ENGLISH   |   KANNADA

Blogದಿನಾಂಕ;10.06.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.06.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 345       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

03

ಹೆಬ್ಬಾಳ್ ಠಾಣೆ

ಪಿರ್ಯಾದಿ ವಿದ್ಯಾಸಾಗರ್ ರವರು ದಿ-10.06.19 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಕಾವೇರಿಗೌಡ, ವಿಶ್ವ, ವಿವೇಕಾನಂದ,ಮಂಜುನಾಥ,ರವಿ ಹಾಗೂ ಇತರ ಮೂರು ಜನರು ಪಿರ್ಯಾದಿಯವರಿಗೆ ಸೇರಿದ ಹೆಬ್ಬಾಳ್‌ ಸರ್ವೆ ನಂ 324/3, 324/7 ರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಮ್ಯಾನೇಜರ್‌ ಮತ್ತು ಕೆಲಸಗಾರರಿಗೆ ದೊಣ್ಣೆಯನ್ನು ತೋರಿಸಿ ಬೆದರಿಸಿ, ಕಟ್ಟಿರುವ ಕಾಂಪೌಂಡ್ ಗೋಡೆಯನ್ನು ಬೀಳಿಸಿ ಮತ್ತು ನಾಮಪಲಕವನ್ನು ಬೀಳಿಸಿ ಹಾನಿಗೊಳಿಸಿದ್ದು ಮತ್ತು ಸ್ಥಳಕ್ಕೆ ಬಂದ ಪಿರ್ಯಾದಿಯರಿಗೆ ಹಾಗೂ ಅವರ ಮಗನಾದ ಭರತ್‌ರವರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಕೊಲೆ ಬೆದರಿಕೆ ಹಾಕಿದ್ದು,  ನೀವು ಈ ಕೂಡಲೆ ಈ ಸೈಟನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಎಂದು ದೂರು ನೀಡಿ  ಇವರುಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ ವರದಿ.

ಹೆಬ್ಬಾಳ್ ಠಾಣೆ

ಪಿರ್ಯಾದಿ ವಿವೇಕಾನಂದ ರವರು  ಪಿರ್ಯಾದಿಯವರು ಹೆಬ್ಬಾಳ್ ಸರ್ವೆ ನಂಬರ್‌ 324/11 ರ ಸ್ವತ್ತಿನ ಮಾಲಿಕರಾಗಿದ್ದು,  ದಿನಾಂಕ 09.06.2019 ರಂದು ಬೆಳಿಗ್ಗೆ 11.15 ಗಂಟೆ ಸಮಯದಲ್ಲಿ ವಿದ್ಯಾಸಾಗರ್‌ ಹಾಗೂ ಭರತ್‌ ಮತ್ತು ಅವರ ಸಂಗಡಿಗರು ಬಂದು ಪಿರ್ಯಾದಿಯವರ ಮೇಲ್ಕಂಡ ಸ್ವತ್ತಿಗೆ ಅತಿಕ್ರಮ ಪ್ರವೇಶ ಮಾಡಿ ಸ್ವತ್ತಿಗೆ ನಿರ್ಮಿಸಿದ ಕಾಂಪೌಂಡ್‌ ಅನ್ನು ದ್ವಂಸ ಮಾಡಿದ್ದು, ವಿಷಯ ತಿಳಿದ ಪಿರ್ಯಾದಿಯವರು ಸ್ಥಳಕ್ಕೆ ಹೋದಾಗ ಪಿರ್ಯಾದಿಯವರಿಗೆ ವಿದ್ಯಾಸಾಗರ್‌ ಹಾಗೂ ಭರತ್‌ ಮತ್ತು ಅವರ ಸಂಗಡಿಗರು ದೊಣ್ಣೆಯಿಂದ  ಹಾಗೂ ಕೈಯಿಂದ ಹೊಡೆದು ಹಲ್ಲೆಮಾಡಿ, ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಇನ್ನೊಂದು ಸಾರಿ ಸ್ವತ್ತಿನ ಹತ್ತಿರ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಉದಯಗಿರಿ ಠಾಣೆ

