ENGLISH   |   KANNADA

Blog



ದಿನಾಂಕ;11.05.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.05.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 58       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಅಶೋಕಪುರಂ ಠಾಣೆ

ದಿನಾಂಕ 11.05.19 ರಂದು 13.15 ಗಂಟೆಯಲ್ಲಿ ಠಾಣಾ ಹೆಚ್‌ಸಿ 315 ರವರು ಕೆ.ಆರ್. ಆಸ್ಪತ್ರೆಯಿಂದ ಫಿರ್ಯಾದಿ ಶ್ರೀ ರಾಕೇಶ್ ರವರ ಹೇಳಿಕೆ ದೂರನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿ:-10.05.19 ರಂದು ಸಂಜೆ ಸುಮಾರು 07.45 ಗಂಟೆಯಲ್ಲಿ ಫಿರ್ಯಾದಿಯು ಬಲ್ಲಾಳ್ ವೃತ್ತದ ಕಡೆಯಿಂದ ಅಶೋಕಪುರಂನಲ್ಲಿರುವ ತನ್ನ ಮನೆ ಕಡೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ 06 ಕ್ರಾಸ್ ಬಳಿ ಯಾವುದೋ ಗಲಾಟೆಯಾಗಿದ್ದು, ಫಿರ್ಯಾದಿಯು ತನ್ನ ದ್ವಿಚಕ್ರ ವಾಹನವನ್ನು ಪಕ್ಕಕ್ಕೆ ತೆಗೆದುಕೊಂಢಿದ್ದು, ಆಗ ವಿಜಿ ಎಂಬುವನು ಫಿರ್ಯಾದಿಯನ್ನು  ಗಲಾಟೆಯಲ್ಲಿದ್ದವನೆಂದು ಹೇಳಿ  ಕುತ್ತಿಗೆ ಪಟ್ಟಿ ಹಿಡಿದುಕೊಂಡಾಗ, ಫಿರ್ಯಾದಿಗೆ ಏಕೆ ನನ್ನ ಕುತ್ತಿಗೆ ಪಟ್ಟಿ ಹಿಡಿದುಕೊಂಡೆ ಎಂದು ಕೇಳಿದ್ದು, ಅಷ್ಟರಲ್ಲಿ ಆರೋಪಿಗಳು ಫಿರ್ಯಾದಿಯನ್ನು ಸುತ್ತುವರೆದು ಕೆಳಗೆ ಕೆಡವಿ, ರಿಪೀಸ್ ಪಟ್ಟಿಯಿಂದ ಫಿರ್ಯಾದಿಯ ಬೆನ್ನಿಗೆ ಹೊಡೆದಿದ್ದು, ವಿಜಿ ಎಂಬುವನು ಒಂದು ಡ್ರ್ಯಾಗನ್ ನಿಂದ ಫಿರ್ಯಾದಿಯ ಎಡ ಭುಜ ಹಾಗೂ ಎಡ ಮುಂಗೈಗೆ ಹೊಡೆದು ಕೆಳಗೆ ಬೀಳಿಸಿಕೊಂಡು ನಾಲ್ಕೂ ಜನರು ಕಾಲಿನಿಂದ ಒದ್ದಿದ್ದು, ಕೆಳಗೆ ಬಿದ್ದ ರಭಸಕ್ಕೆ ಫಿರ್ಯಾದಿಯ ಎಡಭುಜ ಹಾಗೂ ಕತ್ತಿನ ಹಿಂಭಾಗ ಬಲಭಾಗಕ್ಕೆ ನೋವಾಗಿದ್ದು, ನಾಲ್ಕೂ ಜನರು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಜಗಳ ಬಿಡಿಸಿದರು. ನಂತರ ಗೌತಮ್ ಎಂಬುವರ ಸಹಾಯದಿಂದ ಫಿರ್ಯಾದಿಯು ಚಿಕಿತ್ಸೆಗಾಗಿ ಕೆ ಆರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ, ಸದರಿಯವರುಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಕೋರಿದ ಮೇರೆಗೆ ಈ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ವಿ.ವಿ. ಪುರಂ ಠಾಣೆ

