ENGLISH   |   KANNADA

Blogದಿನಾಂಕ;06.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 230       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ನಜರ್ ಬಾದ್ ಠಾಣೆ.

ದಿನಾಂಕ;06-01-2018 ಪಿರ್ಯಾದಿ ಮಹಾಲಕ್ಷ್ಮೀ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರಿಂದ ಶ್ಯಾಮಾ, ಚಂದ್ರ, ಶೇಕ್ ಅಹಮ್ಮದ್, ದಸ್ತಗಿರ್ ರವರುಗಳು ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, ನಂತರ ಚಾಮುಂಡಿ ಹಾಲ್, ಎಂ ಎಂ ರಸ್ತೆ ನಜರ್ ಬಾದ್ ಬಳಿ ಹಣ ಕೇಳಲು  ಹೋದ ಸಮಯದಲ್ಲಿ ಮಹಾಲಕ್ಷ್ಮಿ ರವರನ್ನು ತಡೆದು, ಕೆಟ್ಟದಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

02

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಮಂಜುನಾಥ, #70, ಧರಣಿ, 01 ನೇ ಎ ಕ್ರಾಸ್,  ನಿವೇದಿತ ನಗರ ರವರು   ತಮ್ಮ ಕುಟುಂಬ ಸಮೇತ ದಿನಾಂಕ: 03/01/2019 ರಂದು ಬೆಳಿಗ್ಗೆ 11.00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ ಮತ್ತೊಂದು ಮನೆಗೆ ಹೋಗಿರುತ್ತಾರೆ.  ದಿನಾಂಕ: 05/01/2019 ರಂದು ಬೆಳಿಗ್ಗೆ 6.30 ಗಂಟೆ ಸಮಯದಲ್ಲಿ ಪಕ್ಕದ ವಾಚ್‌‌‌‌ಮನ್‌‌‌‌‌ ಶೆಡ್‌‌‌‌‌ನಲ್ಲಿ ವಾಸವಾಗಿರುವ ಸುಂದರಮ್ಮ ಎಂಬುವವರು ಪೋನ್ ಮಾಡಿ ನಿಮ್ಮ ಮನೆಯ ಮುಂಭಾಗದ ಬಾಗಿಲು ತೆರೆದಿದೆ ಬಂದು ನೋಡಿಎಂದು ತಿಳಿಸಿದ ಮೇರೆಗೆ ಕೂಡಲೇ ಮನೆಯ ಬಳಿಗೆ ಬಂದು ನೋಡಿದಾಗ, ಮನೆಯ ಮುಂಬಾಗಿಲು ಮೀಟಿದ್ದು, ನಂತರ ಒಳಗೆ ಹೋಗಿ ಪರಿಶೀಲಿಸಿ ನೋಡಲಾಗಿ 60,000ರೂ ಬೆಲೆ ಬಾಳುವ 2 ಕೆ.ಜಿ ತೂಕದ ಬೆಳ್ಳಿಯ ಪದಾರ್ಥಗಳು ಹಾಗೂ ನಗದು ಹಣ 20,000ರೂ ಕಳ್ಳತನವಾಗಿದ್ದು, ಅವುಗಳ ಒಟ್ಟು ಮೌಲ್ಯ 80,000 ರೂಗಳಾಗಿದ್ದು, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

ಸರಸ್ವತಿಪುರಂ ಠಾಣೆ.

