ENGLISH   |   KANNADA

Blogದಿನಾಂಕ;29.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:30.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 167       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ದೇವರಾಜ ಠಾಣೆ

ಪಿರ್ಯಾದಿ ಲಕ್ಷ್ಮಿ ರವರು ದಿನಾಂಕ 29.11.2019 ರಂದು ಹುಣಸೂರಿನಿಂದ ಮೈಸೂರಿಗೆ ಬಸ್ಸಿನ ಮೂಲಕ ಬಂದು, ಮೆಟ್ರೋಪಲ್ ವೃತ್ತದ ಬಳಿ ಬಸ್ಸನ್ನು ಇಳಿದು ರಿಲಯನ್ಸ್ ಟ್ರೆಂಡ್ ಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ 6.50 ಗಂಟೆಯಲ್ಲಿ ಪಿರ್ಯಾದುದಾರರ ಎದುರಿನಿಂದ ಬರುತ್ತಿದ್ದ ಅಪರಿಚಿತ ಗಂಡಸು ಪಿರ್ಯಾದಿ ಧರಿಸಿದ್ದ 68 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಓಡಿಹೋಗಿದ್ದು, 68 ಗ್ರಾಂ ತೂಕದ ಮಾಂಗಲ್ಯ ಸರ ಸುಮಾರು  ಎರಡು ಲಕ್ಷ ರೂಗಳು ಈತನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಸರಸ್ವತಿಪುರಂ ಠಾಣೆ

ಫಿರ್ಯಾದಿ ಉಮಾ ರವರು ದಿನಾಂಕ:24-11-2019 ರ ಮಧ್ಯಾನ್ಹ 2 ಗಂಟೆಯಿಂದ  ದಿನಾಂಕ:27-11-2019 ರ ರಾತ್ರಿ 10 ಗಂಟೆಯ ನಡುವೆ ಬೋಗಾದಿ 2ನೇ ಹಂತ ದಲ್ಲಿರುವ  ನಿರ್ಮಿತಿ ಕೇದ್ರದ ಬಳಿ ಇರುವ ಮನೆ ನಂ 776/ಎ ರಲ್ಲಿನ ಗಾರ್ಡೇಜ್ ಬೀರುವಿನಲ್ಲಿ  ಇಟ್ಟಿದ್ದ ಸುಮಾರು 60 ಗ್ರಾಂ ನ , 2,30,000/- ರೂ  ಬೆಲೆ ಬಾಳುವ ಚಿನ್ನದ ಒಡವೆಗಳು ಕಳ್ಳತನ ವಾಗಿದ್ದು, ಈ ಬಗ್ಗೆ ದಿನಾಂಕ:24/11/2019 ರಂದು ಮನೆಯ ಸಾಮಾನುಗಳನ್ನು ಶಿಫ್ಟ್ ಮಾಡಲು ಬಂದಿದ್ದ ಶ್ರೀ ಆಂಜನೇಯ ಪ್ಯಾಕರ್ಸ್ ಆಂಡ್ ಮೂವರ್ಸ್ ನ ನಾಗರಾಜುರವರ ಮೇಲೆ ಅನುಮಾನವಿರುವುದಾಗಿ ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರಗೆ ಪ್ರ.ವ.ವರದಿ