ದಿ:-11-05-19 ರಂದು ಪಿರ್ಯಾದಿ ಶ್ರೀಕಂಠ ರವರ ತಮ್ಮ ಬಾಬ್ತು ದ್ವಿಚಕ್ರ ವಾಹನ ಸಂ KA-55 K-7826 ನ್ನು ದಿ:-10-05-19 ರಂದುರಾತ್ರಿ-11-00 ರ ಸಮಯದಲ್ಲಿ ರೈಲ್ವೇ ಆಸ್ಪತ್ರೆಯ ಮುಂಭಾಗ ಲಾಕ್ ಮಾಡಿ ನಿಲ್ಲಿಸಿ ಚಿಕಿತ್ಸೆಗೆ ದಾಖಲಾಗಿದ್ದು ದಿ:-11-05-19 ರಂದು ಬೆಳಗ್ಗೆ 7-00 ಗಂಟೆಗೆ ನೋಡಲಾಗಿ ನಾನು ನಿಲ್ಲಿಸಿದ್ದ ಬೈಕ್ಇ ರುವುದಿಲ್ಲ ಆದ್ದರಿಂದ  ತಮ್ಮ ಬಾಬ್ತು ದ್ವಿಚಕ್ರ ವಾಹನವನ್ನು  ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದುನೀಡಿದ ದೂರಿನ ಮೇರೆಗೆ ದಾಖಲಿಸಿದ ಮೇರೆಗೆ ಈ ಪ್ರ.ವ.ವರದಿ.

ಉದಯಗಿರಿ ಠಾಣೆ

ದಿ:-11-05-19ರಂದುಪಿರ್ಯಾದಿ ಶ್ರೀಹರ್ಷ ರವರು ದಿ:-06/05/19 ರಂದು ರಾತ್ರಿ ಸುಮಾರು 11-45 ಗಂಟೆಯಲ್ಲಿ ಪಿರ್ಯಾದಿ ಬಾಬ್ತು »Ãರೋ ಹೋಂಡಾ ಪ್ರೊ ದ್ವಿಚಕ್ರ ವಾಹನ ಸಂಖ್ಯೆ ಕೆಎ-55-ವೈ-9757 ಅನ್ನು ತಮ್ಮ ಮನೆ Jದುರು ಬೀಗ ಹಾಕಿ ನಿಲ್ಲಿಸಿದ್ದು, ಮಾರನೇ ದಿನ ದಿನಾಂಕ 07/05/2019 ರಂದು ಬೆಳಿಗ್ಗೆ 7-30 ಗಂಟೆಗೆ ನೋಡಿದಾಗ ಬೈಕ್‌ ಇರಲಿಲ್ಲ, ಅಕ್ಕಪಕ್ಕದವರನ್ನು ವಿಚಾರಿಸಿ, ಇದುವೆರೆಗೆ ಕಾದುನೋಡಲಾಗಿ ಸಿಕ್ಕಿರುವುದಿಲ್ಲ, ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಸದರಿ ದ್ಚಿಚಕ್ರ ವಾಹನದ ಬೆಲೆ ಅಂದಾಜು 49,000/- ಗಳಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದದೂರಿನಮೇರೆಗೆದಾಖಲಿಸಿದಪ್ರವವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ಸಿದ್ಧಾರ್ಥ ಸಂಚಾರ ಠಾಣೆ

