ENGLISH   |   KANNADA

Blogದಿನಾಂಕ;12.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 195       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

03

ಉದಯಗಿರಿ ಠಾಣೆ

ದಿನಾಂಕ 25/12/18 ರಂದು ರಾತ್ರಿ 0730 ರ ಸಮಯದಲ್ಲಿ ಪಿರ್ಯಾದಿ ನವಾಜ್ ಖಾನ್ ರವರು ವಿಟಿಯು ಕಾಲೇಜ್ ಜಂಕ್ಷನ್ ಹತ್ತಿರ ಸಾತಗಳ್ಳಿ ಸ್ಥಳದ ಬಳಿ ಹೋಗುತ್ತಿದ್ದಾಗ ಆರೋಪಿಗಳಾದ ಸುಹೇಲ್ ಮತ್ತು ಇನ್ನು ಮೂವರು ಪಿರ್ಯಾದಿಯವರನ್ನು ಅಡ್ಡಗಟ್ಟಿ ನಿಂದು ಗಾಂಚಲಿ ಜಾಸ್ತಿ ಆಯಿತು. ನಮ್ಮ ವ್ಯವ್ಯಹಾರದಲ್ಲಿ ತಲೆ ಹಾಕಿ ನಮ್ಮ ಮೇಲೆ ಗಾಂಚಲಿ ತೋರಿಸ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಪಿರ್ಯಾದಿಯವರು ನನಗೆ ಯಾಕೆ ಬೈಯುತ್ತಿದ್ದಿಯಾ ನಾನು ಏನು ಮಾಡಿದೆ ಎಂದು ಹೇಳುತ್ತಿದ್ದಂತೆ ಪಿರ್ಯಾದಿಯವರಿಗೆ ಮೈಕೈಗೆ ಹೊಡೆದು ಬಲವಂತವಾಗಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡುವ ಉದ್ದೇಶದಿಂದ ಮರದ ದೊಣ್ಣೆ ಮತ್ತು ಕಬ್ಬಿಣ್ಣದ ಪೈಪಿನಿಂದ ಬಲವಾಗಿ ಹೊಡೆದು ತೀವ್ರನೋವುಂಟು ಮಾಡಿದಲ್ಲದೆ ಒಂದು ಲಕ್ಷ ರೂಪಾಯಿಗಳನ್ನು  ಪಡೆದುಕೊಂಡು ಆಸ್ಪತ್ರೆಯಲ್ಲಿ ಆಕ್ಸಿಡೆಂಟ್ ಎಂದು ಬರೆಸುವಂತೆ ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದಲ್ಲದೆ ಮನೆ ಬಳಿ ಪುನಃ ಬಂದು ಇನ್ನೂ ಒಂದು ಲಕ್ಷ ರೂಗಳನ್ನು ನೀಡುವಂತೆ ಬೆದರಿಕೆ ಹಾಕುತ್ತಿರುವ ಸದರಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೋಳ್ಳಿ ಎಂದು ದೂರು.

