ENGLISH   |   KANNADA

Blog



ದಿನಾಂಕ;08.06.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.06.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 120       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

02

ಮೇಟಗಳ್ಳಿ ಠಾಣೆ

ದಿನಾಂಕಃ 08-06-2019ರಂದು ಪಿರ್ಯಾದುದಾರರಾದ ಶ್ರೀ ಪಂಕಜ್‌ಕುಮಾರ್‌ ರಾವಲ್‌ ರವರು ಠಾಣೆಗೆ ಹಾಜರಾಗಿ, ಮನೋಹರ್‌ ಸಿಂಗ್‌ ಎಂಬುವರಿಂದ ಹೆಬ್ಬಾಳ್‌ ಮೇನ್‌ ರೋಡಿನಲ್ಲಿರುವ ನಂ 777ರ ಸ್ವತ್ತನ್ನು 2017ನೇ ಇಸವಿಯಲ್ಲಿ 15 ಲಕ್ಷ  ರೂ.ಗಳಿಗೆ ಖರೀದಿ ಮಾಡಿ ಸ್ವಾಧೀನದಲ್ಲಿದ್ದು ಬೀಗ ಹಾಕಿಕೊಂಡಿದ್ದೆ. ಈಗ್ಗೆ 15-20 ದಿನಗಳ ಹಿಂದೆ ಸ್ವತ್ತಿನ ಬಳಿ ಹೋಗಿ ನೋಡಲಾಗಿ ಹಾಕಿದ್ದ ಬೀಗವನ್ನು ಯಾರೋ ತೆಗೆದು ಹಾಕಿ ಬೆಳ್ಳಿ ಅಂಗಡಿ ನಡೆಸುತ್ತಿದ್ದರಿಂದ ಅತಿಕ್ರಮ ಪ್ರವೇಶದ ಬಗ್ಗೆ ನಾನು ದಿನಾಂಕಃ 06-06-2019ರಂದು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,  ದಿನಾಂಕಃ 08-06-2019 ರಂದು ಮೇಟಗಳ್ಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಗಿಸಿಕೊಂಡು ಸುಮಾರು 11-30 ಗಂಟೆ ಸಮಯದಲ್ಲಿ ನಾನು ನನ್ನ ತಂದೆಯೊಡನೆ ಕೆ.ಎ-55. ಕೆ-5410 ಸ್ಕೂಟರ್‌ನಲ್ಲಿ ಪಾಸ್‌ಪೋರ್ಟ್‌ ಆಫೀಸ್‌ ಕ್ರಾಸ್‌ ಬಳಿ ಹೋಗುತ್ತಿದ್ದಾಗ ಮನೋಹರ್‌ ಸಿಂಗ್‌ ಬಂದು ಪಿರ್ಯಾದಿರವರನ್ನು  ಅಡ್ಡ ಹಾಕಿ, ಹಣ ಕೊಡಬೇಕಾಗಿಲ್ಲ ಎಂದು ಹೇಳುತ್ತಿರೆನ್ರೋ ಎಂದು ನಿಂದಿಸಿ, ನೀವು  ಆ ಪ್ರಾಪರ್ಟಿ ಅನ್ನು ಹೇಗೆ ಅನುಭವಿಸುತ್ತೀರಾ ನೋಡುತ್ತೇನೆ, ಎಂದು ಕೊಲೆ ಬೆದರಿಕೆ ಹಾಕಿದ್ದು ಮನೋಹರ್‌‌ ಸಿಂಗ್‌ ವಿರುದ್ದ ಕಾನೂನು ಕ್ರಮ ಜರುಗಿಸಿ ರಕ್ಷಣೆ ನೀಡಿ ಸ್ವತ್ತನ್ನು ವಾಪಸ್‌ ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಮೇಟಗಳ್ಳಿ ಠಾಣೆ

