ENGLISH   |   KANNADA

Blog



ದಿನಾಂಕ;26.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:27.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 67       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ವಿಜಯನಗರ ಠಾಣೆ

ಪಿರ್ಯಾದಿ ಬಸವರಾಜು ರವರು ದಿನ ದಿನಾಂಕ 26/11/19 ರಂದು ಸಂಜೆ 04-30 ಗಂಟೆಯಲ್ಲಿ ಪಿರ್ಯಾದಿಯು ಕೂರ್ಗಳ್ಳಿಯ ಮೈರಾ ಕಾಲೇfಜಗೆ ಹೋಗುವ ರಸ್ತೆಯಲ್ಲಿ ಒಣಗಿದ ಗರಿಗಳನ್ನು ತೆಗೆದುಕೊಳ್ಳುತ್ತಿದ್ದಾದ ಆರೋಪಿತನಾದ ಕೂರ್ಗಳ್ಳಿಯ ಕೌಶಿಕ್ ಎಂಬುವನು ಪಿರ್ಯಾದಿಯ ಬಳಿ ಬಂದು, ಇಲ್ಲಿ ಗರಿ ತೆಗೆದುಕೊಂಡು ಹೋಗಲು ನನಗೆ ದುಡ್ಡು ಕೊಡಬೇಕು ಎಂದು ಹೇಳಿದನು. ಆಗ ಪಿರ್ಯಾದಿಯು ಇದು ಸರ್ಕಾರಿ ಜಾಗ, ನಿನಗೆ ಏಕೆ ದುಡ್ಡುಕೊಡಬೇಕು ಎಂದು ಕೇಳಿದಾಗ ಕೌಶಿಕ್ ರವರು ಪಿರ್ಯಾದಿಯನ್ನು ಉದ್ದೇಶಿಸಿ ಇವತ್ತು ನಿನ್ನ ಕತೆ ಮುಗಿಸುತ್ತೇನೆ ಎಂದು ಹೇಳುತ್ತಾ  ಕೈಯಿಂದ ಬಲ ಕೈ ಯನ್ನು ನುಲಿಚಿ, ಮುಖಕ್ಕೆ ಹೊಡೆದು, ಅಲ್ಲೇ ಬಿದ್ದಿದ್ದ ಖಾಲಿ ಬಿಯರ್ ಬಾಟಲ್ ಅನ್ನು ತೆಗೆದುಕೊಂಡು ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮಾಡಿದ್ದು. ಅಷ್ಟರಲ್ಲಿ ಅಲ್ಲೇ ರಸ್ತೆಯಲ್ಲಿ ಬರುತ್ತಿದ್ದ ರಘು, ರಾಜೇಶ್ ರವರು ಗಲಾಟೆಯನ್ನು ಬಿಡಿಸಿ ಕಳುಹಿಸಿದರು. ನಂತರ ಪಿರ್ಯಾದಿ ಸುಪ್ರಿಯಾ ಆಸ್ಪತ್ರೆಗೆ ಹೋಗಿ ಚಿಕಿಸೆ ಪಡೆದು ಠಾಣೆಗೆ ಬಂದು  ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ, ಕೈ ಯಿಂದ ಹೊಡೆದು, ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ ಕೌಶಿಕ್ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂಬುದಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ವಿದ್ಯಾರಣ್ಯಪುರಂ ಠಾಣೆ