ಕೃಷ್ಣರಾಜ ಠಾಣೆ

ದಿ: 06/01/2019 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲಿ ಫಿರ್ಯಾದಿ ಪುಷ್ಪಕಲಾರವರು   ಗೌರಿಶಂಕರ ನಗರದಲ್ಲಿ ವಾಸವಿರುವ ಮನೆಗೆ ಹೊಸದಾಗಿ ಬಣ್ಣ ಹೊಡೆಯಲು ಟಿನ್ನರ್, ಏಷಿಯನ್ ಪೈಂಟ್ಸ್ ಬಣ್ಣವನ್ನು ಮನೆಯ ಅಂಕಣದಲ್ಲಿ ತೆರೆದು ಇಟ್ಟುಕೊಂಡು ಕೆಲಸ ಮಾಡಲು ಶುರು ಮಾಡಿಕೊಳ್ಳುತ್ತಿದ್ದಾಗ, ಆರೋಪಿತನಾದ ನನ್ನ ಗಂಡ ನಂಜುಂಡಯ್ಯನು ಬಂದು ನನ್ನನ್ನು ಕೆಟ್ಟದಾಗಿ ನಿಂದಿಸುತ್ತಾ, ಬೈಯ್ಯುತ್ತಾ ಬಂದು ಬಣ್ಣವನ್ನು ಕಾಲಿನಿಂದ ಒದ್ದು, ದಬ್ಬಿಯನ್ನು ಕೈಯಿಂದ ಎತ್ತಿಕೊಂಡು ಮನೆಯ ಒಳಗೆ ಹಾಗೂ ಹೊರಗಡೆ ಚೆಲ್ಲಿ ಮನೆಗೆ ಬಣ್ಣವನ್ನು ಹೊಡೆಯಬಾರದಾಗಿ ಅರಚುತ್ತಾ, ಕಿರುಚುತ್ತಾ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಣ್ಣವನ್ನು ಚೆಲ್ಲಿರುತ್ತಾನೆ. ಹಾಗೂ ಇದನ್ನು ಕೇಳಿದ ನನ್ನ ಮೇಲೆ ಹಲ್ಲೆಯನ್ನು ಮಾಡಿರುತ್ತಾನೆ. ಅಲ್ಲದೇ ಮನೆಯ ಬಾಗಿಲಿಗೆ ಕರ್ಟನ್ ಪರದೆ ಹಾಕುವ ಕಬ್ಬಿಣದ ಕುಳವೆಯನ್ನು ಬಳಸಿ ನನ್ನ ಮೇಲೆ ಹಲ್ಲೆ ಮಾಡಿರುತ್ತಾನೆ ಹಾಗೂ ನನ್ನನ್ನು ಕೆಳಗಡೆ ಬೀಳಿಸಿರುತ್ತಾನೆ ಹಾಗೂ ಅಂಗಾತ ಬಿದ್ದ ನನ್ನ ಮೇಲೆ ಟಿನ್ನರನ್ನು ಊಯ್ದು ನನ್ನ ಬಾಯಿಗೆ ಟಿನ್ನರನ್ನು ಸುರಿದು ನನ್ನನ್ನು ಕೊಲೆ ಮಾಡಲು ಯತ್ನಿಸಿರುತ್ತಾನೆ. ಹೊರಗಡೆಯಿಂದ ಬಂದು ನನ್ನ ಮಗ ಇದನ್ನು ನೋಡಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾನೆ. ಸದರಿ ವ್ಯಕ್ತಿಯು ನನ್ನ ಮೇಲೆ ದೈಹಿಕ ಹಾಗೂ ಮಾನಸ್ಸಿಕವಾಗಿ ಚಿತ್ರಹಿಂಸೆ ನೀಡುತ್ತಾ ಬಂದಿದ್ದು, ಕೊಲೆಯನ್ನು ಮಾಡಲು ನಿರ್ದರಿಸಿದ್ದು, ನನ್ನ ಆಸ್ತಿ, ಪಾಸ್ತಿ ಪ್ರಾಣ ಹಾನಿಯಾಗುವುದನ್ನು ತಪ್ಪಿಸಿ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ರಕ್ಷಣೆಯನ್ನು ನೀಡಬೇಕೆಂದು ಹಾಗೂ ನಾನು ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಮನೆಯಲ್ಲಿ ವಿಶ್ರಾಂತಿಪಡೆದುಕೊಂಡು ಈ ದಿನ ಠಾಣೆಗೆ ಬಂದು ದೂರು ನೀಡಿರುತ್ತಾನೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