ಪಿರ್ಯಾದಿ ಆಯೂಬ್ ಅಹಮದ್ ಖಾನ್ ರವರ ಮಗಳು ಮತ್ತು ಅಳಿಯ ಜುನೈದ್ ಅಹಮ್ಮದ್ ರವರುಗಳ ನಡುವೆ ಸಾಂಸಾರಿಕ ಜೀವನದಲ್ಲಿ ಮನಸ್ಥಾಪವಾಗಿದ್ದು, ನಂತರ ಮಗಳು ಪಿರ್ಯಾದಿಯ ಮನೆಯಲ್ಲಿದ್ದು, ದಿನಾಂಕ: 08-06-2019 ರಂದು ಸಂಜೆ 16-30 ಗಂಟೆಯಲ್ಲಿ ಪಿರ್ಯಾದಿಯ ಮನೆಯಲ್ಲಿದ್ದಾಗ ಅವರ ಅಳಿಯ ಜುನೈದ್ ಅಹಮದ್ ಮತ್ತು ಅವರ ಅಣ್ಣ ನಾಸೀರ್ ಅಹಮದ್, ಹಾಗೂ ಅವರ ತಾಯಿ ರವರು ಮನೆಗೆ ಬಂದು ಬೈದು ಕೈಯಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ಸದರಿಯವರುಗಳ ವಿರುದ್ದು ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿದೆ.

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

02

ಸರಸ್ವತಿಪುರಂ ಠಾಣೆ

ಪಿರ್ಯಾದಿ ಚೇತನ್ ರವರು ತಮ್ಮ ಪತ್ನಿಯವರ ಜೊತೆ ದಿನಾಂಕ: 08/12/2018 ರಂದು ಅಮೆರಿಕಾದಲ್ಲಿರುವ ತಮ್ಮ ಮಗಳನ್ನು ನೋಡಲು ಮನೆಯ ಗೇಟ್‌‌‌‌‌‌ನ ಒಳಗೆ ತಮ್ಮ ಬಾಬ್ತು ಹೋಂಡಾ ಆಕ್ಟಿವಾ ನಂ ಕೆಎ-05 ಇಕ್ಯೂ4348 ಸ್ಕೂಟರ್‌‌‌‌ ಅನ್ನು ಬೀಗ ಹಾಕಿ ನಿಲ್ಲಿಸಿ ಅಮೆರಿಕಾಗೆ ಹೋಗಿರುತ್ತಾರೆ. ಈಗಿರುವಾಗ್ಗೆ ದಿನಾಂಕ: 25/12/2018 ಬೆಳಿಗ್ಗೆ 8.00 ಗಂಟೆ ಸಮಯದಲ್ಲಿ ಪಕ್ಕದ ಮನೆಯವರು ಫೋನ್ ಮಾಡಿ ಸ್ಕೂಟರ್ ಕಳ್ಳತನವಾಗಿರುವ ವಿಚಾರವನ್ನು ತಿಳಿಸಿರುತ್ತಾರೆ. ಸ್ಕೂಟರ್‌‌‌ನ ಬೆಲೆ 30,000 ರೂಗಳಾಗಿದ್ದು, ದಿನಾಂಕ: 06/06/2019 ರಂದು ಅಮೆರಿಕಾದಿಂದ ಮೈಸೂರಿಗೆ ಬಂದಿದ್ದು, ಈ ದಿನ ಪೊಲೀಸ್ ಠಾಣೆಗೆ ಬಂದು ಸ್ಕೂಟರ್‌‌ಅನ್ನು ಕಳ್ಳತನ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಿ ಸ್ಕೂಟರ್‌‌‌‌ ವಾಪಸ್‌‌ ನೀಡಬೇಕಾಗಿ ನೀಡಿದ ಮೇರೆಗೆ ಈ ಪ್ರ.ವರದಿ.

