ENGLISH   |   KANNADA

Blogದಿನಾಂಕ;27.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:28.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 555       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಎನ್ ಆರ್ ಠಾಣೆ.

ಪಿರ್ಯಾದಿ ಖಜಾ ಗುಲಾಂ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ  ಮತ್ತು ನನ್ನ ಸ್ನೇಹಿತ ತಾಜುದ್ದೀನ್ ರವರು ಮೂಲತಃ ಜೈಪುರ ನಿವಾಸಿಗಳಾಗಿದ್ದು, ದಿಃ-15.11.2018 ರಂದು 10,000/- ರೂ ಸಂಬಳದ ಹಣವನ್ನು ತೆಗೆದುಕೊಂಡು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ಊಟ ಮಾಡಲು ಬಿ ಟಿ ಮಿಲ್ ರಸ್ತೆ ಕಡೆಯಿಂದ  ಸಿ.ವಿ. ರಸ್ತೆ ಕಡೆಗೆ ನಡೆದುಕೊಂಡು ಹೋಗುವಾಗ ಬನ್ನಿಮಂಟಪ ಎ ಲೇಔಟ್ ನ ಬಿ.ಟಿ.ಮಿಲ್ ರಸ್ತೆಯಲ್ಲಿ ಯಾರೋ ಇಬ್ಬರು ಸುಮಾರು 25-30 ವರ್ಷ ವಯಸ್ಸಿನ ವ್ಯಕ್ತಿಗಳು ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಬಂದು ಪಿರ್ಯಾದು & ಅವರ ಸ್ನೇಹಿತನನ್ನು  ಬೆದರಿಸಿ ಜೇಬಿನಲ್ಲಿದ್ದ OPPO A83 ಮೊಬೈಲ್ ಫೋನ್ ಮತ್ತು 10,000/- ರೂ ನಗದು ಹಣ ಹಾಗೂ ಸ್ನೇಹಿತ ತಾಜುದ್ದೀನ್ ರವರ ಜೇಬಿನಲ್ಲಿದ್ದ SAMSUNG J2 ಮೊಬೈಲ್ ಫೋನ್ ಮತ್ತು 10,000/- ರೂ ನಗದು ಹಣವನ್ನು ಕಿತ್ತುಕೊಂಡು ಅಲ್ಲಿಂದ ಹೊರಟು ಹೋಗಿದ್ದು,ಸ್ಕೂಟರ್ ನಂಬರ್ ನೋಡಿದಾಗ, ಕೆ.ಎ-55 ಎಸ್-2020 ಆಗಿರುತ್ತೆ. ಆದ್ದರಿಂದ ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ಕೆ ಆರ್ ಠಾಣೆ.

ದಿ:27/11/18 ರಂದು 18-30 ಗಂಟೆಯಲ್ಲಿ ಫಿರ್ಯಾದಿ ಪ್ರಕಾಶ್ ರವರು ನಿಡಿದ ದೂರಿನ ಸಾರಾಂಶವೇನೆಂದರೆ,ಪಿರ್ಯಾದಿ  ತಮ್ಮ ಹೀರೋ ಹೋಂಡಾ ಸ್ಲ್ಪೆಂಡರ್ ನಂ.ಕೆಎ- 55 ಎಲ್-7031 ನ್ನು ರಾಮನುಜ ರಸ್ತೆಯ 3 ನೇ ಕ್ರಾಸ್, ಮನೆ ನಂಬರ್-604 ರ ಮುಂಭಾಗ ದಿ:05/11/18 ರಂದು ರಾತ್ರಿ 10-30 ಗಂಟೆಗೆ ನಿಲ್ಲಿಸಿ  ದಿನಾಂಕ;06/11/2018 ರಂದು ಬೆಳಿಗ್ಗೆ 09.00 ಗಂಟೆಗೆ ಬೈಕನ್ನು ನೋಡಲಾಗಿ ಬೈಕ್ ಕಳ್ಳತನವಾಗಿರುತ್ತದೆ. ನಂತರ ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಲಕ್ಷ್ಮೀಪುರಂ ಠಾಣೆ.