ದಿನಾಂಕ: 08-06-2019 ರಂದು  ಬೆಳಿಗ್ಗೆ 0900 ಗಂಟೆ ಸಮಯದಲ್ಲಿ  ಪಿರ್ಯಾದಿ ಕೃಷ್ಣ ರವರು  ತಮ್ಮ  ಮನೆಯ ಬಳಿ ನಿಂತಿದ್ದಾಗ ಸದರಿ ಆರೋಪಿತನು ಪಿರ್ಯಾದಿರವರನ್ನು ನೋಡಿ ಅವಾಚ್ಯ ಶಬ್ಧಗಳಿಂದ ಬೈದು ಕೇಳಿದ್ದಕ್ಕೆ ಕಬ್ಬಿಣದ ಪೈಪ್ ನಿಂದ ಪಿರ್ಯಾದಿರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಹೊರಟು ಹೋಗಿದ್ದು ಜಗಳದ ಸಮಯದಲ್ಲಿ ಪಿರ್ಯಾದಿ ರವರ ಕತ್ತಿನಲ್ಲಿದ್ದ ಚಿನ್ನದ ಚೈನ್ ಬಿದ್ದು ಹೋಗಿದ್ದು.  ಸದರಿ ಆರೋಪಿಯ  ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಠಾಣೆಗೆ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5

ಮನೆಕಳವುಪ್ರಕರಣ

01

ಲಕ್ಷ್ಮೀಪುರಂ ಠಾಣೆ

ದಿನಾಂಕಃ06-06-2019 ಬೆಳಿಗ್ಗೆ 10-30ಗಂಟೆಯಲ್ಲಿ ಫಿರ್ಯಾದಿ ವಿಜಯಲಕ್ಷ್ಮೀ ರವರ  ಮನೆಗೆ ಅರ್ಜುನ್ ರಾವ್ ಎಂಬುವರು ಬಂದು ಗಾದ್ರೇಜ್ ಬೀರುವಿನ ಬಳಿ ಕುಳಿತು ಮಾತನಾಡುತ್ತಾ ದಿಃ 8-6-2019ರಂದು ತಮ್ಮ ಮನೆಯಲ್ಲಿ ಮುತ್ತೈದೆ ಪೂಜೆ ಇಟ್ಟುಕೊಂಡಿದ್ದು ಸದರಿ ಪೂಜೆಗೆ ದಂಪತಿ ಸಮೇತ ಬರಬೇಕೆಂದು ಫಿರ್ಯಾದುದಾರರಿಗೆ ತಿಳಿಸಿ, ವಿಳಾಸ ಮತ್ತು ಪೋನ್ ನಂಬರ್ನ್ನು ನೀಡಿ ಹೋಗಿದ್ದು ನಂತರ ಸುಮಾರು 2-00 ಗಂಟೆ ಸಮಯದಲ್ಲಿ ಫಿರ್ಯಾದುದಾರರು ಬೀರುವನ್ನು ತೆಗೆದು ನೋಡಲಾಗಿ, ಬೀರುವಿನಲ್ಲಿ ಇಟ್ಟಿದ್ದ ಪರ್ಸ್‌ ಹಾಗೂ ಅದರಲ್ಲಿದ್ದ 2ಉಂಗುರ, 1ಜೊತೆ ಓಲೆ, 2ಬಳೆ ಒಟ್ಟು ಸುಮಾರು 20ಗ್ರಾಂ ತೂಕದ ಚಿನ್ನದ ಪದಾರ್ಥಗಳು ಕಾಣೆಯಾಗಿರುತ್ತದೆ. ಅಲ್ಲದೆ ಅರ್ಜುನ್  ರಾವ್ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಲಾಗಿ ವಿಳಾಸ ಪತ್ತೆಯಾಗಿರುವುದಿಲ್ಲ, ಆದ್ದರಿಂದ ತಮಗೆ ಅರ್ಜುನ್ ರಾವ್  ರವರ ಮೇಲೆ ಅನುಮಾನವಿದ್ದು ಕಳುವಾಗಿರುವ ತಮ್ಮ ಒಡವೆಗಳನ್ನು ಪತ್ತೆ ಮಾಡಿ ಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

