ENGLISH   |   KANNADA

Blogದಿನಾಂಕ;04.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:05.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 237       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ.

ದಿನಾಂಕ:02-01-18 ರಂದು ರಾತ್ರಿ ಸುಮಾರು 21-30 ಗಂಟೆಯಲ್ಲಿ ಪಿರ್ಯಾದಿ ಅಜರ್ ಅಹಮ್ಮದ್ ರವರು ಅವರ ಸೋದವರ ಮಾವ ಕಲೀಲ್ ರವರ ಮನೆಯ ಬಳಿ ಫಾರಂ ಕಾಲೋನಿ ಗೌಸಿಯಾನಗರದಲ್ಲಿದ್ದಾಗ ಹಳೆಯ ದ್ವೇಷ ದಿಂದ  ಪುರ್ ಖಾನ್ ಈತನು ಶುಮಾಲ್ ಹಾಗೂ ಇತರರನ್ನು ಕರೆದುಕೊಂಡು ಬಂದು ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು,ಹಲ್ಲೆ,ಮಾಡಿ  ಒಂದು ಕಬ್ಬಿಣದ ಚಾಕುವಿನಿಂದ ಪಿರ್ಯಾದಿಯ ಬಲ ಭುಜದ ಬಳಿ ಕುಯ್ದು ರಕ್ತಗಾಯ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ  ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ  ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಕೆ ಆರ್ ಠಾಣೆ.

ಪಿರ್ಯಾದಿ ಶಿವಕುಮಾರ್ ರವರು ದಿನಾಂಕ;18.11.18 ಬೆಳಿಗ್ಗೆ 6.30 ಗಂಟೆಗೆ ಕೆ.ಅರ್ ಮೊಹಲ್ಲದ ನಂಜುಮಳಿಗೆಯ ಬಳಿ ಇರುವ ಹೂವಿನ ಅಂಗಡಿಗಳ ಹತ್ತಿರ  ಬೈಕ್ ನ್ನು ನಿಲ್ಲಿಸಿ ಹೂವಿನ ಹಾರವನ್ನು  ತೆಗೆದುಕೊಂಡು  ವಾಪಸ್ 06.45 ಗಂಟೆಗೆ  ಬಂದು ನೋಡಲಾಗಿ ತನ್ನ  ಬಾಬ್ತು  ನೀಲಿ ಬಣ್ಣದ ಹಿರೋ ಹೊಂಡ ಪ್ಯಾಷನ್ ಪ್ಲಸ್ ನಂ ಕೆಎ-09 ಇಎಫ್-5777 ಬೈಕ್  ಕಳ್ಳತನವಾಗಿರುತ್ತದೆ.ಇಲ್ಲಿಯವರೆಗೆ  ತನ್ನ ಬೈಕ್‌ನ್ನು  ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ಕಳುವಾಗಿರುವ ಬೈಕ್ ನ್ನು ಪತ್ತೆ ಮಾಡಿ ಕೊಡಬೇಕೆಂದು  ನೀಡಿದ ದೂರು. . 

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ  ಅನಿತ, ಕೆ ಎನ್ ಪುರ, ಕ್ಯಾತಮಾರನಹಳ್ಳಿ  ರವರು ದಿನಾಂಕ:12.11.17 ರಂದು ಆರೋಪಿ ಲೋಕೇಶ್ ಗೌಡ ಎಂಬುವವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು,ಮದುವೆಯ ಸಮಯದಲ್ಲಿ ಆರೋಪಿತರಿಗೆ ವರದಕ್ಷಿಣೆಯಾಗಿ 100 ಗ್ರಾಂ, ಚಿನ್ನ, ಬಟ್ಟೆ, ವಾಚು ಹಾಗೂ ಉಂಗುರವನ್ನು  ಕೊಟ್ಟಿರುತ್ತಾರೆ. ನಂತರ ಆರೋಪಿಪಿರ್ಯಾದಿಗೆ ಬೈದು, ಹೊಡೆದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು,  ಪಿರ್ಯಾದಿಯ ಒಡವೆಗಳನ್ನು ಗಿರವಿ ಇಟ್ಟಿದ್ದು,  50 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬರುವಂತೆ ಹಿಂಸೆ ನೀಡುತ್ತಿದ್ದು, ಕೊಲೆ ಬೆದರಿಕೆ ಹಾಕಿದ್ದು ಇದಕ್ಕೆ ಇತರೆ ಕುಟುಂಬ ಸದಸ್ಯರು ಕುಮ್ಮಕ್ಕು ನೀಡುತ್ತಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

03

ಎನ್ ಆರ್ ಸಂಚಾರ ಠಾಣೆ.

