ENGLISH   |   KANNADA

Blog



ದಿನಾಂಕ;01.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:02.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 46       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಅಶೋಕಪುರಂ ಠಾಣೆ

ಫಿರ್ಯಾದಿ ಸಾವಿತ್ರಮ್ಮ  ರವರ  ಮಗಳಾದ ಸೂರ್ಯಪ್ರಭಳನ್ನು ಶಶಿಕಿರಣ್ ಎಂಬುವನಿಗೆ ಕೊಟ್ಟು ಮದುವೆ ಮಾಡಿದ್ದು, ಆರೋಪಿ ಕೆಟ್ಟದಾಗಿ ಅವಾಚ್ಯ ಶಬ್ದಗಳಿಂದ ಮಾತನಾಡಿ ಅವರುಗಳನ್ನು ಮನೆಯಿಂದ ಆಚೆ ನೂಕಿದ್ದು, ದಿನಾಂಕ 31.10.2019 ರಂದು ಸಂಜೆ 06.00 ಗಂಟೆಗೆ ಕೆ ಆರ್ ವನಂನಲ್ಲಿರುವ ಮನೆಗೆ ಬನ್ನಿ ಎಂದು ಹೇಳಿದ್ದು, ಆಗ ಫಿರ್ಯಾದಿಯು ತನ್ನ ಯಜಮಾನರೊಂದಿಗೆ ಸಂಜೆ 6.00 ಗಂಟೆ ಸುಮಾರಿಗೆ ಕೆ ಆರ್ ವನಂಗೆ ಹೋಗಿ ಅವರುಗಳೊಂದಿಗೆ ಆಕೆಯ ಮೈಕೈ ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅವಮಾನವಾಗುವಂತೆ ನಡೆದುಕೊಂಡು ತಲೆಯ ಎಡಭಾಗದ ಜುಟ್ಟನ್ನು ಹಿಡಿದು ಕೆಳಗೆ ಬೀಳಿಸಿ, ಕಾಲಿನಿಂದ ಒದ್ದು, ಬೆನ್ನಿಗೆ ಹೊಟ್ಟೆ ಭಾಗಕ್ಕೆ ಒದ್ದಿದ್ದು, ಚಿದಾನಂದಮೂರ್ತಿಯು ಅಣ್ಣ ಈ ನಾಯಿ ಮುಂಡೆಯನ್ನು ಬಿಡಬೇಡ ಸಾಯಿಸು ಅದೇನಾಗುತ್ತೋ ನೋಡೋಣ ಎಂದು ಪಿರ್ಯಾದಿಯವರ ಗಂಡನವರಿಗೂ ಸಹಾ ಹೊಡೆದು ಹಲ್ಲೆ ಮಾಡಿದ್ದು ದಿನಾಂಕ: 31.10.2019 ರಂದು ಕೆ.ಆರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು  ನಂತರ ಮನೆಯಲ್ಲಿ ವಿಶ್ರಾಂತಿ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ಶಿವಪ್ರಸಾದ್ ಮತ್ತು ಚಿದಾನಂದ ಮೂರ್ತಿ ಹಾಗೂ ಇತರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ. 

ಉದಯಗಿರಿ ಠಾಣೆ

ದಿನಾಂಕ: 01/11/2019 ರಂದು ಬೆಳಿಗ್ಗೆ ಸುಮಾರು 8-30 ಗಂಟೆಯಲ್ಲಿ ಪಿರ್ಯಾದಿ ಮೇರಿ ಮತ್ತು ಅವರ ಯಜಮಾನರು ತಬಸುಮ್ ಅವರ ಮನೆಯ ಹತ್ತಿರ ಹೋಗಿ ಪಿರ್ಯಾದಿಯವರು ನೀಡಿದ ಸಾಲವನ್ನು ವಾಪಸ್ಸು ಕೊಡುವಂತೆ ಕೇಳಿದ್ದು, ಸದರಿ ತಬಸುಮ್ ರವರು ಕೋಪಗೊಂಡು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಪೈಪಿನಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು, ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಆಲನಹಳ್ಳಿ ಠಾಣೆ

