ENGLISH   |   KANNADA

Blogದಿನಾಂಕ;02.10.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:03.10.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 170       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ನರಸಿಂಹರಾಜ ಠಾಣೆ

ಪಿರ್ಯಾದುದಾರರು ನಟರಾಜ ರವರ  ಸರ್ಕಾರಿ ನೌಕರರಾಗಿದ್ದು, ಅವರು ಕೆ.ಎಸ್.ಆರ್.ಟಿ.ಸಿ ಯಲ್ಲಿ ನಿರ್ವಾಹಕರಾಗಿದ್ದು ಇವರು  ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ ಸುಮಾರು 1-30 ಗಂಟೆಯ ಸಮಯದಲ್ಲಿ ಸಿಬಿಎಸ್ ಬಿಟ್ಟು ನಾಯ್ಡುನಗರದ ಕಡೆಗೆ ಬಸ್ ನಲ್ಲಿ ನಿರ್ವಾಹಕ ವೃತ್ತಿ ಮಾಡಿಕೊಂಡು ಹೋಗುತ್ತಿದ್ದಾಗ ಗುಡ್ಶಫರ್ಡ್ ಶಾಲೆಯ ಮುಂಭಾಗದ ಬಸ್ ಸ್ಟಾಪ್ನಲ್ಲಿ ಒಬ್ಬ ಆರೋಪಿಯು ಹತ್ತಿದರು.  ಅವರು ತಮ್ಮ ಜೇಬಿನಿಂದ 20/ರೂ. ಮುಖಬೆಲೆಯ ಒಂದು ಹಳೆಯ ಹರಿದ ನೋಟನ್ನು ಟಿಕೆಟ್ ಸಂಬಂಧ ನೀಡಿದ್ದು ಆಗ ಈ ನೋಟು ಹರಿದಿದೆ ಬೇರೆ ನೋಟು ಕೊಡಿ ಎಂದು ಕೇಳಿದಾಗ ಎನ್.ಆರ್ ಮೊಹಲ್ಲಾದ ಎಫ್.ಟಿ.ಎಸ್ ವೃತ್ತದ ಬಸ್ ನಿಲ್ದಾಣದ ಬಳಿ ಪಿರ್ಯಾದಿಯವರಿಗೆ ಆರೋಪಿಯು ಹಲ್ಲೆ ಮಾಡಿ, ಉಂಗುರವಿದ್ದ ಬೆರಳಿನಿಂದ ಮೂಗಿಗೆ ಹಲ್ಲೆ ಮಾಡಿ ನಂತರ ಇತರ ಆರೋಪಿಗಳನ್ನು ಕರೆಸಿ ಪಿರ್ಯಾದಿಯವರಿಗೆ ಅವಾಚ್ಯವಾಗಿ ನಿಂದನೆ, ಕೊಲೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಸಂಬಂಧ ನೀಡಿರುವ ದೂರಿನ ಮೇರೆಗೆ ಪ್ರ.ವ.ವರದಿ. 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ಉದಯಗಿರಿ ಠಾಣೆ

ದಿ:-26/09/19 ರಂದು ರಾತ್ರಿ 11-00 ಗಂಟೆಯಲ್ಲಿ ಪಿರ್ಯದಿ ಅಕೀಬ್ ಪಾಷಾ ರವರ  ಬಾಬ್ತು ಕೆಎ-09-ಹೆಚ್‌ಕ್ಯೂ-8783 ನಂಬರಿನ ಸಿಲ್ವರ್‌ ಬಣ್ಣದ ಸುಜುಕಿ ಆಕ್ಸೀಸ್‌ ದ್ವಿಚಕ್ರ ವಾಹನವನ್ನು ತಮ್ಮ ಮನೆ ಹತ್ತಿರ ಬೀಗಾಹಾಕಿ ನಿಲ್ಲಿಸಿದ್ದು, ಪುನಃ ಬೆಳಿಗ್ಗೆ 6-00 ಗಂಟೆಗೆ ನೋಡಲಾಗಿ ವಾಹನವು ಕಾಣೆಯಾಗಿದ್ದು, ನಂತರ ಪಿರ್ಯಾದಿ ಅಕ್ಕಪಕ್ಕದವರನ್ನು ವಿಚಾರಿಸಿ ಎಲ್ಲಾ ಕಡೆ ಹುಡುಕಾಡಲಾಗಿ ಇದುವರೆಗೆ ಸಿಗದಿದ್ದ ಕಾರಣ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದ್ವಿಚಕ್ರ ವಾಹನವನ್ನು

