ENGLISH   |   KANNADA

Blogದಿನಾಂಕ;02.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:03.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 274       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ಉದಯಗಿರಿ ಠಾಣೆ

ದಿನಾಂಕ: 02-11-2018 ರಂದು ಸಂಜೆ 16-02 ಸಮಯದಲ್ಲಿ ಪಿರ್ಯಾದಿಅಶ್ವಥ್  ಎಹೆಚ್.ಸಿ 204ಮತ್ತು ಸಿಹೆಚ್.ಸಿ 540 ಸುರೇಶ್ ರವರು ಗರುಡು 23 ಕರ್ತವ್ಯದಲ್ಲಿದ್ದಾಗ ಠಾಣಾ ಎಸ್.ಹೆಚ್.ಓ ರವರು ಪಿರ್ಯಾದಿಯವರಿಗೆ ಯಾರೋ 3-4 ಜನ ಹುಡುಗರು ರಾಜೀವ್ ನಗರ 2ನೇ ಹಂತ ಕೆ.ಕೆ. ಹುಂಡಿ ರಸ್ತೆಯಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದ್ದು, ಅವರ ಆದೇಶದಂತೆ ಸ್ಥಳಕ್ಕೆ ಹೋಗಿ ನೋಡಲಾಗಿ ದೇವಸ್ಥಾನದ ಆವರಣದಲ್ಲಿ 4 ಜನರು ಮೂತ್ರ ವಿಸರ್ಜನೆ ಮಾಡುತ್ತಾ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅವರಲ್ಲಿ 3 ಜನರು ಅಲ್ಲಿಂದ ಓಡಿಹೋದರು. ಸಿಹೆಚ್.ಸಿ 540 ರವರು ಅವರುಗಳನ್ನು ಹಿಡಿಯಲು ಬೆನ್ನಟ್ಟಿ ಹೋಗಿದ್ದು, ಪಿರ್ಯಾದಿಯವರು ದೇವಸ್ಥಾನದ ಆವರಣದಲ್ಲಿದ್ದ ಒಬ್ಬ ಆಸಾಮಿಯನ್ನು ಹಿಡಿದುಕೊಂಡಾಗ ಆತ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಿನಗೆ ಒಂದು ಗತಿ ಕಾಣಿಸಿಬಿಡುತ್ತೇನೆಂದು ಹೇಳಿ ತನ್ನ ಕಾಲಿನಿಂದ ಟಾಂಗ್ ಕೊಟ್ಟು ಪಿರ್ಯಾದಿಗೆ ಕೆಳಗೆ ಬೀಳಿಸಿ ಕೈಮುಷ್ಠಿಯಿಂದ ಪಿರ್ಯಾದಿಯ ಎದೆಗೆ ಮೈಕೈಗೆ ಗುದ್ದಿ ನೋವುಂಟು ಮಾಡಿದ್ದು, ಮೇಲಕ್ಕೆ ಏಳಲು ಪ್ರಯತ್ನಿಸಿದರೂ ಬಿಡದೆ ನೆಲದ ಮೇಲೆ ಉರುಳಾಡಿಸಿ ಕಾಲಿನಿಂದ ಪಿರ್ಯಾದಿಯ ಎಡ ಸೊಂಟ ಮತ್ತು ಕಾಲಿಗೆ ಒದ್ದು ನೋವುಂಟು ಮಾಡಿ ಇವತ್ತು ನಿನ್ನನ್ನು ಕೊಲೆ ಮಾಡಿಬಿಡುತ್ತೇನೆಂದು ಕೊಲೆ ಬೆದರಿಕೆ ಹಾಕಿದ್ದು, ಅಷ್ಟರಲ್ಲಿ ಸಿಹೆಚ್.ಸಿ. 540 ರವರು ಪಿರ್ಯಾದಿಯ ರಕ್ಷಣೆಗೆ ಬಂದಿದ್ದು, ಆಸಾಮಿಯನನ್ನು ವಶಕ್ಕೆ ಪಡೆಯುವ ಉದ್ದೇಶದಿಂದಮತ್ತು ಸ್ವರಕ್ಷಣೆಗಾಗಿ ಕನಿಷ್ಟ ಬಲ ಪ್ರಯೋಗಿಸಿ ಸ್ಥಳದಲ್ಲೇ ವಶಕ್ಕೆ ಪಡೆದು ಆತನ ಹೆಸರು ವಿಳಾಸ ಕೇಳಲಾಗಿ ಪುನ: ಪೊಲೀಸ್ ಸೂಳೆ ಮಕ್ಕಳಾ 2 ದಿನದಲ್ಲಿ ವಾಪಸ್ಸ್ ಬಂದು ನಿಮ್ಮ ಹೆಣ ಬೀಳಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಮೇಲ್ಕಂಡನ ವಿರುದ್ದ ಕಾನೂನು ರೀತ್ಯ ಕ್ರಮಕ್ಕಾಗಿ ವರದಿ ನೀಡಿದ್ದರ ಮೇರೆಗೆ  ಈ ಪ್ರ.ವ.ವರದಿ.