ಪಿರ್ಯಾದಿ ಶಿವಣ್ಣ ರವರು  ದಿನಾಂಕ.01-11-2019 ರಂದು ಅಪರ್ನಾಹ 4-50 ಗಂಟೆಯಲ್ಲಿ ನನಗೆ ಸೇರಿದ ಜಾಗದ ಪಕ್ಕದಲ್ಲಿ ವಿನಯ್  ರವರು ಗೃಹಪ್ರವೇಶ ಮಾಡುತ್ತಿದ್ದು. ಗೃಹಪ್ರವೇಶದಲ್ಲಿ ಊಟದ ನಂತರ ಕೈತೊಳೆಯುವ ನೀರು ಮನೆಯ ಆವರಣದಲ್ಲಿ ಬರುತ್ತಿದ್ದು.  ಈ ಬಗ್ಗೆ ಅವರ ತಾಯಿಗೆ ಗಲೀಜು ನೀರು ನಮ್ಮ ಮನೆಯ ಆವರಣೆಕ್ಕೆ ಆಗುತ್ತಿದೆಂದು ಹೇಳಿದಕ್ಕೆ. ಆಗ ಅಲ್ಲೆ ಕೆಲಸ ಮಾಡುವ ಹುಡುಗರಾದ ಸುನೀಲ್ ಮತ್ತು ಮಹದೇವು ರವರು ಗೃಹ ಪ್ರವೇಶದ ಸಂದರ್ಭದಲ್ಲಿ ಗಲೀಜು ನೀರು ಬರುತ್ತದೆ ಎಂದು ಹೇಳಿ, ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ  ಮಾಡುತ್ತಿರುವಾಗ  ನನ್ನ ಅಳಿಯನಾದ ಡಾ.ದರ್ಶನ್ ರವರು ಇದನ್ನು ತಡೆಯಲು ಬಂದಾಗ ಅವರ ಮೇಲೆ ಸಹ ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿರುತ್ತಾರೆ. ಆದರಿಂದ ಗೃಹಪ್ರವೇಶ ಮಾಡುತ್ತಿರುವ ವಿನಯ್ ಹಾಗೂ ನಮ್ಮ ಮೇಲೆ ಹಲ್ಲೆ ಮಾಡಿರುವ ಸುನೀಲ್ ಮತ್ತು ಮಹದೇವು ರವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರ.ವ.ವರದಿ.    

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ

ಪಿರ್ಯಾದಿ ಪಾಪಣ್ಣ ಗೌಡ ರವರು  ದಿನಾಂಕ:24.07.2019 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ಕೆ.ಎ-10-ಯು-9166 ಹೋಡಾ ಆಕ್ಟೀವಾ ಸ್ಕೂಟರ್ ಅನ್ನು ಹೂಟಗಳ್ಳಿ ಸೈಲೆಮಸ್ ಶೋರ್ ಹೋಟೆಲ್  ಪಕ್ಕದ ರಸ್ತೆಯಲ್ಲಿ ನಿಲ್ಲಿಸಿ ಅಂಗಡಿಗೆ ಹೊಗಿ 10 ನಿಮಿಷದಲ್ಲಿ ವಾಪಸ್ ಬಂದು ನೋಡಲಾಗಿ ಸ್ಕೂಟರ್ ಕಳವಾಗಿರುತ್ತೆಂದು ಪತ್ತೆ ಮಾಡಿಕೊಡಬೇಕಾಗಿ ನೀಡಿ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಉಮ್ಮೆ ನಜ್ಮಾ ರವರು ದಿನಾಂಕ:16.5.2004 ರಂದು ಆರೋಪಿ-1 ನೂರುಲ್ಲ ಖಾನ್ ರವರನ್ನು ಗುರುಹಿರಿಯವರ ಸಮಕ್ಷಮ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುತ್ತಾರೆ. ಮದುವೆಯಾದ ನಂತರ ಪಿರ್ಯಾದಿಯು ಆರೋಪಿ-1, ಆರೋಪಿ-2 ರಿಯಾಜ್ ಖಾನ್, ಆರೋಪಿ-3 ರಜಿಯಾ ತಸ್ನಿಂ, ಆರೋಪಿ-4 ತಬಸ್ಸುಂ, ಆರೋಪಿ-5 ತರನ್ನುಂ, ಆರೋಪಿ-6 ಅಂಜುಮ್ ರವರೊಂದಿಗೆ ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ-1,2,3,4,5,6 ರವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿಗೆ ಬೈದು ಹೊಡೆದು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ,  ಆರೋಪಿ-1 ರವರಿಗೆ ಬೇರೆ ಮದುವೆ ಮಾಡಿಸುವುದಾಗಿ ಹೇಳಿ,  ಪಿರ್ಯಾದಿಗೆ ಮನೆ ಬಿಟ್ಟು ಹೋಗುವಂತೆಕಿರುಕುಳ ನೀಡಿದ್ದಲ್ಲದೇ,. ಆರೋಪಿ-1 ರವರು ಮದ್ಯರಾತ್ರಿಯಲ್ಲಿ ಮದ್ಯಪಾನ ಮಾಡಿಕೊಂಡು ಬಂದು ಪಿರ್ಯಾದಿ ಮೇಲೆ ಹಲ್ಲೆ ನಡೆಯಿಸಿ ಮನೆಯಿಂದ ಹೊರಗೆ ಹಾಕಿದ್ದಲ್ಲದೇ, ತದನಂತರದಲ್ಲಿ ಆರೋಪಿ-1,2,3,4,5,6 ರವರುಗಳು ಪಿರ್ಯಾದಿ ಹಾಗೂ ಅವರ ಮನೆಯವರೊಂದಿಗೆ ಜಗಳವಾಡಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ..

