ENGLISH   |   KANNADA

Blogದಿನಾಂಕ;11.06.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.06.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 299       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

01

ನರಸಿಂಹರಾಜ ಠಾಣೆ

ಪಿರ್ಯಾದಿ ಶೇಖ್ ಮಿರಾಜ್ ಅಹ್ಮದ್ ರವರು ಕೆಎ-55 ಎಂ-8811 ನಂಬರಿನ ಗ್ರೇ ಬಣ್ಣದ HONDA DIO ಸ್ಕೂಟರ್ ಅನ್ನು ಖರೀದಿಸಿ ನಾನೇ ಓಡಿಸಿಕೊಂಡಿದ್ದೆನು.  ದಿಃ-27.04.2019 ರಂದು ಸಂಜೆ 4-00 ಗಂಟೆ ಸಮಯಕ್ಕೆ ನಾನು ಎಸ್.ಎಸ್.ನಗರದ ಅಪ್ನಾಘರ್ ಮಸೀದಿ ಹಿಂಭಾಗದಲ್ಲಿ ವಾಸವಾಗಿರುವ ನನ್ನ ಸ್ನೇಹಿತ ಉಬೇದ್ ರವರ ನಂಃ-878 ರ ಮನೆಗೆ ಬಂದು ನನ್ನ ಸ್ಕೂಟರ್ ಅನ್ನು ಅವರ ಮನೆಯ ಮುಂದೆ ಲಾಕ್ ಮಾಡಿ ನಿಲ್ಲಿಸಿ ನನ್ನ ಸ್ನೇಹಿತನ ಜೊತೆ ಅವನ ಬೈಕಿನಲ್ಲಿ ಹೊರಗಡೆ ಹೋಗಿದ್ದು, ಮತ್ತೆ ವಾಪಸ್ ಸಂಜೆ 6-00 ಗಂಟೆಗೆ ಬಂದು ನೋಡಲಾಗಿ ನನ್ನ ಸ್ಕೂಟರ್ ಕಾಣಲಿಲ್ಲ. ನಂತರ ನಾನು ಅಕ್ಕ ಪಕ್ಕದ ರಸ್ತೆಗಳಲ್ಲಿ ಹುಡುಕಾಡಿದ್ದು, ಎಲ್ಲಿಯೋ ಸಹ ನನ್ನ ಸ್ಕೂಟರ್ ಪತ್ತೆಯಾಗಲಿಲ್ಲ. ಯಾರೋ ಕಳ್ಳರು ನನ್ನ ಸ್ಕೂಟರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನಗೆ ಕೆಲಸದ ಒತ್ತಡವಿದ್ದ ಕಾರಣ ನನ್ನ ಸ್ಕೂಟರ್ ಕಳ್ಳತನವಾದ ಬಗ್ಗೆ ದೂರು ನೀಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ನನ್ನ HONDA DIO ಸ್ಕೂಟರ್ ಅನ್ನು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ” ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

01

ದೇವರಾಜ ಸಂಚಾರ ಠಾಣೆ

ದಿನಾಂಕ 05.06.2019 ರಂದು ಮದ್ಯಾಹ್ನ ಸುಮಾರು 12:00 ಗಂಟೆ ಸಮಯದಲ್ಲಿ ಪಿರ್ಯಾದಿ ರಾಜಮ್ಮ ರವರು ಕೆ.ಆರ್.ಆಸ್ಪತ್ರೆಯ ಕಣ್ಣಿನ ಆಸ್ಪತ್ರೆ ಗೇಟ್ ಕಡೆಯಿಂದ ಕಾಮಧೇನು ಹೋಟೆಲ್ ಕಡೆಗೆ ಹೋಗಲು  ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆಯುವರ್ೇ ವೃತ್ತದ ಕಡೆಯಿಂದ ಬೈಕ್ ನಂಬರ್ ಕೆಎ03ವೈ 9252 ರ ಸವಾರ ಬೈಕ್ಅನ್ನು ಏಕಮುಖ ಸಂಚಾರದ ವಿರುದ್ದವಾಗಿ ಬೈಕ್ ಅನ್ನು ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರಿಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿಯವರು ಕೆಳಗೆ ಬಿದ್ದು ಪಿರ್ಯಾದಿಯವರ ತುಟಿ ಹಾಗೂ ಎರಡು ಭುಜಗಳಿಗೆ ಪೆಟ್ಟಾಗಿದ್ದು ಬೈಕ್ ಸವಾರ ಬೈಕ್ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸಾರ್ವಜನಿಕರ ಸಹಾಯದಿಂದ ಪಿರ್ಯಾದಿಯವರನ್ನು ಕೆ.ಆರ್.ಆಸ್ಪತ್ರೆಗೆ ಸೇರಿಸಿ ಹೊರಟುಹೋಗಿದ್ದು ಪಿರ್ಯಾದಿಯವರು ಕೆ.ಆರ್.ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆದು ಎರಡು ಭುಜಗಳ ನೋವು ಜಾಸ್ತಿಯಾಗಿದ್ದರಿಂದ ಈ ದಿನ ಈ ಅಪಘಾತಕ್ಕೆ ಬೈಕ್ ಸವಾರನ ವೇಗ ಮತ್ತು ನಿರ್ಲಕ್ಷತೆ ಚಾಲನೆ ಕಾರಣವಾಗಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಠಾಣೆಗೆ ಹಾಜರಾಗಿ ತಡವಾಗಿ ನೀಡಿದ ಲಿಖಿತ  ದೂರಿನ ಸಾರಾಂಶವಾಗಿರುತ್ತೆ.

