ENGLISH   |   KANNADA

Blogದಿನಾಂಕ;28.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:29.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 172       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

02

ಕೃಷ್ನರಾಜ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಕಮಲ ರವರು ದಿನಾಂಕ:28.11.2019 ರಂದು ರಾತ್ರಿ ಸುಮಾರು 8.30 ಗಂಟೆಯ ಸಮಯದಲ್ಲಿ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದ ಉತ್ತರಾಧಿಮಠದ ಪಶ್ಚಿಮದ 1ನೇ ಕ್ರಾಸ್ ರಸ್ತೆಯಲ್ಲಿ  ಪಶ್ಚಿಮಾಭಿಮುಖವಾಗಿ ನನ್ನ ಮೊಮ್ಮಗನ ಜೊತೆ ನಡೆದುಕೊಂಡು ಮನೆಯ ಕಡೆಗೆನಡೆದುಕೊಂಡು ಹೋಗುತ್ತಿದ್ದಾಗ ಸುಮಾರು 20-25 ವರ್ಷದ ಒಬ್ಬ ಹುಡುಗ ಬಿಳಿ ಪ್ಯಾಂಟ್ ಕಪ್ಪು ಟೀಶರ್ಟ್ ಧರಿಸಿದ್ದವನು ನನ್ನ ಎದರುಗಡೆಯಿಂದ ಅಂದರೆ ಪಶ್ಚಿಮದ ಕಡೆಯಿಂದ ಪೂರ್ವದ ಕಡೆಗೆ ನಡೆದುಕೊಂಡು  ಬಂದು  ಸ್ವಲ್ಪ ದೂರ ಹೋಗಿ ಪುನಃ ನನ್ನ ಹಿಂಭಾಗದಿಂದ ಬಂದು ನನ್ನ ಕತ್ತಿನಲ್ಲಿದ್ದ  ಸುಮಾರು 70 ಗ್ರಾಂ ತೂಕ ಎರಡು ಎಳೆ ಚಿನ್ನದ ಸರ ಇದರ ಜೊತೆ ಎರಡು ಚಿನ್ನದ ಮಾಂಗಲ್ಯ ಮತ್ತು ಎರಡು ಚಿನ್ನದ ಗುಂಡು ಇದರ ಒಟ್ಟು ಬೆಲೆ ಸುಮಾರು 2ಲಕ್ಷ ರೂ ಬೆಲೆ ಬಾಳುವುದನ್ನು ಕಿತ್ತುಕೊಂಡು  ಪಶ್ಚಿಮಾಭಿಮುಖವಾಗಿ ಓಡಿ ಹೋದ ನಾನು ಅಯಾ ತಪ್ಪಿ ಕೆಳಗಡೆ ಬಿದ್ದು ಹೋಗಿ ಮತ್ತು ಬಾಯಿ ಬಡೆದುಕೊಂಡೆ ಅಷ್ಟಕ್ಕೆ ಅಕ್ಕಪಕ್ಕದವರು ಬಂದರು. ನನ್ನನ್ನು ಎತ್ತಿ ಸುಧಾರಿಸಿದರು. ಸದರಿ ನನ್ನ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಹುಡುಗ ಸ್ವಲ್ಪ ದೂರ ಹೋಗಿ ಮುಂದೆ ಮೋಟಾರ್ ಸೈಕಲ್ ನಿಲ್ಲಿಸಿಕೊಂಡಿದ್ದವನ ಜೊತೆ ಹೋರಟು ಹೋದ ನಾನು ಕೆಳಗೆ ಬಿದಿದ್ದರಿಂದ ನನಗೆ ಎರಡು ಮಂಡಿ, ಮೊಣಸಂದಿ, ಕತ್ತಿನ ಭಾಗ ಹಾಗೂ ಎಡಗೈ ಬೆರಳುಗಳು ಗಾಯವಾಗಿದ್ದರಿಂದ ನಾನು ಕೆ.ಅರ್. ಅಸ್ವತ್ರೆಗೆ ಹೋಗಿ ಇಲಾಜು ಪಡೆದು ಈಗ ಬಂದು ದೂರು ನೀಡುತ್ತಿದ್ದೇನೆ. ನನ್ನ ಚಿನ್ನದ ಸರ ಕಿತ್ತುಕೊಂಡು ಹೋದ ಅಸಾಮಿಯನ್ನು ಮತ್ತು ಚಿನ್ನದ ಮಾಂಗಲ್ಯ ಸರವನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ನಜರ್ ಬಾದ್ ಠಾಣೆ

