ENGLISH   |   KANNADA

Blog



ದಿನಾಂಕ;09.01.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.01.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 60       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಕುವೆಂಪುನಗರ ಠಾಣೆ

ಪಿರ್ಯಾದಿ ಕುಮಾರಸ್ವಾಮಿ ರವರು  ದಿನಾಂಕ: 09/01/2020 ರಂದು ಮಧ್ಯಾಹ್ನ 1.00 ಗಂಟೆ ಸಮಯದಲ್ಲಿ ವಿವೇಕಾನಂದನಗರದ ಎಸ್‌ಬಿಐ ಬ್ಯಾಂಕ್‌‌ಗೆ ಹೋಗಿ ಅಲ್ಲಿ ಚೆಕ್ ಮೂಲಕ 62,000ರೂ ಹಣವನ್ನು ಡ್ರಾ ಮಾಡಿ, ತಮ್ಮ ಹ್ಯಾಂಡ್‌‌‌‌‌ ಬ್ಯಾಗ್‌‌‌‌‌‌ನಲ್ಲಿ ಇಟ್ಟುಕೊಂಡು, ರಸ್ತೆಯ ಮೂಲಕ ನಡೆದುಕೊಂಡು ಬರುತ್ತಿದ್ದಾಗ, ಸುಮಾರು 1.20 ಗಂಟೆ ಸಮಯದಲ್ಲಿ ಕುವೆಂಪುನಗರದ ಕೆಎಸ್ಆರ್‌‌‌ಟಿಸಿ ಡಿಪೊಗೆ ಹೋಗುವ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾರೊ ಅಪರಿಚಿತ ಇಬ್ಬರು ಬೈಕ್ ಸವಾರರು ಕಪ್ಪು ಬಣ್ಣದ ಬೈಕ್‌‌‌‌ನಲ್ಲಿ ಪಿರ್ಯದುದಾರರ ಮುಂಬಾಗದಿಂದ ಬಂದು ಎಡಭಾಗದ ಕೈನಲ್ಲಿದ್ದ ಬ್ಯಾಗ್ಅನ್ನು ಕಿತ್ತುಕೊಂಡು ಹೋಗಿದ್ದು, ಬ್ಯಾಗ್ ಅನ್ನು ಪತ್ತೆಮಾಡಿ ಕಳುವಾದ 62,000ರೂ ನಗದು ಹಣವನ್ನು ವಾಪಸ್ ಕೊಡಿಸಿ ಮತ್ತು ಕಿತ್ತುಕೊಂಡು ಹೋದವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

01

ವಿಜಯನಗರ ಠಾಣೆ

ಪಿರ್ಯಾದಿ ಕೌಶಿಕ್ ರವರು ದಿನಾಂಕ.09.01.2020 ರಂದು ಕೂರ್ಗಳ್ಳಿಯ ಸರ್ಕಾರಿ ಶಾಲೆಯ ಬಳಿ ಪಿರ್ಯಾದಿಯು ಇದ್ದಾಗ, ಆರೋಪಿತ ಹರೀಶ್‌ ಆತನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದು ಪಿರ್ಯಾದಿಯೊಂದಿಗೆ ಮಾತನಾಡ ಬೇಕು ಎಂದು ತಿಳಿಸಿದ್ದು, ಪಿರ್ಯಾದಿಯು ಆರೋಪಿತನದ ಹರೀಶನ ದ್ವಿ ಚಕ್ರ ವಾಹನದಲ್ಲಿ ಕುಳಿತುಕೊಂಡು ಎಂಎಸ್‌.ಅರ್‌ ಕ್ರಷರ್‌ ಫ್ಯಾಕ್ಟರಿ ರಸ್ತೆ ಕರೆದುಕೊಂಡು ಹೋಗಿ ಒಂದು ಖಾಲಿ ಜಾಗದಲ್ಲಿ ದ್ವಿಚಕ್ರವಾನ ನಿಲ್ಲಿಸಿ ಆಗ ಸಮಯ 9.00 ಗಂಟೆಯಾಗಿದ್ದು, ಆರೋಪಿ ಹರೀಶ್‌ನು ಅವಾಚ್ಯ ಶಬ್ದಗಳಿಂದ ನಿಂದಿಸಿ 3-4 ಜನ ಬಂದು ಪಿರ್ಯಾದಿಯನ್ನು ಸುತ್ತುವರೆದು ಆರೋಪಿ ಹರೀಶನು ಜೇಬಿನಿಂದ ಖಾರದ ಪುಡಿಯನ್ನು ತೆಗೆದು ಪಿರ್ಯಾದಿಗೆ ಎರಚಿ, ಪಿರ್ಯದಿಯಾ ಎರಡು ಕೈಗಲು ಮತ್ತು ತೋಳುಗಳಿಗೆ ಮನ ಬಂದಂತೆ ಹೊಡೆದಿದ್ದು, ಆರೋಪಿ ಹರೀಶ ಡ್ರ್ಯಾಗನ್‌ನಿಂದ ಬೆನ್ನಿಗೆ ಚುಚ್ಚಿದ್ದು, ಉಳಿದವರು ಪಿರ್ಯಾದಿಯು ತಪ್ಪಿಸಿಕೊಂಡು ಹೋಗದಂತೆ ತಡೆದಿದ್ದು, ಆಷ್ಟೊತ್ತಿಗೆ ಹರೀಶ.ಎಂ.ಆರ್‌. ಮತ್ತು ಶರತ್‌ ಹಾಗೂ ಅನಿಲ್‌,ರವರುಗಳ ಹೇ ಬಿಡ್ರೋ, ಬಿಡ್ರೋ ಎಂದು ಕೂಗಿದ್ದು, ಆರೋಪಿಗಳು ಓಡಿ ಹೋಗಿದ್ದು, ನಂತರ ಹರೀಶ.ಎಂ.ಆರ್‌. ಮತ್ತು ಶರತ್‌ ಹಾಗೂ ಅನಿಲ್‌,ರವರುಗಳ ಸಹಾಯದಿಂದ ಪ್ರಲಕ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು  ಪಡೆಯುತ್ತಿದ್ದು, ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿತರುಗಳ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ,ವ.ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಕೃಷ್ಣರಾಜ ಠಾಣೆ

