ENGLISH   |   KANNADA

Blogದಿನಾಂಕ;30.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:01.12.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 166       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ನರಸಿಂಹರಾಜ ಠಾಣೆ

ಫಿರ್ಯಾದಿ ಕಿಜರ್ ಅಹಮದ್ ರವರಿಗೆ ಆರೋಪಿ ಅವೇಜ್ ಎಂಬಾತನು ಆಗಾಗ ವಿನಾ ಕಾರಣ ತೊಂದರೆ ಕೊಡುತ್ತಿದ್ದು, ದಿನಾಂಕ 30/11/19 ರಂದು  ಸುಮಾರು ಮಧ್ಯಾಹ್ನ 1400  ಗಂಟೆ ಸಮಯದಲ್ಲಿ ಪಿರ್ಯಾದಿ ರವರು  ಸಿದ್ದಿಖಿನಗರ ಮಸೀದಿಯ ಮುಂಭಾಗ ಬರುತ್ತಿರುವಾಗ್ಗೆ  ಸದರಿ ಆಸಾಮಿಯು ಫಿರ್ಯಾದುದಾರರನ್ನು ನಿಲ್ಲಿಸಿ ಏಕಾಏಕಿ ಫಿರ್ಯಾದುದಾರರ ಮುಖದ ಬಲಭಾಗದ ಕಣ್ಣಿನ ಬಳಿ ಹೊಡೆದಿದ್ದು, ಆಗ ಅವೇಜ್ ಕೈಯಲ್ಲಿದ್ದ ವಾಚ್ ನಿಂದಾಗಿ ಬಲ ಕಣ್ಣಿನ ಬಳಿ ರಕ್ತಗಾಯವಾಗಿದ್ದು, ತಕ್ಷಣ ಫಿರ್ಯಾದುದಾರರು ಕಿರುಚಿಕೊಂಡಾಗ ಅಲ್ಲಿಂದ ಅವೇಜ್ ಓಡಿ ಹೋಗಿದ್ದು, ನಂತರ ಫಿರ್ಯಾದುದಾರರು ಮನೆಗೆ ಹೋಗಿ  ಅವರ ಅಣ್ಣ ಮತ್ತು ತಾಯಿಯನ್ನು ಕರೆದುಕೊಂಡು ಕೆ.ಆರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ನಂತರ ಮನೆಗೆ ಬಂದು ವಿಶ್ರಾಂತಿ ಪಡೆದು,  ಠಾಣೆಗೆ  ಬಂದು ದೂರು ನೀಡುತ್ತಿದ್ದಾಗಿ ತಿಳಿಸಿದ್ದು, ಫಿರ್ಯಾದುದಾರರಿಗೆ ಹಲ್ಲೆ ಮಾಡಿರುವ ಅವೇಜ್ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಕುವೆಂಪುನಗರ ಠಾಣೆ

ಪಿರ್ಯಾದಿ ವಿನೋದ್ ಕುಮಾರ್ ರವರ ಸಂಬಂಧಿ  ಕಿಶೋರ್ ಕುಮಾರ್.ಬಿ ಮೊಬೈಲ್ ಗೆ ಆರೋಪಿತ ವಿಜಯ್ @ ವಿಜಿ  ಕೆಟ್ಟ ಶಬ್ಥಗಳಿಂದ ವಾಟ್ಸ್ಆಪ್ ಸಂದೇಶಗಳನ್ನು ಕಳುಹಿಸುತ್ತಿದ್ದು, ದಿನಾಂಕ 29/11/19 ರಂದು ರಾತ್ರಿ 2200 ಗಂಟೆಗೆ  ಈ ವಿಚಾರದಲ್ಲಿ ಪಿರ್ಯಾದಿ ಹಾಗೂ ಕಿಶೋರ್ಕುಮಾರ್ & ಈತನ ಸ್ನೇಹಿತರಾದ ಚಂದನ್, ರಘುರವರು ಪಿರ್ಯಾದಿ ಕಾರಿನಲ್ಲಿ ವಿಜಯ್ ನನ್ನು ಭೇಟಿ ಮಾಡಿ ಕೇಳಲು ಹೋದಾಗ ಆರೋಪಿತನು ಕುವೆಂಪುನಗರ ಬುಲೆಟ್ ಷೋ ರೂಂ ಹತ್ತಿರ ಕೊಲೆ ಮಾಡುವ ಉದ್ದೇಶದಿಂದ  ಚಂದನ್ ನ ಎಡಭಾಗದ ಹೊಟ್ಟೆಗೆ ತಾನು ತಂದಿದ್ದ ಟ್ರ್ಯಾಗನ್ನಿಂದ ಬಲವಾಗಿ ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿ ಪಿರ್ಯಾದಿ ಮತ್ತು ಆತನ ಸಂಗಡಿಗರಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ಥಗಳಿಂದ ಬೈದು ಡಿಯೋ ಸ್ಕೂಟರ್ ನಲ್ಲಿ ಪರಾರಿ ಯಾಗಿದ್ದು. ಗಾಯಾಳು ಚಂದನ್ ಹಾಲಿ ಅಪೋಲೊ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾರಣಾಂತಿಕ ಹಲ್ಲೆ ಮಾಡಿದ ವಿರುದ್ದ ಕಾನೂನು ಕ್ರಮ ಜರುಗಿಸಲು ಠಾಣೆಗೆ  ಈ ದಿನ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

