ENGLISH   |   KANNADA

Blogದಿನಾಂಕ;07.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 179       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಕುವೆಂಪುನಗರ ಠಾಣೆ

ಪಿರ್ಯಾಧಿ ಸುಪ್ರಿತ್ ರವರು  ಈ ದಿನ ದಿನಾಂಕ 07.07.2019 ರಂದು ಭಾನುವಾರವಿದ್ದು ರಜೆ ಇದ್ದ  ಕಾರಣ ನಾನು ಹಾಗೂ ನನ್ನ ಸ್ಹೇಹಿತರು  ಸಂಜೆ 5.00 ಗಂಟೆ ಸಮಯದಲ್ಲಿ ಕ್ರಿಕೆಟ್ ಆಟವಾಡುವ ಸಲುವಾಗಿ  ಸೌಗಂದಿಕ ಪಾರ್ಕ ಬಳಿ ಇರುವ ವಾಸವಿ ಶಾಲೆಯ  ಗ್ರೌಂಡ್ ಬಳಿ ತೆರಳಿದ್ದು, ಕೈಗಳಿಂದ ನನ್ನ ಶರೀರದ ಭಾಗಗಳಿಗೆ ಹಲ್ಲೆ ನಡೆಸಿರುತ್ತಾನೆ,  ಈ ಕೃತ್ಯವನ್ನು  ತಡೆಯಲು ಮುಂದಾದ ನನ್ನ ಸ್ಹೇಹಿತ ಸುಹಾಸ್ ನ ಮೇಲೂ ಕೂಡ ಸದರಿ ವ್ಯಕ್ತಿಗಳು  ಹಲ್ಲೆ ನಡೆಸಿರುತ್ತಾನೆ,  ನಂತರ  ಅಪರಿಚಿತ ವ್ಯಕ್ತಿಗಳು ನಮ್ಮನ್ನು ಉದ್ದೇಶಿಸಿ   ಈ ಗ್ರೌಂಡ್ನಲ್ಲಿ  ಆಟವಾಡಲು ನಿಮಗೆ ಎಷ್ಟು ದೈರ್ಯ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬೆದರಿಕೆ ಹಾಕಿ  ನಮ್ಮ ಮೇಲೆ ಹಲ್ಲೆ ಮಾಡಲು ಉಪಯೋಗಿಸಿದ  ಕ್ರಿಕೆಟ್ ಬ್ಯಾಟ್ನ ಹ್ಯಾಂಡಲ್ ಅನ್ನು ಅಲ್ಲಿಯೇ ಸ್ಥಳದಲ್ಲಿ ಬೀಸಾಡಿ  ತಾವುಗಳು ಬಂದಿದ್ದು  ಬೈಕ್ ಗಳಲ್ಲಿ ಹೊರಟು ಹೋಗಿರುತ್ತಾರೆ ಬೈಕ್ ಗಳ ನಂಬರ್ ಗಳನ್ನು ನೋಡಲಾಗಿ  ಕೆಎ 09. ಹೆಚ್ಡಿ 7569, ಕೆಎ 09 ಹೆಚ್ಕೆ 0034 ಮತ್ತು  ಕೆಎ 09 ಇವೈ 9012 ರ ನೊಂದಾಣಿ ಸಂಖ್ಯೆಯ ಬೈಕ್ ಗಳಾಗಿರುತ್ತವೆ. ಆದ್ದರಿಂದ ನನ್ನ ಹಾಗೂ ನನ್ನ ಸ್ನೇಹಿತನ  ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ   ಬೆದರಿಕೆ  ಹಾಕಿದ  ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ  ನೀಡಿದ ದೂರಿಗೆ ತಯಾರಿಸಿದ ಪ್ರ.ವ.ವರಧಿ,

