ENGLISH   |   KANNADA

Blogದಿನಾಂಕ;09.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 231       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ

ದಿನಾಂಕ 08/02/2019 ರಂದು ಪಿರ್ಯಾದಿ ವಿಜಯ್ ಕುಮಾರ್ ರವರ  ತನ್ನ ಚಿಕ್ಕಪ್ಪ ರವಿ ಮತ್ತು ಅವರ ಮಕ್ಕಳಾದ ಅನೀಲ್ ಮತ್ತು ಪುನೀತ್ ರವರು ಪಿರ್ಯಾದಿಯನ್ನು ಮಾತನಾಡಬೇಕು ಕ್ಯಾತಮಾರನ ಹಳ್ಳಿ ಟೆಂಟ್ ಸರ್ಕಲ್ ಬಳಿ ಬರುವಂತೆ ತಿಳಿಸಿದ್ದು, ಪಿರ್ಯಾದುದಾರರು ಸಂಜೆ ಸುಮಾರು 7-30 ಗಂಟೆಗೆ ಟೆಂಟ್ ಸರ್ಕಲ್ ಹಿಂಭಾಗದ ರಸ್ತೆ, ಬಳಿಗೆ ಬಂದಾಗ ರವಿ, ಅನಿಲ್ ಮತ್ತು ಪುನೀತ್ ರವರು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ರವಿ ಮತ್ತು ಪುನೀತ್ ಇಬ್ಬರು ತಮ್ಮ ಕೈಗಳಿಂದ ಪಿರ್ಯಾದಿಯನ್ನು ತಬ್ಬಿ ಹಿಡಿದುಕೊಂಡು ತಮ್ಮ ಕೈ ಮುಷ್ಟಿಯಿಂದ ಪಿರ್ಯಾದಿಯ ಬಾಯಿಗೆ ಗುದ್ದಿ ಮೈಕೈಗೆ ಬೆನ್ನು ಮತ್ತಿತರ ಕಡೆಗೆ ಹೊಡೆದು ನೋವುಂಟು ಮಾಡಿದ್ದು, ಅನಿಲ್ ಎಂಬಾತನು ಒಂದು ಕಬ್ಬಿಣದ ರಾಡಿನಿಂದ ಪಿರ್ಯಾದಿಯ ಬೆನ್ನು ಮತ್ತಿತರ ಕಡೆಗಳಿಗೆ ಹೊಡೆದು ನೋವುಂಟು ಮಾಡಿ , ನಂತರ ಅನಿಲ್ ಎಂಬಾತನು ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ. ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನಿಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ಉದಯಗಿರಿ ಠಾಣೆ

ದಿನಾಂಕ 01/02/2019 ರಂದು ಬೆಳಿಗ್ಗೆ 11-45 ಗಂಟೆಯಲ್ಲಿ ಪಿರ್ಯಾದುದಾರರಾದ ಅತೀಬುಲ್ಲಾ ಖಾನ್ ರವರ  ತಂಗಿಯ ಮಗ ತಮ್ಮ ಬಾಬ್ತು ಕೆಎ-09- ಇಎಲ್-3616 ನಂಬರಿನ ಬಜಾಜ್ ಪ್ಲಾಟಿನ ದ್ವಿಚಕ್ರ ವಾಹನದಲ್ಲಿ ಉದಯಗಿರಿ ಮಹದೇವಪುರ ರಸ್ತೆ, ಜೆ.ಎಸ್.ಎಸ್. ಶಾಲೆ ಎದುರು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸ್ಕಿಡ್ ಆಗಿ ಬಿದ್ದಿದ್ದು, ನಂತರ ತನ್ನ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿ ಚಿಕಿತ್ಸೆ ಪಡೆದುಕೊಂಡು ನಂತರ ಮದ್ಯಾಹ್ನ ಸುಮಾರು 12-45 ಗಂಟೆಗೆ ವಾಪಸ್ ಬಂದು ನೋಡಿದಾಗ ಸ್ಥಳದಲ್ಲಿದ್ದ ತಮ್ಮ ದ್ವಿಚಕ್ರ ವಾಹನ ಇರಲಿಲ್ಲ. ಅಕ್ಕಪಕ್ಕ ಹುಡುಕಿ ವಿಚಾರಿಸಲಾಗಿ ಸಿಗಲಿಲ್ಲ. ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು  ನೀಡಿದ ದೂರು