ಪಿರ್ಯದಿ ದೀಪು, #1298, 05 ನೇ ಕ್ರಾಸ್, ಪಡುವಣ ರಸ್ತೆ  ರವರ ತಂದೆ-ತಾಯಿಯವರು ದಿನಾಂಕ: 04/01/2019 ರಂದು ಬೆಳಿಗ್ಗೆ 11.00 ಗಂಟೆಗೆ ಹಾಸನಕ್ಕೆ ಹೋಗಿದ್ದು, ಅದೇ ದಿನ ಪಿರ್ಯಾದಿ ರಾತ್ರಿ ಕರ್ತವ್ಯ ಇದ್ದುದರಿಂದ ಸಂಜೆ 6.00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ನಂಜನಗೂಡಿನ ಐಟಿಸಿ ಕಂಪನಿಗೆ ಹೋಗಿರುತ್ತಾರೆ. ಕೆಲಸ ಮುಗಿಸಿಕೊಂಡು ದಿನಾಂಕ: 05/01/2018 ರಂದು ಬೆಳಗಿನ ಜಾವ 2.10 ಗಂಟೆಗೆ ವಾಪಸ್‌‌‌‌‌‌‌ ಬಂದು ನೋಡಿದಾಗ, ಮನೆಯ ಮುಂಭಾಗದ ಬಾಗಿಲನ್ನು ಮೀಟಿದ್ದು, ಒಳಗೆ ಹೋಗಿ ಪರಿಶೀಲಿಸಿ ನೋಡಿದಾಗ ಬೀರುವಿನ ಬಾಗಿಲು, ವಾರ್ಡ್‌ ರೂಬ್‌‌‌ಗಳು ಯತಾಸ್ಥಿತಿಯರುವುದು ಕಂಡು ಬಂದಿದ್ದು, ತಮ್ಮ ತಂದೆ-ತಾಯಿಯವರಿಗೆ ವಿಚಾರವನ್ನು ತಿಳಿಸಿ, ಕಳ್ಳತನಕ್ಕೆ ಪ್ರಯತ್ನಿಸಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ದೇವರಾಜ ಸಂಚಾರ ಠಾಣೆ.

ದಿನಾಂಕ;06-01-2019 ರಂದು ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ ಪಿರ್ಯಾದಿ ದಿನೇಶ್ ರವರು ಕಾರ್ ನಂ ಕೆ.ಎ 12 ಪಿ -5507 ರಲ್ಲಿ ಜೆ.ಎಲ್.ಬಿ. ರಸ್ತೆ ಮೆಟ್ರೋಪೋಲ್  ಹೋಟಲ್ ಹತ್ತಿರ ಹೋಗುತ್ತಿದ್ದಾಗ, ಬೈಕ್ ನಂ ಕೆ.ಎ 09 ಹೆಚ್.ಹೆಚ್. 9171 ರ ಸವಾರ ಪಿರ್ಯಾದಿಯವರ ಕಾರ್ ಹಿಂಬಾಗಕ್ಕೆ ಡಿಕ್ಕಿ  ಮಾಡಿ ಕೆಳಗೆ ಬಿದ್ದು ಪಿರ್ಯಾದಿ ರವರ ಕಾರ್ ಹಿಂಭಾಗ ಜಖಂ ಅಗಿದ್ದು  ಅಪಘಾತ ಮಾಡಿದ ಬೈಕ್ ಸವಾರ ರಮೇಶ್ ಮತ್ತು ಹಿಂಬದಿ ಸವಾರ ಸಿದ್ದಪ್ಪಾಜಿ ಕೆಳಗೆ ಬಿದ್ದು ಕೈಕಾಲಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಗೆ ಸೇರಿದ್ದು ಈ ಅಪಘಾತಕ್ಕೆ ಬೈಕ್ ಸವಾರನ ವೇಗ ಮತ್ತು ನಿರ್ಲಕ್ಷತೆ ಚಾಲನೆ ಕಾರಣವಾಗಿದ್ದು ಅತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು. 

ದೇವರಾಜ ಸಂಚಾರ ಠಾಣೆ.

