ENGLISH   |   KANNADA

Blog



ದಿನಾಂಕ;06.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 38       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಉದಯಗಿರಿ ಠಾಣೆ

ದಿ-06/11/19 ರಂದು ಪಿರ್ಯಾದಿ ಪಳನಿಸ್ವಾಮಿ ರವರು  ಮನೆಗೆ ಅಡ್ವಾನ್ಸ್‌ ಕೊಡಲು 40,000/- ನಗದು ಹಣವನ್ನು ತೆಗೆದುಕೊಂಡು ಹಾಗೆಯೇ ಜನರಿಂದ ಕಂತಿನ ಹಣ ವಸೂಲಿಗೆ ಈ ದಿನ ತಮ್ಮ ದ್ವಿಚಕ್ರ ವಾಹನ ಕೆಎ-45-ಯು-8232 ರಲ್ಲಿ ಶಾಂತಿನಗರಕ್ಕೆ ಬಂದು ಕೆಲವರಿಂದ ಹಣ ವಸೂಲಿ ಮಾಡಿಕೊಂಡು ಬೆಳಿಗ್ಗೆ ಸುಮಾರು 10-20 ರಲ್ಲಿ ಶಾಂತಿನಗರದ 17ನೇ ಕ್ರಾಸ್‌‌ನಲ್ಲಿರುವ ಒಬ್ಬರ ಹತ್ತಿರ ಕಂತಿನ ಹಣ ವಸೂಲಿಗಾಗಿ ಮನೆ ಮುಂದೆ ಬೈಕ್‌ ನಿಲ್ಲಿಸಿಕೊಂಡು ಮಾತನಾಡುತ್ತಿದ್ದಾಗ ಒಂದು ಕೆಂಪು ಕಲರ್‌‌ನ ಡಿಯೋ ಸ್ಕೂಟರ್‌ನಲ್ಲಿ ಇಬ್ಬರು ಆಸಾಮಿಗಳು ಬಂದು ಏಕಾಏಕಿ ಪಿರ್ಯಾದಿ ಬಲಗೈಯನ್ನು ಹಿಡಿದು ಹಿಂಭಾಗಕ್ಕೆ ತಿರುಗಿಸಿ ಹಿಡಿದುಕೊಂಡು "ಯಾರೋ ನೀನು ? ಎಷ್ಟು ಹಣ ಇಟ್ಟಿದ್ದೀಯಾ ? ಹಣ ತೆಗಿ" ಎಂದು ಏರಿದ ದ್ವನಿಯಲ್ಲಿ ಹೇಳಿದ್ದು, ಪಿರ್ಯಾದಿ ನೀವು ಯಾರು ? ಎಂದು ಕೇಳಿದಕ್ಕೆ ಅವರಿಬ್ಬರೂ ಒಂದು ಉದ್ದದ ಚಾಕುವನ್ನು ತೆಗೆದು ಹಣ ಕೊಡು ಇಲ್ಲದಿದ್ದರೆ ಸಾಯಿಸಿಬಿಡುತ್ತೇವೆ, ಎಂದು ಹೆದರಿಸಿ ಎಡಪಕ್ಕೆಗೆ ಬಲವಾಗಿ ಕೈಮುಷ್ಠಿಯಿಂದ ಗುದ್ದಿ, ಪಿರ್ಯಾದಿ ಪ್ಯಾಂಟ್‌ನ ಸೀಕ್ರೇಟ್‌ ಪಾಕೆಟ್‌ನಲ್ಲಿ ಇಟ್ಟುಕೊಂಡಿದ್ದ ಅಡ್ವಾನ್ಸ್‌‌ ಹಣ 40,000/- ಮತ್ತು ಜನರಿಂದ ವಸೂಲಿ ಮಾಡಿ ರೆಗ್ನಿನ್‌ ಪರ್ಸ್‌ನಲ್ಲಿಟ್ಟಿದ್ದ ಕಂತಿನ ಹಣ ಸುಮಾರು 10,000/- ಮತ್ತು ಶರ್ಟ್‌ ಜೇಬಿನಲ್ಲಿದ್ದ ವಿವೋ ಮೊಬೈಲ್‌ಅನ್ನು ಬಲವಂತವಾಗಿ ಕಿತ್ತುಕೊಂಡಿದಲ್ಲದೆ ಚಾಕುವಿನ ಹಿಂಭಾಗದ ಹಿಡಿ ಭಾಗದಿಂದ ಪಿರ್ಯಾದಿ ತಲೆಯ ಹಿಂಭಾಗ ಹೊಡೆದು ರಕ್ತಗಾಯ ಮಾಡಿರುತ್ತಾರೆ, ಸದರಿ ಇಬ್ಬರು ಆಸಾಮಿಗಳು ಪಿರ್ಯಾದಿಯ ಸುಮಾರು 50,000/- ಹಣದೊಂದಿಗೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ದೇವರಾಜ ಸಂಚಾರ ಠಾಣೆ

