ENGLISH   |   KANNADA

Blog



ದಿನಾಂಕ;03.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:04.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 223       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಸರಸ್ವತಿಪುರಂ ಠಾಣೆ

ಮೈಸೂರು ನಗರ, ಕುವೆಂಪುನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜು.ಜಿ.ಸಿ ರವರು ದಿನಾಂಕ 02.02.2019 ರಂದು ರಾತ್ರಿಗಸ್ತು ಉಸ್ತುವಾರಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾತ್ರಿ ಸುಮಾರು 12-35 ಗಂಟೆಯಲ್ಲಿ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಾದಿ ಚೆಕ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಕೆಎ09ಪಿ9809 ರ ಕಾರಿನಲ್ಲಿ ಆರೋಪಿಗಳು ಬಂದು, ಪೊಲೀಸರನ್ನು ನೋಡಿ ಕಾರನ್ನು ತಿರುಗಿಸಿಕೊಂಡು ವೇಗವಾಗಿ ಹೋಗುತ್ತಿದ್ದವರನ್ನು ಅನುಮಾನ ಬಂದು ಇನ್ಸ್ಪೆಕ್ಟರ್ ರಾಜು ರವರು ಮತ್ತು ಅವರ ಸಿಬ್ಬಂದಿಯವರು ಪೊಲೀಸ್ ಜೀಪಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಬ್ಯಾಂಕರ್ಸ್ ಕಾಲೋನಿಯ ಸಾಯಿ ಸರಸ್ವತಿ ಸ್ಕೂಲ್ ಬಳಿ ಹಿಡಿದಾಗ, ಆರೋಪಿಗಳು ಕರ್ತವ್ಯನಿರತ ಪೊಲೀಸ್ ಇನ್ಸ್ಪೆಕ್ಟರ್ ರಾಜು ರವರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿದಾಗ ರಾಜು ರವರು ತಪ್ಪಿಸಿಕೊಂಡಿದ್ದು, ನಂತರ ಆರೋಪಿಗಳೆಲ್ಲರೂ ರಾಜುರವರನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದವರನ್ನು ಇನ್ಸ್ಪೆಕ್ಟರ್ ರಾಜು ರವರು ಮತ್ತು ಎಎಸ್ಐ ಶಿವಣ್ಣ ರವರು, ಸಿಬ್ಬಂದಿಯವರಾದ ಮಾದೇಶ್, ಯೋಗೇಶ್, ಸುರೇಶ್, ಪ್ರವೀಣ್ ರವರು ವಶಕ್ಕೆ ಪಡೆದುಕೊಂಡು ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಉದಯಗಿರಿ ಠಾಣೆ.

ದಿನಾಂಕ31-01-2019 ರಂದು ರಾತ್ರಿ10-00 ಗಂಟೆಯಲ್ಲಿ ಫಿರ್ಯಾದಿ ಶೇಕ್ ಮೊಹಮದ್ ರವರು ತಮ್ಮ ಬಾಬ್ತುಕೆಎ-09-ಎನ್-2205 ನಂಬರಿನ ಹೋಂಡ ಸಿಟಿ ಕಾರನ್ನು ತಮ್ಮ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ದಿನಾಂಕ01-02-2019 ರಂದು ಬೆಳಿಗ್ಗೆ 10-00 ಗಂಟೆಗೆ ಎದ್ದು ನೋಡಿದಾಗ ಕಾರು ಇರಲಿಲ್ಲ. ಎಲ್ಲಾ ಕಡೆ ಹುಡುಕಿ ವಿಚಾರ ಮಾಡಿದರೂ ಸಿಗದ ಕಾರಣ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವ ಅನುಮಾನ ಇದ್ದು, ಕಳ್ಳತನ ಆಗಿರುವ ತಮ್ಮ ಕಾರನ್ನು ಪತ್ತೆಮಾಡಿ, ಕಾನೂನು ಕ್ರಮಜರುಗಿಸಬೇಕೆಂದು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ಸಿದ್ದಾರ್ಥ ನಗರ ಸಂಚಾರ  ಠಾಣೆ

