ENGLISH   |   KANNADA

Blogದಿನಾಂಕ;14.03.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:15.03.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 125       No of Comments: 0

1

ಕೊಲೆ ಪ್ರಕರಣ

01

ಉದಯಗಿರಿ ಠಾಣೆ.

ದಿನಾಂಕ:13/03/2019 ರಂದು ಪಿರ್ಯಾದಿ ಪಿಸಿ-1057 ಇಲಿಯಾಜ್ ಅಹಮದ್ ಮತ್ತು ಹೆಚ್.ಜಿ 1179 ಸುರೇಶ್.ಎಸ್ ರವರು ಗಸ್ತು ಮಾಡಿಕೊಂಡು ರಾತ್ರಿ ಸುಮಾರು 23-45 ಗಂಟೆಗೆ ರಾಜೀವನಗರ 2 ನೇ ಹಂತ, ಸಿದ್ದಪ್ಪಾಜಿ ದೇವಸ್ಥಾನದ ಹತ್ತಿರ ದೊಡ್ಡ ಮೋರಿ ಪಕ್ಕ ಇರುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಜನರ ಗುಂಪು ಇದ್ದು ಏನೆಂದು ಹೋಗಿ ನೋಡಿದಾಗ 20-25 ವರ್ಷ ವಯಸ್ಸಿನ ಒಬ್ಬ ಗಂಡಸಿನ ಲಾಷು ಬಿದ್ದಿದ್ದು, ಬಲಹಣೆಯ ಮೇಲೆ ತಲೆಯಿಂದ ಕಿತ್ತು ಹರಿದಂತೆ ರಕ್ತಗಾಯವಾಗಿದ್ದು ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದು, ಮೃತನ ಲಾಷಿನ ಸ್ಥಿತಿಗತಿಗಳಿಂದ ಯಾರೋ ದುಷ್ಕರ್ಮಿಗಳು ಸದರಿ ಅಪರಿಚಿತ ಗಂಡಸಿನ ತಲೆಯ ಬಲಭಾಗ ಹಣೆಯ ಬಳಿ  ಯಾವುದೋ ಬಲವಾದ ಆಯುಧದಿಂದ ಹೊಡೆದು ರಕ್ತಗಾಯವುಂಟುಮಾಡಿ ಕೊಲೆ ಮಾಡಿರುವುದಾಗಿ ಕಂಡು ಬಂದಿದ್ದು ಈ ಬಗ್ಗೆ ಕ್ರಮ ಜರುಗಿಸಬೇಕಂದು ನೀಡಿದ ದೂರು.

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ವಿದ್ಯಾರಣ್ಯಪುರಂ ಠಾಣೆ.

ದಿ;14/03/2019 ರಂದು ಪಿರ್ಯಾದಿ ಮೇರಿ ಅಮೇಲಿಯಾ ರವರು ಮದ್ಯಾಹ್ನ 0135 ರಿಂದ 0200 ಗಂಟೆಯ ನಡುವೆ ಎಸ್ ಜೆ ರಸ್ತೆ 06 ನೇ ಮುಖ್ಯ ರಸ್ತೆ, ವಿದ್ಯಾರಣ್ಯಪುರಂ ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ಅಪರಿಚಿತ ವ್ಯಕ್ತಿ ಹೆಲ್ಮೆಟ್‌ ಧರಿಸಿಕೊಂಡು ಕಪ್ಪು ಬಣ್ಣದ ಮೋಟಾರ್‌ ಸೈಕಲ್‌ನಲ್ಲಿ ಎದುರುಗಡೆಯಿಂದ ಬಂದು ಪಿರ್ಯಾದಿಯ ಕತ್ತಿನಲ್ಲಿದ್ದ ಸುಮಾರು 20 ಗ್ರಾಂ ತೂಕವಿರುವ ಚಿನ್ನದ ಸರ ಜೊತೆಗೆ ಒಂದು ಡಾಲರ್ ಸಹ ಇರುತ್ತದೆ, ಕಿತ್ತುಕೊಂಡು ಹೋಗಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ವಿ ವಿ ಪುರಂ ಠಾಣೆ.