ವಿಜಯನಗರ ಠಾಣೆ

ದಿ: 28-07-2018. ರಂದು ಸಂಜೆ 6-00 ಘಂಟೆಯಿಂದ ರಾತ್ರಿ 9-30 ಘಂಟೆಯ ನಡುವೆ ಫಿರ್ಯಾದಿ ವೆಂಕಟೇಶ ರವರು ರೂ: 10,000/- ಬೆಲೆ ಬಾಳುವ ಗ್ಯಾಂಗ್ ರಾಕ್‌ ಗೇರ್ ಸೈಕಲ್‌ ನೀಲಿ ಬಣ್ಣದ್ದು ಇದನ್ನು ಅವರ ಮನೆಯ ಮುಂದೆ ಗೇಟಿನ ಬಳಿ ಅವರ ಮಗ ನಿಹಾರ್‌‌ ನಿಲ್ಲಿಸಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಸೈಕಲ್ ಸಿಗುತ್ತದೋ ಇಲ್ಲವೋ ಎಂದು ದೂರು ನೀಡಿರಲಿಲ್ಲ. ವಿಜಯನಗರ ಪೊಲೀಸರು ಸೈಕಲ್‌ ಕಳ್ಳನನ್ನು ಹಿಡಿದು ಸೈಕಲ್‌ ಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಪೇಪರ್‌‌ ನಲ್ಲಿ ನೋಡಿ ಈ ದಿವಸ ವಿಜಯನಗರ ಪೊಲೀಸ್ ಠಾಣೆಗೆ ಬಂದು ನೋಡಿದಾಗ ಸ್ಟೇಷನ್‌ನ ಆವರಣದಲ್ಲಿ ಹಲವಾರು ಸೈಕಲ್‌ಗಳು ಇದ್ದು ಅದರಲ್ಲಿ ಕಳ್ಳತನವಾಗಿದ್ದ ಅವರ ಸೈಕಲ್ ಇದ್ದು ಅದನ್ನು ನೋಡಿ ಗುರ್ತಿಸಿ ಅದನ್ನು ಕಳ್ಳತನ ಮಾಡಿದ್ದವನ ಹೆಸರು ವೆಂಕಟೇಶ ಎಂದು ಪೊಲೀಸರಿಂದ ತಿಳಿದು ಬಂತು. ಆ ಸೈಕಲ್‌ ಅನ್ನು ಕಳ್ಳತನ ಮಾಡಿರುವ ವೆಂಕಟೇಶನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರ.ವ. ವರದಿ.

ವಿಜಯನಗರ ಠಾಣೆ

ದಿ: 26-01-2019. ರಂದು ರಾತ್ರಿ 9-30 ಘಂಟೆಯಿಂದ ದಿ: 27-01-2019. ರಂದು ಬೆಳಿಗ್ಗೆ 09-30 ಘಂಟೆಯ ನಡುವೆ ಇರ್ಷಾದ್‌ ಎಂಬುವರ ಹೆಸರಿನಲ್ಲಿರುವ ಸುಜುಕಿ ಆಕ್ಸಿಸ್‌ 125 ಸ್ಕೂಟರ್ ನಂ: ಕೆಎ 19 ಇವೈ 6466 ಅನ್ನು ಫಿರ್ಯಾದಿ  ನೌಷದ್ ರವರು  ಅವರ ಮನೆಯ ಮುಂದೆ ಬೀಗ ಹಾಕಿ ನಿಲ್ಲಿಸಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಬೆಲೆ. ಅಂದಾಜು ರೂ: 49,000/- ಗಳಾಗುತ್ತೆ. ಎಲ್ಲಾ ಕಡೆ ಹುಡುಕುತ್ತಿದ್ದ ಕಾರಣ ಮತ್ತು ಕೆಲಸದ ಒತ್ತಡದಲ್ಲಿದ್ದುದ್ದರಿಂದ ಈ ದಿವಸ ತಡವಾಗಿ ದೂರು ನೀಡುತ್ತಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳ್ಳತನವಾಗಿರುವ ಸ್ಕೂಟರ್ ಅನ್ನು ಪತ್ತೆ ಮಾಡಿಕೊಡಬೇಕೆಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರ.ವ. ವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