ನಜರ್ ಬಾದ್ ಠಾಣೆ

ಪಿರ್ಯಾದುದಾರರಾದ ಅರ್ಜುನ್ ರವರು ದಿನಾಂಕ: 12/01/2019 ರಂದು ದಿನಾಂಕ-11-01-2019 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ರಾಘವೇಂದ್ರನಗರದ ನಮ್ಮ ಪಕ್ಕದ ಬೀದಿಯಲ್ಲಿ ಗಲಾಟೆ ನಡೆಯುತ್ತಿತ್ತು. ಆಗ ನಾನು ಅಲ್ಲಿಗೆ ಹೋಗಿ ಜಗಳ ಬಿಡಿಸಲು ಹೋದಾಗ ರವಿ ಮತ್ತು ಅವರ ಅಣ್ಣ ಮತ್ತು ಇತರರು ನನಗೆ ಕೈಯಿಂದ ಹೊಡೆದು, ರವಿ ಎಂಬುವವನು ಒಂದು ಚಾಕಿನಿಂದ ನನ್ನ ಹೊಟ್ಟೆಗೆ ಚುಚ್ಚಿದನು. ಅಗ ಅಲ್ಲೆ ಇದ್ದ ಜನರು ಜಗಳ ಬಿಡಿಸಲು ಬಂದಾಗ ಅವರ ಮೇಲೂ ರವಿ ಗಲಾಟೆ ಮಾಡಿದನು. ನಂತರ ನನಗೆ ರಕ್ತ ಸುರಿಯುತ್ತಿದ್ದರಿಂದ ನಾನು ಕೆ.ಆರ್.ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಈ ದಿನ ಡಿಸ್ಚಾಜರ್್ಆಗಿ ಬಂದು ದೂರು ನೀಡುತ್ತಿದ್ದು, ನನ್ನ ಮೇಲೆ ಹಲ್ಲೆ ಮಾಡಿದ ರವಿ ಮತ್ತು ಅವರ ಅಣ್ಣ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ಲಷ್ಕರ್ ಠಾಣೆ

ದಿನಾಂಕ 12/01/19 ರಂದು ಪಿರ್ಯಾದುದಾರರಾದ ಮುಖೇಶ್ ಕುಮಾರ್ ರವರು ತಮ್ಮಮೋಟರ್ ಬೈಕ್ನ್ನು ಹಳ್ಳದಕೇರಿ ಬಳಿ ಮನೆ ಮುಂದೆ ಬೀಗ ಹಾಕಿ ನಿಲ್ಲಿಸಿ ಕೀ ಯನ್ನು ಮರೆತು ಬೈಕ್ ನಲ್ಲೆ ಬಿಟ್ಟು ಮರೆತು ಮನೆಗೆ ಹೋಗಿ ಊಟ ಮಾಡಿ ವಾಪಸ್ಸು ಬಂದು ನೋಡಲಾಗಿ ತಮ್ಮ ಬಾಬ್ತು ಕೆಎ-55 ಕೆ-4850 ಬೈಕ್ ನ್ನು ನೋಡಿದಾಗ ಸದರಿ ಬೈಕ್ ಇರಲಿಲ್ಲ. ಎಲ್ಲ ಕಡೆ ವಿಚಾರಿಸಿದರು ಸಿಗಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನಗೆ ಅನಾರೋಗ್ಯದ ಕಾರಣದಿಂದ ತಡವಾಗಿ ಠಾಣೆಗೆ ಬಂದು ಪತ್ತೆ ಮಾಡಿಕೊಡಿವೆಂದು ಕೊಟ್ಟ ದೂರಿನ ಮೇರೆಗೆ ಪ್ರ.ವ.ವರದಿ.

ದೇವರಾಜ ಠಾಣೆ

ದಿನಾಂಕ 09/01/2019 ರಂದು ಪಿರ್ಯಾದಿ ಯುದಿಷ್ಟಿರ ರವರು  ತಮ್ಮ ಬಾಬ್ತು ಕೆಎ-09/ಇಕೆ-9850 ಟಿವಿಎಸ್ನಲ್ಲಿ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ಸ್ಕೂಟರ್ನ್ನು ಓಪಿಡಿ ಮುಂದೆ ನಿಲ್ಲಿಸಿ ಹೋಗಿ ವಾಪಸ್ಸು ಬಂದು ನೋಡಲಾಗಿ ಸದರಿ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನ ಇರುವುದಿಲ್ಲ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಎನ್.ಆರ್ ಸಂಚಾರ ಠಾಣೆ

