ENGLISH   |   KANNADA

Blogದಿನಾಂಕ;11.04.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.04.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 150       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

04

ವಿಜಯನಗರ ಠಾಣೆ.

ಪಿರ್ಯಾದಿ ಡಾ. ರಾಜೀವ್, #832, 01 ನೇ ಫೇಸ್, 04 ನೇ ಹಂತ ವಿಜಯನಗರ ರವರು ನೀಡಿದ ದೂರೆಂದರೆ, ದಿ;09/04/2019 ಮದ್ಯಾಹ್ನ 0200 ಗಂಟೆಯಿಂದ ದಿ;11/04/2019 ರ ನಡುವೆ ಯಾರೋ ಕಳ್ಳರು ಪಿರ್ಯಾದಿ ರವರ ಮನೆಯ ಮುಂಬಾಗಿಲಿನ ಪಕ್ಕದ ಗ್ರಿಲ್ ಡೋರ್ ಅನ್ನು ಮೀಟಿ ತೆಗೆದು ಅದರ ಮೂಲಕ ಒಳಗೆ ಹೋಗಿ ಡೈನಿಂಗ್‌ ಹಾಲ್‌‌‌‌‌‌ನ ಬಾಗಿಲನ್ನು ಮೀಟಿ ತೆಗೆದು ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್‌‌ರೂಂಗಳಲ್ಲಿ ಮತ್ತು ನೆಲ ಮಹಡಿಯ ಸೇಫ್‌ ಲಾಕರ್‌‌ನಲ್ಲಿಟ್ಟಿದ್ದ ನಗದು ಹಣ ರೂ: 11,00,000/-, 30 ವಾಚ್ ಗಳು & 04 ರಿಂದ 05 ಕೆಜಿ ಚಿನ್ನದ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಬೆಲೆಯನ್ನು ನಂತರ ತಿಳಿಸುವುದಾಗಿ ನೀಡಿದ ದೂರು,

 

ವಿಜಯನಗರ ಠಾಣೆ.

ಪಿರ್ಯಾದಿ ಜಗನ್ನಾಥ್, #2716/ಎಂ, 01 ನೇ ಕ್ರಾಸ್, ಸ್ನೇಕ್ ಶ್ಯಾಮ್ ರಸ್ತೆ, ವಿಜಯನಗರ 02 ನೇ ಹಂತ ರವರು ನೀಡಿದ ದೂರೆಂದರೆ, ದಿ;05/04/2019 ರಂದ 11/04/2019 ರ ನಡುವೆ ಪಿರ್ಯಾದಿಯವರ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಮೀಟಿ ತೆಗೆದು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ ರೂ 4000 ಹಣ, ವಾಚು & 10 ಗ್ರಾಂ ತೂಕದ 02 ಚಿನ್ನದ ಸರವನ್ನು ಕಳ್ಳತನ ಮಾಡಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

ಹೆಬ್ಬಾಳ್ ಠಾಣೆ.

