ENGLISH   |   KANNADA

Blogದಿನಾಂಕ;12.03.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.03.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 123       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಆಲನಹಳ್ಳಿ ಠಾಣೆ.

ಪಿರ್ಯಾದಿ ಮಂಜುಪ್ರಸಾದ್, #715, 05 ನೇ ಕ್ರಾಸ್, ರಾಜ್ ಕುಮಾರ್ ರಸ್ತೆ  ರವರು ನೀಡಿದ ದೂರೆಂದರೆ, ಪಿರ್ಯಾದಿ ಮಗಳ ಬಳಿ ಇದ್ದ ಮನೆಯ ಬೀಗದ ಕೀ ಮತ್ತು ಸ್ಕೂಟರ್ ಕೀ  ದಿನಾಂಕ:28.02.2019 ರಂದು ಕಾಣೆಯಾಗಿದ್ದು ದಿನಾಂಕ:04.03.2019 ರಂದು ಮನೆಯ ಮುಂಭಾಗದಲ್ಲಿರುವ ತುಳಸಿ ಗಿಡದ ಪಕ್ಕದ ಪಾಟ್ನಲ್ಲಿ ಸಿಕ್ಕಿರುತ್ತದೆ. ದಿನಾಂಕ:11.03.19 ರಂದು ಬೆಳಿಗ್ಗೆ 8-30 ರಂದು ಪಿರ್ಯಾದಿ ಕೆಲಸಕ್ಕೆ ಹೋಗಿದ್ದು, ಪಿರ್ಯಾದಿಯ ಪತ್ನಿಯು ಆಲನಹಳ್ಳಿಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಯೋಗ ಕ್ಲಾಸ್ ಗೆ ಬೆಳಗ್ಗೆ 10:00 ಗಂಟೆಗೆ ತೆರಳಿ ವಾಪಾಸ್ 12:30 ಗಂಟೆಗೆ ಮನೆಗೆ ಬಂದಿರುತ್ತಾರೆ.  ಪಿರ್ಯಾದಿಯ  ಮಗಳು ಸಹ ಬೆಳಿಗ್ಗೆ 8-30 ಗಂಟೆಗೆ ಕಾಲೇಜಿಗೆ ತೆರಳಿರುತ್ತಾರೆ.  ಪಿರ್ಯಾದಿಯ  ಪತ್ನಿಯು ದಿನಾಂಕ:11.03.2019 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಬಟ್ಟೆ ಅಂಗಡಿಗೆ ಹಣ ಸಂದಾಯ ಮಾಡಲು ಬೀರುವಿನಲ್ಲಿಟ್ಟಿದ್ದ 30.000/- ರೂಪಾಯಿಗಳನ್ನು ಕೊಡುವ ಸಲುವಾಗಿ ಬೀರುವಿನ ಬಾಗಿಲನ್ನು ತೆರೆದು ನೋಡಲಾಗಿ ಅದರಲ್ಲಿ ಇಟ್ಟಿದ್ದ 30.000/- ರೂಪಾಯಿ ನಗದು ಹಣ ಕಾಣಿಸದೆ ಇದ್ದುದರಿಂದ  ಬೆಳಿಗ್ಗೆ  6:30 ಗಂಟೆಗೆ ಪಿರ್ಯಾದಿ ಮಗಳನ್ನು ವಿಚಾರ ಮಾಡಿ  ಮಗಳ  ರೂಂನಲ್ಲಿದ್ದ ಬೀರುವಿನಲ್ಲಿ ಹುಡುಕಲಾಗಿ ಬೀರುವಿನಲ್ಲಿದ್ದ ಅಂದಾಜು 30.000/-ಬೆಲೆಯ ಒಂದು ಮುತ್ತಿನ ಸರ, 8 ಗ್ರಾಂ ತೂಕದ ಚಿನ್ನದ ಸರ ಅಂದಾಜು ಮೌಲ್ಯ 20.000/- ರುಪಾಯಿಎರಡು 20 ಗ್ರಾಂ ತೂಕದ ಬಂಗಾರದ  ಬಳೆ  ಅಂದಾಜು ಮೌಲ್ಯ 50.000/-  ರೂಪಾಯಿ ಹಾಗೂ ಒಂದು ಚಿಕ್ಕದಾದ  ವಜ್ರದ ಓಲೆ 15.000/- ರೂಪಾಯಿ ಮೌಲ್ಯದ್ದು, ಈ ಎಲ್ಲಾ ವಸ್ತುಗಳನ್ನು  ಬೀರುವಿಲ್ಲಿಟ್ಟಿದ್ದು, ಯಾರೋ ಕಳ್ಳರು ಈ ಮೇಲ್ಕಂಡ ನಗದು ಮತ್ತು ಆಭರಣಗಳನ್ನು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ. ಕಳ್ಳತನವಾಗಿರುವ ಬಾಬ್ತು 30.000/- ರೂಪಾಯಿ ನಗದು ಹಣ ಮತ್ತು 1,15,000/-ಮೌಲ್ಯದ ಆಭರಣಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರು.

