ENGLISH   |   KANNADA

Blog



ದಿನಾಂಕ;16.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:17.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 77       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

 ಲಷ್ಕರ್ ಠಾಣೆ

ಪಿರ್ಯಾದಿ ಮರೀಗೌಡ ದಿನಾಂಕ: 06.07.2019 ರಂದು ಮನೆಯಿಂದ 02 ಲಕ್ಷ ಹಣವನ್ನು ನನ್ನ ಪ್ಯಾಂಟ್ ಜೇಬಿಗೆ ಹಾಕಿಕೊಂಡು ನನ್ನ ಕಾರಿನಲ್ಲೇ ನಾನು ಮತ್ತು ನನ್ನ ಹೆಂಡತಿ ಹಾಗೂ ನಮ್ಮ ಡ್ರೈವರ್ ನವೀನ ರವರುಗಳ ಜೊತೆ ಮೈಸೂರಿನ ಅಶೋಕ ರಸ್ತೆಯಲ್ಲಿರುವ ಶ್ರೀ ಜ್ಯೂವೆಲರ್ಸ್  ಚಿನ್ನದ ಅಂಗಡಿಗೆ ಸಂಜೆ 5.15 ಘಂಟೆಗೆ ಬಂದ್ದಿರುತ್ತೇನೆ. ಜ್ಯೂವೆಲರ್ಸ್ ಅಂಗಡಿಯಲ್ಲಿ ವ್ಯವಹಾರ ಮುಗಿಸಿಕೊಂಡು ಅಶೋಕ ರಸ್ತೆಯಲ್ಲಿರುವ ಕೋತಾಸ್ ಕಾಫಿ ಅಂಗಡಿಗೆ ಸಂಜೆ ಸುಮಾರು 6.00 ಘಂಟೆಗೆ ಕಾಫಿ ಕುಡಿಯಲು ಹೋಗಿರುತ್ತೇನೆ. ಕೋತಾಸ್ ಕಾಫಿ ಅಂಗಡಿಯಲ್ಲಿ ಜನ ಹೆಚ್ಚಾಗಿದ್ದು ನೂಕು ನುಗ್ಗಲಿತ್ತು. ಕಾಫಿ ಕೊಡುವುದು ಸ್ವಲ್ಪ ತಡವಾಗಿದ್ದರಿಂದ ಕೌಂಟರಲ್ಲಿ  ಕಾಯ್ದು ಕಾಫಿ ತೆಗೆದುಕೊಂಡು ಕುಡಿದ ನಂತರ ನನ್ನ ಪ್ಯಾಂಟ್ ಜೇಬ್ ನೋಡಿಕೊಂಡಾಗ ಪ್ಯಾಂಟ್ ಜೇಬಿನಲ್ಲಿದ್ದ 02 ಲಕ್ಷ ಹಣ ಇರಲಿಲ್ಲ. ಕೋತಾಸ್ ಕಾಫಿ ಅಂಗಡಿಯಲ್ಲಿ ಕಾಫಿ ತೆಗೆದುಕೊಳ್ಳುವಾಗ ನೂಕು ನುಗ್ಗಲಲ್ಲಿ ನನ್ನ ಪ್ಯಾಂಟ್ ಜೇಬಿನಲ್ಲಿದ 2 ಲಕ್ಷ ಹಣವನ್ನು ಯಾರೋ ಕಳ್ಳತನ ಮಾಡಿರುತ್ತಾರೆ. ಹಣ ಕಳ್ಳತನವಾದ್ದರಿಂದ ಆಘಾತವಾಗಿ ಆರೋಗ್ಯ ಸರಿ ಇಲ್ಲದ ಕಾರಣ ಈ ದಿನ ಬಂದು ದೂರು ನೀಡುತ್ತಿದ್ದು ಕಳ್ಳತನ ಆಗಿರುವ ನನ್ನ ಹಣವನ್ನು ಪತ್ತೆ ಮಾಡಿಕೊಡಬೇಕೆಂದು ಹಾಗೂ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