ಪಿರ್ಯಾದಿ  ಕಿಶೋರ್ ಹೆಬ್ಬಾರ್, #10, ಪರಮಹಂಸ ರಸ್ತೆ, ಯಾದವಗಿರಿ  ರವರು ನೀಡಿದ ದೂರೆಂದರೆ ದಿನಾಂಕ:13.03.2019 ರಂದು ರಾಮಚಂದ್ರ ರವರು ಪಿರ್ಯಾದಿಗೆ  ಪೋನ್ ಮಾಡಿ ನಿಮ್ಮ ಮನೆಯ ಮುಂಬಾಗಿಲನ್ನು ಮೀಟಿ ಓಳ ಪ್ರವೇಶಿಸಿ ಯಾರೋ ಕಳ್ಳತನ ಮಾಡಿರುತ್ತಾರೆಂದು ತಿಳಿಸಿದ್ದು ಕೂಡಲೇ ಮನೆಗೆ ಬಂದು ಪರಿಶೀಲಿಸಲಾಗಿ 1)ಸಿ.ಸಿ.ಟಿ.ವಿ ಡಿ.ವಿ.ಆರ್ 2)ಬಿ.ಎಸ್.ಎನ್.ಎಲ್ ಮೋಡಂ 3)ಮನೆಯೊಳಗಿದ್ದ ಎರಡು ವೈ ಫೈ ಕ್ಯಾಮಾರಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

6

ಸಾಮಾನ್ಯಕಳವು

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ತೆಂಜಿನ್, #34, 06 ನೇ ಮೈನ್, 12 ನೇ ಕ್ರಾಸ್, ಸರಸ್ವತಿಪುರಂ  ಹಾಗೂ ಅವರ ಸ್ನೇಹಿತರುಗಳು ದಿನಾಂಕ: 19/12/2018 ರಂದು ರಾತ್ರಿ ಸಮಯ 10.00 ಗಂಟೆಯಲ್ಲಿ ಮನೆಯ ವರಾಂಡದಲ್ಲಿ ಊಟ ಮಾಡಲು ಕುಳಿತಿದ್ದು, ಆನಂತರ 11.00 ಗಂಟೆಗೆ ಎದ್ದು ಮನೆಯ ರೂಮಿಗೆ ಬಂದು ನೋಡಲಾಗಿ ರೂಮ್‌‌‌ನಲ್ಲಿಟ್ಟಿದ್ದ 1) ಆಪಲ್‌‌‌ ಕಂಪನಿಯ ಐ ಫೋನ್‌ ಎಕ್ಸ್‌‌‌‌‌‌‌ ಮೊಬೈಲ್‌‌‌‌‌‌‌‌‌‌‌‌‌‌, 2) ಆಪಲ್‌‌‌‌‌ ಐ ಫೋನ್‌‌‌‌‌‌ 6 ಮೊಬೈಲ್‌‌‌‌‌‌ ಹಾಗೂ 3) ಆಪಲ್‌‌ ಮ್ಯಾಕ್‌‌ಬುಕ್‌‌‌‌‌ ಕಂಪನಿಯ ಲ್ಯಾಪ್‌‌ಟಾಪ್‌‌‌ ಕಳ್ಳತನವಾಗಿದ್ದು, ಅವುಗಳ ಒಟ್ಟ ಮೌಲ್ಯ 75,000 ರೂಗಳಾಗಿದ್ದು, ಪತ್ತೆಮಾಡಿಕೊಡಬೇಕೆಂದು ನೀಡಿದ ದೂರು.

