ENGLISH   |   KANNADA

Blog



ದಿನಾಂಕ;06.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 75       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ಎನ್ ಆರ್ ಠಾಣೆ.

ಪಿರ್ಯಾದಿ ರೇಷ್ಮಾ, #750, ಎಸ್ ಎಸ್ ನಗರ ರವರಿಗೂ ಅವರ ಗಂಡ ನಾಸೀರ್ ಅಹ್ಮದ್ ಖಾನ್ ರವರ ನಡುವೆ ವೈಮನಸ್ಸಿದ್ದು. ದಿನಾಂಕ;28/09/18 ಮತ್ತು 02/10/18 ರಂದು ಗಂಡ ಮತ್ತು ಗಂಡನ ಕಡೆಯವರಾದ ಅತಾವುಲ್ ಖಾನ್, ಶಬ್ಬೀರ್, ಅನೀಸ್ ಫಾತಿಮಾ ರವರು ಪಿರ್ಯಾದಿ ರವರ ಮನೆಗೆ ನುಗ್ಗಿ ಪಿರ್ಯಾದಿರವರಿಗೆ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರು.

ಉದಯಗಿರಿ ಠಾಣೆ.

ದಿನಾಂಕ:05-11-2018 ರಂದು ರಾತ್ರಿ 19-00 ಗಂಟೆಯಲ್ಲಿ ಪಿರ್ಯಾದಿ ಫೈಜಲ್ ಖಾನ್  ರವರು ಆತನ ಸ್ನೇಹಿತರಾದ ಹಾಈಸ್ ಮತ್ತು ಉಸ್ಮಾನ್ ರವರ ಜೊತೆ ಮಾದೇಗೌಡ ವೃತ್ತದ ಬಳಿ ಮಾತನಾಡುತ್ತಿದ್ದಾಗ ಪಿರ್ಯಾದಿಗೆ ಪರಿಚಯವಿರುವ ಸೈಯದ್ ಝೈನ್ ಎಂಬುವವರ ಜೊತೆ   ಆರೋಪಿಗಳಾದ ಅಯೂಬ್ ಖಾನ್ & ಫರಾಜ್ ಅಹಮ್ಮದ್ ರವರು  ಜಗಳವಾಡುತ್ತಿದ್ದು  ಜಗಳ ಬಿಡಿಸಲು ಹೋದ ಪಿರ್ಯಾದಿರವರಿಗೆ ಸದರಿ ಆರೋಪಿತರು  ಕೈ ಮತ್ತು ಇಟ್ಟಿಗೆ ಇಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು.  ಸದರಿ ಆರೋಪಿತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಮೇಟಗಳ್ಳಿ ಠಾಣೆ.

