ENGLISH   |   KANNADA

Blogದಿನಾಂಕ;08.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 191       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

03

ಮೇಟಗಳ್ಳಿ ಠಾಣೆ

 ಪಿರ್ಯಾದಿ ಚಂದ್ರುರವರು, ಕಳಸ್ತವಾಡಿ ಗ್ರಾಮದ ಸರ್ವೇ ನಂ 30/1 ರಲ್ಲಿ 1 ಎಕರೆ 24ಗುಂಟೆ ಜಮೀನು ಹೊಂದಿದ್ದು, ಅದರಲ್ಲಿ ಭತ್ತ ಬೆಳೆದಿರುತ್ತೇನೆ. ತನ್ನ ಜಮೀನಿನ ಪಕ್ಕದಲ್ಲಿರುವ ಆರೋಪಿಗಳಾದ ಆನಂದ ಮತ್ತು ಇತರ ಮೂವರು ವಿನಾಕಾರಣ ಜಗಳ ತೆಗೆದು ತನ್ನ ಜಮೀನಿನ ಮೇಲೆ ಗಾಡಿ ಹೊಡೆಯುವುದು, ತನ್ನ ಜಮೀನಿನ ನೀರನ್ನು ಹಾಯಿಸಿಕೊಳ್ಳುತ್ತಿದ್ದುದ್ದನ್ನು ಕೇಳಲು ಹೋದರೆ ಬೈಯ್ಯುತ್ತಿದ್ದರು. ದಿನಾಂಕಃ 05/11/2018ರಂದು ಸುಮಾರು 2-00ಗಂಟೆ ಸಮಯದಲ್ಲಿ ಆನಂದ, ನಂಜುಂಡ, ನಾಗೇಶ, ಹಾಗೂ ಸೂರಿ ಎಂಬುವರುಗಳು ತನ್ನ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಭತ್ತದ ಪಸಲನ್ನು ನಾಶ ಮಾಡುತ್ತಿದ್ದ ವಿಚಾರವನ್ನು ನನ್ನ ಸಂಬಂಧಿ ಶಿವು ಕಣ್ಣಾರೆ ನೋಡಿ ತನಗೆ ತಿಳಿಸಿದಾಗ ತಾನು ಗದ್ದೆಯ ಬಳಿ ಹೋಗಿ ನೋಡಲಾಗಿ, ಆನಂದ ಎಂಬುವನು ತನ್ನನ್ನು ಕುರಿತು ಗದ್ದೆಯ ಒಳಗೆ ಕಾಲಿಟ್ಟರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಭತ್ತ ಕುಯ್ಯುತ್ತಿದ್ದ ಕುಡುಗೋಲನ್ನು ತೋರಿಸಿ ಬೆದರಿಕೆ ಹಾಕಿದನು. ಈ ರೀತಿ ವರ್ತನೆ ಸರಿಯಲ್ಲ ಎಂದು ಹೇಳಿದ್ದಕ್ಕೆ ನಂಜುಂಡ ಎಂಬುವನು ಬೋಳಿ ಮಗನೇ ಇದನ್ನು ಕೇಳಲು ನೀನು ಯಾರು ಎಂದು ಬೈದು ತನ್ನನ್ನು ತಬ್ಬಿ ಹಿಡಿದುಕೊಂಡು ಅಕ್ರಮ ತಡೆಯುಂಟು ಮಾಡಿದನು. ನಾಗೇಶ ಕೈಯಿಂದ ಹೊಡೆದನು. ಸೂರಿ ಅವಾಚ್ಯವಾಗಿ ನಿಂದಿಸಿದನು. ಅಲ್ಲಿಯೇ ಇದ್ದ ಹರೀಶ ಮತ್ತು ಸುರೇಶ ಇಬ್ಬರು ಬಂದಾಗ ಆನಂದ ಎಂಬುವನು ಈವತ್ತು ಇವರು ಬರಲಿಲ್ಲ ಅಂದರೆ ನಿನ್ನ ಕತೆ ಮುಗಿಸುತ್ತಿದ್ದೆ, ನಿನ್ನನ್ನು ಮುಂದೆ ನೋಡುತ್ತೀನಿ ಎಂದು ಕುಡುಗೋಲನ್ನು ಹಿಡಿದುಕೊಂಡು ಹೋದನು, ಉಳಿದ 3ಜನರು ನಿಂದಿಸಿದರು.4ಜನರು ದಬ್ಬಾಳಿಕೆ ಮಾಡಿ ಬೆದರಿಕೆ ಹಾಕಿದ್ದರಿಂದ ಹೆದರಿ ದೂರು ಕೊಟ್ಟಿರಲಿಲ್ಲ. ಇವರು ಮುಂದೆಯೂ ಸಹ ನನ್ನನ್ನು ಕೊಲೆ ಮಾಡುವ ಸಂಭವ ಇರುವುದರಿಂದ ಆನಂದ, ನಂಜುಂಡ, ನಾಗೇಶ, ಹಾಗೂ ಸೂರಿ ಎಂಬುವರುಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಡವಾಗಿ ಬಂದು ಈ ದಿನ ದೂರು ಕೊಡುತ್ತಿರುವುದಾಗಿರುವ ದೂರಿನ ಮೇರೆಗೆ ಈ ಪ್ರ.ವ.ವರದಿ.