7

ವಾಹನ ಕಳವು

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ರಾಮೇಗೌಡ. #108, ಡಿ ಬ್ಲಾಕ್, ಆನಂದನಗರ  ರವರು  ತಮ್ಮ  ಹೋಂಡಾ ಆಕ್ಟಿವಾ ಸ್ಕೂಟರ್ ನಂ. ಕೆಎ-09 ಹೆಚ್‌‌‌ಜಿ-5300 ಅನ್ನು ದಿನಾಂಕ: 18/02/2019 ರಂದು ಎಂದಿನಂತೆ ಸಂಜೆ 5.30 ಗಂಟೆಗೆ ಮನೆಯ ಮುಂದೆ ಸ್ಕೂಟರ್‌‌ಗೆ ಬೀಗ ಹಾಕಿ ನಿಲ್ಲಿಸಿ ಮನೆಯೊಳಗೆ ಹೋಗಿದ್ದು, ನಂತರ ರಾತ್ರಿ 9.00 ಗಂಟೆಗೆ ನೋಡಲಾಗಿ ಬೈಕ್ ಕಾಣೆಯಾಗಿದ್ದು, ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ಮುಬೀನ್ ತಾಜ್, #437, ಎಂ ಐ ಜಿ-02, 04 ನೇ ಕ್ರಾಸ್, 01 ನೇ ಹಂತ ರಾಜೀವ್ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ಪಿರ್ಯಾದುದಾರರು ದಿನಾಂಕ: 06.04.1997 ರಂದು ಆರೋಪಿ-1 ಅಕ್ಬರ್ ಜಲಾಲುದ್ದೀನ್ ರವರನ್ನು  ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1 ರವರ ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ನೀಡಿರುತ್ತಾರೆ. ಮದುವೆಯ ನಂತರ ಆರೋಪಿ-1 ರವರು ಬೈಕ್ ಕೊಡಿಸುವಂತೆ ಹಿಂಸೆ ನೀಡುತ್ತಿದ್ದು, ಪಿರ್ಯಾದಿಯು ಸಾಲ ಮಾಡಿ ತೆಗೆದುಕೊಟ್ಟಿದ್ದು, ನಂತರದಲ್ಲಿ ಮೆಡಿಕಲ್ ಸ್ಟೋರ್ ಹಾಗೂ ವ್ಯಾಪಾರ ಮಾಡಲು ಪಿರ್ಯಾದಿಯಿಂದ ಹಣ ಪಡೆದು, ಆರೋಪಿ-1 ರವರು ಬೇರೆ ಹೆಂಗಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಪಿರ್ಯಾದಿಗೆ ಹಾಗೂ ಮಕ್ಕಳಿಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದು, ಇದಕ್ಕೆ ಆರೋಪಿ-2 ಮಜರ್ ಪಾಶ ಹಾಗೂ ಆರೋಪಿ-3 ಸಲ್ಮಾ ಖಾನಂ ರವರುಗಳು ಸಹ ಕುಮ್ಮಕ್ಕು ನೀಡಿರುವುದಾಗಿ ಸದರಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

9

ರಸ್ತೆ ಅಪಘಾತ

03

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:11.03.2019 ರಂದು ಸಂಜೆ 7.00 ಗಂಟೆಯಲ್ಲಿ ಪಿರ್ಯಾದಿ ನಾಗೇಶ್ ರವರ ಭಾವ ರಮೇಶ್ ಎಂಬುವವರು ತಮ್ಮ ಮೊ.ಸೈ.ನಂ. ಕೆಎ-11 ಕೆ-7203 ಇದನ್ನು ಹೆಬ್ಬಾಳ್ ರಿಂಗ್ ರಸ್ತೆಯಲ್ಲಿ ಶುಭೋದಿನಿ ಛತ್ರದ ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಇದೇ ಸಮಯಕ್ಕೆ ಲಾರಿ ನಂ. ಕೆಎ-09 ಡಿ 5871 ರ ಚಾಲಕ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಮೇಶ್ ರವರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ರಮೇಶ್ ರವರ ಬಲ ಕಾಲಿನ ಮೂಳೆ ಮುರಿದು ಹೋಗಿದ್ದು ತಕ್ಷಣ ಸಾರ್ವಜನಿಕರ ಸಹಾಯದಿಂದ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಆದುದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ನಂಬರಿನ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:11.03.2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಪಿರ್ಯಾದಿ ವಿದ್ವತ್ ರಾಜ್ ರವರು ಮೊ.ಸೈ.ನಂ. ಕೆಎ-09 ಇಆರ್-3002 ಇದರಲ್ಲಿ ಹಿಂಬದಿ ಸವಾರರಾಗಿ ಕುಳಿತಿದ್ದು  ಚರಣ್ ರಾಜ್  ಮೊ.ಸೈ ಚಾಲನೆ ಮಾಡುತ್ತಿದ್ದು ಮೊ.ಸೈಕಲನ್ನು ಜಯಲಕ್ಷ್ಮೀಪುರಂ 4 ನೇ ಅಡ್ಡರಸ್ತೆಯ ಜಂಕ್ಷನ್ ಬಳಿ ಹೋಗುತ್ತಿದ್ದಾಗ ಮೊ.ಸೈಕಲ್ ನಂ. ಕೆಎ-13 ಇಕೆ 0309 ಇದನ್ನು ಅದರ ಚಾಲಕ ಶ್ರೇಯಸ್ ಪಟೇಲ್ ಎಂಬುವವನು ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಚರಣ್ ರಾಜ್ ಚಾಲನೆ ಮಾಡುತ್ತಿದ್ದ ಮೊ.ಸೈಕಲ್ ಗೆ  ಡಿಕ್ಕಿ ಮಾಡಿದ್ದರಿಂದ ಚರಣ್ ರಾಜ್  ಬಲದ ಕಾಲಿನ ಪಾದದ ಮೂಳೆ ಮುರಿದು ಚಿಕಿತ್ಸೆಗಾಗಿ ಡಿ.ಆರ್.ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸದರಿ ಬೈಕ್ ಸವಾರ ಶ್ರೇಯಸ್ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ದಿನಾಂಕ;14/03/2019 ರಂದು ಬೆಳಗಿನ ಜಾವ  ಸುಮಾರು 05.35 ಗಂಟೆಯಲ್ಲಿ ಪಿರ್ಯಾದಿ ದೇವರಾಜೇಗೌಡ ರವರು ಶ್ರೀಯ ಕಂಫರ್ಟ್ ಎದುರು ಹೋಗುತ್ತಿದ್ದಾಗ ರಸ್ತೆಯ ಎಡಭಾಗದ  ಫುಟ್ ಪಾತ್ ಅಂಚಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗಾಯಗೊಂಡು ಬಿದ್ದಿದ್ದವನನ್ನು ನೋಡಲಾಗಿ ತಲೆಯಲ್ಲಿ ಗಾಯವಾಗಿದ್ದು ತಲೆಯಿಂದ ರಕ್ತ ಹರಿದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.  ಸ್ಥಳಕ್ಕೆ ಬಂದ ಚೆಕ್ ಪೋಸ್ಟ್ ಪೊಲೀಸರು ಅಲ್ಲಿದ್ದವರನ್ನು ವಿಚಾರ ಮಾಡಲಾಗಿ ಅಪರಿಚಿತ ವಾಹನದ ಚಾಲಕ  ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಮಾಡಿ ಬೀಳಿಸಿ ಹೊರಟು ಹೋಗಿರುವುದಾಗಿ ತಿಳಿಸಿದರು. ನಂತರ ಪೊಲೀಸರ ಸಹಾಯದಿಂದ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಈ ಅಪಘಾತದ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