 

10

ವಂಚನೆ ಪ್ರಕರಣ 

01

ಲಕ್ಷ್ಮೀಪುರಂ ಠಾಣೆ

ಫಿರ್ಯಾದಿ ರಮಾದೇವಿ ವಿಶೇಷ ತಹಶೀಲ್ದಾರರು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ರವರು  ದೇವನೂರು 2ನೇ ಹಂತ, 1ನೇ ಘಟ್ಟ ಬಡಾವಣೆಯ ನಿವೇಶನ ಸಂ 1410(12*18) ನಿವೇಶನವನ್ನು ದಿಃ 27-9-1991ರಲ್ಲಿ ಪ್ರಾಧಿಕಾರದಿಂದ ಡಿ.ಶಿವಲಿಂಗಯ್ಯ ಬಿನ್ ಡಿ.ದಾನುವಯ್ಯ ಎಂಬುವರಿಗೆ ಮಂಜೂರಾಗಿದ್ದು ದಿಃ 17-2-2010ರಂದು ಡಿ.ಶಿವಲಿಂಗಯ್ಯರವರಿಗೆ ಮೂಡಾದಿಂದ ಕ್ರಯಪತ್ರವನ್ನು ನೀಡಲಾಗಿರುತ್ತದೆ. ಡಿ.ಶಿವಲಿಂಗಯ್ಯರವರು ಸದರಿ ನಿವೇಶನವನ್ನು ದಾನಪತ್ರದ ಮುಖೇನ ತಮ್ಮ ಮಗಳು ಡಾಃಸುಪ್ರಿಯಾರವರಿಗೆ ನೊಂದಣಿ ಮಾಡಿಕೊಟ್ಟಿದ್ದು, ಸುಪ್ರಿಯಾರವರು ಈ ನಿವೇಶನವನ್ನು ದಿಃ 11-1-2018ರಂದು ಸೈಫುಲ್ಲಾ.ಎಂ ಬಿನ್ ಅಬ್ದುಲ್ ಮುಜೀರ್ ಎಂಬುವರಿಗೆ ಕ್ರಯಪತ್ರದ ಮುಖೇನ ಮಾರಾಟ ಮಾಡಿದ್ದು, ಅವರು ನಿವೇಶನಕ್ಕೆ ಬೇಲಿಯನ್ನು ಹಾಕಿಕೊಂಡಿದ್ದು, ದಿಃ 23-4-2019ರಂದು ಫಹರ್ಾನ ಮತ್ತು ಇತರರು ಸದರಿ ನಿವೇಶನದ ತಂತಿ ಬೇಲಿಯನ್ನು ಕಿತ್ತು ಹಾಕಿ ನಿವೇಶನವನ್ನು ಕ್ಲೀನ್ ಮಾಡುತ್ತಿರುವ ವಿಚಾರ ತಿಳಿದು ಸೈಫುಲ್ಲಾರವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ  ಫರ್ಹಾನ್ ರವರು ಸದರಿ ನಿವೇಶವನ್ನು ತಾವು ಮಂಜುಪ್ರಸಾದ್ ಎಂಬುವರಿಂದ ಕೊಂಡುಕೊಂಡಿರುವುದಾಗಿ ತಿಳಿಸಿದ್ದು, ಈ ವಿಚಾರವನ್ನು ಸೈಫುಲ್ಲಾರವರು ಮೂಡಾ ಆಯುಕ್ತರ ಗಮನಕ್ಕೆ ತಂದಿದ್ದು, ಆಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿದಾಗ  ನಿವೇಶನ ಸಂ 1410ಕ್ಕೆ ಸಂಬಂಧಿಸಿದಂತೆ ಉಮಾ ಕೋಂ ಸುಂದರರಾಜನ್ ಎಂಬುವರ ಹೆಸರಿಗೆ ಮುಡಾದಿಂದ ಮಂಜೂರಾಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಂಡು ನಂತರ ಉಮಾರವರು ಮಂಜುಪ್ರಸಾದ್ರವರಿಗೆ ಮಾರಾಟ ಮಾಡಿರುವುದಾಗಿ, ಮಂಜುಪ್ರಸಾದ್ ರವರು ಫರ್ಹಾನ್ ರವರಿಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿರುತ್ತದೆ ಆದ್ದರಿಂದ ನಿವೇಶನ ಸಂ 1410ಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನಿವೇಶನವನ್ನು ಮಾರಾಟ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®