ENGLISH   |   KANNADA

Blogದಿನಾಂಕ;04.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:05.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 137       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ನರಸಿಂಹರಾಜ ಠಾಣೆ

ಪಿರ್ಯಾದಿ ಅಮಲ್ ರವರು  “ನಾನು ಮೂಲತಃ ಕೇರಳಾ ರಾಜ್ಯ, ಕಿಡುಕಿ ಜಿಲ್ಲೆಯ, ಯಲಪ್ಪರ ಗ್ರಾಮ, ಚಿನ್ನಾರ್ ಪೋಸ್ಟ್, ಕೀರಿಪಟ್ಟು ನಿವಾಸಿಯಾಗಿದ್ದು, ಮೈಸೂರಿನ ಹೆಬ್ಬಾಳ್ ನಲ್ಲಿರುವ ಗ್ರೀನ್ ಆರ್ಕೀಡ್ ರೆಸಾರ್ಟ್ ನಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡು ಹಾಲಿ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಈ ದಿನ ದಿಃ-04.11.2019 ರಂದು ನಾನು ನನ್ನ ಬಳಿ ಇದ್ದ 85,000/- ಹಣವನ್ನು ಯಾದವಗಿರಿಯಲ್ಲಿರುವ ಎಸ್.ಬಿ.ಐ ಬ್ಯಾಂಕಿನ ಡೆಪಾಸಿಟ್ ಮೆಷನ್ ನಲ್ಲಿ ನನ್ನ ಅಕೌಂಟ್ ಗೆ ಹಣವನ್ನು ಜಮಾ ಮಾಡಲು ನನ್ನ ಅಣ್ಣನ ಹೋಂಡಾ ಡಿಯೋ ಸ್ಕೂಟರ್ ನಲ್ಲಿ ನಮ್ಮ ಮನೆಯಿಂದ ಹೊರಟು ಸಮಯ ಸುಮಾರು 11-15 ಗಂಟೆ ಸಮಯದಲ್ಲಿ ಎಲ್.ಐ.ಸಿ ವೃತ್ತದ ಸಮೀಪದ ಸೇಂಟ್ ಫಿಲೋಮಿನಾ ಕಾಲೇಜಿನ ಗೇಟ್ ಮುಂದೆ ಹೋಗುವಾಗ ಒಂದು ಕೆಂಪು ಬಣ್ಣದ ಮಾರುತಿ ಬ್ರೀಜ ಜೂಂ ಕಾರಿನಲ್ಲಿ ಬಂದ ಸುಮಾರು 18-20 ವಯಸ್ಸಿನ 3 ಜನ ಅಪರಿಚಿತರು ಹುಡುಗರು ನನ್ನ ಸ್ಕೂಟರನ್ನು ಏಕಾಏಕಿ ಅಡ್ಡಗಟ್ಟಿ ನಿಲ್ಲಿಸಿ ನನ್ನ ಬಳಿ ಬಂದು ನೀನು ಓಡಿಸುತ್ತಿರುವ ಸ್ಕೂಟರ್ ನಮ್ಮದು ನೀನು ಅದರ ನಂಬರ್ ಅನ್ನು ಬದಲಾಯಿಸಿಕೊಂಡು ಓಡಿಸುತ್ತಿದ್ದೀಯಾ ಎಂದು ನನ್ನೊಂದಿಗೆ ಜಗಳ ತೆಗೆದು ಅವರಲ್ಲಿ ಒಬ್ಬನು ನನ್ನ ಪ್ಯಾಂಟಿನ ಜೇಬಿನಲ್ಲಿದ್ದ 85,000/- ನಗದು ಹಣವನ್ನು ಕಿತ್ತುಕೊಂಡನು. ನಂತರ ಅವರುಗಳೆಲ್ಲಾ ಅವರು ಬಂದಿದ್ದ ಕಾರಿನಲ್ಲಿ ಪರಾರಿಯಾದರು. ಅವರು ಬಂದಿದ್ದ ಕಾರಿನ ರಿಜಿಸ್ಟ್ರೇಷನ್ ನಂಬರ್ PÉJ-03 ಎಂದು ಇದ್ದು, ಉಳಿದ ನಂಬರನ್ನು ನೋಡಲು ಸಾಧ್ಯವಾಗಲಿಲ್ಲ. ನಂತರ ನಾನು ಆದ ಘಟನೆ ವಿಚಾರವನ್ನು ನನ್ನ ಸ್ನೇಹಿತರಿಗೆ ತಿಳಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ 85,000/- ರೂ ನಗದು ಹಣವನ್ನು ಕಿತ್ತುಕೊಂಡು ಹೋದವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೇಳಿಕೊಳ್ಳುತ್ತೇನೆ” ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