ದಿಃ01.02.2019 ರಂದು ಬೆಳಿಗ್ಗೆ ಸುಮಾರು 09.15 ಗಂಟೆಯಲ್ಲಿ ಪಿರ್ಯಾದಿ  ಸಿಂಧುರವರು ಹೊಸ ಹೊಂಡಾ ಆಕ್ಟೀವಾ ಹಿಂದೆ ಅವರ ಅತ್ತೆ ಮಂಗಳಮ್ಮ ರವರನ್ನು ಕೂರಿಸಿಕೊಂಡು ರಿಂಗ್ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ರಿಂಗ್ ರಸ್ತೆ ಮತ್ತು ಟಿ.ಎನ್ ಪುರ ರಸ್ತೆ ಸೇರುವ ಜಂಕ್ಷನ್ ನಲ್ಲಿ ಹೋಗುತ್ತಿದ್ದ ವೇಳೆ ಟಿ.ಎನ್ ಪುರ ರಸ್ತೆಯಲ್ಲಿ ಆಲನಹಳ್ಳಿ ಕಡೆಯಿಂದ ಕೆಎ.35.ಎನ್.0881 ನಂಬರಿನ ಇಟಿಯೋಸ್ ಕಾರನ್ನು ಅದರ ಚಾಲಕ ತುಂಬಾವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿ ಕೊಂಡು ಬಂದು ಪಿರ್ಯಾದಿಯ ಹೊಂಡಾ ಆಕ್ಟೀವಾಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಮತ್ತು ಹಿಂಬದಿ ಸವಾರರಾದ ಮಂಗಳಮ್ಮ ರವರುಗಳು ಸ್ಕೂಟರ್ ಸಮೇತ ರಸ್ತೆಯ ಮೇಲೆ ಬಿದ್ದು ಹೊಂಡಾ ಆಕ್ಟೀವಾ ಜಖಂಗೊಂಡು ಪಿರ್ಯಾದಿಗೆ ಗದ್ದ, ಎಡಮಂಡಿ, ಕೈಕಾಲುಗಳಿಗೆ ಹಾಗೂ ಅತ್ತೆ ಮಂಗಳಮ್ಮ ರವರಿಗೆ ಹಣೆ, ಮೂಗು, ಕೈಕಾಲು, ಬಲಮಂಡಿಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಜೆ.ಎಸ್.ಎಸ್ ಆಸ್ಪತ್ರೆಗೆ ಕಳುಹಿಸಿದ್ದು ಪಿರ್ಯಾದಿಯವರು ಈ ಅಪಘಾತಕ್ಕೆ ಕಾರಣನಾದ ಕಾರು ಮತ್ತು ಚಾಲಕನ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ನೀಡಿದ ದೂರು.

ಸಿದ್ದಾರ್ಥ ನಗರ ಸಂಚಾರ  ಠಾಣೆ

ದಿಃ-03.02.2019 ರಂದು ಮಧ್ಯಾಹ್ನ 3.30 ಗಂಟೆಯಲ್ಲಿ ಪಿರ್ಯಾದಿ ಚಿಕ್ಕಗಂಡು ರವರು ತಮ್ಮ ಕೆಎ.55.ಎಲ್.5380 ನಂಬರಿನ ಮೋಟಾರ್ ಸೈಕಲ್ ಅನ್ನು ಟಿ.ಎನ್ ಪುರ ರಸ್ತೆಯಲ್ಲಿ ಚಿಕ್ಕಳ್ಳಿ ಗ್ರಾಮದ ದೊಡ್ಡ ಆಲದ ಮರದ ಬಳಿ ಇರುವ ಬುಲೇವಾರ್ಡ್ ಬಡಾವಣೆ ಬಳಿ ಹೋಗುತ್ತಿದ್ದ ವೇಳೆ ಎದುರಿನಿಂದ ಕೆಎ.55.ಎಂ.1372 ನಂಬರಿನ ಕಾರನ್ನು ಅದರ ಚಾಲಕ ತುಂಬಾವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ಬಲಭುಜ ಮತ್ತು ಎಡಕಣ್ಣಿನ ಬಳಿ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಮಹದೇಶ್ವರ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಬಂದು ಸೇರಿಸಿದ್ದು, ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರ ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ಸಿದ್ದಾರ್ಥ ನಗರ ಸಂಚಾರ  ಠಾಣೆ