6

ಸಾಮಾನ್ಯಕಳವು

02

ಅಶೋಕಪುರಂ ಠಾಣೆ

ಫಿರ್ಯಾದಿ  ಸುದರ್ಶನ್ ಎನ್ ರವರು ದಿನಾಂಕ: 29-11-19   ರಂದು ಬೆಳಗಿನ ಜಾವ 4.10 ಗಂಟೆ ಸಮಯದಲ್ಲಿ ತಾನು ಮನೆಯಲ್ಲಿರುವಾಗ ಶ್ರೀಗಂಧದೆಣ್ಣೆ ಕಾರ್ಖಾನೆಯ ಶಿಪ್ಟ್ ಆಫೀಸರ್ ಅಜಯ್ ಕುಮಾರ್ ರವರು ತನಗೆ ಕರೆ ಮಾಡಿ ಶ್ರೀಗಂಧದೆಣ್ಣೆ ಕಾರ್ಖಾನೆಯ ಆವರಣದಲ್ಲಿದ್ದ ನಾಲ್ಕು ಗಂಧದ ಮರಗಳನ್ನು ಯಾರೋ ಕತ್ತರಿಸಿ ಕಳ್ಳತನ ಮಾಡಿಕೊಂಡು ತೆಗೆದುಕೊಂಡು ಹೋಗಿರುತ್ತಾರೆಂದು ತಿಳಿಸಿದ್ದು ನಂತರ ತಾನು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಾಗಿ ಮೇಲ್ಕಂಡ ಸ್ಥಳದಲ್ಲಿದ್ದ ನಾಲ್ಕು ಶ್ರೀಗಂಧದ ಮರಗಳನ್ನು ಯಾರೋ ಕಳ್ಳರು ಕತ್ತರಿಸಿ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ನಂತರ ವಿಚಾರವನ್ನು ಕಂಪನಿಯ ಎಜಿಎಂ ರವರಿಗೆ ತಿಳಿಸಿ ಅವರುಗಳು ಸಹಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ದೂರು ನೀಡುವಂತೆ ಸೂಚಿಸಲಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರ್ಖಾನೆಯ ಆವರಣದಲ್ಲಿದ್ದ ನಾಲ್ಕು ಶ್ರೀಗಂಧದ ಮರಗಳನ್ನು ಕತ್ತರಿಸಿ ಮೂರು ಮರಗಳನ್ನು ಕತ್ತರಿಸಲು ಪ್ರಯತ್ನಿಸಿರುವ ಕಳ್ಳರನ್ನು ಪತ್ತೆ ಮಾಡಿ ಅವರುಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ. 

ದೇವರಾಜ ಠಾಣೆ

ಫಿರ್ಯಾದಿ ಲಕ್ಷ್ಮೀ ರವರು ದಿನಾಂಕ 28/11/2019 ರಂದು ತಮ್ಮ ಊರಿನಿಂದ ಮದುವೆ ಇರುವ ಕಮರಹಳ್ಳಿ ಹೋಗುವ ಸಲುವಾಗಿ ಬಂದಿದ್ದು ಸಿಟಿ ಬಸ್ ನಿಲ್ದಾಣದಲ್ಲಿ ಸಂಜೆ 06-45 ಗಂಟೆ ಸಮಯದಲ್ಲಿ ಬಸ್ ಹತ್ತುವಾಗ ರಶ್ ಇದ್ದರಿಂದ ಸಬಾಳಿಸಿಕೊಂಡು ಬಸ್ ಹತ್ತಿದ್ದ ಹತ್ತಿದ ನಂತರ ವ್ಯಾನಿಟಿ ಬ್ಯಾಗ್ ನೋಡಿಕೊಂಡಾಗ ಜೀಪ್ ತೆಗದಿದ್ದು ಅದರಲ್ಲಿದ್ದ ಸುಮಾರು 26 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಮತ್ತು ಓಲೆಗಳು ಕಳವು ಆಗಿರುತ್ತದೆಂದು ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಭಾಗೀಬಾಯಿ ಡಿ.ಆರ್ ರವರು ಪಿರ್ಯಾದಿಯು ದಿನಾಂಕ:04.05.2014 ರಂದು ಆರೋಪಿ ನವೀನ್ ಕಿಶೋರ್ರವರನ್ನು ಅರಸೀಕೆರೆಯ ರೈಲ್ವೆ ಸ್ಟೆಷನ್ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು, ಪಿರ್ಯಾದಿ ಮತ್ತು ಆರೋಪಿ ಇಬ್ಬರೂ ಸಕರ್ಾರಿ ನೌಕರಿಯಲ್ಲಿದ್ದು ಮದುವೆಯಾದ ನಂತರ ಕಾರಟಗಿಯಲ್ಲಿ ವಾಸವಾಗಿರುತ್ತಾರೆ. ಪಿರ್ಯಾದಿಯು ದೀಪಾವಳಿ ಹಬ್ಬಕ್ಕೆಂದು ಅತ್ತೆ ಮನೆಗೆ ಬಂದಿದ್ದು, ಹಬ್ಬದ ನಂತರ ಪಿರ್ಯಾದಿ 2 ಮಕ್ಕಳೊಂದಿಗೆ  ಅತ್ತೆಯ ಮನೆಯಲ್ಲಿ ಇದ್ದು, ಪಿರ್ಯಾದಿಯ ಪ್ರಸೂತಿ ರಜೆ ಮುಗಿದಿದ್ದು, ಆರೋಪಿ ಪುನಃ ಕರ್ತವ್ಯಕ್ಕೆ ಹೋಗುವುದಾದರೆ ತನ್ನ ಜೊತೆ ಕಾರಟಗಿಗೆ ಬಂದು ಇರು ಇಲ್ಲವಾದರೆ ಅತ್ತೆ ಮನೆಯಲ್ಲಿ ಇರಲು ನಿನಗೆ ಅವಕಾಶವಿಲ್ಲ ನಿಮ್ಮ ತವರು ಮನೆಗೆ ಹೋಗು ಎಂದು ಕಿರುಕುಳ ಕೊಟ್ಟಿದ್ದಲ್ಲದೆ ದಿನಾಂಕ:10.11.2019 ರಂದು ಪಿರ್ಯಾದಿಯೊಂದಿಗೆ ಜಗಳವಾಡಿ ಹೊಡೆದು, ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರನ್ನು ಸ್ವಿಕರಿಸಿ ಠಾಣಾ ಮೊ.ಸಂ.147/19 ಕಲಂ:498(ಎ), 506 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