ವಿಜಯನಗರ ಠಾಣೆ

ದಿಃ09-06-2019 ರಂದು ರಾತ್ರಿ 9-30 ಘಂಟೆಯಿಂದ ದಿಃ10-06-2019 ರಂದು ಬೆಳಗ್ಗೆ 6-300 ಘಂಟೆಯ ನಡುವೆ ಫಿರ್ಯಾದಿ ದಿವ್ಯಶ್ರೀ ರವರ  ಹೆಸರಿನಲ್ಲಿರುವ ಬಜಾಜ್ ಅವೆಂಜರ್ 220 ಸಿಸಿ ಬೈಕ್ ನಂ ಕೆಎ09 ಹೆಚ್‌ಎಫ್7116 ಅನ್ನು ಫಿರ್ಯಾದುದಾರರ ತಮ್ಮನಾದ ವಿ ಇಂದೂದರ್ ಎಂಬುವವರು ಫಿರ್ಯಾದುದಾರರ ಮನೆಯ ಮುಂದೆ ಬೀಗ ಹಾಕಿ ನಿಲ್ಲಸಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಮಾಡಿಕೊಂಡು ಹೋಗಿದ್ದು, ಅದರ ಬೆಲೆ ರೂ 45.000/- ಗಳಾಗುತ್ತೆ. ಎಲ್ಲಾ ಕಡೆ ಹುಡುಕಾಡುತ್ತಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದು,ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳ್ಳನತ ವಾಗಿರುವ ಬೈಕ್ ಅನ್ನು ಪತ್ತೆ ಮಾಡಿಕೊಡಬೆಕೆಂದು ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಪ್ರ, ವ, ವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

-

ಮಹಿಳಾ ಠಾಣೆ

ಪಿರ್ಯಾದಿ ಜ್ಯೋತಿ ರವರು ದಿನಾಂಕ: 22.06.2011 ರಂದು ಆರೋಪಿ-1 ಗಿರೀಶ್ ಬಾಬು ಎಂಬುವವರನ್ನು ಗುರುಹಿರಿಯರ ಸಮಕ್ಷಮದಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1 ರವರ ಬೇಡಿಕೆಯಂತೆ 3 ಲಕ್ಷ ನಗದು ಹಣವನ್ನು ವರದಕ್ಷಿಣೆಯಾಗಿ ಕೊಟ್ಟಿರುತ್ತಾರೆ. ಮದುವೆಯ ನಂತರದಲ್ಲಿ ಪಿರ್ಯಾಧಿಯು ಆರೋಪಿ-1, ಆರೋಪಿ-2 ಲಕ್ಷ್ಮಮ್ಮ ಹಾಗೂ ಆರೋಪಿ-3 ಪ್ರಸಾದ್ ರವರೊಂದಿಗೆ ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ-1,2,3 ರವರುಗಳು ಸಣ್ಣ ಪುಟ್ಟ ವಿಚಾರಗಳಿಗೆ ಬೈದು, ಹೊಡೆದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ನಂತರದಲ್ಲಿ ಪಿರ್ಯಾಧಿಗೆ ಹೆಣ್ಣು ಮಗುವಾಗಿದ್ದು, ಪಿರ್ಯಾಧಿಯ ಹಾಗೂ ಮಗುವಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳದೇ ಇದ್ದು, ಮದುವೆಯ ಸಮಯದಲ್ಲಿ ನೀಡಿರುವ ವರದಕ್ಷಿಣೆ ಸಾಲುವುದಿಲ್ಲ, ಹೆಚ್ಚಿನ ವರದಕ್ಷಿಣೆಯಾಗಿ 20 ಲಕ್ಷ ಹಾಗೂ ಸೈಟನ್ನು ತೆಗೆದುಕೊಂಡು ಬಂದರೆ ಮನೆಗೆ ಸೇರಿಸುವುದಾಗಿ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