6

ಸಾಮಾನ್ಯಕಳವು

01

ಲಷ್ಕರ್ ಠಾಣೆ.

ಪಿರ್ಯಾದಿ ರೇಷ್ಮ ರವರು ದಿ;08/03/2019 ರಂದು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಒಪ್ಪೊ ಮೊಬೈಲ್ ಫೋನ್ ಅದರ ಬೆಲೆ 12000/- ರೂ ನ್ನು ಯಾರೋ ಕಳ್ಳತನ ಮಾಡಿದ್ದು ಪತ್ತೆ ಮಾಡಿಕೊಡಲು ತಡವಾಗಿ ನೀಡಿದ ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

06

ಎನ್ ಆರ್ ಸಂಚಾರ ಠಾಣೆ.

ದಿನಾಂಕ:11-03-2019 ರಂದು ರಾತ್ರಿ  ಸುಮಾರು 11-45 ಗಂಟೆಯಲ್ಲಿ ಪಿರ್ಯಾದಿ ರಾಜು ರವರು  ತಮ್ಮ ಸ್ಕೂಟರ್ ನಂಬರ್ KA-55 W-8397 ನ್ನು ಚಾಲನೆ ಮಾಡಿಕೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ಪುಷ್ಪಾಶ್ರಮ ಜಂಕ್ಷನ್ ಬಳಿ ಹಳೆ ಕೆಸರೆ ಕಡೆಗೆ ಹೋಗುತ್ತಿದ್ದಾಗ; ಇದೇ ಸಮಯಕ್ಕೆ ಕಾರ್ ನಂಬರ್ KA-09 MB-1340 ರ ಚಾಲಕ ಕಾರನ್ನು ರಿಂಗ್ ರಸ್ತೆಯಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆ ಕಡೆಗೆ ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿ ಮಾಡಿ ಬೀಳಿಸಿದ ಪರಿಣಾಮ ಪಿರ್ಯಾದುದಾರರಿಗೆ ಎಡಗಾಲಿಗೆ, ಎಡಗೈಗೆ, ತಲೆಗೆ, ಮೈ, ಕೈ ಗೆ ಪೆಟ್ಟಾಗಿದ್ದು,  ಡಿಕ್ಕಿ ಮಾಡಿದ ಕಾರ್ ಚಾಲಕ  ಸುರೇಶ್  ರವರು ಅಲ್ಲಿದ್ದವರ ಚಿಕಿತ್ಸೆಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಈ ಅಪಘಾತಕ್ಕೆ ಕಾರಣನಾದ ಕಾರ್  ಚಾಲಕ ಸುರೇಶ್  ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;12.03.19 ರಂದು ಬೆಳಗಿನ ಜಾವ ಸುಮಾರು 3.10 ಗಂಟೆ ಸಮಯದಲ್ಲಿ ಪಿರ್ಯಾದಿ ಮೂರ್ತಿ ರವರು ಅವರ ಸ್ನೇಹಿತ ನಾಗರಾಜ್ ರವರ ಮೋಟಾರ್ ಸೈಕಲ್ ನಂಬರ್ ಕೆಎ-05 ಇವಿ-5943 ರಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಬನ್ನೂರು ರಸ್ತೆ ಕಡೆಯಿಂದ ಮೈಸೂರು ಸಿಟಿ ಕಡೆಗೆ ಕೂಲಿ ಕೆಲಸಕ್ಕೆ ಬರಲು ನಾಗರಾಜ್ ರವರು ಚಾಲನೆ ಮಾಡಿಕೊಂಡ ಹೋಗುತ್ತಿದ್ದ ಸಮಯದಲ್ಲಿ ವಿದ್ಯಾ ವಿಕಾಸ್ ಕಾಲೇಜ್ ಬಳಿ ರಸ್ತೆ ಮೇಲೆ ನಿಂತಿದ್ದ ಲಾರಿ ನಂಬರ್ ಕೆಎ-01 ಎಬಿ- 9019 ಅದರ ಚಾಲಕ ಲಾರಿಗೆ ಇಂಡಿಕೇಟರ್ ಆಗಲಿ ಅಥವ ಪಾರ್ಕಿಂಗ್ ಲೈಟ್ ಅಗಲಿ ಹಾಕದೆ ನಿರ್ಲಕ್ಷತೆಯಿಂದ ರಸ್ತೆ ಮೇಲೆ ನಿಲ್ಲಿಸಿದ್ದು ಹಾಗೂ ದಟ್ಟವಾದ ಕತ್ತಲೆ ಇದ್ದುದರಿಂದ ನಾಗರಾಜ್ ರವರಿಗೆ ಕಾಣೆಸದೆ ಇದ್ದು ಅವರು ಲಾರಿ ಹಿಂಭಾಗದ ಬಾಡಿಗೆ ಡಿಕ್ಕಿಯಾದ ಪರಿಣಾಮ ನಾಗರಾಜ್ ರವರ ತಲೆ ಲಾರಿ ಬಾಡಿಗೆ ಬಡಿದು ಪೆಟ್ಟಾಗಿ ರಕ್ತ ಸ್ರಾವವಾಗಿದ್ದು,  ನಂತರ ಚಿಕಿತ್ಸೆಗೆ  ಕೆ ಅರ್ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್  ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಮಂಡ್ಯ ಬಳಿ ನಾಗರಾಜ್ (43 ವರ್ಷ)ರವರ ಸ್ಥಿತಿ ಗಂಭೀರವಾದ ಕಾರಣ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಬಳಿ ತೋರಿಸಲಾಗಿ  ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯ ಮೃತ ಪಟ್ಟಿರುವುದಾಗಿ ತಿಳಿಸಿದ್ದು,  ಈ ಆಪಘಾತಕ್ಕೆ ಕಾರಣನಾದ ಲಾರಿ ಮತ್ತು ಅದರ ಚಾಲಕ ಸಿದ್ದಲಿಂಗಸ್ವಾಮಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮಕ್ಕೆ ಜರುಗಿಸಬೇಕೆಂದು ನೀಡಿದ ದೂರು,