ದಿ;05/11/2018 ರಂದು ರಾತ್ರಿ 0900 ಗಂಟೆಗೆ ಪಿರ್ಯಾದಿ ಅರುಣ್, #356, ಹಳೇ ಬೀದಿ, ಕುಂಬಾರಕೊಪ್ಪಲು ರವರು ತಮ್ಮ ಸುಜುಕಿ ಆಕ್ಸಿಸ್ ನಂ. ಕೆಎ-09 ಹೆಚ್ ಇ-9684 ನ್ನು ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:06.11.2018 ರಂದು ಬೆಳಿಗ್ಗೆ 0730 ಗಂಟೆಯಲ್ಲಿ ಪಿರ್ಯಾದಿ ಸತೀಶ್ ಕುಮಾರ್ ರವರ ಸ್ನೇಹಿತ ಮಹೇಶ್ ಎಂಬುವವರು ತನ್ನ  ಪಲ್ಸರ್ ಮೊ.ಸೈ.ನಂ. ಕೆಎ-09 ಹೆಚ್ಎಂ 6778 ನ್ನು ಯಾದವಗಿರಿಯ ಸಂಕಲ್ಪ ಅಪಾರ್ಟ್ ಮೆಂಟ್  ಬಳಿ  ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಇದೇ ಸಮಯಕ್ಕೆ ಎದುರುಗಡೆಯಿಂದ ಐಚರ್ ಗೂಡ್ಸ್ ವಾಹನ ನಂ. ಕೆಎ-16 ಎ 6879 ಇದನ್ನು ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ತೀರ ಬಲಕ್ಕೆ ಚಾಲನೆ ಮಾಡಿ ಮಹೇಶ ಚಾಲನೆ ಮಾಡಿಕೊಂಡು ಬರುತ್ತಿದ್ದ ಮೊ.ಸೈಕಲ್ ಗೆ  ಡಿಕ್ಕಿ ಮಾಡಿದ್ದರಿಂದ ಮಹೇಶ ರವರ  ತಲೆ ಹಾಗೂ ಕುತ್ತಿಗೆಗೆ ತೀವ್ರ ಸ್ವರೂಪದ ಗಾಯಗಳಾಗಿ ಚಿಕಿತ್ಸೆಗೆ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು,ಈ ಅಪಘಾತಕ್ಕೆ ಕಾರಣನಾದ ವಾಹನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;04/11/18 ರಂದು ಸಂಜೆ 2015 ಗಂಟೆಗೆ ಪಿರ್ಯಾದಿ ಬಸವರಾಜು ರವರು ತಮ್ಮ ಪತ್ನಿ ಮಂಜುಳ ರವರನ್ನು ತಮ್ಮ ಟಿವಿಎಸ್ ಮೊಪೇಡ್ ನಲ್ಲಿ ಕೂರಿಸಿ ಕೊಂಡು ರಿಂಗ್ ರಸ್ತೆ ವಾಸವಿ ಶಾಂತಿಧಾಮದ ಬಳಿ ಹೋಗುತ್ತಿದ್ದಾಗ ಆರೋಪಿ ಬೈಕ್ ನಂ. ಕೆ-09 ಹೆಚ್ ಆರ್-3513 ರ ಸ್ಕೂಟರ್ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ರವರ ಮೊಪೇಡ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಮತ್ತು ಮಂಜುಳ ರವರು ಕೆಳಗೆ ಬಿದ್ದು ಪೆಟ್ಟಾಗಿ ನಿರ್ಮಲ ಆಸ್ಪತ್ರೆಗೆ ದಾಖಲಾಗಿದ್ದು. ಅಪಘಾತಕ್ಕೆ ಕಾರಣನಾದ ಸದರಿ ಬೈಕ್ ಸವಾರನ ವಿರುದ್ದ  ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;05-11-2018 ರಂದು ರಾತ್ರಿ 09-15 ಗಂಟೆಯಲ್ಲಿ ಪಿರ್ಯಾದಿ ಸಂಪತ್ ಕುಮಾರ್ ರವರ  ಬಾಮೈದ ಧನ್ಯಕುಮಾರ್.ಎನ್ (63 ವರ್ಷ) ರವರು ಸುಜುಕಿ ಆಕ್ಸಿಸ್ ಸ್ಕೂಟರ್ ನಂಬರ್ ಕೆಎ-09-ಇಎಂ-8819 ರಲ್ಲಿ ಬಂಡಿಪಾಳ್ಯದಿಂದ ಕೆಲಸ ಮುಗಿಸಿಕೊಂಡು, ಜೆ.ಪಿ ನಗರ ಲಿಂಕ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನಂ ಕೆಎ-05-ಹೆಚ್ ಡಿ-5653 ರ ಸವಾರ ರವಿ ಎಂಬುವನು ಮಧ್ಯಪಾನ ಮಾಡಿಕೊಂಡು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಧನ್ಯಕುಮಾರ್.ಎನ್ ರವರ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲಿದ್ದ ಶರತ್.ಎಂ ಹಾಗೂ ದೀಪಕ್ ರವರು ಗಾಯಾಳುವನ್ನು ಅಪೊಲೋ ಬಿ.ಜಿ.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಪೊಲೋ ಆಸ್ಪತ್ರೆಯ ವೈದ್ಯರು ಮಾರ್ಗ ಮಧ್ಯದಲ್ಲೆ ಮೃತಪಟ್ಟಿರುತ್ತಾರೆಂದು ತಿಳಿಸಿದ್ದಿ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ 06/11/18 ರಂದು ಸಂಜೆ 1730 ಗಂಟೆಯಲ್ಲಿ ಪಿರ್ಯಾದಿ ರವಿ ಸಿ ಹೆಚ್ ಸಿ-615ಚ ರವರು ಮಾನಂದವಾಢಿ & ದೇವಯ್ಯನ ಹುಂಡಿ ರಸ್ತೆ ಜಂಕ್ಷನ್ ಬಳಿ  ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿ ಕೆಎ-55 ಕೆ-9670 ರ  ಬೈಕ್ ಸವಾರ ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದು ಯಾವುದೇ ಮುನ್ಸೂಚನೆಯನ್ನು ನೀಡದೆ ಏಕಾಏಕಿ ನಿರ್ಲಕ್ಷತೆಯಿಂದ ಬೈಕ್ ನಿಲ್ಲಿಸಿದಾಗ ಹಿಂದಿನಿಂದ ಬರುತ್ತಿದ್ದ ಹೋಂಡಾ ಆಕ್ಟೀವಾ ಸ್ಕೂಟರ್ ಸವಾರ ಶ್ರೀಕಾಂತ್ ರವರು ಸ್ಕೂಟರ್ ಅನ್ನು ನಿಲ್ಲಿಸಲಾಗದೆ ಪಲ್ಸರ್ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀಕಾಂತ್ ರವರಿಗೆ ಪೆಟ್ಟಾಗಿ ಚಿಕಿತ್ಸೆಗಾಗಿ ಅರವಿಂದ ಆಸ್ಪತ್ರೆಗೆ ಕಳಿಸಿದ್ದು. ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

02

ಉದಯಗಿರಿ ಠಾಣೆ.

