ENGLISH   |   KANNADA

Blogದಿನಾಂಕ;05.12.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:06.12.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 204       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ವಿ ವಿ ಪುರಂ ಸಂಚಾರ ಠಾಣೆ.

ಪಿರ್ಯಾದಿ ಚಂದ್ರಕಲಾ ರವರು ದಿ;05/12/2018 ರಂದು ತಮ್ಮ  ದ್ವಿ ಚಕ್ರ ವಾಹನ ನಂ KA-09 HC-5733 ರಲ್ಲಿ  ಕೆ.ಆರ್.ಎಸ್ ರಸ್ತೆಯ ಮೂಲಕ ಬೃಂದಾವನ ಬಡಾವಣೆ ಚರಕ ಆಯುರ್ವೇದಿಕ್ ಸಂಸ್ಥೆಯ ಮುಂಭಾಗದ ರಸ್ತೆಗೆ ಬರುತ್ತಿದ್ದಂತೆ ಸಂಜೆ 07.30 ಗಂಟೆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ದ್ವಿ ಚಕ್ರ ವಾಹನದಲ್ಲಿ ಪಿರ್ಯಾದಿ  ಹಿಂದಿನಿಂದ ಬಂದು ಏನೋ ಕೇಳುವ ನೆಪದಲ್ಲಿ ಕೂಗಿದಾಗ ಪಿರ್ಯಾದಿ ಸ್ಕೂಟರ್ ನ್ನು ನಿಧಾನ ಮಾಡಿದ್ದು,  ಕೂಡಲೇ ಆ ವ್ಯಕ್ತಿ ಪಿರ್ಯಾದಿ ಕುತ್ತಿಗೆಗೆ ಕೈ ಹಾಕಿ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕೀಳಲು ಪ್ರಯತ್ನಿಸಿದ್ದು ಪಿರ್ಯಾದಿ ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು  ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತನ ಕಪ್ಪು ಬಣ್ಣದ ಟೀ ಶರ್ಟ್ ಹರಿದು ಹೋಯಿತು. ಆತ ಹೊರಟು ಹೋಗಿದ್ದು, ಕತ್ತಿನಲ್ಲಿದ್ದ 60 ಗ್ರಾಂ ತೂಕದ ಮಾಂಗಲ್ಯ ಸರದ ಪೈಕಿ ಸುಮಾರು 47 ರಿಂದ 48 ಗ್ರಾಂ ಕೈಯಲ್ಲಿ ಉಳಿದುಕೊಂಡಿದ್ದು, ಉಳಿದ 11 ರಿಂದ 12 ಗ್ರಾಂ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿ ಕಿತ್ತುಕೊಂಡು ಹೋಗಿರುತ್ತಾನೆ. ಆ ಅಪರಿಚಿತ ವ್ಯಕ್ತಿ ಓಡಿಸುತ್ತಿದ್ದ ಸ್ಕೂಟರ್ ಹೊಂಡಾ ಆಕ್ಟೀವಾ ಸ್ಕೂಟರ್ ಆಗಿದ್ದು ನಂ KA-45 E-9397 ಆಗಿರುತ್ತೆ. ಆದ್ದರಿಂದ ಸದರಿ ಆಸಾಮಿಯನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ.

ದಿ:05-12-2018. ರಂದು ಮಧ್ಯಾಹ್ನ ಸುಮಾರು 2-05 ಘಂಟೆಯ ಸಮಯದಲ್ಲಿ ಫಿರ್ಯಾದಿ ಪದ್ಮ ರವರು ಅವರ ಹೊಂಡಾ ಆಕ್ಟೀವಾ ಸ್ಕೂಟರ್ ನಂ: ಕೆಎ-09 ಇವೈ-3372 ಅನ್ನು ವಿಜಯನಗರ 02 ನೇ ಹಂತದ ವಾಟರ್ ಟ್ಯಾಂಕ್ ಬಳಿ ಇರುವ ಎಸ್‌ಬಿಐ ಬ್ಯಾಂಕ್ ಬಿಲ್ಡಿಂಗ್‌‌ನ ಕೆಳಭಾಗದಲ್ಲಿರುವ ಸ್ತ್ರಿ ಬಟ್ಟೆ ಅಂಗಡಿ ಮುಂಭಾಗ ನಿಲ್ಲಿಸಿ ಬಟ್ಟೆ ಅಂಗಡಿಗೆ ಹೋಗಿದ್ದಾಗ ಅವರ ಸ್ಕೂಟರ್‌ನ ಡಿಕ್ಕಿಯೊಳಗೆ ಇಟ್ಟಿದ್ದ ನಗದು ಹಣ ರೂಃ 2,80,000/- ಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ವಿ ವಿ ಪುರಂ ಸಂಚಾರ ಠಾಣೆ,

