ENGLISH   |   KANNADA

Blogದಿನಾಂಕ;01.12.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:02.12.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 210       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಅಶೋಕಪುರಂ ಠಾಣೆ.

ಫಿರ್ಯಾದಿ  ಕು. ದಿವ್ಯಾ ಜಿ.ಸಿ. ರವರು ದಿನಾಂಕ 01.12.2018 ರಂದು ಬೆಳಿಗ್ಗೆ 09.55 ಗಂಟೆಯಲ್ಲಿ ಮಹದೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಟಿವಿಎಸ್ ಎಕ್ಸ್ ಎಲ್ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಕೃಷ್ಣಕುಮಾರ್  ಫಿರ್ಯಾದುದಾರರ ಕತ್ತಿಗೆ ಕೈ ಹಾಕಿ ಆಕೆಯ ಕತ್ತಿನಲ್ಲಿದ್ದ ಲೀಫ್ ಕಟ್ಟಿಂಗ್ ನ ಗಣಪತಿ ಡಾಲರ್ ಸಮೇತ 15 ಗ್ರಾಂ ತೂಕದ ಚಿನ್ನದ ಚೈನ್  ಬೆಲೆ ರೂ 37,000/- ಅನ್ನು ಕಿತ್ತುಕೊಂಡು ಹೋಗಿದ್ದು, ತಕ್ಷಣ ಫಿರ್ಯಾದುದಾರರು ಕೂಗಿಕೊಂಡಾಗ ಅಲ್ಲಿದ್ದ ಸಾರ್ವಜನಿಕರು ಆತನ ಹಿಂದೆ ಹೋಗಿ ಆತನನ್ನು ಹಿಡಿದುಕೊಂಡು ಠಾಣೆಗೆ ಕರೆತಂದಿದ್ದು, ನಂತರ ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ಕೆ ಆರ್ ಸಂಚಾರ ಠಾಣೆ.

ದಿನಾಂಕ;01/12/2018 ರಂದು ಬೆಳಿಗ್ಗೆ ಸುಮಾರು 11-50 ಗಂಟೆಯಲ್ಲಿ ಪುರಂದರ ರಸ್ತೆಯಲ್ಲಿ  ಕುಮಾರ್‌.ಕೆ.ಎನ್‌ ಎಂಬುವನು ಹಿರೋ ಡುಯೇಟ್ ನಂ. ಕೆಎ-11-ಇಜಿ-8849 ಅನ್ನು  ಕೆ.ಆರ್.ಸರ್ಕಲ್‌ ಕಡೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರ್ಪೋರೇಷನ್‌ ಸರ್ಕಲ್‌ ನಲ್ಲಿ  ಎಡಕ್ಕೆ  ಪುರಂದರ ರಸ್ತೆ ಕಡೆಗೆ ತಿರುಗಿಸಿದಾಗ ಹಿಂಭಾಗದಲ್ಲೆ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಟಾಟಾ 407 ಲಾರಿ ನಂಬರ್ ಕೆಎಲ್-55-ಇ-9604 ರ ಚಾಲಕ ಸ್ಕೂಟರ್ ನ ಹಿಂಭಾಗಕ್ಕೆ  ಡಿಕ್ಕಿ ಮಾಡಿದಾಗ ಸ್ಕೂಟರ್  ರಸ್ತೆಯ ಎಡಕ್ಕೆ ಹೋಗಿ ಬಲಕ್ಕೆ ಬಿದ್ದಿದ್ದು, ಸ್ಕೂಟರ್ ಸವಾರ ಸಹ ಬಲಕ್ಕೆ ಬಿದ್ದಾಗ ಟಾಟಾ 407 ಲಾರಿಯ ಹಿಂದಿನ ಚಕ್ರ ಬಲ ತೊಡೆ ಮೇಲೆ ಹತ್ತಿ 10-15 ಅಡಿ ಉಜ್ಜಿಕೊಂಡು ಹೋಗಿದ್ದು,  ಪುರಂದರ ರಸ್ತೆಯಲ್ಲೇ  ವರಹಾ ಗೇಟ್‌  ಹತ್ತಿರ  ಕರ್ತವ್ಯದಲ್ಲಿದ್ದ  ಪಿರ್ಯಾದಿ ಸಿಪಿಸಿ 793  ಕೃಷ್ಣ ಹೆಚ್‌.ಎಂಬುವರು  ಕೂಡಲೇ ಸ್ಥಳಕ್ಕೆ ಹೋಗಿ 108 ಅಂಬ್ಯೂಲೆನ್ಸ್ ನಲ್ಲಿ ಜೆ.ಎಸ್.ಎಸ್ ಆಸ್ಪತ್ರೆಗೆ ಕಳುಹಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಸದರಿ ಲಾರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಆರ್ ಸಂಚಾರ ಠಾಣೆ.