5

ಮನೆಕಳವುಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ನರಸಿಂಹರಾಜ ಠಾಣೆ

ಫಿರ್ಯಾದಿ ಪಿ.ಸಿ-34 ಶ್ರೀ ಮಂಜುನಾಥ.ಆರ್.ಆರ್ ರವರು ದಿನಾಂಕ 07.07.2019 ರಂದು ನನಗೆ ಮತ್ತು ಕೃಷ್ಣ.ಹೆಚ್.ಬಿ ಸಿಪಿಸಿ 372, ಮಹದೇವ.ಕೆ ಸಿಪಿಸಿ-560 ಮತ್ತು ರಮೇಶ್.ಎಸ್ ಸಿಪಿಸಿ-499 ರವರಿಗೆ ನಮ್ಮ ಠಾಣೆಯಲ್ಲಿ ದಾಖಲಾಗಿರುವ ಸ್ವತ್ತು ಕಳುವು ಪ್ರಕರಣಗಳಲ್ಲಿ ಆರೋಪಿತರ ಮತ್ತು ಕಳುವು ಮಾಲು ಪತ್ತೆಗಾಗಿ ಠಾಣೆಯಿಂದ ಕರ್ತವ್ಯ ನೇಮಕ ಮಾಡಿ ಕಳುಹಿಸಿದ್ದು, ಅದರಂತೆ ನಾವುಗಳು ಬಡಾಮಕಾನ್, ಸುಭಾಷ್ ನಗರ, ಆರ್.ಎಸ್.ನಾಯ್ಡುನಗರ ಕಡೆ ಗಸ್ತಿನಲ್ಲಿರುವಾಗ್ಗೆ ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ ಭಾತ್ಮೀದಾರರು ನಮ್ಮನ್ನು ಸಂಪರ್ಕಿಸಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಪಕ್ಕದ ವಿನಾಯಕ ಟೀ ಸ್ಟಾಲ್ ಬಳಿ ಯಾರೋ ಇಬ್ಬರು ನಂಬರ್ ಪ್ಲೇಟ್ ಗಳಿಲ್ಲದ ಒಂದು KTM  DUKE 390 ಬೈಕ್ ಮತ್ತು ಹೀರೋ ಪ್ಯಾಷನ್ ಪ್ರೋ ಬೈಕನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಈ ಬಗ್ಗೆ ಅನುಮಾನವಿದೆ ಬಂದು ನೋಡಿ ಎಂದು ನೀಡಿದ ಖಚಿತ ಮಾಹಿತಿ ಮೇರೆಗೆ ನಾವುಗಳು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಪಕ್ಕದಲ್ಲಿರುವ ವಿನಾಯಕ ಟೀ ಸ್ಟಾಲ್ ಬಳಿ ಹೋದಾಗ ಸದರಿ ಅಂಗಡಿಯ ಮುಂಭಾಗ ಇಬ್ಬರು ಆಸಾಮಿಗಳು ನಂಬರ್ ಪ್ಲೇಟ್ ಗಳಿಲ್ಲದ ಒಂದು KTM  DUKE 390 ಬೈಕನ್ನು ಮತ್ತು ಹೀರೋ ಪ್ಯಾಷನ್ ಪ್ರೋ ಬೈಕನ್ನು ನಿಲ್ಲಿಸಿಕೊಂಡು ನಿಂತಿದ್ದು, ಅವರುಗಳು ನಮ್ಮಗಳನ್ನು ಕಂಡು ಗಾಬರಿಯಲ್ಲಿ ಬೈಕುಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದವರನ್ನು ನಾವುಗಳು ಸುತ್ತುವರಿದು ಹಿಡಿದು ಸದರಿ ಬೈಕಿನ ದಾಖಲಾತಿಗಳ ಬಗ್ಗೆ ಕೂಲಂಕುಷವಾಗಿ ವಿಚಾರ ಮಾಡಿದಾಗ ಸದರಿ ಬೈಕುಗಳ ಪೈಕಿ ಹೀರೋ ಪ್ಯಾಷನ್ ಪ್ರೋ ಬೈಕನ್ನು ನಾವಿಬ್ಬರೂ ಸೇರಿ ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ಸಯ್ಯಾಜಿ ರಾವ್ ರಸ್ತೆಯ ಚಾಮುಂಡೇಶ್ವರಿ ಟಾಕೀಸಿನ ಬಳಿ ಕಳ್ಳತನ ಮಾಡಿದ್ದು ಹಾಗೂ KTM  DUKE 390 ಬೈಕನ್ನು ಈಗ್ಗೆ ಸುಮಾರು 20 ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಯಾದವಗಿರಿಯ ಒಂದು ಮನೆಯ ಕಾಂಪೌಂಡ್ ಒಳಗಿನಿಂದ ಕಳ್ಳತನ ಮಾಡಿದ್ದು, ಯಾರಿಗೂ ಅನುಮಾನ ಬರಬಾರದೆಂದು ಅವುಗಳ ನಂಬರ್ ಪ್ಲೇಟ್ ಗಳನ್ನು ತೆಗೆದು ಹಾಕಿ ಇದುವರೆಗೂ ನಾವೇ ಓಡಿಸಿಕೊಂಡಿದ್ದೆವು. ಈ ದಿನ ನಮಗೆ ಹಣದ ಅವಶ್ಯಕತೆ ಇದ್ದುದರಿಂದ ಬೈಕುಗಳನ್ನು ಯಾರಿಗಾದರೂ ಮಾರಾಟ ಮಾಡೋಣ ಎಂದು ಇಲ್ಲಿಗೆ ಬಂದಿದ್ದೆವು ಎಂದು ತಿಳಿಸಿದರು. ಸದರಿ ಬೈಕುಗಳು ಕಳ್ಳತನಕ್ಕೆ ಸಂಬಂಧಿಸಿದ್ದರಿಂದ ಮುಂದಿನ ಕ್ರಮದ ಬಗ್ಗೆ  ಮೇಲ್ಕಂಡ ಆರೋಪಿಗಳನ್ನು ಹಾಗೂ ಬೈಕುಗಳನ್ನು ವಶಕ್ಕೆ ಪಡೆದು ಠಾಣಾಧಿಕಾರಿಯವರ ಮುಂದೆ ಹಾಜರುಪಡಿಸಿ ವರದಿ ನೀಡಿರುತ್ತೇನೆ” ಎಂದು ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ.