ದಿ;05-12-2018ರಂದು  ರಾತ್ರಿ  7:30 ರ ಸಮಯದಲ್ಲಿ ಪಿರ್ಯಾದಿ ರವಿ ಕುಮಾರ್ ರವರ  ಮಾವ ನರಸಿಂಹ ಎಂಬವರು ಅಂಗವಿಕಲರು ಚಾಲನೆ ಮಾಡುವ ಸ್ಕೂಟರ್ ನಂಬರ್ ಕೆ,ಎ-09-ಹೆಚ್.ಹೆಚ್ -5742 ಇದನ್ನು  ಮೈಸೂರು-ಕೆ.ಆರ್.ಎಸ್ ರಸ್ತೆ  ಜೆ ಕೆ ಟೈರ್ಸ್ ಮುಂಭಾಗದ ಪೆಟ್ರೋಲ್ ಬಂಕ್ ಹತ್ತಿರ ಚಾಲನೆ ಮಾಡಿಕೊಂಡು ಹೋಗಿ ವಾಹನದ ಮೇಲೆ ಹತೋಟಿ ತಪ್ಪಿ ಸ್ವತ: ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ಗಾಯಗೊಂಡಿದ್ದ ಅವರನ್ನು ಪಿರ್ಯಾದಿ  ಕೆ.ಆರ್.ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:45 ಗಂಟೆಯಲ್ಲಿ ಮೃತಪಟ್ಟಿದ್ದು   ಮುಂದಿನ ಕಾನೂನು ಕ್ರಮದ ಬಗ್ಗೆ ನೀಡಿದ ದೂರು.

10

ವಂಚನೆ ಪ್ರಕರಣ 

02

ದೇವರಾಜ ಠಾಣೆ.

ಪಿರ್ಯಾದಿ ಮೋಹನ್ ಕುಮಾರ್ ರವರ ಅಜ್ಜಿಯವರಾದ ಕಮಲಾಬಾಯಿ(70 ವರ್ಷ) ರವರು ದಿ;05/12/2018 ರಂದು ಸಿಟಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಕಮಲಾಬಾಯಿಯವರ ಹತ್ತಿರ ಬಂದು ಪರಿಚಯ ಮಾಡಿಕೊಂಡು ಮುಖ್ಯಮಂತ್ರಿಗಳ ನಿಧಿಯಿಂದ 10 ಸಾವಿರ ಸಾಲವನ್ನು ನೀಡುತ್ತಾರೆ. ನಿಮಗೆ ಅದನ್ನು ಕೊಡಿಸುತ್ತೇನೆ ಎಂದು ಅವರನ್ನು ಟೌನ್ ಹಾಲ್ ಆವರಣಕ್ಕೆ ಕರೆದುಕೊಂಡು ಹೋಗಿ ಚಿನ್ನದ ಪದಾರ್ಥಗಳನ್ನು ಹಾಕಿಕೊಂಡಿದ್ದರೆ ಸಾಲ ಕೊಡುವುದಿಲ್ಲ ಅದನ್ನು ಬಿಚ್ಚಿ ಇಟ್ಟುಕೊಳ್ಳಿ ಎಂದು ಹೇಳಿ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಬಿಚ್ಚಿಸಿ ಪರ್ಸ್ ನಲ್ಲಿ ಹಾಕಿಕೊಳ್ಳಲು ಹೇಳಿ, ಮತ್ತು ಪರ್ಸ್ ನಲ್ಲಿದ್ದ ಇನ್ನೊಂದು ಜೊತೆ ಓಲೆ ಮತ್ತು 4000/- ಹಣ, ಎಲ್ಲವನ್ನು ನಾನು ಇಟ್ಟುಕೊಳ್ಳುತ್ತೇನೆ ಕೊಡಿ ಎಂದು ಕೇಳಿದಾಗ ಕೊಡುವುದಿಲ್ಲ ಎಂದಿದಕ್ಕೆ ಕಮಲಾಬಾಯಿಯವರಿಗೆ ಚಾಕು ತೋರಿಸಿ ಪರ್ಸ್ ನಲ್ಲಿದ್ದ ಸುಮಾರು 17 ಗ್ರಾಂ ಚಿನ್ನದ ಪದಾರ್ಥ ಮತ್ತು 4000/- ನಗದನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾನೆಂದು ಕ್ರಮ ಜರುಗಿಸಲು ನೀಡಿದ ದೂರು.