ದಿನಾಂಕ:28/11/18 ರಂದು ರಾತ್ರಿ ಸುಮಾರು 08.00 ಗಂಟೆಯಲ್ಲಿ ಪಿರ್ಯಾದಿ ಅಯಾನ್ ಷರೀಫ್ ರವರ ಸಹೋದರ ಅಫಾನ್ ಶರೀಫ್ ರವರು ಸ್ಕೂಟರ್ ನಂಬರ್  KA-55  U-3797 ನ್ನು ಮೈಸೂರು-ಬೆಂಗಳೂರು ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಕಳಸ್ತವಾಡಿ ಗ್ರಾಮದ ಕಡೆಯಿಂದ ಸಿದ್ದಲಿಂಗಪುರದ ಕಡೆಗೆ  ನಾಗನಹಳ್ಳಿ ಕ್ರಾಸ್ ಬಳಿ  ಹೋಗುತ್ತಿದ್ದಾಗ ಸ್ಕೂಟರಿನ ವೇಗವನ್ನು ನಿಯಂತ್ರಿಸಲಾರದೆ ಸ್ವತಃ ಸ್ಕೂಟರ್ ಸಮೇತ ಕೆಳಗೆ ಬಿದ್ದು ಗಾಯಗೊಂಡಿದ್ದವನನ್ನು ಸ್ಥಳದಲ್ಲಿದ್ದವರು ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿದ್ದು, ಅಫಾನ್ ಶರೀಫ್ ರವರನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಅಪಘಾತದ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-04.01.19 ರಂದು ಬೆಳಿಗ್ಗೆ ಸುಮಾರು 08.45 ಗಂಟೆಯಲ್ಲಿ ಪಿರ್ಯಾದಿ ಶಿವರಾಜು ರವರ  ತಂಗಿ ದೀಕ್ಷಿತಾ.ಎಸ್ ರವರು ಕೆಎ.55.ಕ್ಯೂ.3596 ನಂಬರಿನ ಹೊಂಡಾ ಆಕ್ಟೀವಾ ಅನ್ನು ಕೆ.ಸಿ ಲೇಔಟ್ 2 ನೇ ಮೇನ್ ಕಡೆಯಿಂದ ಚಾಲನೆ ಮಾಡಿಕೊಂಡು ಬಂದು 2 ನೇ ಮೇನ್ ಮತ್ತು 6 ನೇ ಕ್ರಾಸ್ ರಸ್ತೆ ಸೇರುವ ಜಂಕ್ಷನ್ ನಲ್ಲಿ ಹೊಗುತ್ತಿದ್ದ ವೇಳೆ 6 ನೇ ಕ್ರಾಸ್ ರಸ್ತೆ ಕಡೆಯಿಂದ ಕೆಎ.09.ಎಂಸಿ.5703 ನಂಬರಿನ ಕಾರನ್ನು ಅದರ ಚಾಲಕ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ದೀಕ್ಷಿತಾ.ಎಸ್ ರವರ ಹೊಂಡಾ ಆಕ್ಟೀವಾಗೆ ಡಿಕ್ಕಿ ಮಾಡಿದ ಪರಿಣಾಮ ದೀಕ್ಷಿತಾ ರವರ ತಲೆಗೆ, ಬಲಕೈ ಮತ್ತು ಬಲಕಾಲು ಮಂಡಿಗೆ ಪೆಟ್ಟಾಗಿ ಪ್ರಜ್ಞೆ ತಪ್ಪಿದ್ದವರನ್ನು ಚಿಕಿತ್ಸೆಗೆ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ್ದು,ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರು ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ03.01.19 ರಂದು ರಾತ್ರಿ ಸುಮಾರು 7.00 ಗಂಟೆಯ ಸಮಯದಲ್ಲಿ ಪಿರ್ಯಾದಿ ಶ್ರೀನಿವಾಸ ಮೂರ್ತಿ ರವರ ಅಣ್ಣ ಸತೀಶ್ ಕುಮಾರ್ ರವರು ರಾಘವೇಂದ್ರ ಮಠಕ್ಕೆ ಹೋಗಲು ಅವರ ಕೆಎ.01.ಎಸ್.2007 ನಂಬರಿನ ಸುಜುಕಿ ಸಮುರಾಯ್ ಮೋಟಾರ್ ಸೈಕಲ್ ಅನ್ನು ಟಿ.ಎನ್ ಪುರ ರಸ್ತೆಯಲ್ಲಿ ಸಿಗ್ನಲ್ ಲೈಟ್ ಜಂಕ್ಷನ್ ಕಡೆಯಿಂದ ರಾಜಶೇಖರ ಆಸ್ಪತ್ರೆ ಕಡೆಗೆ ಚಾಲನೆ ಮಾಡಿಕೊಂಡು ತಿರುಮಲ ಟ್ರಸ್ಟ್ ಬಳಿ ಹೋಗುತ್ತಿದ್ದ ವೇಳೆ ಎದುರಿನಿಂದ ಅಂದರೆ ರಾಜಶೇಖರ ಆಸ್ಪತ್ರೆ ಕಡೆಯಿಂದ ಕೆಎ.55.ಎಕ್ಸ್.7708 ನಂಬರಿನ ಹೊಂಡಾ ಆಕ್ಟೀವಾ ಅನ್ನು ಅದರ ಸವಾರ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಅಣ್ಣ ಸತೀಶ್ ಕುಮಾರ್ ರವರ ಮೋ.ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರೂ ಸಹ ಮೋಟಾರ್ ಸೈಕಲ್ ಗಳ ಸಮೇತ ರಸ್ತೆ ಮೇಲೆ ಬಿದ್ದು ಇಬ್ಬರಿಗೂ ಬಲಕಾಲು ಮತ್ತು ಪಾದದ ಬಳಿ ಪೆಟ್ಟಾಗಿರುತ್ತದೆ. ಸತೀಶ್ ಕುಮಾರ್ ರವರನ್ನು ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿರುವ ವಿಚಾರ ತಿಳಿದು ಆಸ್ಪತ್ರೆಗೆ ಬಂದ ಪಿರ್ಯಾದಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಹೊಂಡಾ ಆಕ್ಟೀವಾ ಮತ್ತು ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ಕೆ ಆರ್ ಠಾಣೆ.