06

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ:06-06-2019 ರಂದು ರಾತ್ರಿ ಸುಮಾರು 2130 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಕವಿತಾರವರು ತಮ್ಮ ಹೊಂಡಾ ಆಕ್ಟೀವಾ ಸ್ಕೂಟರ್ ನಂಬರ್ ಕೆಎ-55-ಎಕ್ಸ್-0127 ರಲ್ಲಿ ಸದರಿ ಸ್ಥಳದ ಬಳಿ ಹೋಗುತ್ತಿದ್ದಾಗ ಹಿಂಭಾಗದಿಂದ ಮೋಟಾರ್ ಸೈಕಲ್ ನಂಬರ್ ಕೆಎ-05-ಕೆಪಿ-9146 ನ್ನು ಅದರ ಸವಾರ ಮೊಹಮ್ಮದ್ ಸುಹೇಬ್ ಎಂಬುವರು ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರನ್ನು ಓವರ್ ಟೇಕ್ ಮಾಡಿ ಇಂಡಿಕೇಟರ್ ಹಾಕದೇ ಏಕಾಏಕಿ ನಿರ್ಲಕ್ಷತನದಿಂದ ಎಡಕ್ಕೆ ಚಾಲನೆ ಮಾಡಿದಾಗ ಪಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿಯಾಗಿ ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದ ಪಿರ್ಯಾದುದಾರರಿಗೆ ಮುಖಕ್ಕೆ, ಎಡಗೈಗೆ ಮತ್ತು ಎಡಗಾಲಿಗೆ ಪೆಟ್ಟಾಗಿದ್ದು.  ಚಿಕಿತ್ಸೆಗಾಗಿ ಕಾವೇರಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದು  ಅಪಘಾತಕ್ಕೆ ಕಾರಣನಾದ ಸದರಿ ಆರೋಪಿತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಪಿರ್ಯಾದುದಾರರು ಕಾವೇರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ ವ ವರದಿ.

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 04.06.2019 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಪಿರ್ಯಾದಿ ಪರಮೇಶ್ ರವರು ತಮ್ಮ ಸ್ಕೂಟರ್ ನಂಬರ್ ಕೆಎ 09 ಹೆಚ್ ಹೆಚ್ 2239 ಅನ್ನು ಗಾಯತ್ರಿಪುರಂ ಚಾರ್ಚ್ ಬಳಿ ನಿಲ್ಲಿಸಿಕೊಂಡು ನಿಂತಿದ್ದಾಗ, ಪೊಲೀಸ್ ಇಲಾಖೆಯಲ್ಲಿ ಪಿ ಎಸ್ ಐ ಅಗಿ ಕೆಲಸ ನಿರ್ವಹಿಸುತ್ತಿರುವ ಯಾಸ್ಮೀನ್ ತಾಜ್ ರವರ ಮಗನು ಸ್ಕೂಟರ್ ನಂಬರ್ ಕೆಎ 13 ಇಜೆ 4535 ಅನ್ನುಚಾಲನೆ ಮಾಡುತ್ತಿದ್ದ ಅವರ ಹಿಂಬದಿಯಲ್ಲಿ ಯಾಸ್ಮೀನ್ ತಾಜ್ ರವರು ಕುಳಿತುಕೊಂಡಿದ್ದು ಅವರ ಮಗ ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಪಿರ್ಯಾದಿರವರು ಸ್ಕೂಟರ್ ಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿರವರ ಸ್ಕೂಟರ್ ಜಖಂಗೊಂಡಿದ್ದು ಸದರಿ ಅಪಘಾತ ಮಾಡಿದ ಹುಡುಗನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ದಿನಾಂಕ 08.06.2019 ರಂದು ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ಬಂದ ಅಂಚೆ ಮೂಲಕ ದೂರನ್ನು ಸ್ವೀಕರಿಸಿ  ಕೇಸು ದಾಖಲಿಸಿದೆ.

 ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 07.06.2019 ರಂದು ಸಂಜೆ 1630 ಗಂಟೆ ಸಮಯದಲ್ಲಿ ಪಿರ್ಯಾದಿ ಮೈಕಲ್ ಜೋಸೆಫ್ ರವರು ಕಾರ್ ನಂಬರ್ ಕೆಎ 11ಎ 6243 ರಲ್ಲಿ ಪ್ರಯಾಣಿಕರಾದ ವೆಂಕಟರಮಣ್ಣ,ಭ್ಯಾಗ ಶ್ರೀ ,ಮತ್ತು ಸಾಯಿ ಪ್ರಣಿತಿ ಎಂಬುವರನ್ನು ಕುರಿಸಿಕೊಂಡು ಸದರಿ ಸ್ಥಳದಲ್ಲಿ ಚಾಲನೆಮಾಡಿಕೊಂಡು  ಹೋಗುವಾಗ ಗೋಪಾಲ್ ಗೌಡ ಆಸ್ಪತ್ರೆ ಗೇಟ್ ಒಳಗಡೆಯಿಂದ ಎಕಾಏಕಿ ಅಂಬ್ಯೂಲೇಸ್ ಚಾಲಕ ಬಹಳ ವೇಗವಾಗಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿರವರ ಕಾರಿಗೆ ಬಲಭಾಗಕ್ಕೆ ಡಿಕ್ಕಿಮಾಡಿದ ಪರಿಣಾಮ ಕಾರ್ ರಸ್ತೆಯಲ್ಲಿ ಬಲಕ್ಕೆ ತಿರುಗಿದ್ದ ಪರಿಣಾಮ ಕಾರಿನ ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿದ್ದು.  ಅಂಬ್ಯೂಲೇಸ್ ಮುಂದೆ ಹೋಗಿ ಗರಡಿ ಮನೆಯ ಕಾಂಪೌಂಡ್ ಗುದ್ದಿ ಒಳಗೆ ಹೋಗಿ ನಿಂತಿದ್ದು ಅದರ ನಂಬರ್ ನೋಡಲಾಗಿ ಕೆಎ 55 0191 ಅಗಿದ್ದು ನಂತರ ಸ್ಕೂಟರ್ ನಂಬರ್ ಕೆಎ 09 ಹೆಚ್ ಎಫ್8565 ಡಿಕ್ಕಿಯಾದ ಪರಿಣಾಮ ಸ್ಕುಟರ್ ಸವಾರರು ಇಬ್ಬರು ರಸ್ತೆ ಮೇಲೆ ಬಿದ್ದು ಅವರಿಗೆ ಪೆಟ್ಟಾಗಿದ್ದು ಎಲ್ಲಾ ಗಾಯಾಳುರವರನ್ನು ಗೋಪಾಲ ಗೌಡ ಆಸ್ಪತ್ರೆಗೆ ಚಿಕಿತ್ಸೆ ಹೋಗಿರುತ್ತಾರೆ, ನಂತರ ಗೋಪಾಲ ಗೌಡ ಅಸ್ಪತ್ರೆಯವರು ರಾಜೀಮಾಡಿಕೊಳ್ಳುವುದಾಗಿ ಹೇಳಿ ಬಾರದೆ ಇದ್ದ ಕಾರಣ ಪಿರ್ಯಾದಿರವರು ಅಂಬ್ಯೂಲೇಸ್ ಚಾಲಕ ರಮೇಶ್ ರವರ ವಿರುದ್ದ ತಡವಾಗಿ ನೀಡಿದ ದೂರಿನ ಮೇರೆಗೆ ಪ್ರ.ವ. ವರದಿ,

ಕೆ.ಆರ್ ಸಂಚಾರ ಠಾಣೆ

ದಿನಾಂಕ 06/06/2019 ರಂದು ಪಿರ್ಯಾದಿ ಮಾದಪ್ಪ ರವರ ತಂದೆ ಮಹದೇವಸ್ವಾಮಿ ರವರು ಅವರ ಊರಿನ ವೀರಭದ್ರಪ್ಪರವರು  ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ  ಅವರನ್ನು ನೋಡಲು ಮೈಸೂರಿಗೆ ಬಂದಿದ್ದು ನಂತರ ಮದ್ಯಾಹ್ನ ಸುಮಾರು 03.30 ಗಂಟೆಗೆ ಮಹದೇವಸ್ವಾಮಿರವರ ಪೋನಿನಿಂದ ಯಾರೋ ಪಿರ್ಯಾದುದಾರರಿಗೆ ಪೋನ್‌ ಮಾಡಿ ಮದ್ಯಾಹ್ನ 02.40 ಗಂಟೆಯಲ್ಲಿ ಮಹದೇವಸ್ವಾಮಿ ರವರು ಆಂದೋಲನ ಪ್ರೆಸ್‌  ಹತ್ತಿರ ರಾಮಾನುಜ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಸ್ಕುಟರ್ ನಂ KA-10-V-9788  ಸವಾರಳಾದ ಗಾಯತ್ರಿ ಎಂಬುವಳು ಡಿಕ್ಕಿ ಮಾಡಿದ್ದು  ಮಹದೇವಸ್ವಾಮಿ ರವರಿಗೆ ಮೂಗು ಮತ್ತು ಕಿವಿಯಿಂದ ರಕ್ತ ಬಂದಿದ್ದು ಡಿಕ್ಕಿ ಮಾಡಿದ ಹುಡುಗಿಯೇ ಜೆ.ಎಸ್.ಎಸ್‌ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದು ಕೂಡಲೇ  ಮೈಸೂರಿನಲ್ಲೇ ಇರುವ ಅವರ ದೊಡ್ಡಪ್ಪನ ಮಗನಿಗೆ  ವಿಚಾರ ತಿಳಿಸಿ ನಂತರ  ತಾವು ಮೈಸೂರಿಗೆ ಜೆ.ಎಸ್.ಎಸ್ ಆಸ್ಪತ್ರೆಗೆ ಬಂದಿದ್ದು  ಡಿಕ್ಕಿಮಾಡಿದ ಸ್ಕೂಟರ್  ಕಡೆಯವರೇ ಚಿಕಿತ್ಸೆ ಮಾಡಿಸುತ್ತಿದ್ದು ನಿನ್ನೆ  ಚಿಕಿತ್ಸೆ ಮಾಡಿಸಲು ಆಗುವುದಿಲ್ಲವೆಂದು ಹೇಳಿ ಹೊರಟು ಹೋಗಿದ್ದರಿಂದ ಈ ದಿನ ತಡವಾಗಿ ಬಂದು ಡಿಕ್ಕಿಮಾಡಿದ ಸ್ಕುಟರ್ ಸವಾರಳಾದ ಗಾಯತ್ರಿ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯಾ ಕೊಡಿಸಬೇಕಾಗಿ ನೀಡಿದ ದೂರು.