ಉದಯಗಿರಿ ಠಾಣೆ

ದಿನಾಂಕಃ07/11/2018 ರಂದು ರಾತ್ರಿ 9-10 ಗಂಟೆಯಲ್ಲಿ ಪಿರ್ಯಾದಿ ವಿನಯ್ ರವರ ತನ್ನ ಸ್ನೇಹಿತರಾದ ಪವನ್‌ ಮತ್ತು ಹರ್ಷಾ ರವರೊಂದಿಗೆ ಸತ್ಯನಗರದ ಆರ್‌.ಕೆ ಪ್ಯಾಲೇಸ್‌ ಎದುರುಗಡೆ ಇರುವ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಾ ಕುಳಿತಿದ್ದಾಗ ಆರೋಪಿಯಾದಕೀರ್ತಿ ಎಂಬಾತ ಸುಮಾರು 5-6 ಜನ ಹುಡುಗರನ್ನು ಕರೆದುಕೊಂಡು ಬಂದು ತನ್ನ ಸ್ನೇಹಿತರನ್ನು ಗುರಾಯಿಸಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆಯನ್ನು ಹಾಕಿದಲ್ಲದೆ ವಿನಾಕಾರಣ ಜಗಳ ತೆಗೆದು ಏಕಾಏಕಿ ಕೊಲೆ ಮಾಡುವ ಉದ್ದೇಶದಿಂದ ಲಾಂಗ್‌ ಮತ್ತು ವಿಕೇಟ್‌ಗಳಿಂದ ಹಲ್ಲೆ ಮಾಡಿದ್ದು, ಇದರಿಂದ ಪಿರ್ಯಾದಿ ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗಿದ್ದು, ನಂತರ ಜನರು ಗಲಾಟೆ ನಡೆಯುತ್ತಿದ್ದನ್ನು ನೋಡಿ ನಮ್ಮ ಬಳಿ ಬರುತ್ತಿದ್ದಂತೆ ಎಲ್ಲರೂ ಹೊರಟು ಹೋಗಿರುವುದಾಗಿ ಕೊಟ್ಟ ಹೇಳಿಕೆ ದೂರು.

ಕೃಷ್ಣರಾಜ ಠಾಣೆ 

ದಿ:08/11/2018 ರಂದು 18-45 ಗಂಟೆಯಲ್ಲಿ ಫಿರ್ಯಾದುದಾರರಾದ ಶ್ರೀಮತಿ ಮುಬಿನ್ ತಾಜ್ ರವರು ದಿ:08/11/18 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ಜೆ.ಎಸ್.ಎಸ್.ಆಸ್ಪತ್ರೆಗೆ ನಮ್ಮ ಅಣ್ಣನನ್ನು ಸೇರಿಸಿದ್ದು, ಆತನನ್ನು ನೋಡಲು ನಾನು ಮತ್ತು  ನಮ್ಮ ಯಜಮಾನರು ಹೋಗಿದ್ದೇವು, ಈ ಸಂದರ್ಭದಲ್ಲಿ ಮೆಟ್ಟಲು ಹತ್ತಿರ ಕುಳಿತಿರುವಾಗ  ಉಮ್ರಾನ್ ಮತ್ತು ಫರಾನ್ ಎಂಬುವರು ಪಕ್ಕದಲ್ಲಿ ಬಿದ್ದಿದ್ದ ದೊಣ್ಣೆಯಿಂದ ನನ್ನ ಕೈಗೆ ಹಾಗೂ ತಲೆ ಭಾಗಕ್ಕೆ ಹೊಡೆದಿರುತ್ತಾರೆ, ಇರ್ಫಾನ್ ರವರು ನಮ್ಮ ಯಜಮಾನರರನ್ನು ಹಿಡಿದುಕೊಂಡಿರುತ್ತಾರೆ, ಈ ಹಿಂದೆ ನಮಗೂ ಮತ್ತು ಉಮ್ರಾನ್, ಫಾರನ್ ಹಾಗೂ ಇಫರ್ಾನ್ ರವರಿಗೆ ಗಲಾಟೆ ಆಗಿದ್ದು, ಹಳೇ ದ್ವೇಷ ಇದ್ದು ಉದಯಗಿರಿ ಠಾಣೆಗೆ ಕರೆಸಿ ವಿಚಾರಣೆ ಮಾಡಿರುತ್ತಾರೆ, ಆದರೂ ಸಹ ಅವರು ಹಳೇ ದ್ವೇಷ ಇಟ್ಟುಕೊಂಡು ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ, ನಾವು ಆಟೋದಲ್ಲಿ ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ನಮಗೆ ಹಲ್ಲೆ ಮಾಡಿರುವ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೇನೆ. 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ನರಸಿಂಹರಾಜ ಠಾಣೆ