01

ವಿಜಯನಗರ ಠಾಣೆ

ಪಿರ್ಯಾಧಿ ವಿವೇಕ್ ರವರು   ದಿನಾಂಕ 03/11/19 ರಂದು ಕೂರ್ಗಳ್ಳಿಯಲ್ಲಿರುವ ಮಾರಿಗುಡಿ ಬೀದಿಯಲ್ಲಿ ಆರೋಪಿತನಾದ ನಾಗಸುಂದರ ಎಂಬುವನು ಟ್ರಾಕ್ಟರ್ ಅನ್ನು ಅಡ್ಡಲಾಗಿ ನಿಲ್ಲಿಸಿದ್ದನು. ಆಗ ಪಿರ್ಯಾಧಿ ಟ್ರಾಕ್ಟರ್ ಅನ್ನು ತೆಗೆಯುವಂತೆ ಮೇಲೆ ಗಲಾಟೆ ಮಾಡಿ ನನ್ನ ಏರಿಯಾಗೆ ಬಂದು ನನಗೆ ಬುದ್ದಿವಾದ ಹೇಳುತ್ತೀಯ ನೀನು ಎಂದು ಗಲಾಟೆ ಮಾಡಲು ಪ್ರಾರಂಭಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿರ್ಯಾಧಿ ಭಯಗೊಂಡು  ದೊಡ್ಡಪ್ಪನ ಮನೆಗೆ ಓಡಿ ಹೋದನು ಮತ್ತು ಅಕ್ಕಪಕ್ಕದವರು ಬಂದು ಗಲಾಟೆಯನ್ನು ಬಿಡಿಸಿದರು. ಆಗ ಆರೋಪಿತನಾದ ನಾಗಸುಂದರ ರಾಡ್ಅನ್ನು ಮನೆಯಲ್ಲಿಯೇ ಬಿಸಾಕಿ, ಈ ದಿನ ನೀನು ಬದುಕಿಕೊಂಡೆ, ಇನ್ನೊಂದು ದಿನ ನಿನ್ನನ್ನು ಸಾಯಿಸದೆ ಬಿಡುವುದಿಲ್ಲಎಂದು ಕೊಲೆ ಬೆದರಿಕೆ ಹಾಕಿ ಹೊರಟು ಹೋದರು. ನಂತರ ನಾನು ಮತ್ತು ಪಲ್ಲವಿ, ಸ್ವಾತಿ ಮೂರು ಜನರು ಕೆ.ಆರ್. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು, ವಿಶ್ರಾಂತಿ ಪಡೆದು ಈ ದಿನ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ನಾಗಸುಂದರ, ಚಂದನ್ ಗೌಡ, ನವೀನ್ ಕುಮಾರ್, ಭರತ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿ.ವಿ ಪುರಂ ಠಾಣೆ