ದಿನಾಂಕ;06-01-2019 ರಂದು ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ ಪಿರ್ಯಾದಿ ಸಿದ್ದಪ್ಪಾಜಿ ರವರು ಬೈಕ ನಂ ಕೆ.ಎ 09  ಹೆಚ್.ಹೆಚ್. 9171ರಲ್ಲಿ ಹಿಂಬದಿ ಸವಾರರಾಗಿ  ಜೆ.ಎಲ್.ಬಿ. ರಸ್ತೆ ಮೆಟ್ರೂಪೂಲ್ ಹೋಟಲ್ ಹತ್ತಿರ ಹೋಗುತ್ತಿದ್ದಾಗ, ಕಾರ್ ನಂ ಕೆ.ಎ 12 ಪಿ  5507 ರ ಚಾಲಕ ಪಿರ್ಯಾದಿಯವರ ಬೈಕ್ ಓವರ್ ಟೇಕ್ ಮಾಡಿ  ಮೆಟ್ರೂಪೂಲ್ ಹೋಟಲ್ ಗೆ ಹೋಗಲು ಎಡಕ್ಕೆ ತಿರುಗಿಸಿದ್ದಾಗ,  ಪಿರ್ಯಾದಿಯವರ ಬೈಕ್ ಕಾರ್ ನ  ಹಿಂಬಾಗಕ್ಕೆ  ಡಿಕ್ಕಿಯಾಗಿ  ಪಿರ್ಯಾದಿ ಮತ್ತು ಬೈಕ್ ಸವಾರ ರಮೇಶ್ ರವರು ಕೆಳಗೆ ಬಿದ್ದು ಪಿರ್ಯಾದಿಯವರಿಗೆ ಒಳನೋವು ಅಗಿದ್ದು ಬೈಕ್ ಸವಾರ ನ ಎಡ ಕಾಲಿಗೆ ಪೆಟ್ಟಾಗಿದ್ದು ಸ್ಥಳಕ್ಕೆ ಬಂದ  ಟ್ರಾಪಿಕ್ ಪೊಲೀಸ್ ರವರು ಪಿರ್ಯಾದಿ ಮತ್ತು ರಮೇಶ  ರವರಿಗೆ  ಅಸ್ವತ್ರೆಗೆ ಕಳುಹಿಸಿದ್ದು ಈ ಅಪಘಾತಕ್ಕೆ  ಕಾರ್ ಚಾಲಕನೇ ಕಾರಣನಾಗಿದ್ದು,  ಅತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;05/01/19 ರಂದು 0630ರ ಸಮಯದಲ್ಲಿ ಪಿರ್ಯಾದಿ ಹಫೀಜ್ ವುಲ್ಲಾ ರವರು ತಾವು ಚಾಲನೆ ಮಾಡುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ನಂ, ಕೆಎ-09 ಎಫ್-4470 ನ್ನು ರಾಮಸ್ವಾಮಿ ವೃತ್ತದ ಸಿಗ್ನಲ್ ನಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾಗ ಆರೋಪಿ ಕೆಎಸ್ ಆರ್ ಟಿ ಸಿ ಬಸ್ ನಂ, ಕೆಎ-11 ಎಫ್-0362 ರ ಬಸ್ಸನ್ನು ಅತೀವೇಗ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಂತ್ತಿದ್ದ ಬಸ್ಸಿಗೆ ಡಿಕ್ಕಿ ಮಾಡಿದ ಪರಿಣಾಮ ಸಿಗ್ನಲ್ ನಲ್ಲಿ ನಿಂತ್ತಿದ್ದ ಬಸ್ಸು ಮುಂದೆ ನಿಂತ್ತಿದ ಇನ್ನೊಂದು ಬಸ್ಸಿಗೆ ಡಿಕ್ಕಿ ಮಾಡಿದಾಗ ಪಿರ್ಯಾದಿಯವ ಬಸ್ಸು ಮುಂದೆ ಮತ್ತು ಹಿಂದೆ ಎರೆಡು ಕಡೆ ಜಖಂ ಆಗಿ ಗ್ಲಾಸುಗಳು ಹೋಡೆದು ಹೋಗಿ ಬಸ್ಸಿನಲ್ಲಿದ್ದ 5-6 ಜನರಿಗೆ ಸಣ್ಣಪುಟ್ಟಗಾಯಗಳಾಗಿ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ ಆದ್ದರಿಂದ ಸದರಿ ಬಸ್ಸು ಚಾಲಕನ ಮೇಲೆ ಕಾನೂನು ಕ್ರಮ ಕೈಗೋಳ್ಳಿ ಎಂದು ದೂರು. 