 

8

ಮಹಿಳಾ ದೌರ್ಜನ್ಯ

ಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ

ದಿನಾಂಕ 07.07.2019 ರಂದು ಮಧ್ಯಹ್ನ 12.30 ಗಂಟೆ ಸಮಯದಲ್ಲಿ ಪಿರ್ಯಾದಿ ರಘು ಕುಮಾರ್  ರವರ ಅಣ್ಣ ನಟರಾಜು ವಿ ರವರು ಅವರ ಮೋಟಾರ್ ಸೈಕಲ್ ನಂಬರ್ ಕೆಎ 13 ಜೆ 3422 ಅನ್ನು ಚಾಲನೆ ಮಾಡಿಕೊಂಡು ಆಲನಹಳ್ಳಿ ಕಡೆಯಿಂದ ಮೈಸೂರು ಸಿಟಿ ಕಡೆಗೆ ರಸ್ತೆ ಎಡಭಾಗದಲ್ಲಿ ಚಾಲನೆ ಮಾಡಿಕೊಂಡು ಟಿ ಎನ್ ಪುರ  ಮುಖ್ಯ ರಸ್ತೆ ನಿರ್ಮಾಲ ಅಸ್ಪತ್ರೆಯ ಬಳಿ ಹೋಗುತ್ತಿದ್ದ ಸಮಯದಲ್ಲಿ ಅವರ ಹಿಂದಿನಿಂದ ಒಂದು ಖಾಸಗಿ ಬಸ್ ನಂಬರ್ ಕೆಎ 55 3059 ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್ ನ ಹಿಂಭಾಗಕ್ಕೆ ಡಿಕ್ಕಿಮಾಡಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ಬಸ್ಸಿನ ಮುಂಭಾಗದ ಎಡಭಾಗದ ಚಕ್ರ ಎಡಗಾಲಿನ ಮೇಲೆ ಹರಿದಿದ್ದು ಹಾಗು ತಲೆಗೆ ಪೆಟ್ಟಾಗಿದ್ದು ರಕ್ತಸ್ರಾವವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ .ನಂತರ ಗಾಯಾಳು ನಟರಾಜು ರವರನ್ನು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದು,ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಿದ ಮೇರೆಗೆ ಪಿರ್ಯಾದಿರವರು ತಮ್ಮ ಅಣ್ಣನಿಗೆ ಗಾಯಗೊಳಿಸಿದ ಬಸ್ ನಂಬರ್ ಕೆಎ 55 3059 ಹಾಗು ಚಾಲಕನ ವಿರುದ್ದ ಕಾನೂನು ರೀತ್ಯಾಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                               MYSURU CITY TRAFFIC VIOLATION CASES

                                                DATE  :07-07-2019

SLNO

              HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

120

184

-

-

 

304

2

TOTAL NUMBER OF CRR'S

562

342

388

314

428

2,034

3

TOTAL FINE AMOUNT COLLECTED

63,500

40,200

39,600

33,100

44,900

2,21,300

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

 

-

-

-

7

NON FATAL

-

 

 

-

-

-

8

INTERCEPTOR CASES

-

151

-

-

 

151

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

21

39

26

27

38

151Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com