ಪಿರ್ಯಾದಿ ಶಿವಣ್ಣ ರವರು  ದಿನಾಂಕ;13-11-2018 ರಂದು ಡಿಸಿ ಕಛೇರಿಗೆ  ಬಂದಿದ್ದು, ಸುಮಾರು ಸಂಜೆ 3-00 ಗಂಟೆಯ ಸಮಯದಲ್ಲಿ ಡಿಸಿ ಕಛೇರಿ  ಹತ್ತಿರ  ತಮ್ಮ  ಹೀರೋಹೋಂಡಾ ಸ್ಪ್ಲೆಂಡರ್ ಬೈಕ್ ಕೆಎ-09 ಇವೈ-6289 ನ್ನು ಬೀಗ ಹಾಕಿ ನಿಲ್ಲಿಸಿ ನಂತರ ಸಂಜೆ 4-00 ಗಂಟೆಯ ಸಮಯದಲ್ಲಿ ಬಂದು ಬೈಕ್ ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ಬೈಕ್ ಇರಲಿಲ್ಲ. ನಂತರ ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಉದಯಗಿರಿ ಠಾಣೆ.

ದಿ:15/11/18 ರಂದು ಪಿರ್ಯಾದಿ ಮೊಹಮ್ಮದ್ ಸುಲೇನ್ ಅಜೀಬ್ ರವರು ತಮ್ಮ ಯಮಹಾ ಆರ್ ಎಕ್ಸ್  ನಂ.ಕೆಎ-03-ಇಬಿ-2979 ರಲ್ಲಿ ರಾತ್ರಿ 11-30 ಗಂಟೆಗೆ ತಮ್ಮ ಸ್ನೇಹಿತನ ಮನೆಯಾದ #1834/1, 01 ನೇ ಹಂತ ರಾಜೀವ್ ನಗರದ ಮನೆಯ ಬಳಿ ಬೀಗ ಹಾಕಿ ನಿಲ್ಲಿಸಿದ್ದು,ದಿ:16/11/18 ರಂದು ಬೆಳಿಗ್ಗೆ 9-00 ಗಂಟೆಗೆ ಬಂದು ನೋಡಲಾಗಿ ಬೈಕ್ ಇರಲಿಲ್ಲ, ನಂತರ ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಎನ್ ಆರ್ ಸಂಚಾರ ಠಾಣೆ.

ದಿನಾಂಕ:27-11-2018 ರಂದು ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ  ಶಂಕರ @ ವಿಷ್ಣು ರವರು ಅಶೋಕ ರಸ್ತೆಯನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಪಶ್ಚಿಮದಿಂದ ಪೂರ್ವದ ಕಡೆಗೆ ನಡೆದುಕೊಂಡು ದಾಟುತ್ತಿದ್ದಾಗ ಇದೇ ವೇಳೆಗೆ ಅಶೋಕ ರಸ್ತೆ ಫೌಂಟನ್ ವೃತ್ತದ ಕಡೆಯಿಂದ ಹಿರೋಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್ ನಂಬರ್ ಕೆಎ-09-ಇ.ಹೆಚ್-2920 ನ್ನು ಅದರ ಸವಾರ ಅತಿ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಾದಚಾರಿ ಶಂಕರ @ ವಿಷ್ಣು ರವರಿಗೆ ಡಿಕ್ಕಿಮಾಡಿ ಬೀಳಿಸಿದ ಪರಿಣಾಮ ತಲೆಗೆ, ಮೈ ಕೈ ಗೆ ಪೆಟ್ಟಾಗಿದ್ದವರನ್ನು ಪಿರ್ಯಾದುದಾರರು ಅಲ್ಲಿದ್ದವರ ಸಹಾಯದಿಂದ ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ಹೋಗಿ ದಾಖಲಿಸಿದ್ದು ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕರ @ ವಿಷ್ಣುರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ 01-00 ಗಂಟೆಯಲ್ಲಿ ಮೃತಪಟ್ಟಿದ್ದು ಡಿಕ್ಕಿಮಾಡಿದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ. ಆದುದರಿಂದ ಈ ಅಪಘಾತಕ್ಕೆ ಕಾರಣನಾದ ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು,

ವಿ ವಿ ಪುರಂ ಸಂಚಾರ ಠಾಣೆ.