ಫಿರ್ಯಾದುದಾರರಾದ ಪವಿತ್ರ ರವರು ಶ್ರೀರಾಂಪುರದಲ್ಲಿ ವಾಸವಾಗಿದ್ದು ಇವರು ಜಾಕಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ಪಕ್ಕದ ಮನೆಯ ವಾಸಿ ಸುರೇಶ ಎಂಬುವರೊಂದಿಗೆ ಮಾತನಾಡುತ್ತಿರುತ್ತಾರೆ. ದಿನಾಂಕ 25-11-2019 ರಂದು 14-10 ಗಂಟೆಯ ಸಮಯದಲ್ಲಿ ಜಾಕಿ ಫ್ಯಾಕ್ಟರಿಯ ಮುಂಭಾಗ ಮಾತನಾಡಿಸಿದಾಗ ಅದೇ ಸಮಯಕ್ಕೆ ಸುರೇಶನ ಹೆಂಡತಿ ಮುನ್ನಿ @ ಶಾಹಿನ್‌ತಾಜ್‌ ಬಂದಿದ್ದು ಅನುಮಾನಗೊಂಡು, ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಆಟೋದಲ್ಲಿ ಕೂರಿಸಿಕೊಂಡು ಸ್ವಲ್ಪ ದೂರ ಹೋಗುವಷ್ಟರಲ್ಲಿ ತರಕಾರಿ ಕತ್ತರಿಸುವ ಚಾಕುವಿನಿಂದ ಮುನ್ನಿ @ ಶಾಹಿನ್‌ತಾಜ್‌ ಎಂಬುವಳು ಎಡಕತ್ತಿನ ಭಾಗಕ್ಕೆ ಚುಚ್ಚಿದ್ದು, ಬಲತೋಳಿನ ಮುಂಭಾಗ ಹಾಗೂ ಮೊಣಕೈಗೆ ಮತ್ತು ಎಡಕೈನ ಮೊಣಕೈಗೆ ಚಾಕುವಿನಿಂದ ಚುಚ್ಚಿ ರಕ್ತಗಾಯ ಮಾಡಿ ಓಡಿ ಹೋಗಿದ್ದು, ಸುರೇಶನು ಆಟೋದಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ಅಡ್ಮಿಟ್‌ ಮಾಡಿರುತ್ತಾನೆ ಮುಂದಿನ  ಕಾನೂನು ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ವಾತ್ಸಲ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಮೇರೆಗೆ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ 25/11/2019 ರಂದು ಮದ್ಯಾಹ್ನ 13.20 ಗಂಟೆ ಸಮಯದಲ್ಲಿ ಪಿರ್ಯಾದಿ ಚಂದ್ರಶೇಖರ್‌ ರವರು ತನ್ನ ಸ್ನೇಹಿತ  ಸೌರವ್‌  ಎಂಬುವನ ಜೊತೆ ಅವನ  ಬಜಾಜ್‌ ಮೋಟಾರ್ ಸೈಕಲ್ ನಂ KA-18-EG-5854 ರಲ್ಲಿ ಹಿಂಬದಿ ಸವಾರನಾಗಿದ್ದು ಸೌರವ್‌ ಮೋಟಾರ್ ಸೈಕಲ್‌ ನ್ನು ವಾಣಿ ವಿಲಾಸ ರಸ್ತೆಯಲ್ಲಿ ಕೋರ್ಟ್‌ ಕಡೆಯಿಂದ  ಆರ್‌.ಟಿ.ಒ ಸರ್ಕಲ್‌ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ವಿಷ್ಣುವರ್ದನ ರಸ್ತೆ ಜಂಕ್ಷನ್‌‌ ನಲ್ಲಿ  ಕಾರ್ ನಂ KA-09-N-6730 ರ ಚಾಲಕ ಅತೀವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು  ಮೋಟಾರ್ ಸೈಕಲ್‌ ಗೆ  ಡಿಕ್ಕಿಮಾಡಿದ ಪರಿಣಾಮ ಇಬ್ಬರು ಕೆಳಕ್ಕೆ ಬಿದ್ದಾಗ ಪಿರ್ಯಾದುದಾರರಿಗೆ  ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಳ್ಳದಿದ್ದು ಸೌರವ್‌ಗೆ  ಬಲಕಾಲಿಗೆ ಮತ್ತು ಎಡಕೈಗೆ ಏಟಾಗಿದ್ದು ಅಪೊಲೋ ಆಸ್ಪತ್ರೆಗೆ  ದಾಖಲಿಸಿದ್ದು ನಂತರ ಅಲ್ಲಿಂದ ಡಿಸ್‌ ಚಾರ್ಜ್‌ ಮಾಡಿಸಿಕೊಂಡು  ವಿಕ್ರಂ ಜೀವ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ಮಾಡಿಸುತ್ತಿದ್ದು ಈ ದಿನ ಬಂದು ದೂರು ನೀಡುತ್ತಿರುವುದಾಗಿ ಅಪಘಾತ ಮಾಡಿದ ಕಾರು ಚಾಲಕನ ಮೇಲೆ  ಕಾನೂನು ರೀತ್ಯ  ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.

 ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ: 16-11-2019 ರಂದು ಪಿರ್ಯಾದಿ ಮೋಹನ್ ರಾಜ್ ರವರು   ವಾಷ್‌ ಅಂಡ್‌‌ ಶೈನ್‌ ಕಾರ್‌ ಸ್ಪಾ ಗ್ಯಾರೇಜ್‌‌ನ ಮುಂಭಾಗ  ಆದಿಚುಂಚನಗಿರಿ ರಸ್ತೆ, ಕುವೆಂಪುನಗರ ಸ್ಠಳದಲ್ಲಿ  ತಿರುಗಾಡುತ್ತಿದ್ದಾಗ ಅದೆ ಸಮಯಕ್ಕೆ ಆದಿಚುಂಚನಗಿರಿ ರಸ್ತೆಯಲ್ಲಿ ಉದಯರವಿ ಸಿಗ್ನಲ್‌ ಕಡೆಯಿಂದ ಅರವಿಂದ ಆಸ್ಪತ್ರೆ ಕಡೆಗೆ ಸದರಿ ಕಾರು  ಚಾಲಕನು ಕಾರನ್ನು ತುಂಬಾ ವೇಗವಾಗಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಮಾಡಿದಾಗ ಅವರು ಕೆಳಗೆ ಬಿದ್ದಿದ್ದು, ಡಿಕ್ಕಿ ಮಾಡಿದ ಕಾರು ಪುಟ್‌ಪಾತ್‌ ಮೇಲೆ ಹೋಗಿ ನಿಂತಿರುತ್ತೆ.. ನಂತರ ಪಿರ್ಯಾದಿರವರು ಸಾರ್ವಜನಿಕರ ಸಹಾಯದಿಂದ ಕಾರೊಂದರಲ್ಲಿ ಅರವಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ಚಿಕಿತ್ಸೆ ಮಾಡಿದ ಡಾಕ್ಟರ್‌ ಪಿರ್ಯಾದಿ ಎಡಗಾಲಿಗೆ ಪಿಓಪಿ ಹಾಕಿ ಬ್ಯಾಂಡೇಜ್‌ ಮಾಡಿ ಒಂದು ವಾರದ ನಂತರ ಬಂದು ತೋರಿಸಲು ತಿಳಿಸಿ ಕಳುಹಿಸಿದ್ದು,. ಪಿರ್ಯಾದಿಯು ಕಡು ಬಡವರಾಗಿದ್ದು ಹಣಕಾಸಿನ ಸಮಸ್ಯೆ ಇದ್ದುದರಿಂದ ಹಣ ಒದಗಿಸಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿನ ತಡವಾಗಿ ಈ ಸ್ಥಿತಿಗೆ ಕಾರಣನಾದ ಕಾರ್‌ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪಿರ್ಯಾದಿಯು ಠಾಣೆಗೆ ಬಂದು ನೀಡಿದ  ದೂರಿನ ಮೇರೆಗೆ ಈ ಪ್ರ.ವ.ವರದಿ.

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ: 26-11-2019 ರಂದು ಸಂಜೆ 17-30 ಗಂಟೆ ಸಮಯದಲ್ಲಿ ಪಿರ್ಯದಿ ಸೋಮಶೇಖರ್ ರಾಜು ರವರು  ಬೋಗಾದಿ ರಿಂಗ್‌ ರಸ್ತೆ ಜಂಕ್ಷನ್‌ ಸಿಗ್ನಲ್‌ ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರೊಬ್ಬರು ಬೋಗಾದಿ ರಿಂಗ್‌ ರಸ್ತೆಯಲ್ಲಿರುವ ರಾಕ್‌ಗಾರ್ಡನ್‌ ಮುಂಭಾಗ ಮೋಟಾರ್ ಸೈಕಲ್‌ನ ಸವಾರ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುವ ಬಗ್ಗೆ ಮಾಹಿತಿ ನೀಡಿದಾಗ ಪಿರ್ಯಾದಿಯು ಸ್ಥಳಕ್ಕೆ ಹೋದಾಗ ಸ್ಥಳದಲ್ಲಿ ಮೋಟಾರ್‌ ಸೈಕಲ್‌ ರಿಂಗ್ ರಸ್ತೆಯ ಸಿಮೆಂಟ್‌ ಸ್ಲ್ಯಾಬ್‌‌ ಕಟ್ಟೆಯ ಹತ್ತಿರ ಬಿದ್ದಿದ್ದು, ಸಂಜೆ ಸುಮಾರು 17-30 ಗಂಟೆ ಸದರಿ ಸವಾರ ದಿವಾಕರ್‌ ವಾಹನವನ್ನು ಬೋಗಾದಿ ರಿಂಗ್‌ ರಸ್ತೆಯಲ್ಲಿ ಸಿಗ್ನಲ್‌ ಕಡೆಯಿಂದ ಹಿನಕಲ್‌ ಕಡೆಗೆ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಮೋಟಾರ್ ಸೈಕಲ್‌‌ನ ನಿಯಂತ್ರಣ ತಪ್ಪಿ ಸಿಮೆಂಟ್‌ ಸ್ಲ್ಯಾಬ್‌ ಕಟ್ಟೆಗೆ ಡಿಕ್ಕಿಯಾಗಿ ಕೆಳಗೆ ಬಿದ್ದಾಗ ಸವಾರ ಗಾಯಗೊಂಡಿರುತ್ತಾನೆಂದು ತಿಳಿಸಿದರು. ಆಂಬ್ಯೂಲೆನ್ಸ್‌‌ನಲ್ಲಿ ಬೃಂದಾವನ ಆಸ್ವತ್ರೆಗೆ ಕರೆದುಕೊಂಡು ಹೋಗುವಾಗ ಸಹಕರಿಸಿ ಈ ಅಪಘಾತಕ್ಕೆ ಬಜಾಜ್‌ ಕೆಟಿಎಂ ಬೈಕ್‌ ನಂ. KA-04-JK-2382 ಸವಾರ ದಿವಾಕರ್‌ ಬೈಕ್‌‌ನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ಸಿಮೆಂಟ್‌ ಸ್ಲ್ಯಾಬ್‌ ಕಟ್ಟೆಗೆ ಡಿಕ್ಕಿ ಮಾಡಿಕೊಂಡು ಕೆಳಗೆ ಬಿದ್ದು ಗಾಯಗೊಂಡಿರುವುದೇ ಕಾರಣವಾಗಿದ್ದು, ಸದರಿ ವಾಹನದ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶವಾಗಿರುತ್ತದೆ.