02

ವಿದ್ಯಾರಣ್ಯಪುರಂ ಠಾಣೆ

ಫಿರ್ಯಾದಿ ಇರ್ಫಾನ್‌ ಷರೀಫ್‌‌ ರವರ ಹೆಂಡತಿ ನನ್ನ ಜೊತೆಯಲ್ಲಿ ಹೊಂದಾಣಿಕೆಯಿಂದ ಜೀವನ ಮಾಡದೆ ಸುಮಾರು ಆರು ತಿಂಗಳಿನಿಂದ ಮೈಸೂರಿನಲ್ಲಿ ತನ್ನ ಅಣ್ಣ ರಿಜ್ವಾನ್‌‌ ಹಾಗೂ ತಾಯಿ ಫಾಜಿಲಾಭಾನು ರವರ ಜೊತೆ ವಾಸವಾಗಿರುತ್ತಾಳೆ. ನಾನು ಸಹಾ ಹಲವಾರು ಬಾರಿ ಮೈಸೂರಿಗೆ ಬಂದು ಕರೆದರೂ ಸಹಾ ಬಂದಿರುವುದಿಲ್ಲ. ದಿನಾಂಕ 07-07-2019 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ನಾನು ಮೈಸೂರಿಗೆ ಬಂದು ನನ್ನ ಅತ್ತೆ ಹಾಗೂ ಹೆಂಡತಿಯ ಜೊತೆ ಮಾತನಾಡುತ್ತಾ ರೇಷನ್‌ ಕಾರ್ಡ್‌ ಮಾಡಿಸಬೇಕು ನೀನು ನನ್ನ ಜೊತೆ ಊರಿಗೆ ಬಾ ಎಂದು ಕರೆದಿದ್ದಕ್ಕೆ ನನ್ನ ಭಾಮೈಧುನನಾದ ರಿಜ್ವಾನ್‌ ಎಂಬುವವನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹಾರ್ಲಿಕ್ಸ್‌ ಬಾಟೆಲ್‌‌ನಿಂದ ನನ್ನ ಮುಖಕ್ಕೆ ಜೋರಾಗಿ ಹೊಡೆದನು. ನನಗೆ ಬಾಯಿಯಲ್ಲಿ ಗಾಯವಾಗಿ ರಕ್ತ ಬರುತ್ತಿದ್ದಾಗ ನನ್ನ ಅತ್ತೆ ಕೈನಿಂದ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ. ನಂತರ ನಾನು ಆ ದಿನ ಕೆ.ಆರ್.ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ವಿಶ್ರಾಂತಿಗೆ ಊರಿಗೆ ಹೋಗಿದ್ದೆನು. ನನ್ನ ತಂದೆಗೆ ವಿಚಾರ ತಿಳಿಸಿ ಈ ದಿನ ಠಾಣೆಗೆ ಬಂದಿರುತ್ತೇನೆ. ನನಗೆ ಹಲ್ಲೆ ಮಾಡಿದ ನನ್ನ ಭಾಮೈಧುನ ರಿಜ್ವಾನ್‌ ಮತ್ತು ನನ್ನ ಅತ್ತೆ ಫಾಜಿಲಾಭಾನು ರವರ ಮೇಲೆ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕೆಂದು ಕೋರುತ್ತೇನೆ ಎಂದು ನೀಡಿದ ಲಿಖಿತ ದೂರು .