ಫಿರ್ಯಾದಿ ಕುಮಾರ್ ರವರು ದಿನಾಂಕ-28/11/2019 ರಂದು ಮಧ್ಯಾಹ್ನ ಸುಮಾರು 02-20 ಗಂಟೆಯ ಸಮಯದಲ್ಲಿ ಹಾರ್ಡಿಂಗ್ ಸರ್ಕಲ್ ಬಳಿ ಇರುವ ನಂಜನಗೂಡು ಕಡೆಗೆ ಹೋಗುವ ಬಸ್ ನಿಲ್ಲಿಸುವ ಸ್ಥಳದಲ್ಲಿ ಬಸ್ಗಾಗಿ ಕಾಯುತ್ತಾ ನಿಂತಿರುವಾಗ ಇಬ್ಬರು ವ್ಯಕ್ತಿಗಳು ನನ್ನ ಹತ್ತಿರ ಬಂದು ಒಬ್ಬ ವ್ಯಕ್ತಿ ನನ್ನನ್ನು ಹಿಂದಿನಿಂದ ಬಿಗಿಯಾಗಿ ತಬ್ಬಿ ಹಿಡಿದುಕೊಂಡಾಗ ಮತ್ತೊಬ್ಬ ವ್ಯಕ್ತಿ ನನ್ನ ಪ್ಯಾಂಜ್ ಜೇಬ್ಗಳನ್ನು ಹುಡುಕಾಡಿ ನನ್ನ ಪ್ಯಾಂಟ್ ಜೇಬಿನಲ್ಲಿದ್ದ ನನ್ನ ಓಪೋ ಎ3ಎಸ್ ಮೊಬೈಲ್ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ನಾನು ನನ್ನ ಕೈಯಿಂದ ನನ್ನ ಪ್ಯಾಂಟಿನಲ್ಲಿದ್ದ ಮೊಬೈಲ್ ಅನ್ನು ಪ್ಯಾಂಟ್ ಮೇಲಿನಿಂದಲೇ ಬಿಗಿಯಾಗಿ ಹಿಡಿದುಕೊಂಡು ಜೋರಾಗಿ ಕೂಗಿಕೊಂಡೆ. ಆಗ ಅಲ್ಲೆ ನಿಂತಿದ್ದ ಜನರು ನನ್ನ ಬಳಿಗೆ ಬಂದು ನನ್ನ ಬಳಿ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಹಿಡಿದುಕೊಂಡು, ನಂತರ ಪೊಲೀಸರಿಗೆ ಪೋನ್ ಮಾಡಿದಾಗ ಅಲ್ಲಿಗೆ ಪೊಲೀಸ್ ಜೀಪ್ ಬಂತು. ನಂತರ ಪೊಲೀಸರು ಆ ಇಬ್ಬರು ವ್ಯಕ್ತಿಗಳನ್ನು ಹಾಗೂ ನನ್ನನ್ನು ಜೀಪ್ ನಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದುಕೊಂಡು ಬಂದು, ನನಗೆ ದೂರು ನೀಡುವಂತೆ ತಿಳಿಸಿದಾಗ ನಾನು ಠಾಣೆಯಲ್ಲಿ ದೂರು ನೀಡುತ್ತಿದ್ದು, ನನ್ನ ಬಳಿ ಮೊಬೈಲ್ ಕಿತ್ತುಕೊಂಡು ಹೋಗಲು ಪ್ರಯತ್ನ ಮಾಡಿರುವ ಇಬ್ಬರು ಆಸಾಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ನಜರ್ ಬಾದ್ ಠಾಣೆ