 

ದೇವರಾಜ ಠಾಣೆ.

ದಿನಾಂಕ;04/12/18 ರಂದು ಪಿರ್ಯಾದಿ ಜವರಮ್ಮ ರವರು  ತಮ್ಮ ಮಗಳ ಮನೆಗೆ ಹೋಗಲೆಂದು ನಗರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಪಿರ್ಯಾದಿಯವರ ಹತ್ತಿರ ಬಂದು ಸರ್ಕಾರದ ಹಣ ಕೊಡಿಸುವುದಾಗಿ ನಂಬಿಸಿ ಪಿರ್ಯಾದಿಯವರನ್ನು ಚೆಲುವಾಂಬ ಆಸ್ಪತ್ರೆಯ ಆವರಣಕ್ಕೆ ಕರೆದುಕೊಂಡು ಹೋಗಿ ಒಡವೆಗಳಿದ್ದರೆ ಹಣ ಕೊಡುವುದಿಲ್ಲ ಎಂದು ಹೇಳಿ ಅವರು ಧರಿಸಿದ್ದ ಸುಮಾರು 50 ಗ್ರಾಂ ತೂಕದ ಎರೆಡು ಎಳೆ ಸಾದಾ ಸರ ಮತ್ತು 5000/- ಹಣವನ್ನು ಅವರ ಬಳಿ ಇದ್ದ ಬಟ್ಟೆ ಬ್ಯಾಗಿನಲ್ಲಿ ಹಾಕಿಸಿ ಬ್ಯಾಗ್ ತೆಗೆದುಕೊಂಡು ಹೋಗಬಾರದು ಚೆಕ್ ಮಾಡುತ್ತಾರೆಂದು ಹೇಳಿ ಎಳನೀರಿನ ಅಂಗಡಿಯಲ್ಲಿ ಬ್ಯಾಗ್ ಇಟ್ಟು, ಅವರನ್ನು ತುರ್ತು ಚಿಕಿತ್ಸಾ ಘಟಕದ ಹತ್ತಿರ ಕೂರಿಸಿ ಹೋಗಿ ಮತ್ತೆ ಬಾರದಿದ್ದಾಗ ವಾಪಸ್ಸು ಎಳನೀರಿನ ಅಂಗಡಿಯಲ್ಲಿ ಬಂದು ಕೇಳಿದಾಗ ಬ್ಯಾಗನ್ನು ಅಪರಿಚಿತ ವ್ಯಕ್ತಿಯು ತೆಗೆದುಕೊಂಡು ಹೋಗಿರುವುದಾಗಿ ತಿಳಿಸುತ್ತಾರೆ ಆದ್ದರಿಂದ ಸದರಿ ಆರೋಪಿಯನ್ನು ಪತ್ತೆ ಮಾಢಿ ಕ್ರಮ ಜರುಗಿಸಲು ನೀಡಿದ ದೂರು.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                   MYSURU CITY TRAFFIC VIOLATION CASES

 

                                         DATE  :05-12-2018

SLNO

            HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

110

370

268

-

306

1,054

2

TOTAL NUMBER OF CRR'S

696

557

717

390

1,183

3,543

3

TOTAL FINE AMOUNT COLLECTED

77,600

63,600

74,300

45,500

1,28,700

3,89,700

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

1         

1

7

NON FATAL

-

 

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

29

27

-

15

16

87Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com