ENGLISH   |   KANNADA

Blog



ದಿನಾಂಕ;10.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 178       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ನಜರ್ ಬಾದ್ ಠಾಣೆ.

ಪಿರ್ಯಾದಿ ಕಿರಣ್ ಕುಮಾರ್ ರವರು ದಿ;01/01/2019 ರಂದು ಮದ್ಯಾಹ್ನ 0100 ಗಂಟೆಯಲ್ಲಿ ತಮ್ಮ ಹೀರೋ ಸ್ಪ್ಲೆಂಡರ್ ಪ್ಲಸ್ ನಂ. ಕೆಎ-55 ವೈ-3235 ನ್ನು ಹಾರ್ಡಿಂಗ್ ಸರ್ಕಲ್ ಬಳಿ ಟಿ ನರಸೀಪುರಕ್ಕೆ ಹೋಗುವ ಬಸ್ ನಿಲ್ದಾಣದಲ್ಲಿ ಬೈಕನ್ನು ನಿಲ್ಲಿಸಿ ಕೀಯನ್ನು ಅಲ್ಲೆ ಬಿಟ್ಟು ರಸ್ತೆ ಬದಿಯಲ್ಲಿ ಫೋನ್ ನಲ್ಲಿ ಮಾತನಾಡುತ್ತಿರುವಾಗ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

03

ನಜರ್ ಬಾದ್ ಠಾಣೆ.

ದಿನಾಂಕ;10-01-2019 ರಂದು ಪಿರ್ಯಾದಿ  ವಸಂತ್ ಕುಮಾರ್ ರವರು ನೀಡಿದ ದೂರೆಂದರೆ,  ಪಿರ್ಯಾದಿಗೆ ಸಾವಕಟ್ಟಪಾಳ್ಯಂ ಊರಿನವನಾದ ಮುರುಗೇಶ ರವರ ಪರಿಚಯವಿದ್ದು ಆತನು ಮೈಸೂರಿನಲ್ಲಿ ಒಳ್ಳೆಯ ಸ್ಥಳದಲ್ಲಿ ಸೈಟ್ ಅನ್ನು ಕೊಡಿಸುತ್ತೇನೆ ಎಂದು ಹೇಳಿದ್ದು, ಅದನ್ನು ನಂಬಿದ ಪಿರ್ಯಾದಿ ಕೆಲವು ಚಿನ್ನದ ಒಡವೆಗಳನ್ನು ಗಿರವಿ ಇಟ್ಟು ಮತ್ತು ಬ್ಯಾಂಕ್ನಿಂದ ಹಣವನ್ನು ಪಡೆದುಕೊಂಡು ದಿನಾಂಕ-06/01/2019 ರಂದು ಬೆಳಗ್ಗೆ 9-15 ಗಂಟೆಗೆ ಮದ್ಯಾಹ್ನ 2-15 ಗಂಟೆಗೆ ಮಾಲ್ಆಫ್ ಮೈಸೂರು ಹಿಂಭಾಗದ ನಂಜನಗೂಡಿಗೆ ಹೋಗುವ ರಸ್ತೆಗೆ ಬಂದ ನಂತರ ಮುರುಗೇಶ್ ಆತನ ಸ್ನೇಹಿತರಿಗೆ ಫೋನ್ ಮಾಡಿ ಬಂದಿರುವುದಾಗಿ ವಿಚಾರ ತಿಳಿಸಿದ್ದು  ಅವರು ಸಂಜೆ 5-15 ಗಂಟೆಯಲ್ಲಿ ನಾವು ಇದ್ದ ಸ್ಥಳಕ್ಕೆ ಒಂದು ಕಪ್ಪು ಬಣ್ಣದ ಮಾರುತಿ ಓಮ್ನಿ ವಾಹನದಲ್ಲಿ 4 ಜನ ಬಂದರು. ನಂತರ ಮುರುಗೇಶ್ ಪರಿಚಯ ಮಾಡಿಕೊಟ್ಟು ನಂತರ ಮುರುಗೇಶ್ ನ ಸ್ನೇಹಿತರ ಜೊತೆ ಮಾತನಾಡುತ್ತಿರುವಾಗ ಮುರುಗೇಶ್ ಪಿರ್ಯಾದಿ  ಬಳಿ ಇದ್ದ 20,00,000/-ರೂಗಳನ್ನು ತೆಗೆದುಕೊಂಡು ಹೋಗಿ  ನಂಬಿಕೆ ದ್ರೋಹ ಮಾಡಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಕೆ ಆರ್ ಠಾಣೆ.

