ENGLISH   |   KANNADA

Blogದಿನಾಂಕ;06.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 698       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಎನ್ ಆರ್ ಠಾಣೆ.

ಪಿರ್ಯಾದಿ ಜೋಸ್ಟಿನ್ ಪಿಂಟೋ ರವರು ದಿ;06/02/2019 ರಂದು ರಾತ್ರಿ 0730 ಗಂಟೆಗೆ ನಾಯ್ಡುನಗರದ ದೋಬಿ ಘಾಟ್ ಬಳಿ ಇರುವ ಪಾರ್ಕ್ ಹತ್ತಿರ ಹೋಗುತ್ತಿರುವಾಗ ಎದುರುನಿಂದ ಯಾವುದೋ ಒಂದು ದ್ವಿಚಕ್ರ ವಾಹನದಲ್ಲಿ ಯಾರೋ ಅಪರಿಚಿತರು  ವೇಗವಾಗಿ ಪಿರ್ಯಾದಿ  ಬಳಿ ಬಂದು ತಕ್ಷಣ ಕತ್ತಿಗೆ ಕೈಹಾಕಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪಿರ್ಯಾದಿಯನ್ನು  ಕೆಳಗೆ ತಳ್ಳಿ, ವೇಗವಾಗಿ ಹೊರಟು ಹೋಗಿದ್ದು ನಂತರ ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಉದಯಗಿರಿ ಠಾಣೆ.

ದಿನಾಂಕ;23/01/2019 ರಂದು ಸಂಜೆ 4-00 ಗಂಟೆಯಲ್ಲಿ ಪಿರ್ಯಾದಿ ಮೊಹಮ್ಮದ್ ಖಯೂಂ, #139, 02ನೇ ಹಂತ, ರಾಜೀವ್ ನಗರ ರವರು  ಕುಟುಂಬ ಸಮೇತ ಉದಯಗಿರಿಯಲ್ಲಿರುವ ತಮ್ಮ  ನಾದಿನ ಮನೆಗೆ ತೆರಳಿದ್ದು, ದಿನಾಂಕ;24/01/2019 ರಂದು ಬೆಳಿಗ್ಗೆ 6-00 ಗಂಟೆಗೆ ಮನೆಗೆ ವಾಪಸ್ ಬಂದಾಗ ಮನೆಯ ಮುಂಬಾಗಿಲು ಮತ್ತು ಕಿಟಕಿ ತೆರೆದಿದ್ದು, ಬೆಡ್ ರೂಂಗೆ ಹೋಗಿ ನೋಡಿದಾಗ ಬೀರುವಿನ ಬಾಗಿಲು ತೆರೆದಿದ್ದು, ಯಾವುದೇ ಡ್ಯಾಮೇಜ್ ಆಗಿರದೆ ಬೀರುವಿನಲ್ಲಿಟ್ಟಿದ್ದ 200 ಗ್ರಾಂ ಚಿನ್ನದ ಆಭರಣಗಳು ಮತ್ತು 80 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಯಾರೋ ಕಳ್ಳತನ ಮಾಡಿದ್ದು ಪತ್ತೆ ಮಾಡಿ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ವಿಜಯನಗರ ಠಾಣೆ.

ಪಿರ್ಯಾದಿ ಸೂರ್ಯ ಕಾಂತ್, #162, 22 ನೇ ಮೈನ್, ಬಿ ಬ್ಲಾಕ್ , 3 ನೇ ಹಂತ ವಿಜಯನಗರ  ರವರು ದಿ;03/01/2019 ರಂದು ಸಂಜೆ 0500 ಗಂಟೆಗೆ ತಮ್ಮ ಹರ್ಕ್ಯಲಸ್ ರೋಡಿಯೋ ಕಂಪೆನಿಯ ಸೈಕಲ್ ನ್ನು ನಿಲ್ಲಿಸಿದ್ದು ನಂತರ ನೋಡಲಾಗಿ ಸದರಿ ಸೈಕಲ್‌ ಕಳ್ಳತನವಾಗಿದ್ದು,ಸದರಿ ಸೈಕಲ್ ವಿಜಯನಗರ ಠಾಣೆಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಕ್ರಮ ಜರುಗಿಸಲು ನೀಡಿದ ದೂರು.