ಅಶೋಕಪುರಂ ಠಾಣೆ

ದಿನಾಂಕ 16.07.2019 ರಂದು ಸಂಜೆ 06.30 ಗಂಟೆಯಲ್ಲಿ ಫಿರ್ಯಾದಿ ಮಹದೇವ್ ರವರು, ಫಿರ್ಯಾದಿಯು ಇಂದಿರಾ ರವರ ಬಳಿ ಶ್ರೀ ಮಹಾಲಕ್ಷ್ಮಿ ಬೆನಿಫಿಟ್ ಸ್ಕೀಮ್ ಅಡಿಯಲ್ಲಿ ತಿಂಗಳಿಗೆ ರೂ.1,000/- & ರೂ.500/- ಹಣ ಕಟ್ಟಿದ್ದು, ಅಲ್ಲದೆ ಚೀಟಿ ಹಾಕಿದ್ದು, ದಿ:20.01.2010 ರಿಂದ ರೂ.2,00,000/- ಪ್ರತಿ ತಿಂಗಳು ರೂ.5,000/- ಹಾಗೂ ದಿ:01.11.2011 ರಿಂದ ರೂ.1,00,000/- ಕ್ಕೆ ರೂ.4,000/- ಗಳ ಚೀಟಿ ಕಟ್ಟಿದ್ದು, ಸದರಿ ಚೀಟಿ ಮುಗಿದ ಮೇಲೆ ಫಿರ್ಯಾದಿಯು ಇಂದಿರಾ ರವರಿಗೆ ಚೀಟಿ ಹಣ ಕೊಡದೆ ಮೋಸ ಮಾಡಿದ್ದು, ಈಗ್ಗೆ ಸುಮಾರು 2 ತಿಂಗಳ ಹಿಂದೆ ಇಂದಿರಾ ರವರು ತನಗೆ ತುರ್ತು ಪರಿಸ್ಥಿತಿ ಇದೆ ಎಂದು ಫಿರ್ಯಾದಿಯ ಬಳಿ ರೂ.95,000/- ಹಣವನ್ನು ಎಸ್‌‌ಬಿಎಂ ಬ್ಯಾಂಕ್‌ನ ಚೆಕ್ ನಂ.360352 ರ ಮುಖಾಂತರ ಪಡೆದುಕೊಂಡಿದ್ದು, ಫಿರ್ಯಾದಿಗೆ ಇಂದಿರಾ ರವರಿಂದ ಒಟ್ಟು ರೂ.4,18,000/- ಹಣ ಬರಬೇಕಿದ್ದು, ಅದನ್ನು ಕೇಳಲು ಹೋದರೆ ಆಕೆ ಫಿರ್ಯಾದಿಗೆ ತನ್ನನ್ನು ಅವಮಾನ ಮಾಡಿದ್ದೀಯ ಎಂದು ದೂರು ನೀಡುತ್ತೇನೆಂದು ಹಾಗೂ ಕೊಲೆ ಮಾಡಿಸುತ್ತೇನೆಂದು ಬೆದರಿಕೆ ಹಾಕಿರುವುದಾಗಿ, ಫಿರ್ಯಾದಿಯು ಆಕೆಯ ಬೆಎದರಿಕೆಯಿಂದಾಗಿ ಸುಮಾರು 06 ವರ್ಷಗಳಿಂದ ಆಕೆಯಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದು, ದಿನಾಂಕ 11.07.2019 ರಂದು ಬೆಳಿಗ್ಗೆ ಫಿರ್ಯಾದಿಯು ಹಣ ಕೇಳಲು ಇಂದಿರಾ ರವರ ಮನೆ ಬಳಿ ಹೋದಾಗ ಆಕೆ ಹಣವನ್ನು ವಾಪಸ್ ಕೊಡದೆ ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಈ ಬಗ್ಗೆ ನ್ಯಾಯ ದೊರಕಿಸಬೇಕಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