ದಿನಾಂಕ 01.12.2018 ರಂದು ಮದ್ಯಾಹ್ನ 12.05 ಗಂಟೆ ಸಮಯದಲ್ಲಿ ಹೆಚ್.ಡಿ ಕೋಟೆ ರಿಂಗ್ ರಸ್ತೆ ಜಂಕ್ಷನ್ ನಲ್ಲಿ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ನಂ ಕೆ.ಎ09 ಇ.ಸಿ-5260 ರ ಸವಾರ ನಂದೀಶ್. ಜೆ ಎಂಬುವರು ಹಿಂಭಾಗ ತನ್ನ ಭಾವ ರುದ್ರಪ್ಪ ಎಂಬುವರನ್ನು ಕೂರಿಸಿಕೊಂಡು ಹೆಚ್.ಡಿ ಕೋಟೆ ರಸ್ತೆಯಲ್ಲಿ ಪರಸಯ್ಯನ ಹುಂಡಿ ಕಡೆಯಿಂದ ಸಿಟಿ ಕಡೆಗೆ ಹೋಗುತ್ತಿದ್ದು, ರಿಂಗ್ ರಸ್ತೆಯಲ್ಲಿ ದಟ್ಟಗಳ್ಳಿ ಕಡೆಯಿಂದ ಹುಂಡೈ ಐ-20 ನಂ ಕೆ.ಎ-04 ಎಂ.ಆರ್-4908 ರ ಚಾಲಕ ಉಮೇಶ್ ಎಂಬುವನು ಅತೀ ವೇಗವಾಗಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್ ನ ಎಡಭಾಗಕ್ಕೆ ಡಿಕ್ಕಿ ಮಾಡಿದ್ದು, ಮೋಟಾರ್ ಸೈಕಲ್ ಸವಾರರಿಬ್ಬರು ಬಲಕ್ಕೆ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು, ಸುಮಾರು ದೂರ  ಉಜ್ಜಿಕೊಂಡು ಹೋದಾಗ ಮೋಟಾರ್ ಸೈಕಲ್ ಸವಾರ ನಂದೀಶ್ ನಿಗೆ ಕೈ ಕಾಲು ಮತ್ತಿತ್ತರ ಕಡೆಗೆ ಪೆಟ್ಟಾಗಿದ್ದು, ಹಿಂಬದಿ ಸವಾರ ರುದ್ದಪ್ಪ ರವರಿಗೆ ತಲೆಗೆ ಏಟಾಗಿದ್ದು, ಇಬ್ಬರನ್ನು ಅಲ್ಲೇ ಕರ್ತವ್ಯದಲ್ಲಿದ್ದ ಪಿರ್ಯಾದಿ ಸಿ.ಪಿ.ಸಿ-528 ದೇವರಾಜು ರವರು ಕೂಡಲೇ ಪೆನೆಷಿಯಾ ಆಸ್ಪತ್ರೆಗೆ ಕಳುಹಿಸಿದ್ದು, ಮೋಟಾರ್ ಸೈಕಲ್ ಹಿಂಬದಿ ಸವಾರ ರುದ್ದಪ್ಪ ಎಂಬುವರು ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಮೃತಟ್ಟಿದ್ದರೆಂದು ತಿಳಿಸಿರುತ್ತಾರೆಂದು ಈ ಅಪಘಾತಕ್ಕೆ ಕಾರಣವಾದ ಸದರಿ ಕಾರ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ;03.10.2018ರಂದು ಸಂಜೆ ಸುಮಾರು 5:00ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀನಿವಾಸ ರವರ ತಂದೆ ಮುರುಗನ್ ರವರು ಸಂತೆಪೇಟೆ ಜಗನ್ಮೋಹನ ಅರಮನೆ ಹತ್ತಿರ ಹೋಗುತ್ತಿದ್ದಾಗ ಮಿನಿ ವ್ಯಾನ್ ನಂ.ಕೆಎ-09 ಬಿ-9914ರ ಚಾಲಕನಾದ ಪ್ರತಾಪ್ ರವರು ವ್ಯಾನ್ ಅನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಮುರುಗನ್ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರು ಕೆಳಗೆ ಬಿದ್ದು ಕೈ ಕಾಲುಗಳಿಗೆ ತರಚಿದ ಗಾಯವಾಗಿ ತಲೆಗೆ ಪೆಟ್ಟಾಗಿದ್ದು ವ್ಯಾನ್ ಚಾಲಕ ಅವರನ್ನು ವಾತ್ಸಲ್ಯ ಆಸ್ಪತ್ರೆಗೆ ದಾಖಲು ಮಾಡಿ 15ದಿನ ಚಿಕಿತ್ಸೆ ಕೊಡಿಸಿದ್ದು ನಂತರ ಮುರುಗನ್ ರವರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದು ಒಂದು ವಾರದ ನಂತರ ತಲೆ ನೋವು ಬಂದಿದ್ದರಿಂದ ಮತ್ತೆ ವಾತ್ಸಲ್ಯ ಆಸ್ಪತ್ರೆಗೆ ಸೇರಿಸಿ 4 ದಿನ ಚಿಕಿತ್ಸೆ  ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ಸೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ತಲೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲಿ 3 ದಿನ ಚಿಕಿತ್ಸೆ ಪಡೆದು ಮೈಸೂರು ಕೆ.ಅರ್.ಆಸ್ಪತ್ರೆಗೆ ಬಂದು 4ದಿನ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದು ನಂತರ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲೆ ಚಿಕಿತ್ಸೆ ಪಡೆಯುತಿದ್ದು ದಿನಾಂಕ 30.11.2018ರಂದು ಪಿರ್ಯಾದಿಯವರ ತಂದೆ ಮುರುಗನ್ ರವರಿಗೆ ತಲೆ ನೋವು ಜಾಸ್ತಿಯಾದ ಕಾರಣ ಅವರನ್ನು ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಪುನಃ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲು ಮಾಡಿದ್ದು ದಿನಾಂಕ 1.12.2018ರಂದು ಮುರುಗನ್ ರವರಿಗೆ ಬಿ.