ಪಿರ್ಯಾದಿ ರಾಜು ರವರು ಎಂಬುವರು ತೂಫಾನ್ ವಾಹನದ ಮಾಲೀಕ ಮತ್ತು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು,  ಹೆಚ್.ಡಿ.ಕೋಟೆಯಿಂದ ಮೈಸೂರಿಗೆ ಸದರಿ ವಾಹನದಲ್ಲಿ ಪ್ರಯಾಣಿಕರನ್ನು ಬಾಡಿಗೆಗೆ ಕರೆದುಕೊಂಡು ಬಂದು ಹೋಗುತ್ತಿದ್ದು, ಮೈಸೂರು ನಗರ ಪಾಲಿಕೆಯ ಹಿಂಭಾಗ ಪ್ರಯಾಣಿಕರನ್ನು ಇಳಿಸಿ, ಅದೇ ಸ್ಥಳದಿಂದ ಹೆಚ್.ಡಿ.ಕೋಟೆಗೆ ಪ್ರಯಾಣಿಕರನ್ನು ನನ್ನ ವಾಹನಕ್ಕೆ ಹತ್ತಿಸಿಕೊಳ್ಳುವಾಗ ನಮಗೆ ದಿನನಿತ್ಯ 300 ರೂ ಹಫ್ತಾ ಕೊಟ್ಟರೆ ಮಾತ್ರ ಈ ಸ್ಥಳದಲ್ಲಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ನಿಮ್ಮ ವಾಹನಕ್ಕೆ ಅವಕಾಶ ಕೊಡುತ್ತೇವೆಂದು ಪಿರ್ಯಾದಿಯನ್ನು ಬೆದರಿಸಿದ್ದರಿಂದ ಭಯಭೀತನಾಗಿ ಈವರೆವಿಗೂ ದಿನನಿತ್ಯ 300 ರೂಗಳನ್ನು ಕೊಟ್ಟಿಕೊಂಡು ಬಂದಿದ್ದು,  ಅದೇ ರೀತಿ ಈ ಸ್ಥಳಕ್ಕೆ ಬರುವ ಸುಮಾರು 40 ವಾಹನಗಳ ಚಾಲಕರು ಮತ್ತು ಮಾಲೀಕರಿಂದ ಇದೇ ರೀತಿ 300ರೂ ಹಪ್ತಾ ನೀಡಬೇಕೆಂದು ತಾಕೀತು ಮಾಡಿರುತ್ತಾರೆ. ಹೀಗಿರುವಾಗ್ಗೆ ದಿ: 02/01/2019 ರಂದು ಬೆಳಿಗ್ಗೆ ಸುಮಾರು 08-30 ಗಂಟೆಯಲ್ಲಿ ಪಿರ್ಯಾದಿ  ಅಗ್ರಹಾರ  ವೃತ್ತದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ, ಆರೋಪಿಗಳಾದ ಸಮಿವುಲ್ಲಾ. ಸ್ವಾಮಿ. ಗುಂಡ, ಕುಮಾರ & ಇತರೆ ಇಬ್ಬರು  ದ್ವಿಚಕ್ರ ವಾಹನದಲ್ಲಿ ಸದರಿ ವಾಹನವನನ್ನು ಹಿಂಬಾಲಿಸಿಕೊಂಡು ಬಂದು, ವಾಹನವನ್ನು ಅಡ್ಡಗಟ್ಟಿ  ನಿಲ್ಲಿಸಿ, ನೀನು ಹಣ ಕೊಡದಿದ್ದರೆ ನಿನ್ನ ವಾಹನವನ್ನು ಪ್ರಯಾಣಿಕರ ಸಮೇತ ಪೆಟ್ರೋಲ್ ಹಾಕಿ  ಸುಟ್ಟುಬಿಡುತ್ತೇವೆ ಎಂದು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಫಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

 

                             MYSURU CITY TRAFFIC VIOLATION CASES

 

                                           DATE  :04-01-2019

SLNO

          HEADS

                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

125

450

161

-

189

925

2

TOTAL NUMBER OF CRR'S

604

457

484

519

876

2,940

3

TOTAL FINE AMOUNT COLLECTED

65,500

52,600

50,000

52,700

95,500

3,16,300

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

1

-

-

1

7

NON FATAL

-

-

-

2

-

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

40

23

5

-

18

86Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com