9

ರಸ್ತೆ ಅಪಘಾತ

01

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 29.11.2019 ರಂದು ಸಂಜೆ ಸುಮಾರು 07.45 ಗಂಟೆ ಸಮಯದಲ್ಲಿ ಪಿರ್ಯಾದಿ ಸಂತೋಷ ರವರ  ತಂದೆ ಮಹದೇವಪ್ಪ ರವರು ತಮ್ಮ ಕೆಎ.09.ಇಎ.2072 ನಂಬರಿನ ಟಿವಿಎಸ್ ಮೊಪೆಟ್ ಅನ್ನು ಲಲಿತಮಹಲ್ ರಸ್ತೆ ಮತ್ತು ಹೆಲಿಪ್ಯಾಡ ರಸ್ತೆ ಕೂಡುವ ಜಂಕ್ಷನ್ ಅಲ್ಲಿ ಕುರುಬರಹಳ್ಳಿ ವೃತ್ತದ ಕಡೆಯಿಂದ ಹೆಲಿಪ್ಯಾಡ ರಸ್ತೆ ಕಡೆಗೆ ಹೋಗಲು ಮೋಪೆಡ್ ಅನ್ನು  ಚಾಲನೆ ಮಾಡಿಕೊಂಡು ಬಹುತೇಕ ತೀರುವು ಪಡೆದು  ಹೋಗುತ್ತಿರುವಾಗ ಲಲಿತಮಹಲ್ ರಸ್ತೆ ಆರ್ಚ ಗೇಟ ಕಡೆಯಿಂದ ಕೆಎ.55.ಡಬ್ಲೂ.2178 ನಂಬರಿನ ಪಲ್ಸರ್ ಮೋಟಾರ್ ಸೈಕಲ್ ಸವಾರ ಬಹಳ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಪೆಡ ಗೆ ಡಿಕ್ಕಿ ಮಾಡಿದ ಪರಿಣಾಮ ಮಹದೇವಪ್ಪ ರವರು ಮೋಪೆಡ ಸಮೇತ ರಸ್ತೆ ಮೇಲೆ ಬಿದ್ದು ಅವರ ಬಲಕಾಲು ಎಡಕಾಲು ಹಿಮ್ಮಡಿ ಮತ್ತು ಬಲಕೈಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಕಾವೇರಿ ಆಸ್ಪತ್ರೆಗೆ  ದಾಖಲಿಸಿದ್ದು ನಂತರ ಪಿರ್ಯಾದಿ ಠಾಣೆಗೆ ಹಾಜರಾಗಿ ಮೋಟಾರ್ ಸೈಕಲ್ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರ.ವ.ವರದಿ