10

ವಂಚನೆ ಪ್ರಕರಣ 

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ರವಿ ಪ್ರಕಾಶ್ ರವರಿಗೆ ಆರೋಪಿ ಗೋವಿಂದರಾಜನ್ ರವರು ಪರಿಚಯವಿದ್ದು ಇವರು ಷೇರು ಮತ್ತು ಕಮಾಡಿಟಿಯಲ್ಲಿ ಹಣವನ್ನು ಹೂಡಿಸಿ ಅದಕ್ಕೆ ತಕ್ಕ ಹಾಗೆ ಬಡ್ಡಿಯನ್ನು ಶೇಕಡ 13 ರಿಂದ 24 ರವರಗೆ ಬಡ್ಡಿಯನ್ನು ಕೊಡುವುದಾಗಿ ಹೇಳಿ ವ್ಯವಹಾರವನ್ನು ನಡೆಸುತ್ತಿದ್ದರು. ಇವರು ಪ್ರಾಮಾಣೆಕತೆಯನ್ನು ನೋಡಿ ಹಂತ ಹಂತವಾಗಿ ಪಿರ್ಯಾದಿಯು  ಹಣವನ್ನು ಅವರ ಬಳಿ ಹೂಡುತ್ತಾ ಬಂದಿದ್ದು  ಇವರು ಸೌಂದರ್ಯ ಸಿಂಹ ಪೈನಾನ್ಸಿಯಲ್ ಪ್ರೈವೇಟ್ ಲಿಮಿಟೆಡ್ನಲ್ಲಿ ಆಡ್ಮಿನಿಸ್ಟ್ರೇಟಿವ್ ಡೈರೆಕ್ಟರ್ ಆಗಿರುತ್ತಾರೆ.   ಹಾಗೂ ಇವರ ಸೂಚನೆಯಿಂದ ಇವರ ಮಗ ಸುಜಯ್ ಶ್ರೀಕಾಂತ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುತ್ತಾರೆ. ಪಿರ್ಯಾದಿಯು ದಿನಾಂಕ;25/04/14 ರಿಂದ 12/12/17 ರ ವರಗೆ ಹಂತ ಹಂತವಾಗಿ ಕೆನರಾ ಬ್ಯಾಂಕ್ ಚೆಕ್ ಗಳಲ್ಲಿ ಸುಮಾರು 10,00,000/- ರೂಗಳನ್ನು ನೀಡಿದ್ದು ಅವರು 6,00,000/- ರೂಗಳಿಗೆ ಅಗ್ರೀಮೆಂಟ್ ನೀಡಿದ್ದು ಉಳಿಕೆ 4,00,000/- ರೂಗಳಿಗೆ ಅಗ್ರೀಮೆಂಟ್ ನೀಡದೆ ಸತಾಯಿಸುತ್ತಾ ಬಂದಿರುತ್ತಾರೆ. ಹಣವನ್ನು ಕೇಳಿದರೆ ಸಬೂಬು ಹೇಳಿಕೊಂಡು ಸತಾಯಿಸುತ್ತಿರುತ್ತಾರೆ. ನನ್ನ ಹಾಗೆ ಇನ್ನೂ ಕೆಲವು ಜನರಿಂದ ಹಣವನ್ನು ಪಡೆದುಕೊಂಡು ಕೊಡುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ತಿಳಿದು ಬಂದಿರುತ್ತದೆ ಆದ್ದರಿಂದ ಸದರಿ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ  ಎಂದು ನೀಡಿದ  ದೂರು. 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                 MYSURU CITY TRAFFIC VIOLATION CASES

 

                                      DATE  :06-01-2019

SLNO

             HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

135

460

92

-

-

687

2

TOTAL NUMBER OF CRR'S

579

622

585

528

799

3,113

3

TOTAL FINE AMOUNT COLLECTED

69,600

74,400

61,500

54,400

84,000

3,43,900

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

2

 

-

-

1

3

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

-

 

-

21

21

42Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com