ಫಿರ್ಯಾದಿ ಜೆನ್ನಿ ಕ್ಲಾಸ್ ರವರು ದಿನಾಂಕ:30/10/2019 ರಂದು ನಾನು ಬೆಳಗ್ಗೆ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಹಣ ತೆಗೆದುಕೊಳ್ಳಲು ಬಂದು ಸುಮಾರು 10-55 ಗಂಟೆಯಲ್ಲಿ ಬಿ.ಎನ್ ರಸ್ತೆಯ ಫೈವ್ ಲೈಟ್ ಸರ್ಕಲ್ ಬಳಿ ಇರುವ ಸಿಂಡಿಕೇಟ್ ಬ್ಯಾಂಕ್ ಮುಂಭಾಗ ಗೇಟ್ ಮುಂಭಾಗ ರಸ್ತೆಯ ಬದಿಯಲ್ಲಿ ನನ್ನ ಹೊಂಡಾ ಆಕ್ಟೀವಾ ಏಂ-55-ಇ-1474 ಸ್ಕೂಟರ್ ಅನ್ನು  ನಿಲ್ಲಿಸಿ ನಂತರ ಸುಮಾರು ಬೆಳಗ್ಗೆ 11-40 ಗಂಟೆಗೆ ಹೊರಗೆ ಬಂದು ನೋಡಿದಾಗ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ನನ್ನ ದ್ವಿಚಕ್ರ ವಾಹನ ಇರಲಿಲ್ಲ. ನಂತರ ನಾನು ನನ್ನ ದ್ವಿಚಕ್ರ ವಾಹನವನ್ನು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲ. ನನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳತನವಾಗಿರುವ ನನ್ನ ಹೊಂಡಾ ಆಕ್ಟೀವಾ ಏಂ-55-ಇ-1474 ಸ್ಕೂಟರ್ ಅನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನ

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ 20-11-2019 ರಂದು ಸಂಜೆ 5:30 ಗಂಟೆಯ ಸಮಯದಲ್ಲಿ ಪಿರ್ಯಾದಿ ರಮೇಶ್ ಕುಮಾರ್ ರವರ  ತಮ್ಮ ಮೋ,ಸೈ ನಂ ಕೆಎ-09-ಹೆಚ್ ವಿ--4852 ಇದರ ಹಿಂಭಾಗದಲ್ಲಿ ತಮ್ಮ ಪತ್ನಿ ಸುಮಿತ್ರಾ ಅವರನ್ನು ಕೂರಿಸಿಕೊಂಡು ಆಕಾಶವಾಣಿ ಗೇಟ್ ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ ಮೋ,ಸೈ ಕೆಎ-09-ಈಯು-5472 ಇದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತಿಯಿಂದ ಚಾಲನೆ ಮಾಡಿಕೊಂಡು ಬಣದು ಪಿಯರ್ಾಧಿಯವರ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾಧಿಯವರ ತಲೆ,ಹಾಗೂ ಎಡಭುಜಕ್ಕೆ ಪೆಟ್ಟಾಗಿರುತ್ತದೆ ಹಾಗೂ ಹಿಂಭದಿ ಸವಾರರಾದ ಸುಮಿತ್ರಾರವರ ಎಡಗಾಲಿನ ಮಂಡಿಯ ಚಿಪ್ಪಿಗೆ ಪೆಟ್ಟಾಗಿರುತ್ತದೆ   ಸಾರ್ವಜನಿಕರ ಸಹಾಯದಿಂದ ಕೆ,ಆರ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ  ಆಧ್ದರಿಂದ ಈ ಅಪಘಾತಕ್ಕೆ ಕಾರಣರಾದ ಕೆಎ-09-ಈಯು-5472ಚಾಲಕ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ 26/11/2019 ರಂದು ಬೆಳಿಗ್ಗೆ ಸುಮರು 05.30 ಗಂಟೆಯಲ್ಲಿ  ಪಿರ್ಯಾದಿ ಕಾರ್ತಿಕ್‌.ಜಿ ರವರ ಅಕ್ಕ ಗೀತಾ.ಜಿ ಮತ್ತು ಅವರ ಸ್ನೇಹಿತರಾದ ನಾಗರತ್ನ ಇಬ್ಬರು ಗೀತಾ.ಜಿ ರವರ ಸ್ನೇಹಿತರಾದ  ಸಿದ್ದರಾಜು ಎಂಬುವರ ಬೆಲೆನೋ ಕಾರ್ ನಂ KA-09-MD-0840 ರಲ್ಲಿ  ದಿನಾಂಕ. 25/11/2019 ರಂದು ರಾತ್ರಿ ಮೈಸೂರಿನ ಉತ್ತನಹಳ್ಳಿ ರಸ್ತೆ ಜಂಕ್ಷನ್‌ ನಲ್ಲಿ ಹೋಟೆಲ್‌ ಹಿಲ್‌ ವಿವ್‌ ಎದುರು ಅತೀವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು ನಿರ್ಲಕ್ಷತನದಿಂದ ಬಲಕ್ಕೆ ಚಾಲನೆ ಮಾಡಿ ಸ್ವತಃ ಡಿವೈಡೆರ್‌ ಡಿಕ್ಕಿಮಾಡಿದ್ದರಿಂದ ಸಿದ್ದರಾಜು ಮತ್ತು ನಾಗರತ್ನ ರವರಿಗೆ ಕಾಲುಗಳಿಗೆ ಏಟಾಗಿದ್ದು ಗೀತಾ.ಜಿ ರವರಿಗೆ ತಲೆಗೆ ಏಟಾಗಿ ಪ್ರಜ್ಞೆ ತಪ್ಪಿದ್ದು  ನಾಗರಾತ್ನ ರವರಿಂದ ಕೆ.ಆರ್. ಆಸ್ಪತ್ರೆಗೆ ಬಂದಿರುವ ವಿಚಾರ ತಿಳಿದು ಕೆ.ಆರ್. ಆಸ್ಪತ್ರೆಗೆ ಹೋಗಿದ್ದು  ಕೂಡಲೇ ಗೀತಾ ರವರನ್ನು ಬೃಂದಾವನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮಾಡಿಸುತ್ತಿದ್ದು  ಚಾಲಕ ಸಿದ್ದರಾಜು ಭಾನವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ  ತನ್ನ ಅಕ್ಕನಿಗೆ ಚಿಕಿತ್ಸೆ ಮಾಡಿಸುತ್ತಿದ್ದರಿಂದ ಈ ದಿನ ಬಂದು ದೂರು ನೀಡುತ್ತಿದ್ದು  ಅಪಘಾತಕ್ಕೆ ಕಾರಣನಾದ ಕಾರು ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                         MYSURU CITY TRAFFIC VIOLATION CASES

                                        DATE  :28-11-2019

SLNO

               HEADS

                             NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

190

170

-

84

444

2

TOTAL NUMBER OF CRR'S

454

255

546

805

504

2,564

3

TOTAL FINE AMOUNT COLLECTED

75,500

65,100

72,600

98,500

74,900

3,86,600

4

POLICE NOTICE ISSUED

-

-

-

-

 

-

5

PARKING TAGS

-

/

-

-

 

-

6

FATAL

-

 

-

-

-

-

7

NON FATAL

-

1

 

-

1

2

8

INTERCEPTOR CASES

-

-

50

-

71

121

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

11

18

3

3

12

47Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®