10

ವಂಚನೆ ಪ್ರಕರಣ 

01

ದೇವರಾಜ ಠಾಣೆ

ಪಿರ್ಯಾದಿಯಾದ ಅಶೋಕ್.ಜಿ ರವರು ಸರ್ಕಾರಿ ಪ್ರಾಜೆಕ್ಟ್ ಗಳನ್ನು ಕಾಂಟ್ರಾಕ್ಟ್ ಮೂಲಕ ತೆಗೆದುಕೊಂಡು ನಿರ್ವಹಿಸುವ ಕೆಲಸ ಮಾಡಿಕೊಂಡಿದ್ದು, ಈಗ್ಗೆ ಪ್ರಾಜೆಕ್ಟ್ ಮಾಡಲು ಹರಾಜು ಪ್ರಕ್ರಯೆಯಲ್ಲಿ ಆರೋಪಿ ಸುನೀಲ್ ಗುಪ್ತಾ ಹಾಗೂ ಅವರ ಕಂಪನಿಯವರುಗಳನ್ನು ಪಿರ್ಯಾದಿಯವರು ಸಂಪರ್ಕಿಸಿ ತಮ್ಮ ಪ್ರಾಜೆಕ್ಟ್ ಗಾಗಿ 450 ಎನ್ ಬಿ (457.2:0.00x6.4ಎಂ ತಿಕ್ ನೆಸ್)2150 ಎಂ.ಟಿ.ಎಸ್. ಪೈಪ್ ಗಳನ್ನು ಒದಗಿಸುವಂತೆ ಮಾತುಕತೆ ಮಾಡಿದ್ದು, ಅದರಂತೆ ದಿನಾಂಕ:24.10.2017 ರಂದು ಮುಂಗಡ ಹಣವಾಗಿ 23,40,000/-ರೂ.ಗಳನ್ನು ಆರ್ ಟಿ ಜಿ ಎಸ್  ಆರೋಪಿ ಅಕೌಂಟ್ ನಂ.33681679149 ಗೆ ಹಣವನ್ನು ವರ್ಗಾವಣೆ ಮಾಡಿದ್ದು, ನಂತರದ ದಿನಗಳಲ್ಲಿ ಆರೋಪಿಗಳು ಹಣವನ್ನು ವಾಪಸ್ಸು ನೀಡದೆ ಪೈಪ್ಸ್ ಗಳನ್ನು ನೀಡದೆ ಇದ್ದು, ಈ ವಿಚಾರವಾಗಿ ಹಲವಾರು ಬಾರಿ ನೋಟಿಸ್ ನೀಡಿದ್ದರೂ ಸಹ ಅದಕ್ಕೆ ಪ್ರತಿಕ್ರಿಯೇ ನೀಡದೆ ಮೋಸ ಮಾಡುವ ಉದ್ದೆಶದಿಂದಲೇ ತಮ್ಮಿಂದ ಮುಂಗಡ ಹಣವನ್ನು ಪಡೆದು ಪೈಪ್‌ಗಳನ್ನು ಪೂರೈಸದೆ, ಹಣವನ್ನು ವಾಪಸ್ಸು ನೀಡದೆ ವಂಚನೆ ಮಾಡಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                        MYSURU CITY TRAFFIC VIOLATION CASES

                                        DATE  :29-11-2019

SLNO

              HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

190

140

 

54

384

2

TOTAL NUMBER OF CRR'S

448

369

396

615

386

2,214

3

TOTAL FINE AMOUNT COLLECTED

85,900

81,400

55,600

93,500

70,200

3,86,600

4

POLICE NOTICE ISSUED

-

-

-

-

 

-

5

PARKING TAGS

-

/

-

-

 

-

6

FATAL

-

 

-

-

-

-

7

NON FATAL

-

 

 

-

-

-

8

INTERCEPTOR CASES

-

-

45

-

70

115

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

11

14

5

8

8

46Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®