ENGLISH   |   KANNADA

Blog



ದಿನಾಂಕ;14.05.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:15.05.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 65       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ನಜರ್ ಬಾದ್ ಠಾಣೆ

ಫಿರ್ಯಾದಿ ಶಾಂತರವರು ದಿನಾಂಕ-11-05-2019 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ  ಮನೆ ಖಾಲಿ ಮಾಡುವಂತೆ ಹೇಳಲು ಹೋದಾಗ ಮಹೇಶ ಮತ್ತು ಅವರ ತಾಯಿ ಶಿವಮ್ಮ ರವರು ಮನೆಯಲ್ಲಿದ್ದು, ಮನೆ ಖಾಲಿಮಾಡಿ ಎಂದು ಹೇಳಿದಾಗ ಶಿವಮ್ಮರವರು ಮನೆ ಖಾಲಿ ಮಾಡುವುದಿಲ್ಲ  ಏನು ಮಾಡಿಕೊಳ್ಳುತ್ತೀಯಾ ಮಾಡಿಕೊ ಎಂದು ಹೇಳಿ, ನನಗೆ ಕೆಟ್ಟದಾಗಿ ಬೈದು, ಗಲಾಟೆ ಮಾಡಿದಳು. ಆಗ ನಾನು ಏಕೆ ಹಾಗೆ ಬೈಯುತ್ತೀಯಾ ಎಂದು ಕೇಳಿದಾಗ ಶಿವಮ್ಮಳು ನನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿ, ಕೈಯಿಂದ ಮೈಕೈಗೆ ಹೊಡೆಯುತ್ತಿದ್ದ ಸಮಯದಲ್ಲಿ ಅವಳ ಮಗ ಮಹೇಶನು ಒಂದು ಬ್ಲೇಡ್ ತೆಗೆದುಕೊಂಡು ಬಂದು ನನ್ನ ಎಡಗೈನ್ನು ಕೂಯ್ದಿರುತ್ತಾನೆ. ಆಗ ನನ್ನ ಕೈಯಲ್ಲಿ ರಕ್ತ ಬರುತ್ತಿದ್ದರಿಂದ ನಾನು ಜೋರಾಗಿ ಕಿರುಚಿದಾಗ ಹನುಮಂತಯ್ಯ ರವರು ಬಂದು ಜಗಳ ಬಿಡಿಸಿರುತ್ತಾರೆ. ಜಗಳ ಬಿಡಿಸಿದ ನಂತರವು ಶಿವಮ್ಮರವರು ಇನ್ನೊಮ್ಮೆ ಮನೆ ಹತ್ತಿರ ಬಂದು ಮನೆ ಖಾಲಿ ಮಾಡು ಎಂದು ಹೇಳಿದರೆ ನಿನ್ನನ್ನು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರಗೆ ಪ್ರ. ವ. ವರದಿ.

ವಿಜಯನಗರ ಠಾಣೆ

ದಿನಾಂಕ 14/05/19 ರಂದು 12-45 ಗಂಟೆಯಲ್ಲಿ ಪಿರ್ಯಾದುದಾರರಾದ ಶ್ರೀಮತಿ.ಸರಸ್ವತಿ ರವರ ತಂದೆ ಲೇ.ವೈಕುಂಠೇಗೌಡ ರಮೇಶ್ ಎಂಬುವರಿಗೆ 90000/- ರೂ ಹಣವನ್ನು ಸಾಲವಾಗಿ ನೀಡಿದ್ದು, ಇದುವರೆವಿಗೂ ಹಣವನ್ನು ವಾಪಾಸ್ಸು ನೀಡದೇ ಇದ್ದರಿಂದ ದಿನಾಂಕ 13/05/19 ರಂದು ಸಂಜೆ ಸಮಯದಲ್ಲಿ ಪಿರ್ಯಾದುದಾರರು ರಮೇಶ್ ರವರ ಮನೆಗೆ ಹೋಗಿ ಹಣವನ್ನು ವಾಪಾಸ್ಸು ನಿಡುವಂತೆ ಕೇಳಿದ್ದು, ಈ ವಿಚಾರದಲ್ಲಿ ರಮೇಶ್ ರವರ ಮಗ ರಾಘವೇಂದ್ರ ಮತ್ತು ಆತನ ಸ್ನೇಹಿತ ಇಬ್ಬರೂ ರಾತ್ರಿ 10-40 ಗಂಟೆಯಲ್ಲಿ ಪಿರ್ಯಾದುದಾರರ ಮನೆಗೆ ಅತಿಕ್ರಮ ಪ್ರವೇಶ ಮಾಡಿ,. ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ, ಪಿರ್ಯಾದುದಾರರ ನೈಟಿಯನ್ನು ಹಿಡಿದು ಎಳೆದಾಡಿ ಹರಿದು ಹಾಕಿದ್ದು, ಬಿಡಿಸಲು ಬಂದ ಪಿರ್ಯಾದುದಾರರ ತಮ್ಮನಿಗೂ ಸಹ ಹಲ್ಲೆ ಮಾಡಿದ್ದು, ಕಲ್ಲು ಎತ್ತು ಹಾಕುವುದಾಗಿ ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಲು ಪ್ರಯತ್ನಿಸಿದ್ದು, ಇವರುಗಳ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಮಂಡಿ ಠಾಣೆ

ಪಿರ್ಯಾದಿ ತಬ್ರೇಜ್ ರವರು ತಮ್ಮ ಆಕ್ಟಿವಾ ಹೊಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-55-ವೈ-2298 ನ್ನು ಉಪಯೋಗಿಸಿಕೊಂಡಿದ್ದು, ದಿ: 10/12/18 ರಂದು ಠಾಣಾ ಸರಹದ್ದಿನ ಕಬೀರ್ ರಸ್ತೆಯಲ್ಲಿರುವ ಯೂನಿಕ್ ಕ್ಯಾಡ್ ಸರ್ವಿಸ್ ಸೆಂಟರ್ ಗೆ ಕೆಲಸದ ನಿಮಿತ್ತ ಬಂದು, ಸದರಿ ವಾಹನವನ್ನು ಹಿಂದೂಸ್ತಾನ್ ಎಂಟರ್ ಪ್ರೈಸಸ್ ಅಂಗಡಿ ಮುಂದೆ ಮದ್ಯಾಹ್ನ 2-30 ಗಂಟೆಗೆ ಪಾರ್ಕಿಂಗ್ ಸ್ಥಳದಲ್ಲಿ, ಸ್ಕೂಟರ್ ಗೆ ಹ್ಯಾಂಡ್ ಲ್ಯಾಕ್ ಮಾಡಿ, ನಿಲ್ಲಿಸಿ, ಕೆಲಸ ಮುಗಿಸಿ ವಾಪಸ್ಸು ಸಂಜೆ 4-30 ಗಂಟೆಗೆ ಬಂದು ನೋಡಿದಾಗ, ದ್ವಿಚಕ್ರ ವಾಹನ ಕಾಣದೇ ಇದ್ದು, ಈ ಬಗ್ಗೆ ಪಿರ್ಯಾದಿಯು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಸಹ ಪತ್ತೆಯಾಗಿರುವುದಿಲ್ಲ, ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 48.000/-ರೂ.ಗಳಾಗಿರುತ್ತದೆ. ಕಳ್ಳತನವಾಗಿರುವ ತಮ್ಮ ಆಕ್ಟಿವಾ ಹೊಂಡಾ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡುವಂತೆ ಇತ್ಯಾದಿ ನೀಢಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