01

ದೇವರಾಜ ಠಾಣೆ.

ಪಿರ್ಯಾದಿ ಮಹದೇವ ಸ್ವಾಮಿ ರವರು ಶಿವರಾಂ ಪೇಟೆಯಲ್ಲಿರುವ ಶ್ರೀರಾಂ ಸಿಟಿ ಯೂನಿಯನ್ ಫೈನಾನ್ಸ್ ನಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದು, ಈ ಕಂಪನಿಯಲ್ಲಿ ಆರೋಪಿ ಧನಂಜಯ್ಯ ಎಂಬುವರು ಚಿನ್ನಾಭರಣ ಪರಿಶೋಧಕರಾಗಿದ್ದು, ಆರೋಪಿ ಮಂಜುನಾಥ್ ಎಂಬುವರು ಕಿರಿಯ ಸಹಾಯಕ ವ್ಯವಸ್ಥಾಪಕ ಚಿನ್ನಾಭರಣ ವಿಭಾಗ ದವರಾಗಿದ್ದು, ಇವರುಗಳು ಒಳಸಂಚು ನಡೆಸಿಕೊಂಡು ನಕಲಿ ಚಿನ್ನಾಭರಣಗಳನ್ನು ಗಿರಿವಿ ಇಟ್ಟುಕೊಂಡು 4,23398/-ರೂ ಹಣವನ್ನು ಕಂಪನಿಯಿಂದ ಬಿಡುಗಡೆ ಮಾಡಿ, ಕಂಪನಿಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆಂದು ದಿ;14/03/2019 ರಂದು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :14-03-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

         135

            -  

           55

            -  

         272

         462

2

TOTAL NUMBER OF CRR'S

         472

         735

         479

         560

         711

      2,957

3

TOTAL FINE AMOUNT COLLECTED

    50,200

 

    48,500

    59,500

    78,400

 2,36,600

4

POLICE NOTICE ISSUED

            -  

            -  

           -  

            -  

 

            -  

5

PARKING TAGS

            -  

 

           -  

            -  

 

            -  

6

FATAL

            -  

 

             1

            -  

            -  

             1

7

NON FATAL

            -  

 

 

             1

            -  

             1

8

INTERCEPTOR CASES

            -  

            -  

 -

            -  

 

            -  

9

SUSPENSION OF D.L.

            -  

            -  

           -  

            -  

 

            -  

10

Sec 283 IPC CASES

            -  

            -  

           -  

            -  

 

            -  

11

Sec 353 IPC CASES

            -  

            -  

           -  

            -  

 

            -  

12

TOWING CASES

            -  

 

           -  

            -  

            -  

            -  Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com