ENGLISH   |   KANNADA

Blog



ದಿನಾಂಕ;02.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:03.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 61       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಆಲನಹಳ್ಳಿ ಠಾಣೆ

ಪಿರ್ಯಾದಿ ಮಹದೇವು ರವರು  ದಿನಾಂಕ:01.11.2019 ರಂದು ಮೌಲಿಂ ನಗರದಲ್ಲಿ ಲಕ್ಷ್ಮಿ ಎಂಟರ್ ಪ್ರೈಸಸ್ ಅಂಗಡಿಯನ್ನು ಹೊಸದಾಗಿ ಉದ್ಘಾಟನೆ  ಮಾಡುತ್ತಿದ್ದು, ಈ ಅಂಗಡಿಯ ಪಕ್ಕದಲ್ಲಿ ಶಿವಣ್ಣ ರವರ ಮನೆ ಇದ್ದು, ಪಿರ್ಯಾದಿ  ಅಂಗಡಿಯ ಮುಂದೆ ಹಾಕಿದ ನೀರು ಅವರ ಮನೆಯ ಮುಂಭಾಗದ ರಸ್ತೆಯವರೆಗೆ ಸ್ವಲ್ಪ ನೀರು ಹರಿದಿದ್ದು, ಈ ವಿಚಾರವಾಗಿ ಸಂಜೆ 05-00 ಗಂಟೆ ಸಮಯದಲ್ಲಿ ಶಿವಣ್ಣರವರ ಹೆಂಡತಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ, ಅವರ ಅಳಿಯ ದರ್ಶನ್, ಶಿವಣ್ಣ & ಅವರ ಮಗ ಎಲ್ಲರೂ ಸೇರಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಕೃಷ್ಣರಾಜ ಠಾಣೆ

ಪಿರ್ಯಾದಿ  ಎನ್ ನಿಜಗುಣ ಆರಾದ್ಯ  ರವರು ಕೆ ಎಸ್  ಆರ್ ಟಿ ಸಿ ಬಸ್ ಚಾಲಕರಾಗಿದ್ದು  ದಿ: 01/11/2019 ರಂದು ಕರ್ತವ್ಯ ಮುಗಿಸಿಕೊಂಡು ರಾತ್ರಿ ಸುಮಾರು 11-00 ಗಂಟೆಯಲ್ಲಿ ಸ್ನೇಹಿತ ಮಣಿಕಂಠಸ್ವಾಮಿ ರವರ ಜೊತೆಯಲ್ಲಿ ತಮ್ಮ  ಹಿರೋ ಪ್ಯಾಷನ್ ಪ್ಲಸ್ ನಂ ಕೆಎ-55-ಕ್ಯೂ-9081 ರಲ್ಲಿ ರಾಮಾನುಜ ರಸ್ತೆಯ 13 ನೇಕ್ರಾಸ್ ಬಳಿ ಬಂದು, ಅಲ್ಲಿ ನನ್ನ ಸ್ನೇಹಿತ ಮಣಿಕಂಠ ಸ್ವಾಮಿರವರನ್ನು ಇಳಿಸಿದೆ. ಅಷ್ಟರಲ್ಲಿ ಸುಮಾರು 25-30 ವರ್ಷ ವಯಸ್ಸಿನ 04 ಜನ ಅಪರಿಚಿತ ವ್ಯಕ್ತಿಗಳು ಪಿರ್ಯಾದಿ ಬಳಿ ಬಂದು ತಡೆದು ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೀಯ, ದುಡ್ಡುಕೊಡು ಎಂದು ಕೇಳಿದರು, ಆಗ ಪಿರ್ಯಾದಿ ನೀವ್ಯಾರು ನಾನ್ಯಾಕೆ ನಿಮಗೆ ದುಡ್ಡು ಕೊಡಬೇಕೆಂದು ಕೇಳುತ್ತಿದ್ದಂತೆ ಅವರಲ್ಲಿ ಒಬ್ಬ ಏಕಾಏಕಿ ಮುಷ್ಠಿಮಾಡಿ ಪಿರ್ಯಾದಿ ಮುಖದ ಭಾಗಕ್ಕೆ ಗುದ್ದಿದ, ನಂತರ ಮತ್ತೊಬ್ಬ ವ್ಯಕ್ತಿ ಎಡ ಪಕ್ಕೆಗೆ ಬಲವಾಗಿ ಕೈಯಿಂದ ಗುದ್ದಿದ. ಉಳಿದ ಇಬ್ಬರು ಕೈಯಿಂದ ಮೈಕೈಗೆ ಗುದ್ದಿ, ಕಾಲಿನಿಂದ ಒದ್ದು ನೋವುಂಟು ಮಾಡಿದರು. ಅಷ್ಟಕ್ಕೆ ಪಿರ್ಯಾದಿ ಸ್ನೇಹಿತ ಮಣಿಕಂಠಸ್ವಾಮಿ ಹಾಗೂ ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳು ಜಗಳ ಬಿಡಿಸಿ ಸಮಾಧಾನ ಮಾಡಿದ್ದು, ಸದರಿ ವ್ಕ್ತಗಳು ಅಲ್ಲಿಂದ ಹೊರಟು ಹೋಗಿದ್ದು, ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಆಲನಹಳ್ಳಿ ಠಾಣೆ