03

ಕೆ.ಆರ್ ಸಂಚಾರ ಠಾಣೆ

ದಿನಾಂಕ 05/05/2019 ರಂದು  ಭಾನುವಾರ ಸಂಜೆ ಸುಮರು 07.30 ಗಂಟೆಯಲ್ಲಿ ಪಿರ್ಯಾದುದಾರರಾದ ನಾರಾಯಣಸ್ವಾಮಿ ರವರು  ನಾರಾಯಣಶಾಸ್ತ್ರಿ ರಸ್ತೆಯಲ್ಲಿ  ರಾಮಸ್ವಾಮಿ ಹೌಸ್‌ ಕಡೆಯಿಂದ ಸ್ಕೂಲ್‌ ಕಡೆಗೆ ನಡೆದುಕೊಂಡು ರಸ್ತೆಯನ್ನು ದಾಟುತ್ತಿದ್ದಾಗ  ಗಾಡಿಚೌಕದ ಕಡೆಯಿಂದ  ಮಾರುತಿ ಕಾರ್ ನಂ KA-09-M-9243  ವೇಗವಾಗಿ ಬಂದು ಪಿರ್ಯಾದುದಾರರ ಎಡಭಾಗಕ್ಕೆ  ಡಿಕ್ಕಿಹೊಡೆದಾಗ  ಪಿರ್ಯಾದುದಾರರು ಬಾನೆಟ್‌ ಮೇಲೆ ಬಿದ್ದು ಮುಂದಿನ ಗಾಜಿಗೆ ತಲೆ ಹೊಡೆದಾಗ ಗಾಜು  ಒಡೆದು  ಅರ್ದ ಶರೀರ ಕಾರಿನ ಒಳಕ್ಕೆ ಹೋಗಿದ್ದು  ಹಾಗೆಯೇ ಸ್ವಲ್ಪ ದೂರು ಹೋಗಿ ನಿಲ್ಲಿಸಿದಾಗ  ಜನರು ಬಂದು ಹೊರಕ್ಕೆ ಕರೆದುಕೊಂಡಿದ್ದು ಕಾರ್ ಚಾಲಕ ಪ್ರಥಮ್‌ ಮತ್ತು ದೃವ ಸೀತಾರಂಗ ನರ್ಸಿಂಗ್ ಹೋಂಗೆ  ಕರೆದುಕೊಂಡು ಹೋಗಿದ್ದು ಡಾಕ್ಟರ್‌ ಇಲ್ಲವೆಂದು ಹೇಳಿದಾಗ ತನ್ನ ತಮ್ಮ ರಾಧಕೃಷ್ಣ  ಮತ್ತು ಸ್ನೇಹತರಾದ ಮಹದೇವನಾಯಕ  ರವರನ್ನು ಕರೆಸಿಕೊಂಡು ಪೆನೆಷಿಯಾ ಆಸ್ಪತ್ರೆಗೆ ಹೋಗಿದ್ದು ಪೆನೆಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಥಮ್‌ ಮತ್ತು ದೃವ ಇಬ್ಬರು ಪೊಲೀಸರಿಗೆ ತಿಳಿಸುವುದು ಬೇಡ ಟ್ರೀಟ್ ಮೆಂಟ್‌ ಮಾಡಿಸುವುದಾಗಿ  ನಂಬಿಸಿ ಟ್ರೀಟ್‌ಮೆಂಟ್‌ ಮಾಡಿಸದೆ ನಂಬಿಕೆ ದ್ರೋಹ ಮಾಡಿದ್ದು  ಮಾನಸಿಕವಾಗಿ ಆಘಾತಕ್ಕೆ   ಒಳಗಾಗಿ  ಸರಿಯಾಗಿ ನಡೆಯಲು ಆಗುತ್ತಿಲ್ಲದ ಕಾರಣ  ಈ ದಿನ ತಡವಾಗಿ ದೂರು ನೀಡುತ್ತಿದ್ದು  ಬೇಜಾವಾಬ್ದಾರಿ ತನದಿಂದ ಕಾರನ್ನು ಡ್ರೈವ್‌ ಮಾಡಿ  ಡಿಕ್ಕಿಮಾಡಿದ  ಕಾರು ಚಾಲಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.