ಪಿರ್ಯಾದಿ ನಾಗೇಂದ್ರ ಕುಮಾರ್, #207, ಕೆ ಐ ಡಿ ಬಿ ಐ ಲೇಔಟ್, 02 ನೇ ಹಂತ, ಹೆಬ್ಬಾಳ್  ರವರು ದಿ:10.04.19 ರಂದು ಪಿರ್ಯಾದಿಯವರು ಎಂದಿನಂತೆ  ಬೆಳಿಗ್ಗೆ  9.00 ಗಂಟೆಗೆ ಕರ್ತವ್ಯಕ್ಕೆಂದು ಮನೆಯಿಂದ ಹೋಗಿದ್ದು, ಕೆಲಸ ಮುಗಿಸಿಕೊಂಡು ರಾತ್ರಿ 8.30 ಗಂಟೆ ಸಮಯಕ್ಕೆ  ಮನೆಗೆ ವಾಪಸ್‌ ಬಂದು ಮನೆಯ ಬಾಗಿಲನ್ನು ತೆರೆದು ನೋಡಿದಾಗ ಮನೆಯ ಹಿಂಬಾಗಿಲು ತೆರೆದಿರುವುದು ಕಂಡು ಬಂದಿದ್ದು,  ಪಿರ್ಯಾದಿಯವರು ಗಾಬರಿಯಿಂದ ಪರಿಶೀಲಿಸಿ ನೋಡಲಾಗಿ, ಹಿಂದಿನ ಬಾಗಿಲನ್ನು ಯಾರೊ ಕಳ್ಳರು ಯಾವುದೋ ಕಬ್ಬಿಣದ ಆಯುಧವನ್ನು ಮೀಟಿ ಪ್ಯಾಸೇಜ್‌ಗೆ ಅಳವಡಿಸಿರುವ  ಗ್ರಿಲ್‌ ಬಾಗಿಲನ್ನು ತೆರೆದು  ಅದರ ಮೂಲಕ ಮನೆಯೊಳಗೆ ಪ್ರವೇಶ ಮಾಡಿ ರೂಂ ನ ವಾರ್ಡ್‌ ರೂಬ್‌ನಲ್ಲಿ ಇರಿಸಿದ್ದ 18 ಗ್ರಾಂ ತೂಕದ ಚಿನ್ನದ ಸರ  ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ, ಆದ್ದರಿಂದ  ಕಳ್ಳತವಾಗಿರುವ  ಚಿನ್ನದ ಸರವನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ಹೆಬ್ಬಾಳ್ ಠಾಣೆ.

ಪಿರ್ಯಾದಿ ಪಿ ವೈ ರಾಘವನ್ , #2107, 01 ನೇ ಮಹಡಿ, 23 ನೇ ಕ್ರಾಸ್, 02 ನೇ ಹಂತ, ಹೆಬ್ಬಾಳ್ ರವರು ದಿ: 10.04.19 ರಂದು ಬೆಳಗ್ಗೆ 0930 ಗಂಟೆಗೆ ಹೋಗಿ ಸಂಜೆ 0630 ಗಂಟೆಗೆ ಬಂದು ನೋಡಲಾಗಿ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶ ಮಾಡಿ ಬೆಡ್ ರೂಂ  ಗಾಡ್ರೇಜ್ ನಲ್ಲಿಟ್ಟಿದ್ದ  ಚಿನ್ನದ   ಸುಮಾರು 10 ಗ್ರಾಂ ತೂಕದ  ಚಿನ್ನದ ನಕ್ಲೇಸ್ , ಬೆಳ್ಳಿಯ  ಆಭರಣಗಳಾದ  ಹಳೆಯ ಬೆಳ್ಳಿಯ ತಟ್ಟೆಗಳು  ಮತ್ತು ಬೆಳ್ಳಿಯ ಲೋಟಗಳು ಮತ್ತು ಬೆಳ್ಳಿಯ ಪಂಚ ಪಾತ್ರೆಗಳು  ಒಟ್ಟು ಅಂದಾಜು ಬೆಳ್ಳಿ ಎರಡು ಕೆಜಿ ಗಳಾಗಬಹುದುಇವು ಕಳ್ಳತನವಾಗಿದ್ದು, ನಂತರ ಸದರಿ ವಸ್ತುಗಳನ್ನು ಪತ್ತೆ ಮಾಡಿಕೊಡಲು ತಡವಾಗಿ ನೀಡಿದ ದೂರು,

6

ಸಾಮಾನ್ಯಕಳವು

01

ಉದಯಗಿರಿ ಠಾಣೆ. 