ದೇವರಾಜ ಠಾಣೆ

ದಿ:-02/10/19 ರಂದು 12.30 ಗಂಟೆಗೆ ಪಿರ್ಯಾದಿ ರಾಜು  ರಿಪೇರಿಗೆಂದು ತಮ್ಮ ಬಾಬ್ತು ಸ್ಕೂಟರ್ನ್ನು ಮ್ಯಾಕನೀಕ್ ದಸ್ತಗಿರ್ ರವರ ಅಂಗಡಿಗೆ ನೀಡಿದ್ದು, ಸದರಿ ಸ್ಕೂಟರ್ನ್ನು ದಿನಾಂಕ 27/07/2019 ರಂದು ರಾತ್ರಿ 09-00 ಗಂಟೆಯ ಸಮಯದಲ್ಲಿ ರಿಪೇರಿ ಮಾಡಿ ಅಂಗಡಿ ಬಳಿ ನಿಲ್ಲಿಸಿದ್ದನ್ನು ನಂತರ ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ಬಂದು ನೋಡಿದಾಗ ಬೈಕ್ ಇರಲಿಲ್ಲ, ಕಳವು ಆಗಿರುತ್ತದೆ. ಸದರಿ ಸ್ಕೂಟರ್ನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ,ವ,ದಿ ದಾಖಲಾಗಿರುತ್ತೆ

8

ಮಹಿಳಾ ದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಪಿರ್ಯಾದಿ ಸಲ್ಯಾ ರೂಹಿ ರವರು ಆರೋಪಿ ಅಫ್ರೋಜ್ ಪಾಶ ಎಂಬುವವರು ಪರಸ್ಪರ ಪ್ರೀತಿಸಿ, ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1 ಮತ್ತು ಮನೆಯವರ ಬೇಡಿಕೆಯಂತೆ ವರದಕ್ಷಿಣೆಯಾಗಿ 1 ಲಕ್ಷ ನಗದು ಹಣ, ಚಿನ್ನದ ಒಡವೆಗಳನ್ನು ಕೊಟ್ಟಿರುತ್ತಾರೆ. ಮದುವೆಯಾದ ನಂತರ ಪಿರ್ಯಾದುದಾರರು ಆರೋಪಿ-1 ರವರ ಮನೆಯಲ್ಲಿ ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ-2 ಶನಾವಾಜ್ ಬೇಗಂ, ಆರೋಪಿ-3 ಶಫಿನಾಜ್ ಬಾನು, ಆರೋಪಿ-4ಅಕ್ರಂ ಪಾಶ, ಆರೋಪಿ-5 ಅಸ್ಲಂ ಪಾಶ, ಆರೋಪಿ-6 ಅಜಂ ಪಾಶ ರವರುಗಳು ಸೇರಿಕೊಂಡು ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ಹಣವನ್ನು ತರುವಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರಿಂದ ಪಿರ್ಯಾದಿಯು ತನ್ನ ಒಡವೆಗಳನ್ನು ಅಡವಿಟ್ಟು, ಹಣವನ್ನು ನೀಡಿರುತ್ತಾರೆ. ತದನಂತರದಲ್ಲಿ ಆರೋಪಿ-1 ರವರು ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದು, ನಂತರದಲ್ಲಿ ಆರೋಪಿ-1,4,5,6,7 ರವರುಗಳು ಪಿರ್ಯಾದಿಯ ಮನೆಯ ಬಳಿ ಬಂದು ವಿಚ್ಚೇದನೆ ನೀಡದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆಂದು ಇತ್ಯಾದಿಯಾಗಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ  ಮೇರೆಗೆ ಪ್ರ,ವ,ದಿ ದಾಖಲಾಗಿರುತ್ತೆ.

9

ರಸ್ತೆ ಅಪಘಾತ

03

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 02-10-2019 ರಂದು ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಪಿ.ಎಸ್.ಐ., ಕು. ಎಸ್. ದಿವ್ಯಾ ರವರು ತಮ್ಮ ಹೋಂಡಾ ಆಕ್ಟೀವಾ ಸ್ಕೂಟರ್ ನಂ. ಕೆಎ-42 ಇಎ-8945 ರಲ್ಲಿ ಸವಾರಿ ಮಾಡಿಕೊಂಡು ಸಂತೇಮರಳ್ಳಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹೋಗುವ ಸಲುವಾಗಿ ಮನೆಯಿಂದ ಹೊರಟು ಟಿ. ನರಸೀಪುರ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ರಿಂಗ್ ರಸ್ತೆ ಹಾಗೂ ಟಿ. ನರಸೀಪುರ ರಸ್ತೆ ಜಂಕ್ಷನ್ ನಲ್ಲಿ ದೇವೇಗೌಡ ವೃತ್ತದ ಕಡೆಯಿಂದ ಒಬ್ಬ ಕಾರು ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಸ್ಕೂಟರ್ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರು ರಸ್ತೆ ಮೇಲೆ ಬಿದ್ದು, ಅವರ ಮುಖಕ್ಕೆ, ಕೈಗಳಿಗೆ ಮತ್ತು ಬಲಗಾಲಿಗೆ ಏಟಾಗಿರುತ್ತದೆಂದು, ನಂತರ ನಿರ್ಮಲ ಆಸ್ಪತ್ರೆಯಲ್ಲಿ ಪ್ರಥಮ ಚಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ, ಡಿಕ್ಕಿ ಮಾಡಿದ ನಂತರ ಕಾರಿನ ಚಾಲಕ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೊರಡು ಹೋಗಿರುತ್ತಾನೆಂದು ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ಪಿರ್ಯಾದುದಾರರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರ,ವ,ದಿ.

