ENGLISH   |   KANNADA

Blog



ದಿನಾಂಕ;01.12.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:02.12.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 51       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ನಜರ್ ಬಾದ್ ಠಾಣೆ

ದಿನಾಂಕ-01-12-2019 ರಂದು ಪಿರ್ಯಾದುದಾರರಾದ ಮಂಜುಳ ರವರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ನನ್ನ ಮಗ ಮಣಿಕಂಠನು ಈಗ್ಗೆ 3 ದಿನಗಳ ಹಿಂದೆ ಕೆಲಸಕ್ಕೆ ಮಡಿಕೇರಿಗೆ ಹೋಗುವುದಾಗಿ ಹೇಳಿ ಹೋದವನು ಈ ವರೆಗೂ ಎಲ್ಲಿರುತ್ತೇನೆಂದು ಫೋನ್ ಕೂಡ ಮಾಡಿರುವುದಿಲ್ಲ. ಅವನು ಎಲ್ಲಿದ್ದಾನೆ ಎಂದು ಗೊತ್ತಿರುವುದಿಲ್ಲ. ದಿನಾಂಕ-01-12-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ದೇವರಾಜ, ಕುಮಾರ, ಹರೀಶ, ರವಿ, ಶಕುಂತಲ, ಪುಷ್ಪ ರವರುಗಳು ನಮ್ಮ ಮನೆಗೆ ನುಗ್ಗಿ ಗಲಾಟೆ ಮಾಡಿ, ದೇವರಾಜ ಎಂಬುವವರು ನನ್ನ ಮಗಳನ್ನು ನಿನ್ನ ಮಗ ಕರೆದುಕೊಂಡು ಹೋಗಿದ್ದಾನೆಂದು ಗಲಾಟೆ ಮಾಡಿ, ರವಿ ಎಂಬುವವರು ನಮ್ಮ ಹುಡುಗಿ ಸ್ವಾತಿಯನ್ನು ಕರೆದುಕೊಂಡು ಬರಲಿಲ್ಲ ಅಂದರೆ ನಿನ್ನನ್ನು ಮತ್ತು ನಿನ್ನ ಮಗಳನ್ನು ಸಾಯಿಸುತ್ತೇನೆಂದು ಹೆದರಿಸಿರುತ್ತಾರೆಂದು ನೀಡಿದ ದೂರಿನ ಸಾರಾಂಶವಾಗಿರುತ್ತೆ.

5

ಮನೆಕಳವುಪ್ರಕರಣ

01

ಉದಯಗಿರಿ ಠಾಣೆ

ದಿನಾಂಕ: 28-11-2019 ರಂದು ರಾತ್ರಿ 19-30 ಗಂಟೆಗೆ ಪಿರ್ಯಾದಿ ಸೈಯದ್ ಸಲೀಂ ರವರು ಕುಟುಂಬ ಸಮೇತ ಮನೆ ಬೀಗ ಹಾಕಿಕೊಂಡು ಅವರ ಮಾವನ ಮನೆಗೆ ಬಳ್ಳಾರಿಗೆ ಹೋಗಿದ್ದು, ವಾಪಸ್ಸು ದಿನಾಂಕ: 01-12-2019 ರಂದು ರಂದು ಬೆಳಿಗ್ಗೆ 6-00 ಗಂಟೆಗೆ ವಾಪಸ್ಸು ಬಂದು ನೋಡಿದಾಗ, ಮನೆಯ ಮುಂಬಾಗಿಲಿನ ಡೋರ್ ಅನ್ನು ಮೀಟಿ ತೆಗೆದು ಅಲ್ಮೇರಾವನ್ನು ಮುರಿದು ಅದರಲ್ಲಿಟ್ಟಿದ್ದ 30 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, 30 ಗ್ರಾಂ ತೂಕದ ಒಂದು ಜೊತೆ ಚಿನ್ನದ ಬಳೆ, 35 ಗ್ರಾಂ ತೂಕದ ಒಂದು ಜೊತೆ ಚಿನ್ನದ ಬಳೆ ಸೆಟ್, 10 ಗ್ರಾಂ ತೂಕದ ಚಿನ್ನದ ಕಿವಿಯ ಓಲೆ ಒಂದು ಜೊತೆ, ಕೈ ಬೆರಳಿನ ಚಿನ್ನದ ಎರಡು ಉಂಗುರಗಳು ಅಂದಾಜು 4-5 ಗ್ರಾಂ ಇರಬಹುದು, ಒಂದು ಚಿನ್ನದ ಕೈ ಬ್ರೇಸ್ ಲೆಟ್ ಸುಮಾರು 9 ಗ್ರಾಂ, ಸುಮಾರು 125 ಗ್ರಾಂ ಒಟ್ಟು ಅಂದಾಜು ಬೆಲೆ 3,00,000/- ಮತ್ತು ನಗದು ಹಣ 10,000/- ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರುಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಫಿರ್ಯಾದುದಾರರಾದ ಶ್ರೀಮತಿ ಅನಿತ ಎಸ್.ಪಿ. ರವರು ಫಿರ್ಯಾದುದಾರರು ದಿನಾಂಕ 22.11.2015 ರಂದು ಆರೋಪಿ-1 ಭಾನುಪ್ರಕಾಶ್ ಎಂಬುವವರನ್ನು ಗುರುಹಿರಿಯರ ಸಮಕ್ಷಮ ಸಂಪ್ರದಾಯದಂತೆ ಕೆ.ಆರ್.ನಗರದ ರೈತ ಸಮುದಾಯ ಭವನದಲ್ಲಿ ಮದುವೆಯಾಗಿರುತ್ತಾರೆ. ಮದುವೆಯ ಸಮಯದಲ್ಲಿ ಆರೋಪಿ-1 ರವರಿಗೆ ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ ಒಂದು ಲಕ್ಷ ರೂಪಾಯಿ ನಗದು ಹಣ, 500 ಗ್ರಾಂ ಬೆಳ್ಳಿ ಪದಾರ್ಥವನ್ನು ಕೊಟ್ಟಿರುತ್ತಾರೆ. ಮದುವೆಯಾದ ಸ್ವಲ್ಪ ದಿನಗಳ ಕಾಲ ಅನ್ಯೋನ್ಯತೆಯಿಂದ ಇದ್ದು, ನಂತರದ ದಿನಗಳಲ್ಲಿ ಆರೋಪಿ-1, ಆರೋಪಿ-2 ಧನಲಕ್ಷ್ಮಿ, ಆರೋಪಿ-3 ಮಂಜಪ್ಪಗೌಡ, ಆರೋಪಿ-4 ಶಶಿರೇಖಾ, ಆರೋಪಿ-5 ಮೋಹನ್ ಕುಮಾರಿ ರವರುಗಳು ಹೆಚ್ಚಿನ ವರದಕ್ಷಿಣೆಯಾಗಿ ಕೆ.ಆರ್.ನಗರದಲ್ಲಿರುವ ಸೈಟು ಮತ್ತು ಜಮೀನು ಬರೆಯಿಸಿಕೊಂಡು ಬರುವಂತೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ  ಹೆಚ್ಚಿನ ವರದಕ್ಷಿಣೆ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ, ಆರೋಪಿತರವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿರುತ್ತೆ.