ವಿಜಯನಗರ ಠಾಣೆ.

ಪಿರ್ಯಾದಿ ಮಹದೇವ, #14, 03 ನೇ ಹಂತ, ವಿಜಯನಗರ ರವರು ದಿ;04/12/2018 ರಂದು ತಮ್ಮ ಹರ್ಕ್ಯೂಲಸ್ ಟರ್ನರ್ ಸೈಕಲ್ ನ್ನು ಸಂಜೆ ತಮ್ಮ ಮನೆಯ ಬಳಿ ನಿಲ್ಲಿಸಿದ್ದು ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಸದರಿ ಸೈಕಲ್ ವಿಜಯನಗರ ಠಾಣೆಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಕ್ರಮ ಜರುಗಿಸಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:02.02.2019 ರಂದು  ಸಮಯ ಸುಮಾರು 08.00 ಗಂಟೆಯಲ್ಲಿ ಪಿರ್ಯಾದಿ  ಶಶಿಕಲಾ ರವರು ತಮ್ಮ  ಮೋ.ಸೈ.ನಂ. ಕೆಎ-09-ಹೆಚ್ ಪಿ-7174 ಇದರ ಹಿಂಭಾಗ ತಮ್ಮ ಮಗಳು ಸ್ನೇಹ ಅವರನ್ನು ಕೂರಿಸಿಕೊಂಡು ಮೇಟಗಳ್ಳಿ ಕೈಗಾರಿಕ ಪ್ರದೇಶದಲ್ಲಿರುವ  ಫಾಲ್ಕನ್ ಟೈರ್ ಫ್ಯಾಕ್ಟರಿ ಮುಂಭಾಗ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಇದೇ ಸಮಯಕ್ಕೆ ಇವರ ಎದುರುಗಡೆಯಿಂದ ಬಂದ ಕೆಎ-09-ಹೆಚ್ ಎನ್-8123  ನಂಬರ್ ನ ಮೋ.ಸೈ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ರವರು  ಚಾಲನೆ ಮಾಡುತ್ತಿದ್ದ ಮೋ,ಸೈ ಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರು ವಾಹನ ಸಮೇತ ಕೆಳಗೆ ಬಿದ್ದು ಪಿರ್ಯಾದಿಯವರ ತಲೆಯ ಹಿಂಭಾಗ ,ಮೂಗು,ಬಾಯಿ, ಮತ್ತು ಎಡಭಾಗದ ಪೆಕ್ಕೆಗೆ ಪೆಟ್ಟಾಗಿ  ಮತ್ತು ಮಗಳು ಸ್ನೇಹಾಳ ತಲೆ,ಎಡಗಣ್ಣು,ಮತ್ತು ಮುಖಕ್ಕೆ ಪೆಟ್ಟಾಗಿದ್ದ ಅವರನ್ನು ಸಾರ್ವಜನಿಕರ ಸಹಾಯದಿಂದ ಜೆ,ಎಸ್,ಎಸ್, ಆಸ್ಪತ್ರೆಗೆ ದಾಖಲಿಸಿದ್ದು, ಈ ಅಪಘಾತಕ್ಕೆ ಕಾರಣರಾದ  ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿಃ-05.02.2019 ರಂದು 4.30 ಗಂಟೆಯಲ್ಲಿ ಪಿರ್ಯಾದಿ ನರೇಶ್ ಕುಮಾರ್ ರವರ ಪತ್ನಿ ರವರು ಕೆಎ-55ಯು-3096 ನಂಬರಿನ ಜ್ಯೂಪಿಟರ್ ಸ್ಕೂಟರನ್ನು ಜೆ.ಎಸ್.