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ 25-11-2019 ರಂದು ಮಧ್ಯಾಹ್ನ 12:50 ಗಂಟೆಯ ಸಮಯದಲ್ಲಿ ಪಿರ್ಯಾದಿ ರಘು ರವರ   ಚಿಕ್ಕಪ್ಪ ಪ್ರಕಾಶ್ ಅವರು ತಮ್ಮ ಮೋ,ಸೈ ನಂ ಕೆಎ-55-ಜೆ-6333  ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ ಇನೋವ ಕಾರು ಕೆಎಲ್-10ಎಯೂ-9633 ಮೈಸೂರು-ಹುಣಸೂರು ಮುಖ್ಯರಸ್ತೆ ಸೆಂಟ್ ಜೋಸೆಫ್ ಸಿಗ್ನಲ್ ಹತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಮುಂಭಾಗದಲ್ಲಿ ಹೋಗುತ್ತಿದ್ದ ಕಾರು ನಂ ಕೆಎ-09- ಎನ್-1396 ಅದರ ಚಾಲಕ ಇಂಡಿಕೇಟರ್ ಹಾಕದೆ ಏಕಾಏಕಿ ಬಲಕ್ಕೆ ತಿರುಗಿಸಿದ ಪರಿಣಾಮ ಪ್ರಕಾಶ್ ಅವರ ಮೋ,ಸೈ ಗೆ ಡಿಕ್ಕಿಯಾಗಿ ಕೆಳಗೆ ಬಿದ್ದು ಪ್ರಕಾಶ್ ಅವರ ತಲೆಗೆ ತೀವ್ರ ಪೆಟ್ಟಾಗಿ ಹಿಂಬದಿ ಸವರ ರಘು ಅವರ ಎಡಗೈ ಹಾಗೂ ಬೆನ್ನಿಗೆ ಪೆಟ್ಟಾಗಿದ್ದ ಅವರನ್ನು ಸಾರ್ವಜನಿಕರ ಸಹಾಯದಿಂದ ಬೃಂದಾವನ ಅಸ್ಪತ್ರೆಗೆ ದಾಖಲಿಸಿದ್ದು ಆಧ್ದರಿಂದ ಈ ಅಪಘಾತಕ್ಕೆ ಕಾರಣರಾದ ಕಾರು ನಂ ಕೆಎ-09- ಎನ್-1396  ಚಾಲಕ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                               MYSURU CITY TRAFFIC VIOLATION CASES

                                                    DATE  :26-11-2019

SLNO

                     HEADS

                                  NO. OF CASES

DR

KR

NR

SN

VV

TOTAL

1

TOTAL NUMBER OF FTVRS

100

100

156

 

10

366

2

TOTAL NUMBER OF CRR'S

503

462

712

993

525

3,195

3

TOTAL FINE AMOUNT COLLECTED

88,500

92,000

87,500

1,19,900

70,900

4,58,800

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

3

-

-

1

4

8

INTERCEPTOR CASES

-

52

30

-

93

175

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

--

-

12

TOWING CASES

6

19

3

4

5

37



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com