ಪಿರ್ಯಾದುದಾರಾದ ದಿನಾಂಕ:06.11.2018 ರಂದು ತಮ್ಮ ಅಜ್ಜಿ ಮನೆಯ ಫಂಕ್ಷನ್ಗೆ ತಮ್ಮ ಹೆಂಡತಿಯೊಡನೆ ಹೋಗಿ, ರಾತ್ರಿ ಸುಮಾರು 12.45 ಗಂಟೆಗೆ ತಮ್ಮ ತಾಯಿ ಮನೆಗೆ ವಾಪಸ್ ಬಂದಿದ್ದು, ತಮ್ಮ ಹೆಂಡತಿ ರಾತ್ರಿ ಸುಮಾರು 1.30 ಗಂಟೆಗೆ ಮೇಲ್ಭಾಗದಲ್ಲಿರುವ ರೂಮಿಗೆ ಹೋಗಿ ಮಲಗಿಕೊಂಡಿದ್ದು, ನಂತರ ದಿನಾಂಕ:07.11.2018 ರಂದು ಸಂಜೆ ಸುಮಾರು 4.00 ಗಂಟೆಗೆ ಬೆಂಗಳೂರಿಗೆ ವಾಪಸ್ ಹೊರಡುವ ಸಲುವಾಗಿ, ಲಗೇಜ್ ಪ್ಯಾಕ್ ಮಾಡುತ್ತಿದ್ದಾಗ, ಪಿರ್ಯಾದಿಯವರ ಹೆಂಡತಿ ತಾವು ಮಲಗಿದ್ದ ರೂಮಿಗೆ ಹೋಗಿ, ವ್ಯಾನಿಟಿ ಬ್ಯಾಗ್ ನೋಡಿ, ವ್ಯಾನಿಟಿ ಬ್ಯಾಗ್ನಲ್ಲಿದ್ದ ಒಡವೆ ಹಾಗೂ ನಗದು ಹಣ ಕಾಣುತ್ತಿಲ್ಲ ಎಂದು ತಿಳಿಸಿದ್ದು, ಪಿಯರ್ಾದಿಯವರು ನೋಡಿದಾಗ, ವ್ಯಾನಿಟಿ ಬ್ಯಾಗ್ನಲ್ಲಿದ್ದ ಎ.ಟಿ.ಎಂ, ಚಾರ್ಜರ್ ಹಾಗೂ ಪೌಡರ್ಗಳು ನೆಲದ ಕೆಳಗೆ ಬಿದ್ದಿದ್ದು, ಯಾರೋ ಕಳ್ಳರು ದಿ:06.11.2018 ರಂದು ರಾತ್ರಿ ಕಿಟಕಿ ಮೂಲಕ ಕೈಹಾಕಿ ವ್ಯಾನಿಟಿ ಬ್ಯಾಗ್ನಲ್ಲಿದ್ದ ಒಟ್ಟು ಸುಮಾರು 120 ಗ್ರಾಂ ತೂಕದ 4 ಚಿನ್ನದ ಬಳೆಗಳು, ಒಟ್ಟು ಸುಮಾರು 40 ಗ್ರಾಂ ತೂಕದ 4 ಉಂಗುರಗಳು ಹಾಗೂ 15,000/-ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಮೇರೆಗೆ ಈ ಪ್ರ.ವ.ವರದಿ.      

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥ ಸಂಚಾರ ಠಾಣೆ.