ಪಿರ್ಯಾದಿ ಸೋಮಣ್ಣ ರವರು ಬೆಂಗಳೂರಿನಲ್ಲಿ ವಾಸವಾಗಿದ್ದು ಸದರಿ ಮನೆಗೆ ಆಗಾಗ್ಗೆ ಬಂದು ನೋಡಿಕೊಂಡು ಹೋಗುತ್ತಿದ್ದು. ದಿ;02/11/2019 ರಂದು ಅವರ ಸ್ನೇಹಿತ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ  ತಿಳಿಸಿದಾಗ ಸದರಿ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಹಿಂದಿನ ಬಾಗಿಲಿನ ಗ್ರಿಲ್ಸ್  ಗೇಟ್ ನ ಬೀಗ ಮುರಿದು ರೂಂ ನಲ್ಲಿಟ್ಟಿದ್ದ 02 ಚಿನ್ನದ ಉಂಗುರಗಳು & ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳ್ಳತನ ಮಾಡಿದವರನ್ನು ಪತ್ತೆ ಮಾಡಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ:02-11-2019 ರಂದು ಬೆಳಿಗ್ಗೆ ಸುಮಾರು 10.30 ಗಂಟೆಯಲ್ಲಿ  ಪಿರ್ಯಾದಿ ಹೇಮಂತ್ ಕುಮಾರ್ ರವರು  ಮೋಟಾರ್ ಸೈಕಲ್  ನಂಬರ್ KA-11 EL-1337 ನ್ನು  ಚಾಲನೆ ಮಾಡಿಕೊಂಡು  ಮೈಸೂರು- ಬೆಂಗಳೂರು  ರಸ್ತೆಯಲ್ಲಿ  ಫೌಂಟೇನ್ ಸರ್ಕಲ್  ಕಡೆಯಿಂದ ಎಫ್.ಟಿ.ಎಸ್  ಸರ್ಕಲ್ ಕಡೆಗೆ  ಕೆಇಬಿ ಕಛೇರಿಯ  ಬಳಿ ಹೋಗುತ್ತಿದ್ದಾಗ ಇದೇ ವೇಳೆಗೆ ಎದುರುಗಡೆಯಿಂದ ಪ್ಯಾಸೆಂಜರ್ ಆಟೋರಿಕ್ಷಾ ನಂಬರ್ KA-55 8056 ರ ಚಾಲಕ ಆಟೋರಿಕ್ಷಾವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ವಿರುದ್ದ ದಿಕ್ಕಿನಲ್ಲಿ  ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದಾಗ ಮೋಟಾರ್ ಸೈಕಲ್ ಸಮೇತ ಪಿರ್ಯಾದಿ ಕೆಳಕ್ಕೆ ಬಿದ್ದು ಎಡಗಾಲಿಗೆ ಪೆಟ್ಟಾಗಿದ್ದವನನ್ನು ಟ್ರಾಫಿಕ್ ಪೊಲೀಸರು ಉಪಚರಿಸಿ ಚಿಕಿತ್ಸೆಗೆ ಆಟೋರಿಕ್ಷಾವೊಂದರಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಕಳುಹಿಸಿದ್ದು,ಒಳರೋಗಿಯಾಗಿ ಚಿಕಿತಸ್ಎ ಪಡೆಯುತ್ತಿದ್ದು ಸದರಿ ಆಟೋ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ;30-10-2019 ರಂದು ಬೆಳಿಗ್ಗೆ 10;00ಗಂಟೆಯ ಸಮಯದಲ್ಲಿ ಪಿರ್ಯಾದಿ ರಾಜು ರವರ  ಅಣ್ಣ ಪುಟ್ಟರಾಜು ಅವರು ತಮ್ಮ ಮೋ,ಸೈ ನಂ ಕೆ,ಎ-55-ಹೆಚ್-4388  ಇದನ್ನು ಹಿಂಭಾಗದಲ್ಲಿ ಮಂಜುನಾಥ್ ಅವರನ್ನು ಕೂರಿಸಿಕೊಂಡು ವಿದ್ಯಾಲಯದ ಹತ್ತಿರ ಕೆ,ಹೆಚ್,ಬಿ ಕಾಲೋನಿ ಹೂಟಗಳ್ಳಿ ಬಳಿ ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ತಿರುವಿನಲ್ಲಿ ವಾಹನವನ್ನು ನಿಯಂತ್ರಿಸಲಾಗದೇ ವಾಹನ ಸಮೇತ ಕೆಳಗೆ ಬಿದ್ದ ಪರಿಣಾಮ ಪುಟ್ಟರಾಜು ಅವರ ಮೈ-ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಂಜುನಾಥ್ ಅವರ ಎಡಗೈಮೂಳೆ ಮರಿದು ಹೋಗಿರುತ್ತದೆ. ಇವರನ್ನು ಚಿಕಿತ್ಸೆಗಾಗಿ ಪ್ರಲಾಕ್ಷ ಆಸ್ಪತ್ರೆಗೆ ಧಾಖಲಿಸಲಾಗಿದ್ದು. ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ನೀಡಿದ ದೂರು.  

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                               MYSURU CITY TRAFFIC VIOLATION CASES

                                          DATE  :02-11-2019

SLNO

                   HEADS

                              NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

105

 

-

 

105

2

TOTAL NUMBER OF CRR'S

93

153

31

16

141

434

3

TOTAL FINE AMOUNT COLLECTED

43,400

65,300

14,200

9,500

70,300

2,02,700

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

 

-

-

 

-

7

NON FATAL

-

1

-

-

1

2

8

INTERCEPTOR CASES

-

-

30

-

105

135

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

12

5

-

22

39



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com