ದಿನಾಂಕ:04.11.2019ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಪಿರ್ಯಾಧಿ ಶ್ರೀ ರಾಜೇಶ್.ಎಸ್.ಜಿ ನನ್ನ ಹೆಸರಿನಲ್ಲಿಹೊಂಡಾಡ್ರೀಮ್ ನಿಯೋ ಬೈಕ್   KA-09 HM-9803  ನ್ನು ತೆಗೆದುಕೊಂಡು ಓಡಿಸಿಕೊಂಡಿದ್ದು ದಿನಾಂಕ:02.11.2019 ರಂದು ಬೆಳಿಗ್ಗೆ ನಾನು ನನ್ನ ಮೇಲ್ಕಂಡ ಹೊಂಡಾ ಡ್ರೀಮ್ ನಿಯೋ ಬೈಕ್ನಂ:KA-09 HM-9803 ರಲ್ಲಿ ಮನೆಯಿಂದ ಪ್ಯಾಕ್ಟರಿ ಬಳಿ ಬಂದು ಹೊರಗೆ ಹೋಗಿ ಮತ್ತೇಮದ್ಯಾಹ್ನ01.30 ಗಂಟೆಗೆ ಪ್ಯಾಕ್ಟರಿ ಮುಂಭಾಗ ನನ್ನ ಬೈಕ್ ನ್ನು ಲಾಕ್ ಮಾಡಿ ನಿಲ್ಲಿಸಿ ಪ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದು ಸಂಜೆ 04.30 ಗಂಟೆ ಸಮಯಕ್ಕೆ ಹೊರಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಕಳುವಾಗಿರುತ್ತೆ. ಕೆಲಸದ ಒತ್ತಡ ಹಾಗು ಎಲ್ಲಾ ಕಡೆ ಹುಡುಕಾಡಿದಾಖಲಾತಿಗಳನ್ನು ತಂದು ಈ ದಿವಸ ದೂರು ನೀಡುತ್ತಿದ್ದು ಕಳುವಾಗಿರುವ ನನ್ನ ಬೈಕ್ ನ ಬೆಲೆ.40.000/-ರೂ ಆಗಿದ್ದು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ  ಬೈಕ್ ನ್ನು ನನಗೆ ಕೊಡಿಸಬೇಕೆಂದು ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದುನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ 02-11-2019 ರಂದು ಮಧ್ಯಾಹ್ನ 12;00ಗಂಟೆಯ ಸಮಯದಲ್ಲಿ ಪಿರ್ಯಾದಿ ಓಂ ಪ್ರಕಶ್ ರವರು  ಅವರು ತಮ್ಮ ಕಾರು  ನಂ ಕೆ,ಎ-09-ಎಮ್ ಬಿ-2405 ಇದನ್ನು ಏಸ್ವಿಐ ಶಾಲೆ ಹತ್ತಿರ  ವಿಜಯನಗರ 4ನೇ ಹಂತ ಬಳಿ  ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಕೆಎ-09-ಜಡ್-3010 ಕಾರನ್ನು ಅದರ ಚಾಲಕ ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿಯರ್ಾದಿವರ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರ ಕಾರಿನ ಮುಂಭಾಗದ ಡೋರ್,ಹೆಡ್ಲೈಟ್,ಹಾಗೂ ಇತರ ಭಾಗಗಳುಜಖಂ ಆಗಿರಿತ್ತವೆ ಆಧ್ದರಿಂದ ಈ ಅಪಘಾತಕ್ಕೆ ಕಾರಣರಾದ ಕೆಎ-09-ಜಡ್-3010 ಇದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿರ್ಯದಿಯವರು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                        MYSURU CITY TRAFFIC VIOLATION CASES

                                      DATE  :04-11-2019

SLNO

                HEADS

                NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

 

35

 

35

2

TOTAL NUMBER OF CRR'S

166

243

175

166

201

951

3

TOTAL FINE AMOUNT COLLECTED

67,200

1,25,900

62,000

77,400

97,100

4,29,600

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

01      

01

7

NON FATAL

-

-

-

-

-

-

8

INTERCEPTOR CASES

-

-

45

-

103

148

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

9

20

5

5

18

57Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com