02

ಮಹಿಳಾ ಠಾಣೆ

ಪಿರ್ಯಾದಿ ಅಕ್ಷತಾ ರವರು ದಿನಾಂಕ 07/02/2019 ರಂದು ಆರೋಪಿ-1 ಹನುಮಂತರಾಯರವರನ್ನು ಗುರುಹಿರಿಯರ ಸಮಕ್ಷಮ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1, ಆರೋಪಿ-2 ಉಮೇಶ್ ಆರೋಪಿ-3 ಶಾರದಮ್ಮ ಆರೋಪಿ-4 ಗಿರಿಜಮ್ಮ, ಆರೋಪಿ-5 ಮಾರುತಿ ರವರ ಬೇಡಿಕೆ ಮೇರೆಗೆ ಆರೋಪಿ-1 ರವರಿಗೆ ವರದಕ್ಷಿಣೆಯಾಗಿ 250 ಗ್ರಾಂ ಚಿನ್ನ, ಮತ್ತು 1 ಕೆ.ಜಿ ಬೆಳ್ಳಿ ಸಾಮಾಗ್ರಿ, 5 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದು, ಮದುವೆಯಾದ ನಂತರ ಆರೋಪಿ-1 ರವರು ಪಿರ್ಯಾದಿಗೆ ತವರು ಮನೆಯಿಂದ ಹಣ ಹಾಗೂ ಬೆಂಗಳೂರಿನಲ್ಲಿ ಸೈಟನ್ನು ತೆಗೆಸಿಕೊಂಡು ಬರುವಂತೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದು, ನಂತರದಲ್ಲಿ ದಿನಾಂಕ:24.05.19 ಆರೋಪಿ-1 ಪಿರ್ಯಾದಿ ತವರು ಮನೆಯಿಂದ ಹಣ ಪಡೆದು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಅಲ್ಲಿ ವಾಸವಾಗಿದ್ದು, ಅಲ್ಲಿಯೂ ಸಹ ಆರೋಪಿ-1 ರವರು ಪಿರ್ಯಾದಿಗೆ ಹೆಚ್ಚಿನ ವರದಕ್ಷಿಣೆ ಹಣವನ್ನು ತರುವಂತೆ ಬೈದು ಹೊಡೆದು, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ದಿನಾಂಕ:21.08.19 ರಂದು ಪಿರ್ಯಾದಿಯ ಜುಟ್ಟನ್ನು ಹಿಡಿದು, ತಲೆಯನ್ನು ಗೋಡೆಗೆ ದೈಹಿಕ ಹಲ್ಲೆ ನಡೆಯಿಸಿ ಪಿರ್ಯಾದಿಯನ್ನು ಮನೆಯಿಂದ ಹೊರಗೆ ಹಾಕಿರುವುದಾಗಿ ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ಮಹಿಳಾ ಠಾಣೆ

ಪಿರ್ಯಾದಿ ರೋಶನ್ ಸಬಾ ರವರು ದಿನಾಂಕ:27.05.2016 ರಂದು ಮುಸ್ಲೀಂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1, ಆರೋಪಿ-2   ಚಾಂದ್ ಬೇಗಂ, ಆರೋಪಿ-3 ಅಬ್ದುಲ್ ಸಲಾಂ, ಆರೋಪಿ-4 ಶಹನಾಜ್ ಬೇಗಂ, ಆರೋಪಿ-5 ನೌಶಾದ್ ಬೇಗಂ ರವರುಗಳ ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿದ್ದು, ಮದುವೆಯಾದ ನಂತರ ಪಿರ್ಯಾದಿಯು ಆರೋಪಿ-1 ರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ನಂತರದಲ್ಲಿ ಆರೋಪಿ-1 ರವರು ಪಿರ್ಯಾದಿಗೆ ಹೆಚ್ಚಿಗೆ ವರದಕ್ಷಿಣೆ ತರುವಂತೆ ಜಗಳವಾಡಿ ಊಟ ಬಟ್ಟೆಗೆ ತಂದು ಕೊಡದೇ, ಹೊಡೆದು ಬೈದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ವರದಕ್ಷಿಣೆ ತಂದರೆ ಮಾತ್ರ ಪಿರ್ಯಾದಿಯನ್ನು ಬಾಳಿಸುವುದಾಗಿಯೂ ಇಲ್ಲವಾದರೆ  ಹೆಚ್ಚಿನ ವರದಕ್ಷಿಣೆ ತರುವ ಬೇರೆ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿ ಪಿರ್ಯಾದಿಯನ್ನು ತವರು ಮನೆಗೆ ಕಳುಹಿಸಿದ್ದು, ಇದಕ್ಕೆ ಆರೋಪಿ-2,3,4,5 ರವರುಗಳು ಕುಮ್ಮಕ್ಕು ನೀಡಿರುವುದಾಗಿ ಇತ್ಯಾದಿಯಗಿ ಪಿರ್ಯಾದಿಯು ನೀಡಿದ ದೂರು.