ದಿ;22-11-2018 ರಂದು ಪಿರ್ಯಾದಿ ನಿರ್ಮಲ ರವರ  ತಾಯಿ ಸಿ.ರಾಜಮ್ಮ ಅವರನ್ನು ಪಿರ್ಯಾದಿ ಗಂಡ ಭಾಸ್ಕರ್ ಜಿ ಎಂಬವರು ನಂ. ಕೆ.ಎ.-09 ಹೆಚ್.ಎಸ್,7660  ಸ್ಕೂಟರ್ ನ ಹಿಂಭಾಗದಲ್ಲಿ ಕೂರಿಸಿಕೊಂಡು  ಸಿ.ಐ.ಟಿ,ಬಿ. ಚೌಲ್ಟ್ರಿಯ  ಮುಂಭಾಗದ ರಸ್ತೆಯಲ್ಲಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ರಾಜಮ್ಮ ರವರು ಕೆಳಕ್ಕೆ ಬಿದ್ದು ಬಲಗೈ  ಮೊಣಕೈ ಮೂಳೆ ಮುರಿದು ಹೋಗಿ ಆದಿತ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

01

ಕೃಷ್ಣರಾಜ ಠಾಣೆ.

ಫಿರ್ಯಾದಿ ವೀಣಾ ರವರು ಸ್ನೇಹಿತೆ ಪದ್ಮ ರವರ ಜೊತೆ ಮೈಸೂರಿಗೆ ಬಂದು ಕೃಷ್ಣಮೂರ್ತಿ ಪುರಂ ನ  ಜ್ಯೋತಿಷಿ ಬಾಲಚಂದ್ರ ಹೆಗ್ಡೆ ರವರ ತಮ್ಮ ಸಮಸ್ಯೆಗಳನ್ನು ಹೇಳ ಅವರ ಮಾತಿಗೆ ಮರುಳಾಗಿ ಅವರನ್ನು ನಂಬಿದ್ದು,  ಇದಾದ 4-5 ತಿಂಗಳ ನಂತರ ಪೋನ್ನಲ್ಲಿ ನೀನು ನನ್ನ ಬಳಿ ಸ್ವಲ್ಪ ಹಣ ಇನ್ವೆಸ್ಟ್ ಮಾಡು ನಿನ್ನಿಚ್ಚೆಯಂತೆ ನೀನು ಮನೆ ಕಟ್ಟಲು ಹಣ ಸಿಗುತ್ತದೆ ಎಂದು ಹೇಳಿ 50,000/- ರೂ  ಹಣವನ್ನು ಷೇರ್ ಮಾರ್ಕೆಟ್ ಗೆ  ಹಾಕಿ ನಿಮಗೆ ತಿಂಗಳಿಗೆ 6-7% ಬಡ್ಡಿ ಕೊಡುತ್ತೇನೆಂದು ಹೇಳಿ 2-3 ತಿಂಗಳು ಅವರು ಹೇಳಿದಂತೆ ಬಡ್ಡಿ ಕೊಟ್ಟರು. ಮತ್ತೆ 10 ಲಕ್ಷದಂತೆ ಮೂರು ಬಾರಿ ಒಟ್ಟು 30 ಲಕ್ಷ ನಗದು ಹಣವನ್ನು ಬಾಲಚಂದ್ರ ಹೆಗ್ಡೆ ರವರಿಗೆ ಕೊಟ್ಟಿದ್ದು , ಅದಾದ ನಂತರ ರಾಮಚಂದ್ರ ಹೆಗ್ಡೆಯೂ ಸಹ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಪಿರ್ಯಾದಿಯಿಂದ 2 ಲಕ್ಷ ರೂಪಾಯಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬಾಲಚಂದ್ರ ಹೆಗಡೆ,ಇನ್ನು 20 ಲಕ್ಷ ಕೊಡು ನಿನಗೆ 1 ಕೋಟಿ ಕೊಡುತ್ತೇನೆ ಎಂದು ಹೇಳಿ ನಂಬಿಸಿ ಒಟ್ಟು 50 ಲಕ್ಷ ರೂಗಳನ್ನು ಪಡೆದು ಈಗ ತಲೆ ಮರೆಸಿಕೊಂಡಿರುವ ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                       MYSURU CITY TRAFFIC VIOLATION CASES

 

                                        DATE  :27-11-2018

SLNO

               HEADS

                      NO. OF CASES

DR

KR

NR

SN

VV

TOTAL

1

TOTAL NUMBER OF FTVRS

125

350

158

209

188

1,030

2

TOTAL NUMBER OF CRR'S

555

450

604

247

607

2,463

3

TOTAL FINE AMOUNT COLLECTED

60,700

51,000

64,200

25,100

64,700

2,65,700

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

1

-

-

1

7

NON FATAL

-

 

-

-

2

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

51

32

18

19

15

135Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®