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;12.03.2019 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಪಿರ್ಯಾದಿ ಇಕ್ಬಾಲ್ ಪಾಷಾ ರವರ ತಂದೆ ಮಹಮ್ಮದ್ ಹಸನ್ 60 ವರ್ಷ ರವರು ಸಿಟಿ ಬಸ್ಸಿಗಾಗಿ ಕಾಯುತ್ತ ಮಹದೇವಪುರ ಮುಖ್ಯ ರಸ್ತೆ ನಿಹಾ ಮಡಿಕಲ್ಸ್ ಶಾಂತಿನಗರ ಮುಂದೆ ನಿಂತಿದ್ದಾಗ ಸಾತಗಳ್ಳಿ ಡಿಪೋ ಕಡೆಯಿಂದ ಕೆಎಸ್ಅರ್ ಟಿ ಸಿ ಬಸ್ ನಂಬರ್ ಕೆಎ- 09 ಎಫ್ 4976 ರ ಚಾಲಕ  ಪಿರ್ಯಾದಿ ತಂದೆಯವರು ಕೈ ತೋರಿಸಿದಾಗ  ಬಸ್ಸನ್ನು  ನಿಲ್ಲಿಸಿದ್ದು ಪಿರ್ಯಾದಿ ತಂದೆಯವರು ಬಸ್ಸನ್ನು ಹತ್ತುತ್ತಿದ್ದ ಸಮಯದಲ್ಲಿ ಬಸ್ಸಿನ ಚಾಲಕ ಎಕಾಏಕಿ ಬಸ್ಸನ್ನು ಮುಂದಕ್ಕೆ ಚಾಲನೆ ಮಾಡಿದ ಪರಿಣಾಮ ಪಿರ್ಯಾದಿ ತಂದೆಯವರು ನಿಯಂತ್ರಣ ತಪ್ಪಿ ಪ್ಪಿ ಬಸ್ಸಿನಿಂದ ರಸ್ತೆ ಮೇಲೆ ಬಿದ್ದುದರಿಂದ ಅವರ ಎರೆಡು ಕಾಲುಗಳ ಪಾದಗಳ ಮೇಲೆ ಬಸ್ಸಿನ ಎಡಹಿಂಭಾಗದ ಚಕ್ರ ಹರಿದು ತೀವ್ರ ಸ್ವರೂಪದ ಗಾಯವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಲ್ ಅನ್ಸರ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ  ಮೃತ ಪಟ್ಟಿದ್ದು ಸದರಿ ಬಸ್ ಚಾಲಕನ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ:10-03-19 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಪಿರ್ಯಾದಿ ಮಹದೇವು ರವರು  ವಿವೇಕ ಎಂಬ ಹುಡುಗನ ಜೊತೆ ಅವರ ಆಕ್ಸಿಸ್‌ ಸ್ಕೂಟರ್‌ ನಂ. KA-09-HQ-8132 ರಲ್ಲಿ ವಿವೇಕಾನಂದ ಸರ್ಕಲ್ ಕದಂಭ ವೈನ್ಸ್‌ ಅಂಗಡಿ ಎದುರುಗಡೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ನಿಮಿಷಾಂಭ ಲೇಔಟ್‌‌, 7 ನೇ ಕ್ರಾಸ್‌ ರಸ್ತೆ ಕಡೆಯಿಂದ ಮಾರುತಿ ಸುಜುಕಿ ಕಾರ್ ನಂ. KA-01-MC-1343 ಚಾಲಕ ರವಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಸ್ಕೂಟರ್‌ನ ಎಡಭಾಗಕ್ಕೆ ಡಿಕ್ಕಿ ಮಾಡಿದಾಗ ಪಿರ್ಯಾದಿ ಮತ್ತು ವಿವೇಕ ಇಬ್ಬರು ಸ್ಕೂಟರ್‌ ಸಮೇತ ಕೆಳಗೆ ಬಿದ್ದಾಗ, ವಿವೇಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಪಿರ್ಯಾದಿಯ ಎಡಗಾಲಿಗೆ ಪೆಟ್ಟಾಗಿದ್ದವರನ್ನು ಕಾರಿನ ಚಾಲಕ ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗಾಗಿ ಭಾನವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ಸದರಿ ಕಾರ್ ಚಾಲಕನ ವಿರುದ್ದ ಕ್ರಮ ಜರುಗಿಸಲು ತಡವಾಗಿ ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ: 09-03-2019 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಪಿರ್ಯಾದಿ ಮಹದೇವಮ್ಮ ರವರು ಟೆಲಿಕಾಂ ಬಡಾವಣೆ , ಪಿ.