ದಿನಾಂಕ:24-10-2016 ರಂದು ಪಿರ್ಯಾದಿ ಹುಸೇನ್ ಶರೀಫ್, #378, ಬೀಡಿ ಕಾಲೋನಿ, ಅಜೀಜ್ ಸೇಟ್ ನಗರ  ರವರಿಗೆ  ಅಸ್ಮಾಭಾನು ಮತ್ತು ಅವರ ತಮ್ಮ ಸೈಯದ್ ಅಬ್ರಾರ್ ಮತ್ತು ಬ್ರೋಕರ್ ಮುಕ್ತಾರ್ ಪಾಷ ರವರ ಸಮಕ್ಷಮ ಭೋಗ್ಯದ ಹಣವನ್ನು ಒಟ್ಟು 4,50,000/- ಲಕ್ಷ ನೀಡಿದ್ದು, ಸದರಿ ಮೇಲ್ಕಂಡ ಮನೆಯಲ್ಲಿ ವಾಸವಾಗಿದ್ದು,  ದಿ: 30-10-2018 ರಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ಬಂದು ಈ ಮನೆ ಮೇಲೆ  21,00,000/- ರೂ ಸಾಲವನ್ನು ಅಸ್ಮಾಭಾನು ರವರು  ಪಡೆದಿದ್ದು, ಸಾಲ ಮರುಪಾವತಿ ಮಾಡದ ಕಾರಣ ಪಿರ್ಯಾದಿರವರನ್ನು  ಮನೆಯಿಂದ ಹೊರಗಡರ  ಕಳುಹಿಸಿ ಬೀಗವನ್ನು ಹಾಕಿರುತ್ತಾರೆ. ದಿ: 02-11-2018 ರಂದು ಮನೆಯ ಮಾಲೀಕರಾದ ಅಸ್ಮಾಭಾನು ಮತ್ತು ಅವರ ತಮ್ಮ ಸೈಯದ್ ಅಬ್ರಾರ್ ಮತ್ತು ಬ್ರೋಕರ್ ಮುಕ್ತಾರ್ ಪಾಷ ರವರುಗಳ ಹತ್ತಿರ ಭೋಗ್ಯದ ಹಣವನ್ನು ಕೇಳಿದಾಗ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಭೋಗ್ಯದ ಹಣವನ್ನು ವಾಪಸ್ಸು ಕೊಡದೆ ವಂಚಿಸಿ ಮೋಸ ಮಾಡಿರುತ್ತಾರೆಂದು ನೀಡಿದ ದೂರು.

ಕೆ ಆರ್ ಠಾಣೆ.

ಪಿರ್ಯಾದಿ ನರಸಿಂಹರಾವ್ ರವರ  ಪತ್ನಿಗೆ ದಿ:03/10/18 ರಂದು ಸಂಜೀವಿನಿ ಆಯುರ್ವೇದಿಕ್  ಆಸ್ಪತ್ರೆ ಯಿಂದ ಕಾಲು ನೋವಿಗೆ ಔಷಧಿಯನ್ನು ನೀಡಿದ್ದು. ಆ  ಔಷಧಿಯಿಂದ ತಮ್ಮ  ಪತ್ನಿ ಕಾಲಿನ ನೋವಿಗೆ ಯಾವುದೇ ರೀತಿಯ ಒಳ್ಳೆಯ ಪರಿಣಾಮ ಆಗಿರುವುದಿಲ್ಲ ಎಂದು  ತಿಳಿಯಿತು ಆರೋಪಿಗಳಾದ ಮನೋಜ್ ಕುಮಾರ್, ಗೋಪಾಲಸ್ವಾಮಿ & ಇತರರು ಸೇರಿಕೊಂಡು   ಪಿರ್ಯಾದಿರವರಿಗೆ ಸುಳ್ಳು ಹೇಳಿ ನಕಲಿ ಔಷದಿಯನ್ನು ನೀಡಿ ಪಿರ್ಯಾದಿಯಿಂದ  ಒಟ್ಟು 3,62,300/-ರೂ.ಗಳನ್ನು  ಪಡೆದು ಮೋಸ ಮಾಡಿರುತ್ತಾರೆ. ಆದ್ದರಿಂದ ಸಂಜೀವಿನಿ ಆಯುರ್ವೇದಿಕ್  ಕ್ಲೀನಿಕ್ ನ  ಸದರಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                MYSURU CITY TRAFFIC VIOLATION CASES

 

                                             DATE  :06-11-2018

SLNO

                 HEADS

                   NO. OF CASES

DR

KR

NR

SN

VV

TOTAL

1

TOTAL NUMBER OF FTVRS

180

245

157

303

-

885

2

TOTAL NUMBER OF CRR'S

538

724

580

640

784

3,266

3

TOTAL FINE AMOUNT COLLECTED

61,800

80,400

61,000

68,500

88,700

3,60,400

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

01

-

-

-

01

7

NON FATAL

-

01

-

01

01

03

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

37

22

10

12

17

98



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com