 

9

ರಸ್ತೆ ಅಪಘಾತ

02

ನರಸಿಂಹರಾಜ ಸಂಚಾರ ಠಾಣೆ

ಫಿರ್ಯಾದಿ ಆಶಾ ರವರು ದಿನಾಂಕ:30-11-2019 ರಂದು ಬೆಳಿಗ್ಗೆ ಸುಮಾರು 0715  ಗಂಟೆಯಲ್ಲಿ ಬಂಗಾರ ನಾಯಕರವರು ಮೋಟಾರ್ ಸೈಕಲ್ ನಂಬರ್ KA-10 Q=3019 ರ ಹಿಂಭಾಗದಲ್ಲಿ ಪಿರ್ಯಾದುದಾರರನ್ನು ಕೂರಿಸಿಕೊಂಡು ಮೋಟಾರ್ ಸೈಕಲನ್ನು ಚಾಲನೆ ಮಾಡಿಕೊಂಡು ಸದರಿ ಸ್ಥಳದಲ್ಲಿ ಹೋಗುವಾಗ ಯಾದವಗಿರಿ ಕಡೆಯಿಂದ ಜೀಪ್ ನಂಬರ್ KA-12 M-3242 ರ ಚಾಲಕ ಜೀಪನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲ್ ಗೆ ಢಿಕ್ಕಿ ಮಾಡಿದಾಗ ಪಿರ್ಯಾದುದಾರರು ಹಾಗೂ ಅವರ ಪತಿ ಬಂಗಾರನಾಯಕ ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಪಿರ್ಯಾದುದಾರರಿಗೆ ಮೂಗಿಗೆ, ಎಡಗಾಲಿಗೆ, ಎಡಗೈಗೆ, ಪೆಟ್ಟಾಗಿದ್ದು; ಬಂಗಾರನಾಯಕರವರಿಗೆ ಬಲಗಾಲಿಗೆ, ಮುಖಕ್ಕೆ, ತಲೆಗೆ, ಕೈ ಗಳಿಗೆ ಪೆಟ್ಟಾಗಿದ್ದವರನ್ನು   ಜೀಪ್ ಚಾಲಕ ಜೀಪ್ ಸಮೇತ ಹೊರಟು ಹೋಗಿದ್ದು;   ಅಂಬುಲೆನ್ಸ ನಲ್ಲಿ  ಗಾಯಾಳುಗಳು ಚಿಕಿತ್ಸೆಗೆ ಬೃಂದಾವನ ಆಸ್ಪತ್ರೆಗೆ  ಬಂದು ದಾಖಲಾಗಿರುತ್ತಾರೆ.   ಈ ಅಪಘಾತ ಮಾಡಿರುವ ಜೀಪನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ಬೃಂದಾವನ  ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ ವ ವರದಿ.