ದಿ:11/04/19 ರಂದುಬೆಳಿಗ್ಗೆ 10-00 ಗಂಟೆಯಲ್ಲಿ ಪಿರ್ಯಾದಿ ಪುರಾಣಿಕ್, ರವರು ರಾಜೀವನಗರದಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆರೋಗ್ಯ ತಪಾಷಣೆಗೆ ಹೋಗಿದ್ದು, ವೈದ್ಯರು ಅಲ್ಟ್ರಾಸೌಂಟ್‌‌ ತಪಾಸಣೆಗಾಗಿ ತಿಳಿಸಿದ ಮೇರೆಗೆ ಪಿರ್ಯಾದಿ ತಮ್ಮ ಅಂಗಿಯನ್ನು ಕಳಚಿ ಆಂಗಿಯ ಜೇಬಿನಲ್ಲಿ ಕನ್ನಡಕ, ಮೊಬೈಲ್‌ ಮತ್ತು ಸುಮಾರು 30 ಗ್ರಾಂ ತೂಕದ ಚಿನ್ನದ ಚೈನನ್ನು ಇಟ್ಟು ಸುತ್ತಿ ತಲೆಯ ಬದಿಯಲ್ಲಿ ಇಟ್ಟು ಮಲಗಿ ತಪಾಸಣೆ  ಮಾಡುವ ಸಂದರ್ಭದಲ್ಲಿ,  ಇದನ್ನು ನೋಡಿದ್ದ ಒಬ್ಬ ಅಪರಿಚಿತ ವ್ಯಕ್ತಿ ಪಿರ್ಯಾದಿ ಅಂಗಿಯಲ್ಲಿದ್ದ ಚಿನ್ನದ ಸರವನ್ನು ಕದ್ದು ಓಡತೊಡಗಿದ್ದು, ಇದನ್ನು ಗಮನಿಸಿದ್ದ ಪಿರ್ಯಾದಿ ಅಲ್ಲಿರುವ ವ್ಯಕ್ತಿಗೆ ಕೂಗಿ ಕಳ್ಳನನ್ನು ಹಿಡಿಯುವಂತೆ ಹೇಳಿದ್ದು,ಅಷ್ಡರಲ್ಲಿ ಆ,ಕಳ್ಳ ಓಡಿ ಹೋಗಿದ್ದು,ಇದಕ್ಕೆ ಸದರಿ ಆಸ್ಪತ್ರೆಯ ಸೆಕ್ಯೂರಿಟಿಗಳ ಲೋಪವೂ ಕಾರಣವೆಂದು, ಸದರಿ ಚಿನ್ನದ ಸರದ ಬೆಲೆ 95,000/-ರೂ ಗಳಾಗಿದ್ದು, ಸದರಿ ಕಳ್ಳನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ಮೇಘನಾ ಎಂ. #12, ಗೌರಿಶಂಕರ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದುದಾರರು  ದಿನಾಂಕ: 19.05.2016 ರಂದು ಆರೋಪಿ-1  ಪುನೀತ್ ಕುಮಾರ್ ಜಿ.ಎಲ್ ಎಂಬುವವರನ್ನು ಸಂಪ್ರದಾಯದಂತೆ ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1, ಆರೋಪಿ-2 ವಸಂತ ಹಾಗೂ ಆರೋಪಿ-3 ಮಹದೇವಮ್ಮ ರವರ ಬೇಡಿಕೆಯ ಮೇರೆಗೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ಮದುವೆಯಾದ ನಂತರ ಪಿರ್ಯಾದುದಾರರು ಆರೋಪಿ-1,2,3 ರವರೊಂದಿಗೆ ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ-1,2,3 ರವರುಗಳು ಸೇರಿಕೊಂಡು ಪಿರ್ಯಾದಿಗೆ ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಪಿರ್ಯಾದಿಯ ತಂದೆಯವರು ಹಲವಾರು ಬಾರಿ ಹಣದ ಸಹಾಯ ಮಾಡಿದ್ದರೂ ಸಹ ಪ್ರತಿದಿನ ಪಿರ್ಯಾದಿಗೆ ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ಹಿಂಸೆ ನೀಡಿ, ವರದಕ್ಷಿಣೆ ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