ದಿನಾಂಕ 06-11-2019 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಪಿರ್ಯಾದಿ ಪೂಜಿತ ರವರು  ಹಿರೋ ಪ್ಲೇಸರ್ ಸ್ಕೂಟರ್ ನಂಬರ್ ಕೆಎ. 09 ಹೆಚ್ ಎನ್. 8544 ರಲ್ಲಿ  ಸಿದಾರ್ಥ ಹೋಟಲ್ ಕಡೆಯಿಂದ ಕೆ.ಅರ್ ವೃತ್ತದ ಕಡೆಗೆ ಬರಲು ಸ್ಕೂಟರ್ ಚಾಲನೆ ಮಾಡಿಕೊಂಡು ಹಾಡರ್ಿಂಗ್ ವೃತ್ತದಲ್ಲಿ ಬರುತ್ತಿರುವಾಗ ಕೆ.ಅರ್. ವೃತ್ತದ ಕಡೆಯಿಂದ ಕಾರ್ ನಂಬರ್ ಟಿ.ಎನ್. 43 ಡಿ. 4750 ರ ಚಾಲಕ ಕಾರ್ ಅನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ  ಚಾಲನೆ ಮಾಡಿಕೊಂಡು ಬಂದು ಪಿರ್ಯಾಧಿವಯರ ಸ್ಕೂಟರ್ ಹಿಂಬಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರು ಸ್ಕೂಟರ್ ಸಮೇತ ಕೆಳಗೆ ಬಿದ್ದು ಸಾರ್ವಜನಿಕರು ಪಿರ್ಯಾದಿಯವರನ್ನು ಮೇಲಕ್ಕೆ ಎತ್ತಿ ಕೂರಿಸಿದ್ದು. ಸ್ಥಳಕ್ಕೆ ಬಂದ ಟ್ರಾಪಿಕ್ ಪೊಲೀಸ್ರು ಪಿರ್ಯಾದಿಯವರನ್ನು ವಿಚಾರಿಸಿದಾಗ ಪಿರ್ಯಾದಿಯವರು  ಜಾಸ್ತಿ ಏಟಾಗಿಲ್ಲವೆಂದು ಮನೆಗೆ ಹೋಗುವುದಾಗಿ ತಿಳಿಸಿ ಹೊರಟು ಹೋಗಿದ್ದು, ಪಿರ್ಯಾದಿಯವರ ಎಡಕೈಗೆ  ಬಲಕಾಲಿಗೆ ಗಾಯವಾಗಿದ್ದು,  ಮತ್ತು ಬೆನ್ನಿಗೆ ನೋವಾಗಿದ್ದು,  ಪಿರ್ಯಾದಿಯವರು  ಕಾಮಾಕ್ಷಿ ಅಸ್ವತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಈ ಅಪಘಾತಕ್ಕೆ ಕಾರ್ ನಂಬರ್ ಟಿ.ಎನ್. 43 ಡಿ. 4750 ರ  ಚಾಲಕನ ವೇಗ ಮತ್ತು ನಿರ್ಲಕ್ಷತೆಯೇ ಕಾರಣವಾಗಿದ್ದು ಅತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ 05-11-2019 ರಂದು ಸಂಜೆ7;30ಗಂಟೆಯ ಸಮಯದಲ್ಲಿ ಪಿರ್ಯಾದಿ ಚಿನ್ನಸ್ವಾಮಿ ರವರು  ಹಾಗೂ ಕೋಮಲ್ ಅವರು ಕೆ,ಎ-09-ಸಿ-5687 ನಂ ಬೋಲಿರೋ ಗೂಡ್ಸ್ ವಾಹನ ಇದರಲ್ಲಿ ವಾಟರ್ ಬಾಟಲ್ಗಳನ್ನು ತುಂಬಲು ಚಾಮುಂಡೇಶ್ವರಿ ಬೇವರೇಜ್ ಹತ್ತಿರ ಜಯದೇವನಗರ ಇಲ್ಲಿ ವಾಹನವನ್ನು ನಿಲ್ಲಿಸಿಕೊಂಡು ಚಾಲಕ ಕೋಮಲ್ನ ಸೂಚನೆಯ ಮೇರೇಗೆ ವಾಹನದ ಹಿಂಭಾಗದ ಚಕ್ರಕ್ಕೆ ಪಿಯರ್ಾದಿ ಅವರು ಕಲ್ಲು ಕೊಡುತ್ತಿದ್ದ ಸಮಯದಲ್ಲಿ ಚಾಲಕ ಅಜಾಗರೂಕತೆಯಿಂದ ವಾಹನವನ್ನು ಹಿಂದಕ್ಕೆ ತೆಗೆದ ಪರಿಣಾಮ ಕೋಮಲ್ ಅವರ ಎಡಗೈ ಹಾಗೂ ಬೆರಳುಗಳು ನೆಜ್ಜಿಹೋಗಿರುತ್ತವೆ ಆಧ್ದರಿಂದ ಈ ಅಪಘಾತಕ್ಕೆ ಕಾರಣರಾದ ಕೆ,ಎ-09-ಸಿ-5687 ನಂ ಬೋಲಿರೋ ಗೂಡ್ಸ್ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿರ್ಯಾದಿ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ 06/11/2019 ರಂದು ಬೆಳಗಿನ ಜಾವ 03-00 ಗಂಟೆ ಸಮಯದಲ್ಲಿ ಪಿರ್ಯಾದಿ ರಾಮೇಗೌಡ ರವರುಕುವೆಂಪುನಗರ ಪೊಲೀಸ್ ಠಾಣಾ ಸಿಬ್ಬಂದಿಯವರಾಗಿದ್ದು, ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದು, ತಮ್ಮ ಜೊತೆಯಲ್ಲಿ ನಿಯೋಜನೆಯಾಗಿದ್ದ ಪ್ರಸನ್ನ ಆರಾಧ್ಯ, ಸಿಪಿಸಿ-1188 ಇಬ್ಬರೂ ವಿವೇಕಾನಂದ ಸರ್ಕಲ್ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಪ್ಯಾಸೇಂಜರ್ ಆಟೋರಿಕ್ಷಾ ನಂಬರ್ KL-14-A-5712 ರಲ್ಲಿ ಇಬ್ಬರೂ ವ್ಯಕ್ತಿಗಳು ಜಿ ಬ್ಲಾಕ್ ಕಡೆಯಿಂದ ಬರುತ್ತಿದ್ದು, ಪಿರ್ಯಾದಿಯವರು ಆಟೋ ನಿಲ್ಲಿಸುವಂತೆ ಕೈ ತೋರಿಸಿದಾಗ, ಆಟೋ ಚಾಲಕ ಆಟೋವನ್ನು ಅತೀ ವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಆಟೋವನ್ನು ನಿಲ್ಲಿಸದೆ ಡಿಪೋ ಕಡೆಗೆ ಹೋಗಿದ್ದು, ಮೂರು ನಿಮಿಷದ ನಂತರ ಡಿಪೋ ಕಡೆ ಶಬ್ದ ಬಂದಿದ್ದು, ಡಿಪೋ ಕಡೆ ಹೋಗಿ ನೋಡಿದಾಗ, ಆಟೋ ಸ್ಟ್ಯಾಂಡ್ ಬಳಿ ಪ್ಯಾಸೇಂಜರ್ ಆಟೋರಿಕ್ಷಾ ನಂಬರ್ KL-14-A-5712 ರ ಆಟೋ ಫುಟ್ ಪಾತ್ ಗೆ ಹೊಡೆದು ಉರುಳಿ ಬಿದ್ದು, ಜಖಂ ಆಗಿದ್ದು, ಆಟೋದಲ್ಲಿದ್ದ ಇಬ್ಬರೂ ಹೊರಟು ಹೋಗಿದ್ದು, ಆಟೋ ಚಾಲಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ನೀಡಿರುವುದು ದೂರಿನ  ಮೇರೆಗೆ ಈ ಪ್ರ.ವ.ವರದಿ.