9

ರಸ್ತೆ ಅಪಘಾತ

02

ಸಿದ್ಧಾರ್ಥನಗರ ಸಂಚಾರ ಠಾಣೆ

ದಿ-10.06.19 ರಂದು ಬೆಳಿಗ್ಗೆ10.00 ಗಂಟೆ ಸಮಯದಲ್ಲಿ ಪಿರ್ಯಾದಿ ರಮೇಶ್ ರವರ ಮಾವನವರಾದ ಸಮಿ ಉಲ್ಲಾ ಖಾನ್ (72 ವರ್ಷ) ರವರು ತಮ್ಮ ಮೋಟಾರ್ ಸೈಕಲ್ ನಂಬರ್ ಕೆಎ 55 ಕ್ಯೂ 1017 ಅನ್ನು ಚಾಲನೆ ಮಾಡಿಕೊಂಡು ಸಾತಗಳ್ಳಿ ಡಿಪೋ ಕಡೆಯಿಂದ ಕೊಲಂಬಿಯಾ ಎಷಿಯಾ ಕಡೆಗೆ ರಿಂಗ್ ರಸ್ತೆ ಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಯಾಸೀನ್ ಮಸೀದಿ ರಸ್ತೆ ಮತ್ತು ರಿಂಗ್ ರಸ್ತೆ ಜಂಕ್ಷನ್ ಬಳಿ ಪಿರ್ಯಾದಿ ರವರ ಮಾವನವರ ಸ್ಕೂಟರ್ ಹಿಂದಿನಿಂದ ಅದೇ ಮಾರ್ಗವಾಗಿ ಒಂದು ಬಳಿ ಬಣ್ಣದ ಕಾರ್ ಅದರ ಚಾಲಕ ಆತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿಮಾಡಿದ ಕಾರಿನ ಸಮೇತ ಸ್ಥಳದಿಂದ ಹೊರಟು ಹೋಗಿದ್ದ ಪರಿಣಾಮ ಸ್ಕೂಟರ್ ಸವಾರರು ಸ್ಕೂಟರ್ ಸಮೇತ ರಸ್ತೆ ಮೇಲೆ ಬಿದ್ದು ಅವರ ತಲೆ ಕಾಲು ಮತ್ತು ಕೈಗಳಿಗೆ ಪೆಟ್ಟಾಗಿ ಅವರನ್ನು ಸಾರ್ವಜನಿಕರು ಚಿಕಿತ್ಸೆಗೆ ನಾರಾಯಾಣ ಹೃದಯಾಲಯ ಅಸ್ಪತ್ರೆಗೆ ದಾಖಲಿಸಿದ್ದು ನಂತರ ಪರಿಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿರವರು ತಮ್ಮ ಮಾವನ ಸಾವಿಗೆ ಕಾರಣನಾದ ಬಿಳಿ ಬಣ್ಣದ ಕಾರ್ ಮತ್ತು ಚಾಲಕನನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ.