02

ಮಹಿಳಾ ಠಾಣೆ

ಫಿರ್ಯಾದುದಾರರಾದ ಶ್ರೀಮತಿ ಪರಿಪೂರ್ಣರವರು ಮತ್ತು ಆರೋಪಿ ಮನೋಜ್ ರವರು ಪರಸ್ಪರ ಪ್ರೀತಿಸಿ ದಿನಾಂಕ 07.02.2019 ರಂದು ರಿಜಿಸ್ಟರ್ ಮದುವೆ ಆಗಿರುತ್ತಾರೆ. ಮದುವೆಯಾದ ತಕ್ಷಣದಲ್ಲಿ ಆರೋಪಿ ರವರು ಪಿರ್ಯಾದಿಗೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ  ನೀಡಿದ್ದರಿಂದ ಪಿರ್ಯಾದಿಯು ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನ ಸಂಬಂಧ ಆರೋಪಿ-1 ರವರನ್ನು ಕರೆಯಿಸಿ ವಿಚಾರಣೆ ಮಾಡಿದ್ದು, ವಿಚಾರಣೆ ಮುಗಿಸಿ ಹೊರಗೆ ಬಂದ ತಕ್ಷಣ ಆರೋಪಿ-1 ರವರು ಮತ್ತೆ ಪಿರ್ಯಾದಿಯನ್ನು ಆತನ ಮನೆಗೆ ಕರೆದುಕೊಂಡು ಹೋಗಲು ಒಪ್ಪದೇ ಪಿರ್ಯಾದಿಯ ಮೇಲೆ ದೈಹಿಕ ಹಲ್ಲೆ ನಡೆಯಿಸಿ, ಪ್ರಾಣ ಬೆದರಿಕೆಯನ್ನು ಹಾಕಿದ್ದಲ್ಲದೇ, ಪಿರ್ಯಾದಿಯ ಮೊಬೈಲ್ ಹಾಗೂ 50 ಸಾವಿರ ನಗದನ್ನು ತೆಗೆದುಕೊಂಡು, ಆರೋಪಿಗಳಾದ  ರಂಗಸ್ವಾಮಿ ಹಾಗೂ  ಜಯಮ್ಮ ರವರು ಸಹ ಆರೋಪಿರವರಿಗೆ ಕುಮ್ಮಕ್ಕು ನೀಡಿ, ಮಾನಸಿಕವಾಗಿ ಹಿಂಸೆ ನೀಡಿರುವುದಾಗಿ ಆರೋಪಿ ರವರುಗಳ ವಿರುದ್ದ ಕಾನೂ ನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

 ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಅಮೂಲ್ಯ ರವರು ದಿನಾಂಕ:24.04.2016 ರಂದು  ಆರೋಪಿ ಶರತ್ ಕುಮಾರ್ ಎಂಬುವವರನ್ನು ಗುರುಹಿರಿಯರ ಸಮಕ್ಷಮದಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯಲ್ಲಿ ಆರೋಪಿಗಳ  ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ಮದುವೆಯಾದ ನಂತರ ಪಿರ್ಯಾದುದಾರರು ಆರೋಪಿ-1 ರವರೊಂದಿಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ ರವರು ಸೇರಿಕೊಂಡು ಪಿರ್ಯಾದಿಗೆ ಹೆಚ್ಚಿನ ವರದಕ್ಷಿಣೆಯಾಗಿ ಮೈಸೂರಿನಲ್ಲಿರುವ ಮನೆಯನ್ನು  ಆರೋಪಿ-1 ರವರ ಹೆಸರಿಗೆ ಬರೆಸಿಕೊಂಡು ಬರುವಂತೆ  ಒತ್ತಾಯ ಮಾಡಿ, ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಆರೋಪಿ ರವರು ಪಿರ್ಯಾದಿಗೆ ಬೈದು, ಹೊಡೆದು ಮನೆಯನ್ನು ಬರೆಸಿಕೊಂಡು ಬರುವವರೆಗೆ ಮನೆಗೆ ಬರುವುದು ಬೇಡ ವೆಂದು  ಮನೆಯಿಂದ ಹೊರ ಹಾಕಿದ್ದರಿಂದ ಪಿರ್ಯಾದಿಯು ತಾಯಿ ಮನೆಗೆ ಬಂದಿದ್ದು, ದಿನಾಂಕ:08.04.2018 ರಂದು ಆರೋಪಿರವರುಗಳು ಪಿರ್ಯಾಧಿಯ ತಾಯಿ ಮನೆ ಬಳಿ ಬಂದು  ಪಿರ್ಯಾದಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿ ಬೈದು, ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ಇತ್ಯಾದಿಯಾಗಿ ಆರೋಪಿರವರುಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