ಎಸ್  ಹತ್ತಿರ ಆನಂದ ಮಾರ್ಗ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಕ್ರಾಸ್ ರಸ್ತೆಯಿಂದ ಕೆಎ=09 ಇಡಬ್ಲ್ಯೂ-8653 ನಂಬರಿನ ಹೊಂಡಾ ಡಿಯೋ ಸ್ಕೂಟರನ್ನು ಅದರ ಸವಾರ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಪತ್ನಿ ಚಾಲನೆ ಮಾಡುತ್ತಿದ್ದ ಜ್ಯೂಪಿಟರ್ ಸ್ಕೂಟರಿಗೆ ಡಿಕ್ಕಿ ಮಾಡಿದ ಪರಿಣಾಮ ಚಂದ ಎಸ್ ಜೈನ್ ರವರು ರಸ್ತೆ ಮೇಲೆ ಬಿದ್ದು ಬೆನ್ನಿಗೆ ಹಾಗೂ ಸೊಂಟಕ್ಕೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ಆದ್ದರಂದ ಸದರಿ ಅಪಘಾತಕ್ಕೆ ಕಾರಣನಾದ ಹೊಂಡಾ ಡಿಯೋ ಸ್ಕೂಟರ್ ಸವಾರನ ವಿರುದ್ದ ಸೂಕ್ತ ಕ್ರಮಕ್ಕೆ ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ಪಿರ್ಯಾದಿ ನಂಜುಂಡಸ್ವಾಮಿ ಸಿಹೆಚ್ ಸಿ-547 ರವರು  ನ್ಯೂ ಕಾಂತರಾಜ ಅರಸ್‌ ರಸ್ತೆಯಲ್ಲಿ  ಅಪಘಾತವಾಗಿರುವ ಬಗ್ಗೆ ಬಂದ ಮಾಹಿತ ಮೇರೆಗೆ ಸ್ಥಳಕ್ಕೆ  ಬಂದು  ವಿಚಾರ ಮಾಡಿದಾಗ ಮಾರುತಿ ಓಮಿನಿ ವ್ಯಾನ್ನ ಚಾಲಕ KA-09-MA-2058  ಬಸವರಾಜು .ಎನ್.ಎಸ್ ಎಂಬುವರು ಬಲ್ಲಾಳ್ ಸರ್ಕಲ್ ಕಡೆಯಿಂದ ವ್ಯಾನಿನಲ್ಲಿ 3-4 ಸ್ಕೂಲ್ ವಿದ್ಯಾರ್ಥಿನಿಯರನ್ನು ಕೂರಿಸಿಕೊಂಡು ಬಂದು ಆರ್.ಎನ್.ಎಂ ಎಂಟರ್ ಪ್ರೈಸ್ ಪಕ್ಕದ ರಸ್ತೆ ಕಡೆಗೆ ಏಕಾಏಕಿ ತಿರುಗಿಸಿದಾಗ  ಅದೇ ಸಮಯಕ್ಕೆ ನೊಂದಣಿ ಸಂಖ್ಯೆ ಇಲ್ಲದ ಹೊಸ ಬಜಾಜ್ ಸಿಟಿ-100 ಮೋಟಾರ್ ಸೈಕಲ್  ಸವಾರ ಪ್ರಜ್ವಲ್ ಎಂಬುವನು ಮೋಟಾರ್ ಸೈಕಲ್‌ ನ್ನು  ನ್ಯೂ ಕಾಂತರಾಜ ಅರಸ್‌ ರಸ್ತೆಯಲ್ಲಿ  ರೈಲ್ವೆಅಂಡರ್ ಬ್ರಿಡ್ಜ್ ಕಡೆಯಿಂದ ತುಂಬಾ ವೇಗವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಮಾರುತಿ ಓಮಿನಿ ವ್ಯಾನ್ನ ಎಡಭಾಗಕ್ಕೆ ಡಿಕ್ಕಿಮಾಡಿಕೊಂಡು ಬಿದ್ದು ಹೋಗಿದ್ದು, ಮೋಟಾರ್ ಸೈಕಲ್ ಸವಾರನ  ಮೈಕೈಗೆ ಏಟಾಗಿದ್ದು ವಿನಾಯಕ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದರಿ ಅಪಘಾತವಾಗಿರುವ ಎರಡೂ ವಾಹನಗಳ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು,