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 30.11.2019 ರಂದು ಬೆಳಿಗ್ಗೆ ಸುಮಾರು 09.45 ಗಂಟೆ ಸಮಯದಲ್ಲಿ  ಪಿರ್ಯಾದಿ ಕುಮಾರಸ್ವಾಮಿ ರವರಿಗೆ ಮಹದೇವಸ್ವಾಮಿ, ಗುರುಸ್ವಾಮಿ ಮತ್ತು ಪರಮೇಶ ಎಂಬುವವರು  ಎಂದಿನಂತೆ  ಕೆಲಸ ಮಾಡಲು ಎಸ್.ವಿ.ಪಿ ನಗರ ಬಸ್ ಸ್ಟಾಂಡ್ ಹತ್ತಿರ ಬಸ್ ಇಳಿದು ಟಿ ಎನ್ ಪುರ ರಸ್ತೆಯಲ್ಲಿ ನಡೆದುಕೊಂಡು ಬಂದು ರಾಜಶೇಖರ ಆಸ್ಪತ್ರೆ ಮುಂಭಾಗ ರಸ್ತೆಯನ್ನು ಎಡಬಾಗದಿಂದ ಬಲಭಾಗಕ್ಕೆ ರಸ್ತೆಯನ್ನು ದಾಟುತ್ತಿದ್ದಾಗ  ಟಿ ಎನ್ ಪುರ ರಸ್ತೆ ಚಿಕ್ಕಳ್ಳಿ ಕಡೆಯಿಂದ ಮೈಸೂರು ಸಿಟಿ ಕಡೆಗಾದಂತೆ ಕೆಎ43. 5717 ನಂಬರಿನ ಟಾಟಾ ಎಸ್ ಗೂಡ್ಸ ವಾಹನ ಚಾಲಕನಾದ ಸಿದ್ದರಾಜು ರವರು ಬಹಳ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಮಹದೇವ ಸ್ವಾಮಿ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಮಹದೇವ ಸ್ವಾಮಿ ರವರು ರಸ್ತೆ ಮೇಲೆ ಬಿದ್ದು ಅವರ ತಲೆಗೆ ಮತ್ತು ಹೊಟ್ಟೆಗೆ ಪೆಟ್ಟಾಗಿ ಚಿಕಿತ್ಸೆ ಸಲುವಾಗಿ ಡಿಕ್ಕಿ ಮಾಡಿದ ವಾಹನದಲ್ಲೆ ಜೆ ಎಸ್ ಎಸ್ ಆಸ್ಪತ್ರೆಗೆ ತಂದು ಸೇರಿಸಿ, ನಂತರ ಪಿರ್ಯಾದಿ ಠಾಣೆಗೆ ಹಾಜರಾಗಿ ಡಿಕ್ಕಿ ಮಾಡಿದ ಗೂಡ್ಸ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಠಾಣೆಗೆ ನೀಡಿದ ದೂರು.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

01

ಆಲನಹಳ್ಳಿ ಠಾಣೆ

ಪಿರ್ಯಾದಿ ನಂದಿನಿ ರವರು ಮ್ಯಾಟ್ರಿಮುನಿಯಲ್ ವೆಬ್ಸೈಟ್ ಮುಖಾಂತರ ಪರಿಚಿತನಾದ ಸದರಿ ಆರೋಪಿತನು ಪಿರ್ಯಾದಿ ರವರ ಮನೆಗೆ ಬಂದು   ಮೊಬೈಲ್ ನಂ. 7259117800 ಪಡೆದುಕೊಂಡಿದ್ದು. ಕಾರಣಾಂತರದಿಂದ ಪಿರ್ಯಾದಿ ರವರು ಮದುವೆಯಾಗಲು  ನೀರಾಕರಿಸಿದ್ದು ಸೆಪ್ಟೆಂಬರ್-2019 ರಿಂದ ಆರೋಪಿತನು ತನ್ನ ಮೊ.ನಂ.9880976797, 988695505 ಗಳಿಂದ ಪಿರ್ಯಾದಿ ಮತ್ತು ಪಿರ್ಯಾದಿ ಅಣ್ಣನ ಮೊ.ನಂ. ಗಳಿಗೆ ಅಶ್ಲೀಲ ಮೆಸೇಜ್ ಗಳನ್ನು ಮಾಡಿ ಪಿರ್ಯಾದಿ ಮತ್ತು ಪಿರ್ಯಾದಿ ಸಹೋದರಿರವರ ಭಾವಚಿತ್ರ ಮತ್ತು ಮೊಬೈಲ್ ನಂಬರ್ ಗಳನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ದು. ಪಿರ್ಯಾದಿ ಮತ್ತು ಪಿರ್ಯಾದಿ ಕುಟುಂಬದವರನ್ನು ಅಶ್ಲೀಲಾವಾಗಿ ನಿಂದಿಸುತ್ತಾ ಪಿರ್ಯಾದಿ ಶೀಲದ ಬಗ್ಗೆ ಅಪಪ್ರಚಾರ ಮಾಡುತ್ತಾ ಮಾನಹಾನಿ ಮಾಡಿ ಮಾನಸಿಕವಾಗಿ ಕಿರುಕುಳ ಕೊಡುತ್ತಾ ಘನತೆಗೆ ಧಕ್ಕೆ ತಂದಿರುವ ಸದರಿ ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಈ ದಿನ ಠಾಣೆಗೆ ನೀಡಿದ ದೂರು.

 

 

 

 

                          MYSURU CITY TRAFFIC VIOLATION CASES

                                          DATE  :30-11-2019

SLNO

                HEADS

                               NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

190

74

 

74

338

2

TOTAL NUMBER OF CRR'S

441

254

433

571

465

2,164

3

TOTAL FINE AMOUNT COLLECTED

81,800

46,800

56,200

72,600

76,400

3,33,800

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

-

1

1

-

2

8

INTERCEPTOR CASES

-

66

45

-

95

206

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

11

12

5

5

12

45Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®