9

ರಸ್ತೆ ಅಪಘಾತ

01

ಸಿದ್ಧಾರ್ಥನಗರ ಠಾಣೆ

ದಿನಾಂಕ 05.2.19 ರಂದು ರಾತ್ರಿ 7.00 ಗಂಟೆ ಸಮಯದಲ್ಲಿ ಪಿರ್ಯಾದಿ ಶೇಖರ ರವರ ಮಗಳಾದ ಭೈರವಿ 4 ವರ್ಷ ರವರು ಮನೆ ನಂಬರ್ 445 ಮುಂದೆ ಕ್ಯಾತಮಾರನಹಳ್ಳಿ ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ನಿಂಬೆಹಣ್ಣು ಸರ್ಕಲ್ ಕಡೆಯಿಂದ ಕೆಎ 55 ಇ 0160 ಮೋಟಾರ್ ಸೈಕಲ್ ಸವಾರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಮಗಳಿಗೆ ಡಿಕ್ಕಿಮಾಡಿದ ಪರಿಣಾಮ ಅವರು ರಸ್ತೆ ಮೇಲೆ ಬಿದ್ದು ಎಡಭುಜ ಮತ್ತು ತಲೆಗೆ ಪೆಟ್ಟಾಗಿದ್ದು ಪಿರ್ಯಾದಿ ಮತ್ತು ಅವರ ಹೆಂಡತಿ ಗಾಯಗೊಂಡಿದ್ದ ಮಗಳನ್ನು ಕೆ ಅರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ನಂತರ ಡಿಕ್ಕಿಮಾಡಿದ ಮೋಟಾರ್ ಸೈಕಲ್ ಕಡೆಯವರು ಪಿರ್ಯಾದಿ ಮಗಳಿಗೆ ಎಲ್ಲಾ ಚಿಕಿತ್ಸ ಖರ್ಚನ್ನು ನೀಡಿವುದಾಗಿ ಹೇಳಿ ಹೋದವರು ಯಾರು ಬಾರದೆ ಇದ್ದ ಕಾರಣ ಪಿರ್ಯಾದಿ ರವರು ಈ ದಿನ ಠಾಣೆಗೆ ಬಂದು ತಮ್ಮ ಮಗಳಿಗೆ ಡಿಕ್ಕಿಮಾಡಿದ ಸ್ಕೂಟರ್ ಸವಾರನ ವಿರುದ್ದ ತಡವಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

 

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                      MYSURU CITY TRAFFIC VIOLATION CASES

 

                                        DATE  :09-02-2019

SLNO

           HEADS

                       NO. OF CASES

DR

KR

NR

SN

VV

TOTAL

1

TOTAL NUMBER OF FTVRS

         100

         302

          56

           -  

           -  

         458

2

TOTAL NUMBER OF CRR'S

         265

         565

        290

         397

         633

      2,150

3

TOTAL FINE AMOUNT COLLECTED

    33,500

    69,000

   37,700

    44,800

    77,700

 2,62,700

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

 

           -   

           -  

 

           -  

6

FATAL

           -  

 

           -  

           -  

 

           -  

7

NON FATAL

           -  

 

           -  

             1

           -  

             1

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

         100

         302

          56

           -  

           -  

         458

 

 Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com