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

01

ವಿಜಯನಗರ ಠಾಣೆ

ಪಿರ್ಯಾದಿ ಚಂದ್ರನಾಯಕ ರವರ ತಂದೆಯಾದ ಜವರನಾಯಕ ರವರಿಗೆ ಮೈಸೂರು ತಾಲ್ಲೂಕು, ಜಯಪುರ ಹೋಬಳಿ, ಕಳಲವಾಡಿ ಗ್ರಾಮದ ಸರ್ವೆ ನಂ:148/ಪಿ5 ದುರಸ್ತಿ ನಂತರ ರಿ ಸರ್ವೆ ನಂ.191 ವಿಸ್ತೀರ್ಣ 2 ಎಕರೆ ಜಮೀನು ಸರ್ಕಾರದಿಂದ ಗ್ರ್ಯಾಂಟ್‌ ಪರಿಶಿಷ್ಟ ನಂ-1 ¸Àರ್ಟಿಫಿಕೇಟ್‌ ಮೂಲಕ ಮಂಜೂರು ಆಗಿದ್ದುಪಿರ್ಯಾದಿಗೆ ಪೌತಿ ಖಾತೆ ಮೂಲಕ ಆಸ್ತಿ ವರ್ಗಾವಣೆಯಾಗಿದ್ದು, ಪಿರ್ಯಾಧಿಯ ಸ್ವಾದೀನದಲ್ಲಿದ್ದ ಜಮೀನನ್ನು 1 ರಿಂದ 7 ರವರೆಗಿನ ಆರೋಪಿಗಳು  ಪಿರ್ಯಾದುದಾರರ ಆಸ್ತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲಾತಿಗಳನ್ನುಸೃಷ್ಠಿಸಿಕೊಂಡು ಆಸ್ತಿಯನ್ನು 7 ನೇ ಆರೋಪಿ ಪ್ರದಿಪ್‌ ಕುಮಾರ್‌ ಎಂಬುವರಿಗೆ ದಾನಪತ್ರ ನೀಡುವ ಮೂಲಕನೊಂದಾಣಿ ಮಾಡಿಸಿ ಮೋಸ ಮಾಡಿರುತ್ತಾರೆಂದು, ಕಾನೂನು ಕ್ರಮವನ್ನು ಕೈಗೊಳ್ಳಲು  ನ್ಯಾಯಾಲಯದಿಂದ ಬಂದ ಖಾಸಗಿ ದೂರಿನ ಮೇರೆಗೆ ಈ ಪ್ರ ವ.ವರದಿ.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                       MYSURU CITY TRAFFIC VIOLATION CASES

                                 DATE  :01-12-2019

SLNO

            HEADS

                  NO. OF CASES

DR

KR

NR

SN

VV

TOTAL

1

TOTAL NUMBER OF FTVRS

 

-

110

151

 

111

372

2

TOTAL NUMBER OF CRR'S

284

278

413

563

362

1,900

3

TOTAL FINE AMOUNT COLLECTED

46,300

41,500

56,100

68,600

57,200

2,69,700

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

 

-

84

84

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

8

11

10

3

15

47



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com