 ಅಶೋಕಪುರಂ ಠಾಣೆ

ಪಿರ್ಯಾದುದಾರರಾದ ಶ್ರೀ ಪಿ ಸ್ವಾಮಿ ಬಿನ್ ಪುಟ್ಟೇಗೌಡ ರವರು ದಿನಾಂಕ 02.11.2018 ರಂದು ಬೆಳಗ್ಗೆ 10.30 ಗಂಟೆಗೆ ನನ್ನ ಪತ್ನಿಗೆ 2012 ನೇ ಸಾಲಿನಲ್ಲಿ ಮೈಸೂರು ತಾಲ್ಲೂಕು ಸರ್ವೇ ನಂ 40 ರಲ್ಲಿನ ಸೈಟನ್ನು ಎಸ್ ರವಿ ಎಂಬುವವರು ನೊಂದಾವಣೇ ಮಾಡಿಕೊಟ್ಟಿದ್ದು ಅದರಂತೆ 2018 ನೇ ಇಸವಿಯಲ್ಲಿ ನಾವು ಸದರಿ ಸೈಟಿನಲ್ಲಿ ಮನೆ ಕಟ್ಟಲು ಹೋದಾಗ ರಾಘವೇಂದ್ರ ಸೇಠ್, ರವಿ ಪ್ರಕಾಶ್, ಎಸ್ ರವಿ ಇವರುಗಳು ದಿನಾಂಕ 19.09.2018 ರಂದು ಮನೆ ಕಟ್ಟಬೇಡಿ ಎಂದು ತಡೆದಿರುತ್ತಾರೆ. ನಂತರ ದಿನಾಂಕ 31.10.2018 ರಂದು ಸಂಜೆ ಸುಮಾರು 07.00 ಗಂಟೆ ಸಮಯದಲ್ಲಿ ಅಶೋಕಪುರಂ 1ನೇ ಕ್ರಾಸ್, ಮೊದಲ ಮಹಡಿಯಲ್ಲಿನ ವಕೀಲರ ಕಛೇರಿಯಲ್ಲಿ ನಾನು ಹಾಗೂ ನನ್ನ ಪತ್ನಿ ನಾಗಲಾಂಭಿಕ ರವರು ಚರ್ಚೆ ಮಾಡುತ್ತಿರುವಾಗ ಅಲ್ಲಿಗೆ ರಾಘವೇಂದ್ರ ಸೇಠ್, ರವಿ ಪ್ರಕಾಶ್, ಎಸ್ ರವಿ ರವರು ಬಂದು  ರಾಘವೇಂದ್ರ ಸೇಠ್ ನನ್ನನ್ನು ತಡೆದು ನಿಲ್ಲಿಸಿ ಕೈಯಿಂದ ಜೋರಾಗಿ ನನ್ನ ಮೇಲೆ ಹಲ್ಲೆ ಮಾಡಿದನು. ನಂತರ ರವಿ ಪ್ರಕಾಶ್ ಹಾಗೂ ಎಸ್ ರವಿ ರವರು ಏ ಸೂಳೆ ಮಕ್ಕಳೇ, ನಿಮಗೆಷ್ಟು ಧೈರ್ಯ ನಮ್ಮ ಮೇಲೆ ಕೇಸು ಹಾಕಲು ಎಂದು ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿದ್ದು ನಂತರ ಅಲ್ಲಿಗೆ ಪಾಂಡುರಂಗ ಸೇಠ್ ಹಾಗೂ ರವಿ ಪ್ರಕಾಶ್ ರವರ ಅಣ್ಣ(ಹೆಸುರ ತಿಳಿದಿಲ್ಲ) ರವರು ಬಂದು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿದ್ದು ನಂತರ ಶಶಿಕುಮಾರ್ ರವರು ಬಂದು ಸಮಾಧಾನ ಪಡಿಸಿರುತ್ತಾರೆ. ನನಗೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿರುವ ಮೇಲ್ಕಂಡ ವ್ಯಕ್ತಿಗಳ ವಿರುದ್ಧ ಈ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿ.ವಿ.ಪುರಂ ಠಾಣೆ