10

ವಂಚನೆ ಪ್ರಕರಣ 

01

ಅಶೋಕಪುರಂ ಠಾಣೆ

ದಿಃ-06.11.19 ರಂದು ಪಿಯಾದುದಾರರಾದ ಶ್ರೀ ನಾರಾಯಣ ಬಿನ್ ಲೇಟ್ ದಾಸ ಎಂಬುವರು ಸಂಜೆ 08.00 ಗಂಟೆಗೆ ಠಾಣೆಗೆ ಹಾಜರಾಗಿ ನಮ್ಮ ಬಾಬ್ತು ಮನೆ ನಂ-1787, ಸಿಹೆಚ್-88/1, 11ನೇ ಕ್ರಾಸ್ ಮನೆಯಲ್ಲಿ ನೆಮ್ಮದಿಯಾಗಿ ವಾಸವಾಗಿರುತ್ತೇವೆ. ನನಗೆ ಅನಾರೋಗ್ಯದ ಸಂದರ್ಬದಲ್ಲಿ ,ನನ್ನ ತಾಯಿಯಾದ ಹುಚ್ಚಮ್ಮರವರನ್ನು  ದಿನಾಂಕಃ-08.11.2013 ರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿ ನಮ್ಮ ಅಣ್ಣ ಕೃಷ್ಣ ಮತ್ತು ಅವನ ಮಗ ಶಿವ ಕುಮಾರ್ರವರು ಉಪನೊಂದಣಿ ಕಚೇರಿ( ಉತ್ತರ ) ಮೈಸೂರುಗೆ ಕರೆದುಕೊಂಡು ಹೋಗಿ ಅವರಿಗೆ ಜ್ಞಾನ ಇಲ್ಲದ ಸಂದರ್ಭದಲ್ಲಿ ಆತನ ಹಾಗೂ ನಮ್ಮ ಬಾಬ್ತಿಗೆ ಸೇರಬೇಕಾದ ಮತ್ತು ಅಣ್ಣನ ಭಾಗವನ್ನು ವಿಲ್ ಮರಣ ಶಾಸನ ಪತ್ರವನ್ನು ಬರೆಸಿಕೊಂಡು ಅದರಲ್ಲಿ ಸಾಕ್ಷಿ ಭಾಗದಲ್ಲಿ ನನಗೆ ತಿಳಿಯದೆ ಮೋಸ ಮಾಡುವ ಉದ್ದೇಶದಿಂದ ನನ್ನ ಸಹಿಯನ್ನು ನಕಲಿ ಮಾಡಿ ,ನನ್ನ ಅಣ್ಣ ಕೃಷ್ಣ ಮತ್ತು ಅವರ ಮಗ ಶಿವ ಕುಮಾರ ಮಾಡಿ ದಾಕಲಾತಿಗಳನ್ನು ಸೃಷ್ಠಿಸಿಕೊಂಡಿದ್ದಾರೆ. ಅಲ್ಲದೆ ಸದರಿ ಬಾಬ್ತಿನ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದು ನಮಗೆ ಅನ್ಯಾಯ ಮಾಡಿರುತ್ತಾರೆಂದು ಇದನ್ನು ಕೇಳಲು ಹೋದ ನನಗೆ ಅವ್ಯಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                                MYSURU CITY TRAFFIC VIOLATION CASES

                                                DATE  :06-11-2019

SLNO

                  HEADS

                             NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

191

 

-

 

191

2

TOTAL NUMBER OF CRR'S

175

287

175

162

208

1,007

3

TOTAL FINE AMOUNT COLLECTED

85,500

1,47,300

76,000

84,200

1,05,200

4,98,200

4

POLICE NOTICE ISSUED

-

-

-

-

 

-

5

PARKING TAGS

-

/

-

-

 

-

6

FATAL

-

 

-

-

 

-

7

NON FATAL

1

 

-

-

-

1

8

INTERCEPTOR CASES

-

66

52

-

101

219

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

10

21

10

8

16

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com