ವಿ.ವಿ ಪುರಂ ಠಾಣೆ

ದಿ:-29.09.19 ರಂದು 10.30 ಗಂಟೆಯ  ಸಮಯದಲ್ಲಿ ಪಿರ್ಯಾದಿ ಸಿದ್ದೇಗೌಡ ರವರ ಮಗ ಕಾರ್ತಿಕ್ ಎಂಬುವವರು ತನ್ನ ಬಜಾಜ್ ಸಿಟಿ-100 ಮೋಟಾರ್ ಸೈಕಲ್ ನಂಬರ್ ಕೆಎ-05-ಇಯ್ಯು-1097 ಬೋಗಾದಿ ಕಡೆಯಿಂದ ಹಿನಕಲ್ ಕಡೆಗೆ ಬರಲು ರಿಂಗ್ ರಸ್ತೆ ಜಂಕ್ಷನ್ ಬಳಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ, ಇದೇ ಸಮಯಕ್ಕೆ ಹಿನಕಲ್ ಕಡೆಯಿಂದ ಬೋಗಾದಿ ಕಡೆಗೆ ಕಾರ್ ನಂಬರ್ ಕೆಎ-11-ಬಿ-3903 ಇದನ್ನು ಅದರ ಚಾಲಕ ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಡಿವೈಡರ್ ಹತ್ತಿಸಿ ಪಕ್ಕದ ರಸ್ತೆ ಅಂದರೆ ಕಾರ್ತಿಕ್ ಬರುತ್ತಿದ್ದ ರಸ್ತೆ ಕಡೆಗೆ ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ವಾಹನ ಸಮೇತ  ಕೆಳಕ್ಕೆ ಬಿದ್ದು ಬಲದಕಾಲಿನ ಹೆಬ್ಬೆರಳು ಕಟ್ಟಾಗಿ ಎಡ ಕಾಲಿನ ಮಂಡಿಚಿಪ್ಪು ಹಾಗು ಹಣೆಯಭಾಗದಲ್ಲಿ ಮೋಳೆ ಮುರಿದು ಎಡದ ಕಣ್ಣಿನ ಬಳಿ ಮತ್ತು ತಲೆಗೆ ತಿವ್ರ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆಗೆ ಬೃಂದಾವನ ಆಸ್ಪತ್ರೆಗೆ ಕರೆದುಕೊಂಡು ದಾಖಲಾಗಿರುವುದಾಗಿ ಪಿರ್ಯಾದಿಯವರು ಅಪಘಾತದ ವಿಚಾರ ತಿಳಿದು ಗಾಯಾಳು ಚಿಕಿತ್ಸೆಯಲ್ಲಿದ್ದು ಈ ದಿನ ಇಡವಾಗಿ ಈ ಅಪಘಾತಕ್ಕೆ ಕಾರಣನಾದ ಕಾರ್ ನಂಬರ್ ಕೆಎ-11-ಬಿ-3903 ಇದರ ಚಾಲಕನ ವಿರುದ್ದ   ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ

ದೇವರಾಜ ಠಾಣೆ

ದಿ:-02.10.19 ರಂದು ಬೆಳಿಗ್ಗೆ ಸುಮಾರು 8:00 ಗಂಟೆ ಸಮಯದಲ್ಲಿ ಪಿರ್ಯಾದಿ ಕುಮಾರ್ ರವರು ತಮ್ಮ ಪ್ಯಾಸೆಂಜರ್ ಆಟೋ ನಂಬರ್ ಕೆಎ09ಸಿ 7002 ಅನ್ನು ಹುಣಸೂರು ರಸ್ತೆಯ ಕಡೆಯಿಂದ ಮೆಟ್ರೊಪೋಲ್ ವೃತ್ತದಲ್ಲಿ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ದಾಸಪ್ಪ ವೃತ್ತದ ಕಡೆಯಿಂದ ಕಾರ್ ನಂಬರ್ ಕೆಎ09ಎಂಎ1714 ರ ಚಾಲಕ ಕಾರನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಆಟೋದ ಮುಂಭಾಗದ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಆಟೋ ಮೊಗಚಿಕೊಂಡು ಪಿರ್ಯಾದಿಯವರ ಎಡಕಾಲಿಗೆ ಪೆಟ್ಟಾಗಿದ್ದು ಆಟೋ ಮುಂಭಾಗದ ಎಡಭಾಗ ಜಖಂ ಆಗಿರುತ್ತದ.ೆ ಪಿರ್ಯಾದಿಯವರು ಕೆ.ಆರ್.ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಈ ಅಪಘಾತಕ್ಕೆ ಕಾರ್ ಚಾಲಕನ ವೇಗ ಮತ್ತು ನಿರ್ಲಕ್ಷತೆ ಚಾಲನೆ ಕಾರಣವಾಗಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ನೀಡಿದ ದೂರಿನ ಸಾರಾಂಶವಾಗಿರುತ್ತೆ.

ಸಿ10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                      MYSURU CITY TRAFFIC VIOLATION CASES

                                DATE: 02-10-2019

SLNO

                    HEADS

            NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

 

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

 

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®