ಪಿರ್ಯಾದುದಾರರಾದ ಭರತ್ ರವರು ಹೊಂಡಾ ಸೈನ್ ಬೈಕ್ ನಂ. ಕೆಎ-55 ಎಲ್-5974 ನ್ನು ದಿನಾಂಕ:29.10.2018 ರಂದು ಬೆಳಿಗ್ಗೆ ನಾನು ವಾಸವಾಗಿರುವ  ಮನೆಯ ಬಳಿಯಿಂದ ಗೋಕುಲಂ 3ನೇ ಹಂತ ಕಾಂಟೂರ್ ರಸ್ತೆಯಲ್ಲಿರುವ ಆದಿತ್ಯಾ ಅಧಿಕಾರಿ ಆಸ್ಪತ್ರೆಗೆ ಬಂದು 11.45 ಗಂಟೆ ಸಮಯದಲ್ಲಿ ಆಸ್ಪತ್ರೆಯ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನನ್ನ ಬೈಕ್ ನ್ನು ಲಾಕ್ ಮಾಡಿ ನಿಲ್ಲಿಸಿ ಆಸ್ಪತ್ರೆಯ ಒಳಗೆ ಹೋಗಿ ಲ್ಯಾಬ್ ಸರ್ವೀಸ್ ಕೆಲಸ ಮುಗಿಸಿ  ಮದ್ಯಾಹ್ನ 02.00 ಗಂಟೆ ಸಮಯಕ್ಕೆ ವಾಪಸ್ ಬಂದು ನೋಡಲಾಗಿ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಕಳುವಾಗಿರುತ್ತೆ. ಇದೂವರೆಗೆ ಎಲ್ಲಾ ಕಡೆ ಹುಡುಕಾಡಿದ್ದು ಸಿಗದ ಕಾರಣ ತಡವಾಗಿ ದೂರು ನೀಡುತ್ತಿದ್ದು ಕಳುವಾದ ಬೈಕ್ ನ   ಬೆಲೆ. 18.000/-ರೂ ಆಗಿದ್ದು ಕಳುವಾದ ನನ್ನ ಬೈಕ್  ನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ವಿ.ವಿ.ಪುರಂ ಸಂಚಾರ ಠಾಣೆ

ದಿನಾಂಕ; 28.10.2018 ರಂದುಬೆಳಿಗ್ಗೆ 11.45 ಗಂಟೆಸಮಯದಲ್ಲಿ ಪಿರ್ಯಾದುದಾರರಾದ  ರಾಜುರವರ ಮಗ ರೋಹಿತ್ ಹೀರೊ ಹೋಂಡಾ ಡಾನ್ ಮೋ.ಸೈ ನಂ-ಜಿಎ-08-ಸಿ-3683 ಇದರಲ್ಲಿ ಹಿಂಭಾಗ ಗುರು ಎಂಬುವವರನ್ನು ಕೂರಿಸಿಕೊಂಡು ಬಾರತ್ ನ್ಸರ್ಆ ಆಸ್ಪತ್ರೆಯ ಮುಂಭಾಗದ ರಿಂಗ್ರಸ್ತೆಯಲ್ಲಿ ಚಾಲನೆಮಾಡಿಕೊಂಡು ಬರುವಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬುಲೆಟ್ ಮೋಸೈ ನಂ ಕೆಎ-09-ಇವೈ-1656 ಇದನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಇಬ್ಬರು ವಾಹನ ಸಮೇತ ಕೆಳಕ್ಕೆ ಬಿದ್ದು ರೋಹಿತ್ ಬಲಕೈ ಬಲಕಾಲಿನ ಮೂಳೆಮುರಿದು ತಲೆಗೆಪೆಟ್ಟಾಗಿದ್ದು ಹಿಂಬದಿ ಸವಾರ ಗುರುವಿಗೆ ಕೈಕಾಲಿಗೆ ಕೈಕಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆಗೆ ಬೃಂದಾವನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ವಿದ್ಯಾರಣ್ಯ ಆಸ್ಪತ್ರೆಗೆ   ದಾಖಲಾಗಿದ್ದು , ಈ ಸಮಯದಲ್ಲಿ ಡಿಕ್ಕಿ ಮಾಡಿದ ಮೋಸೈ ಸವಾರ ಚಿಕಿತ್ಸೆಯ ಖರ್ಚು ನೀಡುವುದಾಗಿ ತಿಳಿಸಿ ಈಗ  ನಿರಾಕರಿಸಿದ ಕಾರಣ,  ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ಮೇರೆಗೆ ಈ ಪ್ರ.ವರದಿ