ದಿನಾಂಕ:10/01/2019 ರಂದು 15-00 ಗಂಟೆಯಲ್ಲಿ ಫಿರ್ಯಾದಿ ರತ್ನಭಾಯಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಮಧ್ಯಾಹ್ನ 1.00 ಗಂಟೆ ನಾನು ಡಯೋಗ್ನಾಸ್ಟಿಕ್ ಸೆಂಟರ್ಗೆ  ಬಂದು ನಮ್ಮ ಯಜಮಾನರ ರೊಪೋರ್ಟ್ ತೆಗದುಕೊಂಡು  ವಾಪಸ್ ಮನೆಗೆ ಹೋಗಲು ಎನ್.ಎಸ್ ರಸ್ತೆ ಕಡೆಯಿಂದ ನಂಜುಮಳಿಗೆ ಕಡೆಗೆ ನಡೆದುಕೊಂಡು ಬರುವಾಗ ಒಬ್ಬಳು ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ಹೆಂಗಸು ನನ್ನ ಪಕ್ಕದಲ್ಲಿ ನಡೆದುಕೊಂಡು ತಲೆ ಮೇಲೆ ಸೀರೆಯ ಸೆರೆಗನ್ನು ಹಾಕಿಕೊಂಡು ಬಂದು ಜಾಸ್ತಿ ಬಿಸಿಲು ಇದೆ ಎಂದು ನನ್ನನ್ನು ಮಾತನಾಡಿಸಿದಳು, ನಂತರ ನನ್ನ  ಜೊತೆಗೆ ನಡೆದುಕೊಂಡು ಬರುತ್ತಿದ್ದ ಹೆಂಗಸು ಸ್ವಲ್ಪ ಹಿಂದೆಯಾಗಿ ಮತ್ತೆ ನನ್ನ ಬಳಿಗೆ  ಬಂದು  ನನಗೆ ಒಂದು ಗಂಡಸಿನ ಪರ್ಸ್ ಸಿಕ್ಕಿದೆ ಎಂದು ತಿಳಿಸಿ ಹಣವನ್ನು ಯಾರು ಇಲ್ಲದ ಕಡೆ ಹೋಗಿ ಹಂಚಿಕೊಳ್ಳೋಣ ಎಂದು ಪಿರ್ಯಾದಿಯನ್ನು  ಹೊಸಬಂಡಿಕೇರಿ ಕ್ರಾಸ್ ಕಡೆಯಿಂದ ರಾಮನುಜ ರಸ್ತೆಯ 11 ನೇ ಕ್ರಾಸ್ನಲ್ಲಿರುವ ಬನಶಂಕರಿ ಬಿಲ್ಡರ್ಸ್ ನ ಕಟ್ಟಡದ ಬಳಿಗೆ  ಕರೆದುಕೊಂಡು ಬಂದು  ಕೂರಿಸಿಕೊಂಡು ಪರ್ಸನ್ನು  ತೆಗೆದು ತೋರಿಸಿದ್ದು ಅದರಲ್ಲಿ ಸುಮಾರು ಹಣವಿದ್ದು, ಅದನ್ನು ಹಂಚಿಕೊಳ್ಳೋಣ ಎಂದು ತೆಗೆಯುತ್ತಿದಾಗ ಅಲ್ಲಿಗೆ ಒಬ್ಬ ಅಪರಿಚಿತ ಗಂಡಸು ನಮ್ಮಗಳ ಬಳಿ ಬಂದ, ತಕ್ಷಣ ನನ್ನ ಜೊತೆಯಲ್ಲಿದ್ದ ಹೆಂಗಸು ತನ್ನ ಬಳಿ ಇದ್ದ ಪರ್ಸನ್ನು ಗಂಡಸಿಗೆ ಕಾಣದಂತೆ ಮುಚ್ಚಿಟ್ಟುಕೊಂಡಳು, ಬಂದಿದ್ದ ಗಂಡಸು ನನ್ನ ಪರ್ಸ್ ಕಳೆದು ಹೋಗಿದೆ ಅದನ್ನು ನೀವುಗಳು ತೆಗೆದುಕೊಂಡಿದ್ದೀರ ಎಂದು ಕೇಳಿದಕ್ಕೆ ಪಿರ್ಯಾದಿ & ಆ ಹೆಂಗಸು  ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದು, ಅಷ್ಟಕ್ಕೆ  ಆ ಗಂಡಸು  ನೀವುಗಳು ತೆಗೆದುಕೊಳ್ಳದಿದ್ದರೆ ನಿಮ್ಮ ಬಳಿಯಿರುವ ಚಿನ್ನದ ಓಡವೆಗಳನ್ನು ತೆಗೆದು ತಲೆ ಮೇಲೆ ಇಟ್ಟುಕೊಂಡ ಪ್ರಮಾಣ ಮಾಡಿ ಎಂದು ತಿಳಿಸಿದ, ಅದರಂತೆ ನನ್ನ ಜೊತೆಯಲ್ಲಿದ್ದ ಹೆಂಗಸು ತನ್ನ ಕತ್ತಿನಲ್ಲಿದ್ದ ಸರವನ್ನು ಮತ್ತು ಕೈಯಲ್ಲಿದ್ದ ಉಂಗುರಗಳನ್ನು  ಒಂದು ಪೇಪರ್ನಲ್ಲಿ ಹಾಕಿ ಅವಳ ತಲೆ ಮೇಲೆ ಮತ್ತು ನನ್ನ ತಲೆ ಮೇಲೆ ಇಟ್ಟು ಪರ್ಸನ್ನು  ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಿದಳು, ನಂತರ ನನ್ನ ಕತ್ತಿನಲ್ಲಿದ್ದ ಎರಡು ಎಳೆಯ ಅಂಜಲಿ ಕಟಿಂಗ್ ಮಾದರಿಯ ಚಿನ್ನದ ಮಾಂಗಲ್ಯ ಸರ ( 1 ತಾಳಿ ಮತ್ತು 02 ಗುಂಡುಗಳು) ಒಟ್ಟು ಸುಮಾರು 40 ಗ್ರಾಂಗಳಾಗಿದ್ದು, ಕೈಯಲ್ಲಿದ್ದ ಸುಮಾರು 05 ಗ್ರಾಂ ತೂಕದ ಪ್ಲೇನ್ ಮಾದರಿಯ ಉಂಗುರವನ್ನು ಒಂದು ಪೇಪರ್ ಹಾಕಿಸಿ ಅವಳ ಕೈಯಲ್ಲಿ  ಹಿಡಿದುಕೊಂಡು  ನನ್ನ ತಲೆ ಮೇಲೆ  ಮತ್ತು ಅವಳ ತಲೆ ಮೇಲೆ ಇರಿಸಿ ಪ್ರಮಾಣ ಮಾಡಿದಳು,ನಂತರ ಚಿನ್ನದ ಓಡವೆಗಳನ್ನು ಮನೆಗೆ ಹೋಗಿ ಹಾಕಿಕೊಳ್ಳಿ ಎಂದು ಪೇಪರ್ನೊಂದಿಗೆ ನನ್ನ ಸೀರೆಯ ಸೆರೆಗಿಗೆ ಬಿಗಿಯಾಗಿ ಕಟ್ಟಿ ಅಲ್ಲಿಂದ ಹೆಂಗಸು ಮತ್ತು ಗಂಡಸು ಹೊರಟು ಹೋದರು, ನಂತರ ಸ್ವಲ್ಪ ದೂರು ನಡೆದುಕೊಂಡು ಹೋಗಿ ನನ್ನ ಸೀರೆಯ ಸೆರೆಗನ್ನು ಬಿಚ್ಚಿ ನೋಡಲಾಗಿ ಪೇಪರ್ನಲ್ಲಿ ಮರಳು ತುಂಬಿ ಕಟ್ಟಿರುತ್ತಾರೆ. ಆದ್ದರಿಂದ ನನ್ನ ಮಾಂಗಲ್ಯ ಸರದ ಮತ್ತು ಉಂಗುರ ಬದಲಿಗೆ ಪೇಪರ್ನಲ್ಲಿ ಮರಳು ತುಂಬಿ ನನ್ನ ಗಮನ ಬೇರೆಡೆ ಸೆಳೆದು ನನ್ನ ಸೀರೆಯ ಸೆರೆಗಿಗೆ ಕಟ್ಟಿ ಮೋಸ ಮಾಡಿದ ಗಂಡಸು ಮತ್ತು ಹೆಂಗಸನ್ನು ಪತ್ತೆ  ಮಾಡಿ ಆರೋಪಿಗಳ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಲು ನೀಡಿದ ದೂರು.

