯಿಂದ ದಟ್ಟಗಳ್ಳಿ ಕಡೆಗೆ ರಿಂಗ್‌ ರಸ್ತೆಯಲ್ಲಿ ವೇಗವಾಗಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಆನಂದನಗರ, ಶ್ರೀ ಬಾಲಾಜಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮುಂಭಾಗ ರಿಂಗ್‌ ರಸ್ತೆ ಜಂಕ್ಷನ್‌‌ ಹತ್ತಿರ ಕಾರು ಚಾಲಕನ ನಿಯಂತ್ರಣ ತಪ್ಪಿ ರಿಂಗ್‌‌ ರಸ್ತೆಯ ಸಿಮೆಂಟ್‌ ಸ್ಲ್ಯಾಬ್‌ ಕಟ್ಟೆಗೆ ಡಿಕ್ಕಿಯಾದ ಪರಿಣಾಮ ಸುಮಾರು ದೂರ ಉಜ್ಜಿಕೊಂಡು ಹೋಗಿ ಸಿಮೆಂಟ್‌‌ ಸ್ಲ್ಯಾಬ್‌‌ ಕಟ್ಟೆಯ ಮೇಲೆ ಕಾರಿನ ಒಂದು ಚಕ್ರ ಮೇಲೆ ಹೋಗಿ ಕಬ್ಬಿಣದ ವಿದ್ಯುತ್‌ ಕಂಬದ ಸಿಮೆಂಟ್‌ ಕಟ್ಟೆಗೆ ಡಿಕ್ಕಿಯಾದಾಗ ಕಾರು ಎಡಮೊಗ್ಗುಲಾಗಿ ಮೊಗಚಿಕೊಂಡು  ಕಾರಿನಲ್ಲಿದ್ದ ಜೀವನ್‌, ಶರತ್‌‌, ಸಂದೀಪ ಮತ್ತು ಕಾರಿನ ಚಾಲಕನು ಸೇರಿದಂತೆ ಮೈ,ಕೈ,ಕಾಲು, ಮುಖ ಮತ್ತು ತಲೆಗೆ ಪೆಟ್ಟಾಗಿದ್ದು, ಕಾರು ಸಂಪೂರ್ಣ ಜಖಂ ಆಗಿರುವ ವಿಚಾರವನ್ನು ತಿಳಿದುಕೊಂಡ ಠಾಣಾ  ಸುಧಾಕರ್‌ ಸಿಹೆಚ್‌‌ಸಿ, ‌ ರವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದು, ಸ್ಥಳಕ್ಕೆ ಬಂದ 108 ಆಂಬ್ಯೂಲೆನ್ಸ್‌ ವಾಹನದಲ್ಲಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ವತ್ರೆಗೆ ಕಳುಹಿಸಿ, ಆಸ್ವತ್ರೆಗೆ ಬೇಟಿ ನೀಡಿ ಈ ಅಪಘಾತಕ್ಕೆ ಕಾರಣನಾದ ಫೋರ್ಡ ಎಕೋಸ್ಪೋರ್ಟ ಕಾರ್‌ ನಂ. ಕೆಎ-03-ಎಇ-4024 ರ ಚಾಲಕ ದಿಲಾಕ್ಷ್‌ @ ಸೂರ್ಯ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

ಕೃಷ್ಣರಾಜ ಸಂಚಾರ ಠಾಣೆ     

ದಿನಾಂಕ: 07-05-2018 ರಂದು ಸಂಜೆ 0730 ಗಂಟೆಗೆ ಪಿರ್ಯಾದಿ ನಾಗರಾಜು ಮತ್ತು ಅವರ ಬಾವ ಮಹದೇವ 35ವರ್ಷ ಇಬ್ಬರು ಅವರವರ ಬೈಕ್‌‌ನಲ್ಲಿ ಶ್ರೀರಾಂಪುರ, 2ನೇ ಹಂತ, ಸಪ್ತಗಿರಿ ವೈನ್ಸ್ ಹತ್ತಿರ, ತಾಂಡವೇಶ್ವರ ವುಡ್ ಪ್ಲೈನಿಂಗ್ ಮತ್ತು ವುಡ್ ವರ್ಕರ್ಸ್‌‌ ಅಂಗಡಿ ಮುಂಭಾಗ ರಿಂಗ್ ರಸ್ತೆಯ ಸರ್ವೀಸ್‌ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅವರ ಎದುರುಗಡೆಯಿಂದ ಪ್ಯಾಸೆಂಜರ್ ಆಟೋರಿಕ್ಷಾ ನಂ. ಕೆಎ-09-ಎ-8162 ವಾಹವನ್ನು ಚಾಲಕ ಮಂಜುನಾಥ ರವರು ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್ ಕಡೆಯಿಂದ ಅತಿ ವೇಗ ವಾಗಿ ಚಾಲನೆ ಮಾಡಿಕೊಂಡು ಬಂದು ಮಹದೇವ ರವರ ಹೀರೋಹೋಂಡಾ ಪ್ಯಾಷನ್‌ ಪ್ಲಸ್‌ ಮೋಟಾರ್ ಸೈಕಲ್‌ ನಂ. ಕೆಎ-09-ಇಹೆಚ್‌‌-8162 ಕ್ಕೆ ಡಿಕ್ಕಿ ಮಾಡಿದಾಗ ಮಹದೇವರವರು ಬೈಕ್ ಸಮೇತ ಕೆಳಗೆ ಬಿದ್ದು  ಬಲಗಾಲಿಗೆ ಬಲವಾದ ಪೆಟ್ಟಾಗಿ ಅಪೊಲೋ ಆಸ್ವತ್ರೆಗೆ, ಚಿಕಿತ್ಸೆ ದಾಖಲಿಸಿದ್ದು  ಈ ಅಪಘಾತಕ್ಕೆ ಕಾರಣನಾದ ಪ್ಯಾಸೆಂಜರ್ ಆಟೋರಿಕ್ಷಾ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ದಿನ ಠಾಣೆಗೆ ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                MYSURU CITY TRAFFIC VIOLATION CASES

 

                                           DATE  :08-05-2018

SLNO

               HEADS

                          NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

03

-

-

-

03

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

4

31

12

10

8

65



Your Comment

Name :
Email:
Comment:
Submit

Reader's Comments(1)

Juned   says on Wednesday 09 May 2018

Know about case to my vehicle ka10u1433


Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com