8

ಮಹಿಳಾ ದೌರ್ಜನ್ಯ

ಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ಕೆ.ಆರ್ ಸಂಚಾರ ಠಾಣೆ

ದಿನಾಂಕ 15/07/2019 ರಂದು ಮಧ್ಯಾಹ್ನ 11.50 ಗಂಟೆ ಸಮಯದಲ್ಲಿ ಪಿರ್ಯಾದಿ ಶಂಕರ್ ರವರ ತಂದೆ  ಮಹದೇವಸ್ವಾಮಿ.ಆರ್‌ ರವರು  ಗನ್‌ಹೌಸ್‌ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಟಿ.ವಿ.ಎಸ್ ಜ್ಯೂಪಿಟರ್     KA-09-HD-6634ರ ಸವಾರ ವಸಿಂ ಎಂಬುವನು ಸ್ಕೂಟರ್ ನ್ನು ವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು  ಮಹದೇವಸ್ವಾಮಿ ರವರಿಗೆ ಡಿಕ್ಕಿಮಾಡಿದ ಪರಿಣಾಮ  ಮಹದೇವಸ್ಥಾಮಿ ರವರು ಕೆಳಕ್ಕೆ ಬಿದ್ದಾಗ ತಲೆಗೆ ಮತ್ತು ಕಾಲಿಗೆ ಏಟಾಗಿದ್ದು,  ಅಲ್ಲಿದ್ದವರು ಜೆ.ಎಸ್.ಎಸ್ ಆಸ್ಪತ್ರೆಗೆ ಅಟೋರಿಕ್ಷಾದಲ್ಲಿ  ಕರೆದುಕೊಂಡು ಹೋಗಿ ಸೇರಿಸಿದ್ದು.  ಡಿಕ್ಕಿಮಾಡಿದ ಸ್ಕೂಟರ್ ಸವಾರ ಆಸ್ಪತ್ರೆಗೆ ಬರುವುದಾಗಿ ತಿಳಿಸಿ  ಆಸ್ಪತ್ರೆಗೆ ಬರದೆ ಸ್ಕೂಟರ್ ಸಮೇತ ಹೊರಟು ಹೋಗಿರುತ್ತಾನೆ ಆದುದರಿಂದ ಸ್ಕೂಟರ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ:.16.07.2019 ರಂದು ಬೆಳಿಗ್ಗೆ 8;00 ಗಂಟೆ ಸಮಯದಲ್ಲಿ ಪಿರ್ಯಾದು ಮನೋಜ್ ರವರು ತಮ್ಮ ಕಾರ್ ನಲ್ಲಿ ವಿವಿ ಮೋಹಲ್ಲಾ 1ನೇ ಮೇನ್  ಟಿಕೆಎಸ್ ಐಯಂಗರ್ ಹೋಟೆಲ್ ಎದುರು ರಸ್ತೆಯ ಎಡ ಬದಿಯಲ್ಲಿ ಬಳಿ ನಿಲ್ಲಿಸಿಕೊಂಡು ನಿಂತಿದ್ದಾಗ ಇದೇ ಸಮಯಕ್ಕೆ  ಕಾರ್ ನಂ ಕೆಎ-09-ಎಮ್ ಡಿ-0942    ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಎದುರುಗಡೆ ನನ್ನ ಮೋ,ಸೈ  ಗೆ ಡಿಕ್ಕಿ ಮಾಡಿ ನೋತರ ಕಾರಿನ ನಿಯಂತ್ರಣ ತಪ್ಪಿ ಬಲಕ್ಕೆ ಚಲಿಸಿ ರಸ್ತೆಯ ಬದಿಯಲ್ಲಿ ನಿಂತಿದ್ದ ಫಿರ್ಯಾದಿಯವರ ಕಾರಿನ ಮುಂಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ಮೂರು ವಾಹನಗಳು ಜಖಂಗಿಂಡಿದ್ದು, ಮೋ ಸೈ, ಸವಾರನಿಗೆ ಪೆಟ್ಟಾಗಿದ್ದು ಬೃಂದಾವನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾನೆ ಆದ್ದರಿಂದ ಚಾಲಕನ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿರ್ಯಾದಿಯವರು ನೀಡಿದ ಲಿಖಿತ ..ದೂರಿನ ಮೇರೆಗೆ ಈ ಪ್ರ.ವ ವರದಿ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

 

                                    MYSURU CITY TRAFFIC VIOLATION CASES

                                                      DATE  :16-07-2019

SLNO

            HEADS

                          NO. OF CASES

DR

KR

NR

SN

VV

TOTAL

1

TOTAL NUMBER OF FTVRS

95

 

-

-

156

251

2

TOTAL NUMBER OF CRR'S

590

715

515

542

308

2,670

3

TOTAL FINE AMOUNT COLLECTED

63,200

75,900

52,500

56,800

34,300

2,82,700

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

1

-

-

1

2

8

INTERCEPTOR CASES

-

120

40

-

-

160

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

44

51

37

30

50

212



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com