ಎಸ್‌.ಪ್ಲಾಜಾ ಮುಂಭಾಗ ಎಸ್‌‌ಜೆಸಿಇ ರಸ್ತೆಯನ್ನು ನಡೆದುಕೊಂಡು ಪೂರ್ವದಿಂದ ಪಶ್ಚಿಮದ ಕಡೆಗೆ ದಾಟುತ್ತಿದ್ದಾಗ ಅವರ ಎಡಭಾಗದಿಂದ ಬಿಸಿಲು ಮಾರಮ್ಮ ದೇವಸ್ಥಾನದ ಕಡೆಯಿಂದ ಸ್ಪೀಚ್‌ ಅಂಡ್‌ ಹಿಯರಿಂಗ್‌ ಕಡೆಗೆ ರಾಯಲ್‌ ಎನ್‌‌ಫೀಲ್ಡ್‌ ಮೋಟಾರ್ ಸೈಕಲ್‌ ನಂ. KA-09-HF-1505 ಸವಾರ ಹಿಮಾನ್ಸು ವಿಕ್ರಂ ಶರ್ಮ ಬುಲೆಟ್‌‌ನ್ನು ವೇಗವಾಗಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಮಾಡಿದಾಗ ಅವರು ರಸ್ತೆಯಲ್ಲಿ ಬಿದ್ದು ಮೈ,ಕೈ,ಕಾಲು ಮತ್ತು ತಲೆಗೆ ಪೆಟ್ಟಾಗಿದ್ದು, ಶಿವಣ್ಣ ಎಂಬುವರು ಡಿಕ್ಕಿ ಮಾಡಿದ ಸವಾರ ಮತ್ತು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗಾಗಿ ಸಿಗ್ಮಾ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:10.03.2019 ರಂದು ರಾತ್ರಿ 8.40 ಗಂಟೆಯಲ್ಲಿ ಪಿರ್ಯಾದಿ ರಾಘವೇಂದ್ರ ರವರ ತಂದೆ ರಾಜು ರವರು ಬೈಕ್ ನಂ. ಕೆಎ-09-ಇಎಲ್-1970 ಹೊಂಡಾ ಆಕ್ಟಿವಾ ಬೈಕ್ನಲ್ಲಿ ತಮ್ಮ ಹೆಂಡತಿ ಶಕುಂತಲಾ ರವರನ್ನು ಕೂರಿಸಿಕೂಂಡು  ಆರ್.ಎಮ್. ಪಿ ರಸ್ತೆ ರಿಂಗ್ ರೋಡ್ ವಿಜಯನಗರ 4 ನೇ ಹಂತದ ಬಳಿ ಚಾಲನೆ ಮಾಡಿಕೊಂಡು ಹೋಗುತಿದ್ದಾಗ ಇದೇ ಸಮಯಕ್ಕೆ  ಲಾರಿ ನಂ. ಕೆ ಎ-10 ಎ -1445 ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ತಂದೆ ತಾಯಿಗೆ ಬಲವಾದ ಪೆಟ್ಟು ಆಗಿರುತ್ತದೆ. ರಾಜು ರವರ ತಲೆಗೆ ಬಲಕೈ ಬಲಗಾಲಿಗೆ & ತಾಯಿ ಶಕುಂತಲಾರವರಿಗೆ ತಲೆಗೆ ಬೆನ್ನಿಗೆ ಪೆಟ್ಟಾಗಿದ್ದು  ಗಾಯಾಳಗಳಿಬ್ಬರೂ ಬೃಂದಾವನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು  ಪಡೆಯುತ್ತಿದ್ದು, ಈ ಅಪಘಾತಕ್ಕೆ ಕಾರಣರಾದ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :12-03-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

120

-

170

-

-

290

2

TOTAL NUMBER OF CRR'S

411

768

500

488

713

2,880

3

TOTAL FINE AMOUNT COLLECTED

43,900

 

51,200

49,400

77,900

2,22,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

1

-

1

7

NON FATAL

-

2

1

1

-

4

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com