ENGLISH   |   KANNADA

Blog



ದಿನಾಂಕ;03.10.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:04.10.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 53       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

 ಉದಯಗಿರಿ ಠಾಣೆ

ದಿನಾಂಕ 02/10/2019 ರಂದು ರಾತ್ರಿ 10-20 ಗಂಟೆ ಸಮಯದಲ್ಲಿ ಪಿರ್ಯಾದಿ ಶೇಖ್ ಮೋಸೀನ್ ತನ್ನ ಸ್ನೇಹಿತರಾದ ಮನ್ಸೂರ್‌ ಹಾಗೂ ಇದಾಯತ್‌ ರವರೊಂದಿಗೆ ಕಲ್ಯಾಣಗಿರಿನಗರ, ಅಕ್ಷಯ ಭಂಡಾರ ಬಳಿ ಮಾತನಾಡುತ್ತಿದ್ದಾಗ ಸುಮಾರು 20-25 ವರ್ಷ ವಯಸ್ಸಿನ ಇಬ್ಬರು ಹುಡುಗರು ಬೈಕ್‌ನಲ್ಲಿ ಬಂದು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಮಾತಿನಿಂದ ನಿಂದಿಸಿ ಗಾಂಚಾಲಿ ತುಂಬಾ ಜಾಸ್ತಿಯಾಗಿದೆಯಂತೆ ನೀನು ನಮ್ಮ ಹುಮಾಯನ್‌ ಖಾದ್ರಿಗೆ ಅವಾಜ್‌ ಹಾಕೋವಸ್ಟು ಬೆಳಿದುಬಿಟ್ಟಿದೀಯಾ, ನೋಡು ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಎಂದು ಹೇಳುತ್ತಾ ಸದರಿ ಬೈಕ್‌ನ ಹಿಂಭಾಗ ಕುಳಿತಿದ್ದ ಹುಡುಗ ಏಕಾಏಕಿ ಒಂದು ಚಾಕುವನಿಂದ ಪಿರ್ಯಾದಿ ಎಡತೋಲಿಗೆ ಎರಡು ಬಾರಿ ಬಲವಾಗಿ ಕೂಯ್ದು ರಕ್ತಗಾಯಪಡಿಸಿ ಅಲ್ಲಿಂದ ಹೊರಟು ಹೋಗಿದ್ದು, ಸದರಿ ಘಟನೆಗೆ ಈ ಹಿಂದೆ ಮನೆ ಬಳಿ ಕಾರು ನಿಲ್ಲಿಸುವ ವಿಚಾರದಲ್ಲಿ ಆಗಾಗ್ಗೆ ಜಗಳ ಮಾಡಿ ದ್ವೇಷ ಬೆಳಿಸುತ್ತಿದ್ದ ಹುಮಾಯುನ್‌ ಖಾದ್ರಿಯ ಕುಮ್ಮಕ್ಕೆ ಕಾರಣವೆಂದು ಸದರಿ ಮೂರು ಜನರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

02

ವಿಜಯನಗರ ಠಾಣೆ

ಪಿರ್ಯಾದಿ ಗುರು ರವರು ಠಾಣೆಗೆ ಹಾಜರಾಗಿ ನಾನು ಮತ್ತು ನನ್ನ ಸ್ನೇಹಿತ ಮಂಜುನಾಥ ಎಂಬುವನು ದಿನಾಂಕ:29.09.2019 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ನಮ್ಮ ಮೊಬೈಲ್ ಫೋನ್ ಗಳನ್ನು ಮನೆಯ ಕಿಟಕಿಯ ಬಳಿ ಇಟ್ಟು ಮಲಗಿಕೊಂಡಿದ್ದು, ದಿನಾಂಕ:30.09.2019 ರಂದು ಬೆಳಿಗ್ಗೆ 6-30 ಗಂಟೆಗೆ ಎದ್ದು ನೋಡಲಾಗಿ ನಾವುಗಳು ಕಿಟಕಿಯ ಬಳಿ ಇಟ್ಟಿದ್ದ ನಮ್ಮಗಳ ೦3 ಮೊಬೈಲ್ ಫೋನ್ ಗಳು ಇರಲಿಲ್ಲ. ಯಾರೋ ರಾತ್ರಿ ನಾವುಗಳು ಮಲಗಿಕೊಂಡಿರುವಾಗ ಕಿಟಕಿ ಮೂಲಕ ನಮ್ಮ ಮೊಬೈಲ್ ಫೋನ್ ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು, ಈ ದಿನ ಠಾಣೆಗೆ ಬಂದು ನೋಡಲಾಗಿ ನಮ್ಮ ಫೋನುಗಳು ಠಾಣೆಯಲ್ಲಿದ್ದು, ಇವ್ರುಗಳನ್ನು ಕಳವು ಮಾಡಿದವನ ವಿರುದ್ದ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ನಜರ್ ಬಾದ್ ಠಾಣೆ