ದಿನಾಂಕ 07-11-2018 ರಂದು ರಾತ್ರಿ ಸುಮಾರು 10.30 ಗಂಟೆಯಲ್ಲಿ ಪಿರ್ಯಾದಿ ಸ್ವಾಮಿರವರ  ತಂದೆ  50 ವರ್ಷದ ಬೆಟ್ಟಯ್ಯ  ರವರು ಎಂ.ಜಿ. ರಸ್ತೆಯಲ್ಲಿ  ರಾಮಾನುಜ ರಸ್ತೆ ಜಂಕ್ಷನ್ ಹತ್ತಿರ ಮಾಸ್ಟರ್ ಬೇಕರಿ ಎದುರು ನಡೆದುಕೊಂಡು  ರಾಮಾನುಜ ಜಂಕ್ಷನ್ ಕಡೆಗೆ ಹೋಗುತ್ತಿದ್ದಾಗ  ಆಗ್ರಹಾರ ಸರ್ಕಲ್ ಕಡೆಯಿಂದ  ಅಟೋರಿಕ್ಷಾ ನಂ ಏಂ-09-4821 ರ ಚಾಲಕ ಅತೀವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಬೆಟ್ಟಯ್ಯ ರವರಿಗೆ ಡಿಕ್ಕಿಮಾಡಿದ್ದು ಬೆಟ್ಟಯ್ಯ ರವರು ಕೆಳಕ್ಕೆ ಬಿದ್ದಾಗ ಅಟೋರಿಕ್ಷಾ ಮೇಲೆ ಹತ್ತಿಸಿಕೊಂಡು ನಿಲ್ಲಿಸದೆ ಸ್ಥಳದಿಂದ ಅಟೋರಿಕ್ಷಾ ಸಮೇತ ಹೊರಟು ಹೋಗಿದ್ದು, ನಂತರ  ಬೆಟ್ಟಯ್ಯರವರ ಮನೆಯಲ್ಲೇ ಬಾಡಿಗೆಯಲ್ಲಿರುವ ಮಹೇಶ್ ಎಂಬುವರು  ಬೆಟ್ಟಯ್ಯ ರವರ ಮನೆಗೆ  ವಿಚಾರ ತಿಳಿಸಿದ್ದರಿಂದ  ಬೆಟ್ಟಯ್ಯ ರವರ ಮಗ ಸ್ವಾಮಿ.ಬಿ ಕೂಡಲೇ ಸ್ಥಳಕ್ಕೆ ಹೋಗಿದ್ದು  ಸ್ಥಳದಲ್ಲಿದ್ದ ಸಾರ್ವಜನಿಕರು ಬೆಟ್ಟಯ್ಯ ರವರನ್ನು ಅಂಬ್ಯೂಲೆನ್ಸ್ ನಲ್ಲಿ  ಕೆ.ಆರ್. ಆಸ್ಪತ್ರೆಗೆ ಕಳುಹಿಸಿರುವುದಾಗಿ ತಿಳಿಸಿ  ಡಿಕ್ಕಿ ಮಾಡಿದ ಅಟೋರಿಕ್ಷಾ ನಂಬರ್ ನೀಡಿದ್ದು, ನಂತರ ಸ್ವಾಮಿ.ಬಿ ರವರು  ಕೆ.ಆರ್ ಆಸ್ಪತ್ರೆಗೆ ಹೋದಾಗ  ಆಸ್ಪತ್ರೆಯಲ್ಲಿ  ವೈದ್ಯರು  ಬೆಟ್ಟಯ್ಯರನ್ನು ಪರೀಕ್ಷಿಸಿದ್ದು ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಮೃತಪಟ್ಟಿದ್ದರೆಂದು ತಿಳಿಸಿರುವುದಾಗಿದ್ದು  ಈ ಅಪಘಾತಕ್ಕೆ ಕಾರಣನಾದ ಅಟೋರಿಕ್ಷಾ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.      

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                          MYSURU CITY TRAFFIC VIOLATION CASES

 

                                                    DATE  :08-11-2018

SLNO

       HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

         205

         645

           81

         315

         142

      1,388

2

TOTAL NUMBER OF CRR'S

         618

         585

         533

         387

         719

      2,842

3

TOTAL FINE AMOUNT COLLECTED

    71,100

    71,200

    55,900

    39,300

    79,400

 3,16,900

4

POLICE NOTICE ISSUED

            -  

            -  

           -  

            -  

 

            -  

5

PARKING TAGS

            -  

            -  

           -  

            -  

 

            -  

6

FATAL

            -  

            -  

           -  

            -  

             1

             1

7

NON FATAL

            -  

            -  

           -  

             1

            -  

             1

8

INTERCEPTOR CASES

            -  

            -  

 -

            -  

 

            -  

9

SUSPENSION OF D.L.

            -  

            -  

           -  

            -  

 

            -  

10

Sec 283 IPC CASES

            -  

            -  

           -  

            -  

            -  

            -  

11

Sec 353 IPC CASES

            -  

            -  

           -  

            -  

 

            -  

12

TOWING CASES

           43

           14

           14

            -  

           15

           86Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com