ವಿ.ವಿ. ಸಂಚಾರ ಠಾಣೆ

ದಿನಾಂಕ:09.05.2019 ರಂದು ಸಂಜೆ 5.00 ಗಂಟೆಯಲ್ಲಿ ಪಿರ್ಯಾದಿ ಜ್ಯೋತಿ ರವರ ತಂದೆ ಬೋರೆಗೌಡರವರು ತಮ್ಮ ಸ್ಕೂಟಿ ನಂ. ಕೆಎ-11 ಎಸ್ 5672 ಇದನ್ನು ರಿಂಗ್ ರಸ್ತೆಯಲ್ಲಿ ರಿಂಗ್ ರಸ್ತೆ-ಆರ್ಎಂಪಿ ಜಂಕ್ಷನ್ ಬಳಿ ಚಾಲನೆ ಮಾಡಿಕೊಂಡು ಬರುತ್ತಿರುವಾಗ ಇದೇ ಸಮಯಕ್ಕೆ ಓಮ್ನಿ ವ್ಯಾನ್ ನಂ. ಕೆಎ-09 ಎಂಡಿ 1956 ಇದನ್ನು ಅದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಬೋರೆಗೌಡರವರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಬೋರೆಗೌಡರವರ ಬಲದ ಕಾಲು, ಬಲದ ಕೈ ಹಾಗೂ ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿ ಸುಪ್ರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆದುದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ನಂಬರಿನ ಓಮ್ನಿ ವ್ಯಾನ್ ಚಾಲಕನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪಿರ್ಯಾದಿಯವರು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ ವರದಿ.

ವಿ.ವಿ. ಸಂಚಾರ ಠಾಣೆ

ದಿನಾಂಕ:11.05.2019 ರಂದು ರಾತ್ರಿ 09.45 ಗಂಟೆ ಸಮಯದಲ್ಲಿ ಪಿರ್ಯಾದಿ ನಿಂಗೇಗೌಡ ರವರ ಮಾವ ನರಸಿಂಹೇಗೌಡರವರು ತಮ್ಮ ಸ್ಕೂಟರ್ ನಂ. ಕೆಎ-11 ಇಎಲ್ 2737 ಇದನ್ನು ಹಿನ್ಕಲ್ ಜಂಕ್ಷನ್ನಲ್ಲಿ ಹೋಂಡಾ ಷೋರೂಂನ ಬಳಿ ವಿಜಯನಗರ 2ನೇ ಹಂತದ ಕಡೆಯಿಂದ ವಿಜಯನಗರ 4ನೇ ಹಂತದ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಇದೇ ಸಮಯಕ್ಕೆ ಇವರ ಎಡಭಾಗದಿಂದ ಕಾರ್ ನಂ. ಕೆಎ-03 ಎಂಸಿ 3722 ಇದನ್ನು ಇದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನರಸಿಂಹೇಗೌಡರವರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಸದರಿಯವರ ಎಡದ ಕೈ ಮೂಳೆ ಹಾಗು ಬಗರಿ ಮೂಳೆಗೆ ತೀವ್ರ ಸ್ವರೂಪದ ಗಾಯಗಳಾಗಿ ಐಶ್ವರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆದುದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ನಂಬರಿನ ಕಾರು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ ವರದಿ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                  MYSURU CITY TRAFFIC VIOLATION CASES

 

                                                     DATE  :14-05-2019

SLNO

               HEADS

                             NO. OF CASES

DR

KR

NR

SN

VV

TOTAL

1

TOTAL NUMBER OF FTVRS

87

375

235

-

 

697

2

TOTAL NUMBER OF CRR'S

324

305

427

556

231

1,843

3

TOTAL FINE AMOUNT COLLECTED

35,800

34,400

43,700

57,900

25,700

1,97,500

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

1

-

-

2

3

8

INTERCEPTOR CASES

50

-

-

-

-

50

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-

 

 



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com