ನರಸಿಂಹರಾಜ ಸಂಚಾರ ಠಾಣೆ 

ದಿನಾಂಕ:02-11-2018 ರಂದು ಸಂಜೆ ಸುಮಾರು 05.30 ಗಂಟೆಯಲ್ಲಿ ಪಿರ್ಯಾದುದಾರರಾದ ಶಿವಮ್ಮರವರ ಪತಿ ಜಯರಾಮ್ ರವರು ಮಾರುತಿ ಸರ್ಕಲ್ ಬಳಿ ಕೆಎಸ್ಆರ್ ಟಿಸಿ ಬಸ್ ನಂಬರ್   KA09 F-4787 ನ್ನು ಹತ್ತುತ್ತಿದ್ದಾಗ  ಇದೇ ವೇಳೆಗೆ ಬಸ್ ಚಾಲಕ ದೇವರಾಜು ಬಸ್ಸನ್ನು ಏಕಾಏಕಿ ನಿರ್ಲಕ್ಷತನದಿಂದ ಮುಂದಕ್ಕೆ ಚಾಲನೆ ಮಾಡಿದಾಗ ಜಯರಾಮ್ ರವರು ಬಸ್ಸಿನಿಂದ ಕೆಳಗೆ ಬಿದ್ದಿದ್ದು ಬಸ್ಸಿನ ಚಕ್ರ ಕಾಲಿನ ಮೇಲೆ ಹತ್ತಿ ಎಡಗಾಲಿಗೆ ಪೆಟ್ಟಾಗಿದ್ದ ಜಯರಾಂರವರನ್ನು ಅಲ್ಲಿದ್ದವರು ಎತ್ತಿ ಉಪಚರಿಸಿ ಸ್ಥಳಕ್ಕೆ ಬಂದ  ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದು ಜಯರಾಂರವರು ಕೆ.ಆರ್. ಆಸ್ಪತ್ರೆಗೆ  ಬಂದು ಚಿಕಿತ್ಸೆಗೆ ದಾಖಲಾಗಿರುತ್ತಾರೆ.  ಆದ್ದರಿಂದ  ಈ ಅಪಘಾತಕ್ಕೆ ಕಾರಣನಾದ ಬಸ್ ಚಾಲಕ ದೇವರಾಜ್ ರವರ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ಪಿರ್ಯಾದಿಯವರು ಕೆ.ಆರ್ ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ ವ ವರದಿ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                         MYSURU CITY TRAFFIC VIOLATION CASES

                                                      DATE  :02-11-2018

SLNO

   HEADS

                                         NO. OF CASES

DR

KR

NR

SN

VV

TOTAL

1

TOTAL NUMBER OF FTVRS

TOTAL NUMBER OF FTVRS

         132

          65

           -  

           -  

           -  

2

TOTAL NUMBER OF CRR'S

TOTAL NUMBER OF CRR'S

         311

         102

        445

         199

         531

3

TOTAL FINE AMOUNT COLLECTED

TOTAL FINE AMOUNT COLLECTED

    37,100

    13,700

   48,000

    21,300

    58,300

4

POLICE NOTICE ISSUED

POLICE NOTICE ISSUED

           -  

           -  

           -  

           -  

 

5

PARKING TAGS

PARKING TAGS

           -  

           -  

           -  

           -  

 

6

FATAL

FATAL

           -  

           -  

           -  

           -  

           -  

7

NON FATAL

NON FATAL

           -  

            1

            1

           -  

             1

8

INTERCEPTOR CASES

INTERCEPTOR CASES

           -  

           -  

 -

           -  

 

9

SUSPENSION OF D.L.

SUSPENSION OF D/L

           -  

           -  

           -  

           -  

 

10

Sec 283 IPC CASES

Sec 283 IPC CASES

           -  

           -  

           -  

           -  

           -  

11

Sec 353 IPC CASES

Sec 353 IPC CASES

           -  

           -  

           -  

           -  

 

12

TOWING CASES

TOWING CASES T/W

           34

          32

            4

             3

           15Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com