 ದಿನಾಂಕ 12/01/19 ರಂದು ರಾತ್ರಿ 0715ರ ಸಮಯದಲ್ಲಿ ಪಿರ್ಯಾದಿ ಪೂರ್ಣಿಮಾರವರ  ತಂದೆ ಸುಬ್ರಮ್ಮಣ್ಯ ರವರು ಹಿಂಭಾಗದಲ್ಲಿ ನೇತ್ರಾವರಿಯವರನ್ನು ಕೂರಿಸಿಕೊಂಡು ವೆಂಕಟರಮಣ ದೇವಸ್ಥಾನ ಶಿವಾಜಿ ರಸ್ತೆ ಬಳಿ ಹೋಗುತ್ತಿದ್ದಾಗ ಆರೋಪಿ ಕೆ.ಎ-09 ಎ-9361 ರ ಗೂಡ್ಸ್ ಆಟೋ ಚಾಲಕ ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರ ತಂದೆಗೆ ಹಣೆಗೆ ಎಡಗೈಗೆ,ಎಡಗಾಲಿಗೆ ಪೆಟ್ಟಾಗಿದ್ದು, ಹಿಂಭಾಗದಲ್ಲಿದ್ದ ನೇತ್ರಾವರಿಯವರಿಗೆ ಎಡಗಾಲಿಗೆ, ಎಡಗೈಗೆ ಬಾಯಿಗೆ ಪೆಟ್ಟಾಗಿ ಆಲ್ ಅನ್ಸರ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆಂದು ದೂರು.

ಕೆ.ಆರ್ ಸಂಚಾರ ಠಾಣೆ

ದಿನಾಂಕ 11/12/18 ರಂದು  ರಾತ್ರಿ 0800 ಗಂಟೆ ಸಮಯದಲ್ಲಿ ಫಿರ್ಯಾದಿ ದೊರೆಸ್ವಾಮಿ ರವರು ಮಹೇಂದ್ರ ಎಂಬುವವನು ಶ್ರೀ ಶೈಲ ಹುಮೆನ್ ಕೇರ್ ಆಶ್ರಮಕ್ಕೆ ಸೇರಿದ ಮೊ/ಸೈಕಲ್ ತೆಗೆದುಕೊಂಡು ಹಿಂಭಾಗ ಪಿರ್ಯಾದಿಯವರ ಮಗನನ್ನು ಕೂರಿಸಿಕೊಂಡು ಕೆ.ಇ.ಬಿ. ಜಂಕ್ಷನ್  ಸ್ಥಳದಲ್ಲಿ ಹೋಗುತ್ತಿದ್ದಾಗ ಆರೋಪಿ ಕೆ.ಎ-09 ಸಿ-5970 ರ ಆಟೋ ಚಾಲಕ ಆತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರ ಮಗನಿಗೆ ಕಾಲಿಗೆ ಪಟ್ಟಾಗಿದ್ದು ಕೆ.ಆರ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದು ಸಿಮೆಂಟ್ ಹಾಕಿಸಿಕೊಂಡು ಹೋಗಿದ್ದು, ಆಶ್ರಮದ ಮ್ಯಾನೇಜರ್ ಮತ್ತು ಆಟೋದವರು ಇಬ್ಬರು ಮಾತನಾಡಿ ಹಣ ನೀಡುವುದಾಗಿ  ರಾಜಿ ಮಾಡಿಕೊಂಡಿದ್ದು ಈಗ ಪಿರ್ಯಾದಿಯವರ ತಂದೆ ಆಶ್ರಮಕ್ಕೆ ಹೋಗಿ ಹಣ ಕೇಳಿದರೆ ಹಣವನ್ನು ನಿಡುತ್ತಿಲ್ಲ ಆಟೋದವರು ಹಣ ನೀಡುತ್ತಿಲ್ಲ ಮತ್ತೆ ಮಗನನ್ನು ಆಸ್ಪತ್ರೆ ಕರೆದುಕೊಂಡು ಹೋಗಿ ತೋರಿಸಿದಾಗ ಪರೀಕ್ಷಿಸಿ ನೋಡಿ ಕಾಲು ಕೊಳೆತಂತೆ ಆಗಿರುತ್ತೆ ಕಾಲನ್ನೆ ತೆಗೆಯಬೇಕು ಎಂದು ಹೇಳಿ ಮಂಡಿಯಿಂದ ಮೇಲೆ ಕಾಲನ್ನು ಅಪರೇಷನ್ ಮಾಡಿ ತೆಗೆದಿರುತ್ತಾರೆ. ಅದ್ದರಿಂದ ಸದರಿ ಆಟೋ ಚಾಲಕ ಮಲ್ಲೇಶ್ ಮತ್ತು ಮಹೇಂದ್ರರವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು.