ದಿ:- 10.05.19 ರಂದು ಬೆಳಿಗ್ಗೆ ಸುಮಾರು 7.30 ಗಂಟೆ ಸಮಯದಲ್ಲಿ ಪಿರ್ಯಾದಿ ತೌಸಿಫ್ ಮಲ್ಲಿಖಾ ರವರು  ಇಮ್ರಾನ್ ಪಾಷ ರವರ ಜೋತೆಯಲ್ಲಿ ಮೋಟಾರ್ ಸೈಕಲ್ ನಂಬರ್ ಕೆಎ 55 ಕೆ 0607 ರ ಹಿಂಬದಿ ಸವಾರರಾಗಿ ಎಂ ಎಂ ರಸ್ತೆಯಲ್ಲಿ ಶ್ರೀ ಮಂಜುನಾಥ ದೇವಸ್ಥಾನದ ಬಳಿ ಬಲಕ್ಕೆ ಇಂಡಿಕೇಟರ್ ಹಾಕಿಕೊಂಡು ತಿರುವು ಪಡೆಯುತ್ತಿದ್ದ ಸಮಯದಲ್ಲಿ ಟರಿಷೀಯನ್ ಕಾಲೇಜ್ ಕಡೆಯಿಂದ ಮೋಟಾರ್ ಸೈಕಲ್  ಕೆಎ 55 ಎಸ್ 5009 ರ ಚಾಲಕ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ರವರ ಮೋಟಾರ್ ಸೈಕಲ್ ಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿ ಹಾಗು  ಇಮ್ರಾನ್ ಪಾಷ ರವgÀÄ ರಸ್ತೆ ಮೇಲೆ ಬಿದ್ದು ಪಿರ್ಯಾದಿರವರಿಗೆ ಸಣ್ಣಪುಟ್ಟ ತರಚಿದ ಪೆಟ್ಟಾಗಿದ್ದು  ಇಮ್ರಾನ್ ಪಾಷ ರವರ ಬಲಕಾಲು ತೀವ್ರವಾಗಿ ಪೆಟ್ಟಾಗಿ ಅವರನ್ನು ಕೆ ಅರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಫಿರ್ಯಾದಿಯವರುತಡವಾಗಿ ಠಾಣೆಗೆ ಬಂದು  ಇಮ್ರಾನ್ ಪಾಷ ರವರನ್ನು ಗಾಯಗೊಳಿಸಿದ ಸ್ಕೂಟರ್ ಸವಾರರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ.

ಕೆ.ಆರ್ ಸಂಚಾರ ಠಾಣೆ

ಫಿರ್ಯಾದಿ ನಾಗೇಶ್ ರವರು ದಿ:-08-05-19 ರಂದು ಸಂಜೆ 7-30 ಗಂಟೆಯಲ್ಲಿ ರವೀಂದ್ರರವರು ರಾಯಲ್‌ ಎನ್‌ಫೀಲ್ಡ್‌ ಮೋಟಾರ್ ಸೈಕಲ್ ನಂ. KA-09-HP-8716 ರಲ್ಲಿ ಹಿಂಭಾಗ ಪಿರ್ಯಾದಿಯವರನ್ನು ಕೂರಿಸಿಕೊಂಡು ಪರಸಯ್ಯನಹುಂಡಿ ರಿಂಗ್‌ ರಸ್ತೆ ಕಡೆಗೆ ಚಾಲನೆ ಮಾಡಿಕೊಂಡು ಬಂದಾಗ ಬಂಡಿಪಾಳ್ಯದ ಕಡೆಯಿಂದ ರಿಂಗ್‌ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದಂತಹ ಕಾರ್‌ ನಂ. KA-09-P-9838 ಚಾಲಕ ಬೈಕಿಗೆ ಡಿಕ್ಕಿ ಮಾಡಿ ಜಖಂಗೊಳಿಸಿದ್ದು,ಪಿರ್ಯಾದಿಗೆ ಗಾಯಗಳಾಗಿದ್ದು,ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರಿಂದ ಈ ದಿನ ತಡವಾಗಿ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿರುವುದು ದೂರಿನ ಸಾರಾಂಶವಾಗಿರುತ್ತದೆ.