ವಿಜಯನಗರ ಠಾಣೆ.

ದಿನಾಂಕ;10/01/19 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಪಿರ್ಯಾದಿ ವಿಪುಲ್ ಕುಮಾರ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಆರೋಪಿ ಮಹೇಶ್ ಪಟೇಲ್, ಪರ್ಫೆಕ್ಟ್ ಕ್ಯಾರಿಯರ್ ಗೈಡ್ ಹೆಸರಿನಲ್ಲಿ ಪಿರ್ಯಾದುದಾರರ ಮಗನಿಗೆ ಕಸ್ತೂರಿ ಬಾ ಮೆಡಿಕಲ್ ಕಾಲೇಜ್, ರೂರಲ್ ಮೆಡಿಕಲ್ ಕಾಲೇಜ್ ನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ 1 ಲಕ್ಷ ಹಣವನ್ನು ಆರೋಪಿತನ ಅಕೌಂಟ್ ಆದ  0082102000030029 ಗೆ ಹಾಕಿಸಿಕೊಂಡು, ಸೀಟ್ ಕೊಡಿಸಿದೇ ಮೋಸ ಮಾಡಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                            MYSURU CITY TRAFFIC VIOLATION CASES

 

                                              DATE  :10-01-2019

SLNO

              HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

135

422

 

-

144

701

2

TOTAL NUMBER OF CRR'S

503

658

477

543

917

3,098

3

TOTAL FINE AMOUNT COLLECTED

54,500

73,400

49,100

58,000

98,400

3,33,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

-

-

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

13

26

15

-

13

67



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com