10

ವಂಚನೆ ಪ್ರಕರಣ 

03

ನಜರ್ ಬಾದ್ ಠಾಣೆ

ಪಿರ್ಯಾದುದಾರರಾದ ಮಹದೇವರವರು  ದಿನಾಂಕ: 12/01/2019 ರಂದು, ದಿನಾಂಕ: 12/01/2019 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ನಾನು ಸಿದ್ದಾರ್ಥನಗರದ ವಿನಯಮಾರ್ಗದ ಕಾರ್ಪೋರೇಷನ್ ಬ್ಯಾಂಕ್ ನ ಮುಂಭಾಗ ವಾಕಿಂಗ್ ಮಾಡಿಕೊಂಡು ಹೋಗುವಾಗ ಹಿಂದಿನಿಂದ ಒಬ್ಬ ಅಪರಿಚಿತ ವ್ಯಕ್ತಿ ಬಂದು ನನಗೆ ಸರ್ ನೀವು ಈ ರೀತಿ ಚಿನ್ನ ಹಾಕಿಕೊಂಡು ಓಡಾಡಬಾರದು, ಚಿನ್ನಕ್ಕಾಗಿ ಕೊಲೆ ಮಾಡುತ್ತಾರೆ. ನಾನು ಕ್ರೈಂ ಬ್ರಾಂಚ್ ಪೊಲೀಸ್ ಎಂದು ಹಿಂದಿಯಲ್ಲಿ ಹೇಳಿ ತನ್ನ ಬಳಿ ಇದ್ದ ಗುರುತಿನ ಚೀಟಿಯನ್ನು ತೋರಿಸಿದನು. ನಾನು ನನಗೆ ಹಿಂದಿ ಬರುವುದಿಲ್ಲವೆಂದು ಹೇಳಿದಾಗ ಇಂಗ್ಲೀಷ್ನಲ್ಲಿ ಹೇಳಿ ಆತನಬಳಿ ಇದ್ದ ಖಚರ್ಿಫ್ನನ್ನು ತೆಗೆದು ನಿಮ್ಮ ಬಳಿ ಇರುವ ಚೈನ್ನು, ಉಂಗುರಗಳನ್ನು ತೆಗೆದು ಇದರೊಳಗೆ ಹಾಕಿ ಎಂದು ಹೇಳಿದ ನಾನು ನಿಜ ಇರಬಹುದೆಂದು ನಂಬಿ 15ಗ್ರಾಂನ ಒಂದು ಚೈನ್ನು ಅದರಲ್ಲಿ ಆಂಜನೇಯ ಸ್ವಾಮಿ ದೇವರ ಡಾಲರ್ ಇರುತ್ತದೆ. ಹಾಗೂ 8ಗ್ರಾಂನ ಬಿಳಿ ಅರಳಿನ ಒಂದು ಉಂಗುರ, ಮತ್ತು ಒಂದು 14ಗ್ರಾಂನ ಸಿಂಹದ ತಲೆ ಇರುವ ಒಂದು ಉಂಗುರ ಹಾಗೂ 3ಗ್ರಾಂನ ಆನೆ ಬಾಲದಿಂದ ಮಾಡಿಸಿರುವ ಉಂಗುರ ಇವುಗಳನ್ನು ಆ ಖರ್ಚಿಫ್ನಲ್ಲಿ ಹಾಕಿದೇನು. ಅವನು ಆ ಖರ್ಚಿಫ್ನನ್ನು  1 ನಿಮಿಷದ ನಂತರ ನನಗೆ ವಾಪಸ್ಸ್ ಕೊಟ್ಟು ಇದನನ್ನು ಕೈಯಲ್ಲಿ ಉಷಾರಾಗಿ ಹಿಡಿದು ಕೊಂಡು ಹೋಗಿ ಎಂದು ಕೊಟ್ಟು ಆತನು ಸ್ವಲ್ಪ ದೂರ ಹೋಗಿ ಒಂದು ಮೋಟರ್ ಬೈಕ್ನ್ನು ಹತ್ತಿಕೊಂಡು ಹೋದನು. ನಾನು ಸ್ವಲ್ಪ ಸಮಯ ಬಿಟ್ಟು ಆತನು ನನಗೆ ಕೊಟ್ಟ ಖರ್ಚಿಫನ್ನು  ಬಿಚ್ಚಿ ನೋಡಿದಾಗ ಅದರೊಳಗೆ ಏನು ಇರಲಿಲ್ಲ. ನನಗೆ ಆ ವ್ಯಕ್ತಿ ಪೊಲೀಸ್ ಎಂದು ಸುಳ್ಳು ಹೇಳಿ ನನ್ನನ್ನು ನಂಬಿಸಿ, ಮೋಸ ಮಾಡಿ ನನ್ನ ಬಳಿ ಇದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಈತನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ದೂರು.