ಕೆ.ಆರ್ ಸಂಚಾರ ಠಾಣೆ

ದಿನಾಂಕ 06/06/2019 ರಂದು ಪಿರ್ಯಾದಿ ದಿಲೀಪ್ ರವರ ತಂದೆ 43 ವರ್ಷದ ಪುಟ್ಟಸ್ವಾಮಿ ರವರು ತಮ್ಮ ಬಜಾಜ್ ಸಿಟಿ-100 ಮೋಟಾರ್ ಸೈಕಲ್ ನಂKA-09-HU-4312 ನ್ನು ಸಿದ್ದಪ್ಪ ವೃತ್ತದ ಹತ್ತಿರ ರಸ್ತೆಯ ಎಡಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅಲ್ಟೋ ಕಾರ್ ನಂ KA-09-N-6257ರ ಚಾಲಕ ಕಾರನ್ನು ವೇಗವಾಗಿ ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಪುಟ್ಟಸ್ವಾಮಿ ರವರ  ಮೋಟಾರ್ ಸೈಕಲ್ ಗೆ ಡಿಕ್ಕಿಮಾಡಿದ್ದರಿಂದ ಪುಟ್ಟಸ್ವಾಮಿ ರವರಿಗೆ ತಲೆಯ ಹಿಂಭಾಗ ಮತ್ತು ಮೊಣಕೈಗೆ  ತೀವ್ರವಾಗಿ ಗಾಯವಾಗಿದ್ದು  ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮಾಡಿಸುತ್ತಿದ್ದು  ಅವರಿಗೆ ದೂರು ಕೊಡಲು ಆಗದ ಕಾರಣ ಅವರ ಮಗನಾಗಿದ್ದು ತಡವಾಗಿ ಈ ದಿನ ದೂರು ನೀಡುತ್ತಿದ್ದು ಡಿಕ್ಕಿಮಾಡಿದ ಕಾರು ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ

ಕೆ.ಆರ್ ಸಂಚಾರ ಠಾಣೆ

ದಿನಾಂಕ: 08-06-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಪಿರ್ಯಾದಿ ನಿಂಗಣ್ಣ ರವರು ಹೀರೋಹೋಂಡಾ ಸ್ಪ್ಲೆಂಡರ್‌ ಮೋಟಾರ್ ಸೈಕಲ್‌ ನಂ. KA-10-L-4095 ರಲ್ಲಿ ಹಿಂಭಾಗ ಸವಿತಾ ಎಂಬುವರನ್ನು ಕೂರಿಸಿಕೊಂಡು ಎಂಎಲ್‌ಎ ಯತೀಂದ್ರ ಸಾಹೇಬರವರ ಮನೆ ರಾಮಕೃಷ್ಣನಗರಕ್ಕೆ ಹೋಗಲು ಶ್ರೀರಾಂಪುರ, 2ನೇ ಹಂತ, ಮಾಲೇಗಾಲದ ಮಾರಮ್ಮ ದೇವಸ್ಥಾನದ ಮುಂಭಾಗ ರಿಂಗ್‌‌ ರಸ್ತೆ ಜಂಕ್ಷನ್‌‌ನ್ನು ಕೋಟೆಹುಂಡಿ ಕಡೆಯಿಂದ ಪ್ರೀತಿ ಲೇಔಟ್‌ ಕಡೆಗೆ ಕ್ರಾಸ್‌ ಮಾಡಿ ಹೋಗುತ್ತಿದ್ದಾಗ ರಿಂಗ್‌ ರಸ್ತೆಯಲ್ಲಿ ಬೋಗಾದಿ ಕಡೆಯಿಂದ ಶ್ರೀರಾಂಪುರದ ಕಡೆಗೆ ಟೋಯೋಟಾ ಇನ್ನೋವಾ ಕಾರ್‌ ನಂ. KL-58-C-7455 ರ ಚಾಲಕ ಅತಿವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜಂಕ್ಷನ್‌‌‌ನ್ನು ಕ್ರಾಸ್‌ ಮಾಡಿ ಹೋಗುತ್ತಿದ್ದ ಪಿರ್ಯಾದಿ ಬೈಕ್‌ನ ಹಿಂಭಾಗಕ್ಕೆ ಡಿಕ್ಕಿ ಮಾಡಿದಾಗ ಪಿರ್ಯಾದಿ ಮತ್ತು ಸವಿತಾ ರವರು ಬೈಕ್‌ ಸಮೇತ ಕೆಳಗೆ ಬಿದ್ದಾಗ ಸಾರ್ವಜನಿಕರು ಅವರನ್ನು ಉಪಚರಿಸುತ್ತಿದ್ದಾಗ ಪಿರ್ಯಾದಿಯ ಮೈ,ಕೈ,ಕಾಲುಗಳಿಗೆ ಪೆಟ್ಟಾಗಿದ್ದು, ಸವಿತಾ ರವರ ಎಡಗಾಲಿಗೆ ಮತ್ತು ತಲೆಗೆ ಪೆಟ್ಟಾಗಿದ್ದು, ಅಲ್ಲೆ ಬಂದ ಕಾರೊಂದರಲ್ಲಿ ಚಿಕಿತ್ಸೆಗಾಗಿ ಪೆನೆಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ಚಿಕಿತ್ಸೆ ಮಾಡಿದ ಡಾಕ್ಟರ್‌ ಸವಿತಾ ರವರ ಎಡಗಾಲಿನ ಮೂಳೆ ಮುರಿದಿದ್ದು ಆಪರೇಷನ್‌ ಮಾಡಬೇಕೆಂದು ತಿಳಿಸಿದ್ದು, ತಲೆಯ ಸ್ಕ್ಯಾನಿಂಗ್‌ ರಿಪೋರ್ಟ ಬರಬೇಕೆಂದು ತಿಳಿಸಿರುತ್ತಾರೆಂದು ಈ ಅಪಘಾತಕ್ಕೆ ಕಾರಣನಾದ ಟೋಯೋಟಾ ಇನ್ನೋವಾ ಕಾರ್‌ ನಂ. KL-58-C-7455 ರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಪಿರ್ಯಾದಿಯು ಪೆನೆಷಿಯಾ ಆಸ್ಪತ್ರೆಯ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ

 