02

ವಿ ವಿ ಪುರಂ ಸಂಚಾರ ಠಾಣೆ,

ದಿನಾಂಕ:10.04.2019 ರಂದು ಮಧ್ಯಾಹ್ನ 1.30 ಗಂಟೆ ಸಮಯದಲ್ಲಿ ಪಿರ್ಯಾದಿ ವನರಾಜ ರವರ ಅಣ್ಣ ರಾಮಕೃಷ್ಣೇಗೌಡರವರು ತಮ್ಮ ಮೋ,ಸೈ  ನಂ. ಕೆಎ-09-ಎಹೆಚ್-8452 ಇದನ್ನು  ಮೈಸೂರು-ಹುಣಸೂರು ರಸ್ತೆ  ಜಲದರ್ಶಿನಿ ಮುಂಭಾಗ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ಇದೇ ಸಮಯಕ್ಕೆ ಕಾರ್ ನಂ. ಕೆಎ-18-ಪಿ-4475 ಇದನ್ನು ಅದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಮೋ ಸೈ ಗೆ ಡಿಕ್ಕಿ ಮಾಡಿದ ಪರಿಣಾಮ ಎಡಭುಜ ಮುರಿದಿದ್ದು  ದೇಹದ ಇನ್ನಿತರ ಕಡೆಗೆ ಪೆಟ್ಟಾಗಿದ್ದ ಅವರನ್ನು ಸಾರ್ವಜನಿಕರ ಸಹಾಯದಿಂದ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿ;23/03/19 ರಂದು ಮಧ್ಯಾಹ್ನ 13-50 ಗಂಟೆ ಸಮಯದಲ್ಲಿ ಪಿರ್ಯಾದಿ ಲಿಂಗಯ್ಯ ರವರ  ಮಗ ಪುರುಷೋತ್ತಮ ರವರು ಸ್ಕೂಟರ್ ನಂ. KA-09-EV-2853 ರಲ್ಲಿ ಹಿಂಭಾಗ ತನ್ನ ತಾಯಿ ನಾಗರತ್ನ ರವರನ್ನು ಕೂರಿಸಿಕೊಂಡು ಅಂದಾನಿ ಸರ್ಕಲ್‌ ಹತ್ತಿರ ಸಾರ್ವಜನಿಕ ಹಾಸ್ಟೆಲ್ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಹಸು ರಸ್ತೆ ಕ್ರಾಸ್ ಮಾಡುತ್ತಿದ್ದು, ಏಕಾಏಕಿ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಇಬ್ಬರೂ ಕೆಳಕ್ಕೆ ಬಿದ್ದಾಗ ನಾಗರತ್ನ ರವರಿಗೆ ತಲೆಗೆ ಏಟಾಗಿ ಪ್ರಜ್ಞೆ ತಪ್ಪಿದ್ದವರನ್ನು ಸುಯೋಗ ಆಸ್ಪತ್ರೆಗೆ ದಾಖಲಿಸಿ ತಲೆಗೆ ಅಪರೇಷನ್ ಮಾಡಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಮಾಡಿಸುತ್ತಿದ್ದು, ದಿನಾಂಕ;10/04/19 ರಂದು ಡಿಸ್ಚಾರ್ಜ್ ಮಾಡಿ ಇನ್ನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿದ್ದು, ಮನೆಯಲ್ಲೆ ಉಪಚರಿಸಿ ವಾರಕೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದು, ಈ ಅಪಘಾತಕ್ಕೆ ಪುರುಷೋತ್ತಮ ಸ್ಕೂಟರ್ ನ್ನು ವೇಗವಾಗಿ ಚಾಲನೆ ಮಾಡಿರುವುದೇ ಕಾರಣವಾಗಿದ್ದು, ಈ ಅಪಘಾತಕ್ಕೆ ಕಾರಣನಾದ ಪುರುಷೋತ್ತಮನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :11-04-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

114

-

 

-

-

114

2

TOTAL NUMBER OF CRR'S

341

356

496

443

399

2,035

3

TOTAL FINE AMOUNT COLLECTED

36,200

 

53,700

48,900

43,600

1,82,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

1

-

-

1

2

8

INTERCEPTOR CASES

32

-

-

-

 

32

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com