ಕೆ.ಆರ್ ಸಂಚಾರ ಠಾಣೆ

ದಿನಾಂಕ: 10/06/2019 ರಂದು ಸಂಜೆ 18.05 ಗಂಟೆಯಲ್ಲಿ ಪಿರ್ಯಾದಿ ರಮೇಶ್ ರವರು ತಮ್ಮ ಮೋಟಾರ್ ಸೈಕಲ್‌ ನಲ್ಲಿಬೋಗಾದಿಗೆ ಹೋಗುತ್ತಿದ್ದು ಶಾರಾದದೇವಿ ನಗರದಿಂದ ಮುಂದೆ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಹೋಗಿ ರಿಂಗ್ ರಸ್ತೆ ಸೇರುವಾಗ ತಮ್ಮಿಂದ ಮುಂದೆ  ಹೊಂಡಾ ಅಕ್ಟಿವಾ ಸ್ಕೂಟರ್ ನಂ KA-09-HJ-2733ರ ಸವಾರರೊಬ್ಬರು  ಹೋಗುತ್ತಿದ್ದು ಅವರು ಜಂಕ್ಷನ್ ನಲ್ಲಿ ಮುಕ್ಕಾಲು ಭಾಗ ಹೋಗಿ ಬಲಕ್ಕೆ ಬೋಗಾದಿ ರಸ್ತೆ ಕಡೆಗೆ ತಿರುಗಿಸುತ್ತಿದ್ದಾಗ  ರಿಂಗ್ ರಸ್ತೆಯಲ್ಲಿ  ಬುಲೆರೊ ಪಿಕ್ ಅಪ್  ಎಲ್.ಜಿ.ವಿ ನಂ  KL-12-E-8536 ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದು  ಹೊಂಡಾ ಅಕ್ಟಿವಾ ಸ್ಕೂಟರ್ ಗೆ ಡಿಕ್ಕಿಮಾಡಿದ್ದು  ಸ್ಕುಟರ್ ಸವಾರ ಕೆಳಕ್ಕೆ ಬಿದ್ದಾಗ  ಬುಲೆರೋ ಪಿಕ್ ಅಪ್ ನ ಬಲ ಮುಂದಿನ ಚಕ್ರ ಮೇಲೆ ಹರಿದು ಎಡಕ್ಕೆ ಹೋಗಿದ್ದು  ಪಿರ್ಯದುದಾರರು ಅಲ್ಲೇ ಇದ್ದ ಜನ ಹೋಗಿ ಕೆಳಕ್ಕೆ ಬಿದ್ದಿದ್ದ ಹೊಂಡಾ ಅಕ್ಟಿವಾ ಸವಾರರನ್ನು ಮೇಲೆ ಎತ್ತಿದ್ದು  ಬಲಭುಜ ಎದೆಯ ಬಲಭಾಗ  ಮತ್ತು ಕತ್ತಿನ ಎಡಭಾಗದಲ್ಲಿ ಮೈ ಕೈಯಲ್ಲಿ ಗಾಯಗಳಾಗಿದ್ದು, ನಂತರ ಗಾಯಗೊಂಡಿದ್ದವರ ಪೋನ್ ನಿಂದ ಫೋನ್ ನಲ್ಲಿದ್ದ ನಂಬರ್ ಗೆ ಫೋನ್ ಮಾಡಿವಿಚಾರ ತಿಳಿಸಿದಾಗ ಗಾಯಗೊಂಡಿದ್ದವರ  ಹೆಸರು ರವಿಶಂಕರ್ ಎಂದು ತಿಳಿದಿದ್ದು  ವಿಚಾರ ತಿಳಿದು ಬಂದ ಗರುಡಾ ಪೊಲೀಸ್ ಕಾರಿನವರು  ಕಾಮಾಕ್ಷಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು,  ವಿಚಾರ ತಿಳಿದು ಗಾಯಗೊಂಡಿದ್ದವರ ಕಡೆಯವರು ಆಸ್ಪತ್ರೆಗೆ ಬಂದಿದ್ದು ಅವರಿಗೆ ವಿಚಾರ ತಿಳಿಸುತ್ತಿದ್ದಾಗ ರಾತ್ರಿ 07.30 ಗಂಟೆಯಲ್ಲಿ  ಡಾಕ್ಟರ್ ರವರು ರವಿಶಂಕರ್ ರವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿಸಿರುತ್ತಾರೆಂದು ಅಪಘಾತಕ್ಕೆ ಕಾರಣನಾದ ಬುಲೆರೊ ಪಿಕ್ ಅಪ್  ಎಲ್.ಜಿ.ವಿ ನಂ  KL-12-E-8536 ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನ ಮೇರೆಗೆ ಪ್ರ ವ ವರದಿ.