ಪಿ.ಕಡಿಮೆಯಾಗಿರುವುದಾಗಿ ಅವರನ್ನು ವೈದ್ಯರು ಮೈಸೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಪಿರ್ಯಾದಿಯವರು ಮುರುಗನ್ ರವರನ್ನು  ಜೆ.ಎಸ್..ಎಸ್.ಆಸ್ಪತ್ರೆಗೆ ದಾಖಲು ಮಾಡಿದಾಗ  ಮುರುಗನ್ ರವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಅಪಘಾತಕ್ಕೆ ಕಾರಣವಾದ ಸದರಿ ವ್ಯಾನ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;01.12.2018 ರಂದು ಮದ್ಯಾಹ್ನ ಸುಮಾರು 01.30 ಗಂಟೆ ಸಮಯದಲ್ಲಿ ಪಿರ್ಯಾದಿ ಹೆಚ್ ಸಿ-515 ಪ್ರಕಾಶ ಹೆಚ್ ರವರು  ಎಂಎಂ ರಸ್ತೆ, ಯರಗನಹಳ್ಳಿ ಸಿಗ್ನಲ್  ಕಡೆ ಗಸ್ತಿನಲ್ಲಿದ್ದ ವೇಳೆ ಯರಗನಹಳ್ಳಿ ಸಿಗ್ನಲ್ ಬಳಿ ಬನ್ನೂರು ರಸ್ತೆದೇವೆಗೌಡ ವೃತ್ತದ ಕಡೆಯಿಂದ ಶರತಕುಮಾರ  ವಿ ರವರು ಅವರ ಕೆಎ 02 0574 ನಂಬರಿನ ಯಮಹಾ ಮೋಟರ್ ಸೈಕಲ್ನಲ್ಲಿ ಹಿಂಬದಿಯಲ್ಲಿ ಶರತಕುಮಾರ್ ಹಾಗೂ ಪ್ರಶಾಂತ  ಎಂಜಿ ರವರನ್ನು ಕೂರಿಸಿಕೊಂಡು ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡುವ ರೀತಿ ಮೂರು ಜನರು ಹೆಲ್ಮೆಟ್  ಇಲ್ಲದೆ ಚಾಲನೆ ಮಾಡಿರುವುದರಿಂದ ಹಾಗೂ ಮೋಟಾರ್  ರ್ಸೈಕಲ್ ನಂಬರ್ ದೋಷಪೂರಿತವಾಗಿರುವುದು ಕಂಡು ಬಂದ ಮೇರೆಗೆ ಮೋಟಾರ್ ಸೈಕಲ್ ಸವಾರರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                              MYSURU CITY TRAFFIC VIOLATION CASES

 

                                            DATE  :01-12-2018

SLNO

              HEADS

                        NO. OF CASES

DR

KR

NR

SN

VV

TOTAL

1

TOTAL NUMBER OF FTVRS

         120

         440

        179

         332

           -  

      1,071

2

TOTAL NUMBER OF CRR'S

         465

         338

        487

         196

         585

      2,071

3

TOTAL FINE AMOUNT COLLECTED

    53,000

    37,600

   50,600

    20,600

    61,000

 2,22,800

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

           -  

           -  

           -  

 

           -  

6

FATAL

            1

            2

           -  

           -  

           -  

             3

7

NON FATAL

            1

 

           -  

             1

           -  

             2

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

           -  

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           24

          13

           -  

           19

           18

           74Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com