ದಿನಾಂಕ 03.02.2019 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ ಪಿರ್ಯಾದಿ ಸೈಯದ್ ಶಾಬಜ್ ಮತ್ತು ಅವರ ಸ್ನೇಹಿತರಾದ ಜಿಬ್ರಾನ್ ಹುಸೇನ್ ರವರು ಬೇರೆ ಬೇರೆ ಮೋಟಾರ್ ಸೈಕಲ್ ನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ವಾಪಸ್ಸು ಬರುತ್ತಿದ್ದ ಮಾರ್ಗ ಮಧ್ಯದಲ್ಲಿ ತಾವರೆ ಕಟ್ಟೆ ಗೇಟ್ ಬಳಿ ಪಿರ್ಯಾದಿರವರು ಮುಂದೆ ಹೋಗುತ್ತಿದ್ದ ಅವರ ಸ್ನೇಹಿತ ಜಿಬ್ರಾನ್ ಹುಸೇನ್ ರವರು ಹಿಂದೆ ಮೋಟಾರ್ ಸೈಕಲ್ ನಂಬರ್ ಕೆಎ 05 ಜೆಜಡ್ 4094 ಅನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ಸಮಯದಲ್ಲಿ ಜೋರಾಗಿ ಶಬ್ದ ಬಂದು ವಾಪಸ್ಸು ಪಿರ್ಯಾದಿರವರು ಹಿಂದೆ ಹೋಗಿ ನೋಡಲಾಗಿ ಆವರ ಸ್ನೇಹಿತ ಜಬ್ರಾನ್ ಹುಸೇನ್ ರವರಿಗೆ ಒಂದು ಮಾರುತಿ ಕಾರ್ 800 ನಂಬರ್ ಕೆಎ 09 ಎನ್ 2895 ರ ಚಾಲಕ ಆತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಪಿರ್ಯಾದಿ ಸ್ನೇಹಿತ ಜಬ್ರಾನ್ ಹುಸೇನ್(18 ವರ್ಷ) ರವರು ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ಅವರಿಗೆ ತಲೆ ಮತ್ತು ದೇಹದ ಇತರೆ ಕಡೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗೆ ಗೋಪಾಲ ಗೌಡ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ಫಲಕಾರಿಯಾಗದ ವೃತ ಪಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿರವರು ತಮ್ಮ ಸ್ನೇಹಿತ ಸಾವಿಗೆ ಕಾರಣದ ಡಿಕ್ಕಿಮಾಡಿದ ಕಾರ್ ನಂಬರ್ ಕೆಎ 09 ಎನ್ 2895 ರ  ಚಾಲಕನ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ವಿದ್ಯಾರಣ್ಯಪುರಂ ಠಾಣೆ

ಪಿರ್ಯಾದುದಾರರಾದ  ಕೀರ್ತಿ ಮನೆ.ನಂ. 80/6, ಮಾನಂದವಾಡಿ  ರಸ್ತೆ, ಶಿವಪುರ, ರವರು ದಿನಾಂಕ;-02-02-2019 ರಂದು ರಾತ್ರಿ 1-00 ಗಂಟೆಯ ಸಮಯದಲ್ಲಿ ಯಾರೋ ಒಬ್ಬ ಆಸಾಮಿಯ ಹಸು ಕಟ್ಟಿರುವ ಕೊಟ್ಟಿಗೆ ಬಳಿ ಹಸುವನ್ನು ಬಿಚ್ಚಿಕೊಂಡು ಹೋಗಲು ಪ್ರಯತ್ನ ಪಡುತ್ತಿರುವಾಗ ನಾಯಿಗಳು ಬೊಗಳುತ್ತಿದ್ದದನ್ನು ಕೇಳಿ ಎಚ್ಚರಗೊಂಡು ಕೊಟ್ಟಿಗೆ ಬಳಿ ನೋಡಿದಾಗ ಯಾರೋ 3 ಜನ ಆಸಾಮಿಗಳು ಹಸು ಬಳಿ ಇದ್ದದನ್ನು ನೋಡಿ ಕಿರುಚಿಕೊಂಡಾಗ ಪಿರ್ಯಾದಿಯವರ ಗೆಳೆಯರಾದ ಮಲ್ಲಯ್ಯ, ಭದ್ರ ಮತ್ತು ನಾಗಣ್ಣ ನನ್ನ ಜೊತೆಗೆ ಓಡಿಬಂದು ಆಸಾಮಿಯನ್ನು ಅಟ್ಟಿಸಿಕೊಂಡು ಹೋಗಿ ಜಲವಾಹಿನಿ ಬಳಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡಿದ್ದು ಉಳಿದ E§âgÀÄ ತಪ್ಪಿಸಿಕೊಂಡು ಹೋಗಿರುತ್ತಾರೆ. ಹಿಡಿದಿರುವ ಆಸಾಮಿಯನ್ನು ಪೊಲೀಸರಿಗೆ ಒಪ್ಪಿಸಿ ಠಾಣೆಗೆ ಕರೆತಂದಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕೆಂದು ನೀಡಿದ ದೂರು.

 

 

                               MYSURU CITY TRAFFIC VIOLATION CASES

 

                                                DATE  : 03-02-2019

 SLNO

          HEADS

                             NO. OF CASES

DR

KR

NR

SN

VV

TOTAL

1

TOTAL NUMBER OF FTVRS

         130

         234

 

           -  

           -  

         364

2

TOTAL NUMBER OF CRR'S

         579

         447

        547

         353

         637

      2,563

3

TOTAL FINE AMOUNT COLLECTED

    61,300

    48,100

   55,900

    40,600

    71,200

 2,77,100

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

               1 

 

 1  

7

NON FATAL

           -  

 

           -  

               2

 

                  2 

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           -  

           -  

           -  

           -  

           10

           10



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com