 

10

ವಂಚನೆ ಪ್ರಕರಣ 

01

ಅಶೋಕಪುರಂ ಠಾಣೆ

ದಿ-10.06.19 ರಂದು ಸಂಜೆ 1945 ಸಮಯದಲ್ಲಿ  ಪಿರ್ಯಾದಿ ಸುಜಾತ ರವರು ಈ ದಿನ ಬೆಳಿಗ್ಗೆ 11.00 ಗಂಟೆಗೆ ತಮಗೆ ಇದ್ದ ತೀವ್ರ ಜ್ವರ ಮತ್ತು ವಾಂತಿಯ ಕಾರಣದಿಂದ  ತಮ್ಮ ತಾಯಿಯವರೊಂದಿಗೆ  ಅಪೊಲೋ ಬಿ.ಜಿ.ಎಸ್ ಆಸ್ಪತ್ರೆಗೆ ಬಂದಿದ್ದು ವೈದ್ಯರನ್ನು ಕಂಡು ಚಿಕಿತ್ಸೆ ಪಡೆದು ರಕ್ತ ಪರೀಕ್ಷೆಯ ನಂತರ ಚುಚ್ಚುಮದ್ದು ಹಾಗೂ ಡ್ರಿಪ್ಸ್ ಹಾಕಿಸಲು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಪಿರ್ಯಾದಿಯವರು ತುರ್ತು ಚಿಕಿತ್ಸಾ ಘಟಕಕ್ಕೆ ಬಂದಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಆಸ್ಪತ್ರೆಯ ನರ್ಸ್ ರವರು ಪಿರ್ಯಾದಿಯವರ ಚುಚ್ಚುಮದ್ದು ಮತ್ತು ಡ್ರಿಪ್ಸ್ ಹಾಕಿದ್ದು ಆ ಸಮಯದಲ್ಲಿ ಪಿರ್ಯಾದಿಯವರ ತಾಯಿ ಹೊರಗೆ ಇದ್ದು ಸುಮಾರು 12.05 ಗಂಟೆ ಸಮಯಕ್ಕೆ ಅಲ್ಲಿಗೆ ಬಂದ ಒಬ್ಬ ವ್ಯಕ್ತಿಯು ಬಂದು ಎಕ್ಸರೇ ತೆಗೆಯಬೇಕು ಚಿನ್ನಾಭರಣಗಳನ್ನು ತೆಗೆಯಿರಿ ಎಂದು ಹೇಳಿದ್ದು ಪಿರ್ಯಾದಿಯವರು ತಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆಯಲು ತಮ್ಮ ತಲೆಯನ್ನು ಎತ್ತಿ ಅರ್ದ ತಲೆಯಿಂದ ಚಿನ್ನದ ಸರ ತೆಗೆಯುತ್ತಿದ್ದಾಗ  ಆ ವ್ಯಕ್ತಿಯೇ ಪಿರ್ಯಾದಿಯವರ ತಲೆ ಹಿಡಿದು ಸರ ತೆಗೆಯಲು ಸಹಾಯ ಮಾಡಿ ಸುಮಾರು 96,000/- ರೂ ಬೆಲೆಯ 32 ಗ್ರಾಂ ತೂಕದ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಹೊರಟು ಹೋಗಿದ್ದು  ಆಸ್ಪತ್ರೆಯ ಸಿಬ್ಬಂದಿಯಂತೆ ಬಂದು ನಂಬಿಸಿ ತನ್ನ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಹೋಗಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಸದರಿ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ನೀಡಿದ ಹೇಳಿಕೆಯ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

       MYSURU CITY TRAFFIC VIOLATION CASES

 

DATE  :10-06-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

100

 

 

-

 

100

2

TOTAL NUMBER OF CRR'S

277

386

308

187

324

1,482

3

TOTAL FINE AMOUNT COLLECTED

31,000

39,800

31,500

19,300

34,100

1,55,700

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

1

-

1

-

2

7

NON FATAL

-

-

-

-

-

-

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

25

37

42

22

-

126Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®