ವಿ.ವಿ.ಪುರಂ ಠಾಣೆ

ದಿನಾಂಕ 12/01/19 ರಂದು ಪಿರ್ಯಾದಿ ಕೃಷ್ಣಪ್ರಸಾದ್ ರವರು  ಲಾಯಲ್ ವಲ್ಡ್ ನಿಂದ ಸೂಪರ್ ಮಾಕರ್ೆಟ್ನಿಂದ ಮಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ 3 ಜನ ಅಪರಿಚಿತ ವ್ಯಕ್ತಿಗಳು ಬಂದು ನಾವು ಸಿಬಿಐ ಅಧಿಕಾರಿಗಳು ನಾವು ಡಗ್ಸ್ ಚೆಕ್ ಮಾಡುತ್ತಿದ್ದೇವೆ ನಿಮ್ಮ ಹತ್ತಿರ ಡಗ್ಸ್ ಇದೆಯಾ ಎಂದು ಹೇಳಿ ನನ್ನ ಜೇಬು ಚೆಕ್ ಮಾಡಿ ಪರ್ಸ ಮತ್ತು ಕೈಚೌಕವನ್ನು ತೆಗೆದು ಕತ್ತಿನಲ್ಲಿದ ಚಿನ್ನದ ಚೈನು ಮತ್ತು ಕೈಯಲ್ಲಿದ್ದಉಂಗುರವನ್ನು ತೆಗೆಸಿ ಇಲ್ಲಿ ಹಾಕಿಕೊಳ್ಳಬೇಡಿ ಮನಗೆಗೆ ಹೋಗಿ ಹಾಕಿಕೊಳ್ಳಿ ಎಂದು ಹೇಳಿ ಕೈಚೌಕದಲ್ಲಿ ಹಾಕಿಸಿ ನನ್ನ ಜೇಬಿನಲ್ಲಿ ಇಟ್ಟಿದ್ದು ಅದನ್ನು ಮನೆಗೆ ಬಂದು ತೆಗೆದು ನೋಡಲಾಗಿ ಅದರಲ್ಲಿ ನನ್ನ 6ರಿಂದ 8 ಗ್ವಾಂ ತೂಕದ ಉಂಗುರ ಮತ್ತು 20 ರಿಂದ 25 ಗ್ರಾಂ ತೂಕದ ಚಿನ್ನದ ಸರ ಇರುವುದಿಲ್ಲ.  ನಾವು ಸಿಬಿಐ ಅಧಿಕಾರಿಗಳು ಎಂದು ಹೇಳಿ ನನ್ನ ಚಿನ್ನದ ಓಡವೆಗಳನ್ನು ತೆಗೆದು ಕೊಂಡು ಹೋಗಿ ಮೋಸ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೋಳ್ಳಿ ಎಂದು ದೂರು.