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ವಿ ವಿ ಪುರಂ ಠಾಣೆ.

ದಿನಾಂಕ;23.07.2017 ರಂದು ಜಮೀಲ್ ಪಾಷಾ ಮತ್ತು ದಿನಾಂಕ: 17.09.2017 ರಂದು ಶ್ರೀನಿವಾಸ ರವರುಗಳು ಆನಾರೋಗ್ಯದ ನಿಮಿತ್ತ ಆದಿತ್ಯ ಅಧಿಕಾರಿ ಆಸ್ಪತ್ರೆಯಲ್ಲಿ ತೋರಿಸಲು ಹೋಗಿದ್ದು, ಆ ಸಮಯದಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿನೇಶ್ ಎಂಬುವನು ತಾನೇ ವೈದ್ಯನೆಂದು ಹೇಳಿ ಮೇಲ್ಕಂಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿದ್ದು, ಜಮೀಲ್ ಪಾಷಾ ಮತ್ತು ಶ್ರೀನಿವಾಸ ರವರುಗಳಿಗೆ ಚಿಕಿತ್ಸೆ ನೀಡಿ, ಔಷಧಿ ಚೀಟಿಯನ್ನು ಬರೆದುಕೊಟ್ಟಿದ್ದ, ಸದರಿ ದಿನೇಶ್ ಎಂಬ ವ್ಯಕ್ತಿಯು ತಾನು ವೈದ್ಯನಲ್ಲ ಎಂದು ಗೊತ್ತಿದ್ದರೂ ಸಹ ವೈದ್ಯರಂತೆ ಕರ್ತವ್ಯ ಮಾಡಿ, ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧಿಯನ್ನು ನೀಡುತ್ತಿದ್ದು, ಆದರಿಂದ ರೋಗಿಗಳಿಗೆ ಮುಂದೆ ಯಾವುದಾದರೂ  ತೊಂದರೆಯಾಗಬಹುದೆಂದು ಆದಿತ್ಯ ಅಧಿಕಾರಿ ಆಸ್ಪತ್ರೆಯ ಮೇಲೆ ಮತ್ತು ದಿನೇಶ್ ಎಂಬುವವನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೆ.ಪಿ.ಎಂ.ಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಾಣೀ ಪ್ರಾಧಿಕಾರ) ಮೈಸೂರು ಇಲ್ಲಿಗೆ ಲಿಖಿತವಾಗಿ ದೂರನ್ನು ಸಲ್ಲಿಸಿದ್ದು, ಸದರಿ ದೂರಿನ ಆಧಾರದ ಮೇರೆಗೆ ಕೆ.ಪಿ.ಎಂ.ಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಾಣೀ ಪ್ರಾಧಿಕಾರ) ಸಮತಿಯವರಿಂದ ಆಂತರಿಕ ತನಿಖೆ ನಡೆಸಿ, ತನಿಖಾ ವರದಿಯನ್ನು ಸಹ ನಿರ್ದೇಶಕರು, ವೈದ್ಯಕೀಯ ಬೆಂಗಳೂರು ರವರಿಗೆ ನೀಡಿದ್ದು, ಸಹ ನಿರ್ಧೇಶಕರು, ವೈದ್ಯಕೀಯ ಬೆಂಗಳೂರು ರವರು ಮೈಸೂರು ನಗರದ ಡಿ.ಹೆಚ್.ಓ ರವರಿಗೆ ದಿನೇಶ್ ಎಂಬ ವ್ಯಕ್ತಿಯ ಮೇಲೆ ದೂರನ್ನು ಸಲ್ಲಿಸಲು ಸೂಚಿಸಿದ್ದು, ಆದಿತ್ಯ ಅಧಿಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಹತೆ ಇಲ್ಲದೆ ವೈದ್ಯರಂತೆ ವರ್ತಿಸುತ್ತಿದ್ದ ದಿನೇಶ್ ಎಂಬುವವರ ಮೇಲೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿ ಡಾ. ಉಮೇಶ್ ರವರು ನೀಡಿದ ದೂರು.

 

 

MYSURU CITY TRAFFIC VIOLATION CASES

 

DATE  :06-02-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

140

325

 

-

151

616

2

TOTAL NUMBER OF CRR'S

307

654

376

340

551

2,228

3

TOTAL FINE AMOUNT COLLECTED

32,300

69,700

38,700

35,600

61,500

2,37,800

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

 

-

7

NON FATAL

-

1

-

1

1

3

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

-

-

-

-

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®