ಕೆ.ಆರ್ ಸಂಚಾರ ಠಾಣೆ

ಫಿರ್ಯಾದಿ ಆನಂದ್ ರವರು ದಿನಾಂಕ: 11/05/2019 ರಂದು ರಾತ್ರಿ 07.20 ಗಂಟೆಯಲ್ಲಿ ಗುಂಡೂರಾವ್‌ ನಗರದ ಬಳಿ ಪೆಟ್ರೋಲ್‌ ಬಂಕ್‌ ಹತ್ತಿರ  ಮೈಸೂರು ನಂಜನಗೂಡು ರಸ್ತೆಯ  ಪೂರ್ವ ಭಾಗದ ರಸ್ತೆಯಲ್ಲಿ  56 ವರ್ಷದ  ಸುಬ್ರಹ್ಮಣ್ಯ ಎಂಬುವರು  ಪೆಟ್ರೋಲ್‌ ಬಂಕ್‌ ಪಕ್ಕದಲ್ಲಿರುವ  ಅಂಗಡಿ ಕಡೆಯಿಂದ  ಗುಂಡುರಾವ್ ನಗರದ ಕಡೆಗೆ ನಡೆದುಕೊಂಡು ರಸ್ತೆ  ಕ್ರಾಸ್ ಮಾಡುತ್ತಿದ್ದಾಗ  ಕೆ.ಎಸ್.ಆರ್.ಟಿ.ಸಿ ಬಸ್ ನಂ KA-11-F-0510 ರ ಚಾಲಕ ಮೈಸೂರು ಕಡೆಯಿಂದ ಅತೀವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು  ನಂಜನಗೂಡು  ಕಡೆಗೆ ಹೋಗುತ್ತಿದ್ದು ರಸ್ತೆ ದಾಟುತ್ತಿದ್ದ  ಸುಬ್ರಹ್ಮಣಿ ರವರಿಗೆ ಡಿಕ್ಕಿಮಾಡಿದಾಗ ಕೆಳಕ್ಕೆ ಬಿದ್ದ ಸುಬ್ರಹ್ಮಣಿರವರ ಮೇಲೆ ಬಸ್ಸಿನ ಎಡ ಮುಂದಿನ ಚಕ್ರ ಮತ್ತು ಎಡ ಹಿಂದಿನ ಚಕ್ರ ಗಳು ಹರಿದು ಹೋಗಿದ್ದು  ಸುಬ್ರಹ್ಮಣಿ ರವರಿಗೆ ಮೈ ಕೈಗೆ  ತೀವವಾಗಿ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದು ನಂತರ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಸಾರ್ವಜನಿಕರು  ಗೂಡ್ಸ್‌ ಅಟೋದಲ್ಲಿ ಕೆ.ಆರ್. ಆಸ್ಪತ್ರೆಗೆ ಕಳುಹಿಸಿದ್ದು  ಅಪಘಾತವನ್ನು ನೋಡಿದ  ಆನಂದ್‌,ಎ ಎಂಬುವರು  ಈ ಅಪಘಾತ ಮಾಡಿದ ಬಸ್‌ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ ವಾಗಿದ್ದು ಅಸಲು ದೂರನ್ನು ಇದರೊಂದಿಗೆ ಲಗತ್ತಿಸಿದೆ. 

ವಿ.ವಿ.ಪುರಂ ಸಂಚಾರ ಠಾಣೆ

ದಿನಾಂಕ:11.05.2019 ರಂದು ಬೆಳಿಗ್ಗೆ 10.50 ಗಂಟೆಯಲ್ಲಿ ಪಿರ್ಯಾದಿ ರಾಘವೇಂದ್ರ ರವರ ಅಣ್ಣನಾದ ಶಿವಕುಮಾರ್ ಅವರು ಮೋ ಸೈ ನಂ-ಕೆಎ-11-ಡಬ್ಲ್ಯು-7571ರಲ್ಲಿ   ಜವರೇಗೌಡರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಜೆಕೆ ಟೈರ್ ಹಿಂಭಾಗದ ರಸ್ತೆ  ಜಂಗಲ್ ಡಾಬಾ ಎದುರು ಟಿಪ್ಪರ್ ಕೆಎ-09-ಎ-7459  ಇದರ ಚಾಲಕ ಅತೀ ವೇಗ ಮತ್ತು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ಪಿಯರ್ಾದಿಯವರ ವಾಹನಕ್ಕೆ ಡಿಕ್ಕಿ ಮಾಡಿ ಬೀಳಿಸಿದ ಪರಿಣಾಮ ಬೈಕ್ ಸವಾರರಿಬ್ಬರಿಗೂ ಗಾಯಗಳಾಗಿದ್ದು ಅವರನ್ನು ಸಾರ್ವಜನಿಕರ ಸಹಾಯದಿಂದ ಡಿ,ಆರ್,ಎಂ, ಆಸ್ಪತ್ರೆಗೆ ದಾಖಲಿಸಿದ್ದು ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ನಂಬರಿನ    ಟಿಪ್ಪರ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ ವರದಿ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                               MYSURU CITY TRAFFIC VIOLATION CASES

 

                                                   DATE  :11-05-2019

SLNO

                  HEADS

                               NO. OF CASES

DR

KR

NR

SN

VV

TOTAL

1

TOTAL NUMBER OF FTVRS

85

-

72

-

-

157

2

TOTAL NUMBER OF CRR'S

294

276

416

225

384

1,595

3

TOTAL FINE AMOUNT COLLECTED

32,900

29,200

42,400

22,700

41,200

1,68,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

1

-

-

-

1

7

NON FATAL

-

1

-

1

1

3

8

INTERCEPTOR CASES

28

-

-

-

 

28

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-

 



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com