10

ವಂಚನೆ ಪ್ರಕರಣ 

-

ಮೇಟಗಳ್ಳಿ ಠಾಣೆ

ದಿನಾಂಕ 08-06-2019ರಂದು ಪಿರ್ಯಾದಿ ಸೋಮಶೇಖರ್ ರವರು ನನ್ನ ಸ್ವಂತ ಸ್ವತ್ತು ಮೇಟಗಳ್ಳಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಸೈಟ್ ನಂ 01/3ರಲ್ಲಿ ಶೇ 60ಬಿಲ್ಡರ್ಸ್  ರವರಿಗೆ ನಿವೇಶನ ಮಾಲೀಕರಿಗೆ ಶೇ 40ರಂತೆ ಪಾಠಕ್ ಡೆವಲಪರ್ ರವರ ಜೊತೆ ಸೇರಿ ಜಂಟಿಯಾಗಿ ಅಭಿವೃದ್ದಿ ಮಾಡಿ ಅಪಾರ್ಟ್ ಮೆಂಟ್ ಕಟ್ಟುವುದಾಗಿ ದಿನಾಂಕಃ 30/06/2013ರಂದು ಜಂಟಿ ಅಭಿವೃದ್ದಿ ಕರಾರನ್ನು ಮಾಡಿಕೊಂಡಿದ್ದು,  ಅಗ್ರಿಮೆಂಟ್ ಪ್ರಕಾರ 2 ವರ್ಷ 4ತಿಂಗಳು ಮತ್ತು ಹೆಚ್ಚುವರಿಯಾಗಿ 4ತಿಂಗಳು ಕಳೆದರೂ ಯಾವುದೆ ಅಭಿವೃದ್ದಿ ಕೆಲಸವನ್ನು ಮಾಡಿರುವುದಿಲ್ಲ ಆದರೂ ಸಹ ನನ್ನ ಮತ್ತು ಪಾಠಕ್ ಡೆವಲಪರ್ಸ ನಡುವೆ ಜಿ.ಪಿ.ಎ ಹಾಗೂ ಜಂಟಿ ಅಭಿವೃದ್ದಿ ಆಗಿದೆ ಎಂದು  ಪಾಠಕ್ ಡೆವಲಪರ್ಸ ಶ್ರೀಹರಿ ಪಾಠಕ್ ಸುಳ್ಳು ಹೇಳಿ ಪರಸ್ಪರ ಒಪ್ಪಂದ ಕರಾರಿನ ಆಧಾರದ ಮೇಲೆ ಮುಂಗಡ ಬುಕ್ಕಿಂಗ್ ನಂತೆ ದಿನಾಂಕಃ 20-02-2013ರಂದು ಶ್ರೀಮತಿ ಪಾರ್ವತಿ, ಶ್ರೀನಿವಾಸಲು, ವೆಂಕಟರಮಣ, ಕಾಡಶ್ರೀನಿವಾಸ ರಾವ್ ಹಾಗೂ ಉಮಾ ಮಹೇಶ್ವರಿ ಎಂಬುವರಿಗೆ ಫ್ಲಾಟ್ ಗಳನ್ನು ಅಗ್ರಿಮೆಂಟ್ ಮಾಡಿ 35 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆದುಕೊಂಡಿರುತ್ತಾರೆ. ನನಗೆ ಸೇರಿದ ನಿವೇಶನದಲ್ಲಿ ಫ್ಲಾಟ್ ಗಳನ್ನು ಕಟ್ಟುವುದಾಗಿ ಕರಾರು ಮಾಡಿಕೊಂಡು ನಿಗಧಿತ ಅವಧಿಯಲ್ಲಿ ಫ್ಲಾಟ್ ಗಳನ್ನು ಕಟ್ಟದೆ ಕರಾರರನ್ನು ಉಲ್ಲಂಘನೆ ಮಾಡಿ ವಾಪಸ್ ಜಿ.ಪಿ.ಎ ವಿಥ್ ಡ್ರಾ ಮಾಡಿಕೊಡದೆ ಮೋಸ ಮಾಡಿ ನಷ್ಟ ಉಂಟು ಮಾಡಿರುವ ಪಾಠಕ್ ಡೆವಲಪರ್ಸ್ ಎಂ.ಡಿ ಜಯರಾಂ ಪಾಠಕ್, ಡೈರೆಕ್ಟರ್ ಶ್ರೀಹರಿ ಪಾಠಕ್ ಹಾಗೂ ಶ್ರದ್ದಾ ಪಾಠಕ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                                 MYSURU CITY TRAFFIC VIOLATION CASES

 

                                                DATE  :08-06-2019

SLNO

              HEADS

                              NO. OF CASES

DR

KR

NR

SN

VV

TOTAL

1

TOTAL NUMBER OF FTVRS

105

75

 

-

-

180

2

TOTAL NUMBER OF CRR'S

230

314

417

180

291

1,432

3

TOTAL FINE AMOUNT COLLECTED

24,900

33,700

42,700

18,400

31,800

1,51,500

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

1

7

NON FATAL

-

3

1

02

-

6

8

INTERCEPTOR CASES

45

-

-

-

 

45

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com