9

ರಸ್ತೆ ಅಪಘಾತ

01

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ:19-10-2019 ರಂದು ಬೆಳಿಗ್ಗೆ ಸುಮಾರು 09.00 ಗಂಟೆಯಲ್ಲಿ  ಪಿರ್ಯಾದಿ ಸುಂದ್ರಮ್ಮ ರವರ ಮಗ ಅರುಣ್ ಕುಮಾರ್  ಮೋಟಾರ್ ಸೈಕಲ್  ನಂಬರ್ KA-09 HH-2265 ನ್ನು  ಚಾಲನೆ ಮಾಡಿಕೊಂಡು  ಸಯ್ಯಾಜಿರಾವ್ ರಸ್ತೆಯಲ್ಲಿ  ಪಂಚಮುಖಿ ಗಣಪತಿ ದೇವಸ್ಥಾನದ ಕಡೆಯಿಂದ ಆರ್ಯುವೇದಿಕ್ ಸರ್ಕಲ್ ಕಡೆಗೆ  ಸತ್ಯನಾರಾಯಣ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಇದೇ ವೇಳೆಗೆ ಎದುರುಗಡೆಯಿಂದ ಪ್ಯಾಸೆಂಜರ್ ಆಟೋರಿಕ್ಷಾ ನಂಬರ್ KA-09 A-0344 ರ ಚಾಲಕ ಶರವಣ @ ಅಪ್ಪಿ ಆಟೋರಿಕ್ಷಾವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅರುಣ್ ಕುಮಾರ್ ಮೋಟಾರ್ ಸೈಕಲ್ ಗೆ  ಢಿಕ್ಕಿ ಮಾಡಿದಾಗ ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಬಲಗಾಲಿಗೆ ಪೆಟ್ಟಾಗಿದ್ದವನನ್ನು ಸ್ಥಳದಲ್ಲಿದ್ದ ಜನರು ಸಹಾಯದಿಂದ  ಚಿಕಿತ್ಸೆಗೆ ಕೆ.ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಪಿರ್ಯಾದಿಯವರು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ರೈಲ್ವೇ ಆಸ್ಪತ್ರೆಗೆ ದಾಖಲಿಸಿದ್ದು  ಆಟೋರಿಕ್ಷ ಚಾಲಕ ರಾಜಿ ಮಾಡಿಕೊಳ್ಳೋಣವೆಂದು ತಿಳಿಸಿ ಈಗ ಸರಿಯಾಗಿ ಸ್ಪಂದಿಸದಿರುವುದರಿಂದ ಪಿರ್ಯಾದಿಯವರು ಈ ದಿನ ತಡವಾಗಿ ಠಾಣೆಗೆ ಬಂದು ಆಟೋರಿಕ್ಷಾ ಚಾಲಕನ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ ವ  ವರದಿ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                                    MYSURU CITY TRAFFIC VIOLATION CASES

                                           DATE  :01-11-2019

SLNO

                 HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

100

 

-

 

100

2

TOTAL NUMBER OF CRR'S

207

165

106

167

149

794

3

TOTAL FINE AMOUNT COLLECTED

79,700

93,200

45,600

93,000

79,400

3,90,900

4

POLICE NOTICE ISSUED

-

-

-

-

 

-

5

PARKING TAGS

-

/

-

-

 

-

6

FATAL

-

 

-

-

 

-

7

NON FATAL

-

 

-

-

1

1

8

INTERCEPTOR CASES

-

56

40

-

 

96

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

10

22

5

18

20

75



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com