ದಿನಾಂಕ:03-10-2019 ರಂದು ಪಿರ್ಯಾದುದಾರರಾದ ರವಿಕುಮಾರ್ ರವರು ನಂಜನಗೂಡಿನಲ್ಲಿರುವ ನಿವೇಶನವನ್ನು ಈಗ್ಗೆ 1 ತಿಂಗಳ ಹಿಂದೆ ಬೇರೆಯವರಿಗೆ ಮಾರಾಟ ಮಾಡಿ ಅವರಿಂದ ನಾನು 3 ಲಕ್ಷ ರೂಗಳನ್ನು ಪಡೆದುಕೊಂಡು ಮನೆಯಲ್ಲಿಟ್ಟಿದ್ದು, ದಿನಾಂಕ-03-10-2019 ರಂದು ನಾನು ನನ್ನ ಬ್ಯಾಂಕ್ ಅಕೌಂಟ್ಗೆ ಹಾಕಲೆಂದು ನನ್ನ ಕಾರಿನಲ್ಲಿ ನಜರ್ಬಾದ್ ಶಾಖೆಯ ಕೆನರಾ ಬ್ಯಾಂಕ್ಗೆ ಹೋದಾಗ ಅಲ್ಲಿ ತುಂಬ ಜನಸಂದಣಿ ಇದ್ದುದ್ದರಿಂದ ಸ್ವಲ್ಪ ಸಮಯ ಬಿಟ್ಟು ಬರೋಣ ಎಂದುಕೊಂಡು ನಜರ್ಬಾದ್ನ ತಾಲ್ಲೂಕು ಆಫೀಸು ರಸ್ತೆಯ ಗಾರ್ಡನ್ ಟೆನ್ನಿಸ್ ಕ್ಲಬ್ ಹತ್ತಿರ ಬೆಳಿಗ್ಗೆ 11-50 ಗಂಟೆ ಸಮಯಕ್ಕೆ ಹೋಗಿ ನನ್ನ ಕಾರನ್ನು ನಿಲ್ಲಿಸಿ ಕ್ಲಬ್ ಓಳಗೆ ಇರುವ ಶೌಚಲಯಕ್ಕೆ ಹೋಗಿ ಕೇವಲ 2 ನಿಮಿಷದಲ್ಲಿ ವಾಪಸ್ಸು ನನ್ನ ಕಾರಿನ ಹತ್ತಿರ ಬಂದಾಗ ಯಾರೋ ನನ್ನ ಕಾರಿನ ಬಲ ಭಾಗ ಡ್ರೈವರ್ ಸೀಟ್ನ ಪಕ್ಕದ ಗಾಜನ್ನು ಒಡೆದು ಹಾಕಿದ್ದನ್ನು ನೋಡಿ ತಕ್ಷಣ ನಾನು ಕಾರಿನಲ್ಲಿಟ್ಟಿದ್ದ ಹಣವನ್ನು ನೋಡಲಾಗಿ ನನ್ನ 3 ಲಕ್ಷ ರೂ ಹಣವನ್ನು ಯಾರೊ ಕಳ್ಳರು ಕದ್ದುಕೊಂಡು ಹೋಗಿರುತ್ತಾರೆ. ಅದ್ದರಿಂದ ನನ್ನ ಕಾರಿನ ಗಾಜನ್ನು ಒಡೆದು ಕಾರಿನೊಳಗಿದ್ದ ನನ್ನ 3 ಲಕ್ಷ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಪ್ರ. ವ. ವರದಿ. 