ವಿ.ವಿ.ಪುರಂ ಠಾಣೆ

ದಿನಾಂಕ 12/01/19 ರಂದು 1145ರ ಸಮಯದಲ್ಲಿ ಪಿರ್ಯಾದಿ ಶಿವಲಿಂಗುರವರು  ಕೆಎ-09 ಹೆಚ್.ಎಸ್-5445 ರಲ್ಲಿ ಹೋಗುತ್ತಿರುವಾಗ ಹಿಂದೆಯಿಂದ ಬಂದ ಇಬ್ಬರು ಆಸಾಮಿಗಳು ಪಿರ್ಯಾದಿಯವರನ್ನು ಗಾಡಿ ನಿಲ್ಲಿಸುವಂತೆ ಹೇಳಿ ಹತ್ತಿರ ಬಂದು ನಾವು ಸಿಐಡಿ ಅಧಿಕಾರಿಗಳು ಎಂದು ಹೇಳಿ ಐಡಿ ಕಾರ್ಡ ತೋರಿಸಿ ಮುಂದೆ ಕಳ್ಳತನ ದರೋಡೆ ನಡೆದಿದೆ ನಿಮ್ಮ ಓಡವೆಗಳನ್ನು ಬಿಚ್ಚಿ ಓಳಗೆ  ಇಟ್ಟುಕೋಳ್ಳಿ ಎಂದು ಹೇಳಿ ಅವರ ಕೈಚೌಕ ಪಡೆದು ಕತ್ತಿನಲ್ಲಿದ್ದ 1 ಚಿನ್ನದ ಚೈನು, ಕೈಯಲ್ಲಿದ್ದ 1 ಬ್ರಾಸ್ ಲೈಟ್, ಮತ್ತು ಕೈಬೆರಳಿನಲ್ಲಿದ್ದ 1 ಉಂಗುರವನ್ನು ಬಿಚ್ಚಿಸಿ ಕೈಚೌಕಕ್ಕೆ ಕಟ್ಟಿ ಗಾಡಿ ಡಿಕ್ಕಿಗೆ ಹಾಕಿದ್ದು ನಿಮ್ಮ ಓಡವೆಗಳನ್ನು ನಿಮ್ಮ ಡಿಕ್ಕಿಗೆ ಹಾಕಿದ್ದೇವೆ ಎಂದು ಹೇಳಿ ಕಳುಹಿಸಿದ್ದು ಮನೆಗೆ ಬಂದು ನೋಡಿದಾಗ ನನ್ನ ಚಿನ್ನದ ಅಭರಣಗಳು ಇರುವುದಿಲ್ಲ. ನನಗೆ ಮೋಸ ಮಾಡಿ ಓಡವೆಗಳನ್ನು ಬಿಚ್ಚಿಸಿಕೊಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೋಳ್ಳಿ ಎಂದು ದೂರು.   

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                 MYSURU CITY TRAFFIC VIOLATION CASES

    

                                                DATE  :12-01-2019

SL

NO

          HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

         155

         230

        194

           -  

         100

         679

2

TOTAL NUMBER OF CRR'S

         513

         812

        599

         535

         886

      3,345

3

TOTAL FINE AMOUNT COLLECTED

    58,100

    87,300

   65,400

    57,500

    97,200

 3,65,500

4

POLICE NOTICE ISSUED

           -  

           -  

           -  

           -  

           -  

           -  

5

PARKING TAGS

           -  

           -  

           -  

           -  

           -  

           -  

6

FATAL

           -  

           -  

           -  

           -  

           -  

           -  

7

NON FATAL

           -  

            1

           -  

           -  

           -  

             1

8

INTERCEPTOR CASES

           -  

           -  

 -

           -  

           -  

           -  

9

SUSPENSION OF D.L.

           -  

           -  

           -  

           -  

           -  

           -  

10

Sec 283 IPC CASES

           -  

           -  

           -  

           -  

           -  

           -  

11

Sec 353 IPC CASES

           -  

           -  

           -  

           -  

           -  

           -  

12

TOWING CASES

           41

          13

          15

           -  

           20

           89Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com