7

ವಾಹನ ಕಳವು

01

ಮಂಡಿ ಠಾಣೆ

ಪಿರ್ಯಾದಿ ಸಂಜಯ್  ರವರ ಜೊಮೊಟೋ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು, ತನ್ನ ದಿನನಿತ್ಯದ ಕೆಲಸಕ್ಕೆಂದು 2018ನೇ ಇಸವಿಯಲ್ಲಿ ತನ್ನ ತಾಯಿ ಪುಷ್ಪ ರವರ ಹೆಸರಿನಲ್ಲಿ ಒಂದು ಕಪ್ಪು ಬಣ್ಣದ ಸುಜುಕಿ ಆಕ್ಸಸ್ ಸ್ಕೂಟರ್ ನಂ ಕೆ.ಎ-55-ಎಕ್ಸ್-9608 ನ್ನು ತೆಗೆದುಕೊಂಡು, ಓಡಾಟಕ್ಕೆ ಇಟ್ಟುಕೊಂಡಿದ್ದು, ದಿ: 30/09/19 ರಂದು ರಾತ್ರಿ ಸುಮಾರು 9-30 ಗಂಟೆಯಲ್ಲಿ ಕ್ಯಾಷಿನೋ ಪಾರ್ಕ್ ಹೋಟೆಲ್ ಮುಂಭಾಗ ತನ್ನ ಸ್ಕೂಟರ್ ನ್ನು ನಿಲ್ಲಿಸಿ, ಲಾಕ್ ಮಾಡದೇ ಕೀ ಅನ್ನು ಸ್ಕೂಟರ್ ನಲ್ಲಿಯೇ ಬಿಟ್ಟು, ಕ್ಯಾಷಿನೋ ಪಾರ್ಕ್ ಹೋಟೆಲ್ ನಿಂದ ಆರ್ಡರ್ ತೆಗೆದುಕೊಂಡು ವಾಪಸ್ಸು ರಾತ್ರಿ 9-45 ಗಂಟೆಗೆ ಬಂದು ನೋಡಲಾಗಿ, ಸ್ಕೂಟರ್ ಕಾಣದೇ ಇದ್ದು, ಸ್ಕೂಟರ್ ನ ಇನ್ಸ್ ರೆನ್ಸ್ ಅವಧಿ ಮುಗಿದು ಹೋಗಿದ್ದರಿಂದ, ಪಿರ್ಯಾದಿದುದಾರರೇ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಸಹ ಪತ್ತೆಯಾಗದ ಕಾರಣ, ತನ್ನ ಸ್ಕೂಟರ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 30.000/-ರೂ.ಗಳಾಗಿರುತ್ತದೆ. ಕಳ್ಳತನವಾಗಿರುವ ಸುಜುಕಿ ಆಕ್ಸಸ್ ಸ್ಕೂಟರ್ ನಂ ಕೆ.ಎ-55-ಎಕ್ಸ್-9608 ನ್ನು ಪತ್ತೆ ಮಾಡಿಕೊಡುವಂತೆ ಇತ್ಯಾದಿಯಾಗಿ ನೀಢಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

ಸಿ10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಕೃಷ್ಣರಾಜ ಠಾಣೆ

ದಿನಾಂಕ:03-10-2019 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಶ್ರೀಮತಿ ಹೇಮಾವತಿ, ಸೀನಿಯರ್ ಮ್ಯಾನೇಜರ್, ಪಂಜಾಬ್ ನ್ಯಾಷನಲ್‌‌ ಬ್ಯಾಂಕ್‌,  ವಿ.ವಿ  ಮಾರ್ಕೆಟ್ ಬ್ರ್ಯಾಂಚ್, ಮೈಸೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 03-10-2019 ರಂದು ಬೆಳಿಗ್ಗೆ 10-45 ಗಂಟೆ ಸಮಯದಲ್ಲಿ ನಮ್ಮ ಬ್ಯಾಂಕ್‌ಗೆ  ಇಸ್ಲಾಮುಲ್ಲಾ ಹಕ್ ಎಂಬುವವರು ಬಂದು ತಮ್ಮ ಖಾತೆ ಸಂಖ್ಯೆ 176000100067091 ಗೆ 2000/- ಮುಖಬೆಲೆಯ 150 ನೋಟುಗಳುಳ್ಳ 3 ಲಕ್ಷ ಹಣವನ್ನು ಕಟ್ಟಲು ಬಂದಿದ್ದು, ಸದರಿ ನೋಟುಗಳನ್ನು ಪಡೆದುಕೊಂಡು ಪರಿಶೀಲಿಸಲಾಗಿ ಸದರಿ ನೋಟುಗಳು ಖೋಟಾನೋಟುಗಳಾಗಿದ್ದು, ನಂತರ ನಾವು ಸದರಿ ಇಸ್ಲಾಮುಲ್ ಹಕ್  ರವರನ್ನು ಸದರಿ ಖೋಟಾನೋಟುಗಳ ಜೊತೆಗೆ ಕೆ.ಆರ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿ ಸದರಿ ಇಸ್ಲಾಮುಲ್ ಹಕ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

                      MYSURU CITY TRAFFIC VIOLATION CASES

                                     DATE: 03-10-2019

SLNO

            HEADS

          NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

 

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

 

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com