ದಿನಾಂಕ:09/01/2020 ರಂದು ಬೆಳಿಗ್ಗೆ 10-45 ಗಂಟೆಯಲ್ಲಿ ಪಿರ್ಯಾದುದಾರರಾದ ಅಂದಾನಿ ರವರ ಮೆರೂನ್ ಬಣ್ಣದ ಹೋಂಡಾ ಆಕ್ಟೀವಾ ಸ್ಕೂಟರ್ ನಂ ಕೆಎ-55-ವಿ-5349ಅನ್ನು ನನ್ನ ಹೆಸರಿನಲ್ಲಿ ತೆಗೆದುಕೊಂಡಿರುತ್ತೇನೆ. ದಿ: 03/01/2020 ರಂದು ಮದ್ಯಾಹ್ನ 12-45 ಗಂಟೆಗೆ ನನ್ನ ಸ್ಕೂಟರನ್ನು ಅಗ್ರಹಾರ ಸರ್ಕಲ್ ಬಳಿ ಇರುವಂತಹ ವಾಣಿ ವಿಳಾಸ ಮಾರ್ಕೆಟ್ ನಲ್ಲಿ ನನ್ನ ಸ್ಕೂಟರನ್ನು ನಿಲ್ಲಿಸಿ ದಿನನಿತ್ಯದಂತೆ  ಸರ್ಕಲ್ ನಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ವ್ಯಾಪಾರ ಮುಗಿದ ನಂತರ ಮದ್ಯಾಹ್ನ, 1400 ಗಂಟೆಗೆ ಬಂದು ನೋಡಲಾಗಿ, ನನ್ನ ಆಕ್ಟೀವಾ 3ಜಿ ಸಕೂಟರ್ ಇರಲಿಲ್ಲ. ನಂತರ ನಾನು ಅದನ್ನು ಎಲ್ಲಾ ಕಡೆ ಹುಡುಕಿ ನೋಡಿದರೂ ಪತ್ತೆಯಾಗಿರುವುದಿಲ್ಲ. ಅದನ್ನು ಯಾರೋ ಕಳ್ಳರು ಕಳುವು ಮಾಡಿದ್ದು, ಪತ್ತೆಮಾಡಿಕೊಡಬೇಕೆಂದು ಈ ದಿನ ಠಾಣೆಗೆ ಬಂದು ನೀಡಿದ ದೂರು,.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ; 31-12-2019  ರಂದು ರಾತ್ರಿ 200  ಗಂಟೆ ಸಮಯದಲ್ಲಿ  ಪಿರ್ಯಾದಿ  ವೆಂಕಟೇಶ ರವರು 3ನೇ ಕ್ರಾಸ್ ಕೆ,ಡಿ ರಸ್ತೆ ಮನೆಯ ಮುಂದೆ ತಮ್ಮ ಮಾರುತಿ ಹೋಮಿನಿ ನಂ ಕೆ,ಎ-09-ಜೆಡ್-7237 ನಿಲ್ಲಿಸಿದ್ದಾಗ 01-01-2020  ರಂದು  ಬೆಳಗಿನ ಜಾವ 03:12 ಗಂಟೆ ಸಮಯದಲ್ಲಿ  ಕಾರು  ನಂ  ಕೆಎ-03-ಏಎಫ್-9852   ಚಾಲಕ ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು   ಪಿರ್ಯಾಧಿಯವರ ವಾಹನದ ಮುಂಭಾಗಕ್ಕೆ ಡಿಕ್ಕಿ ಮಾಡಿ ಹೊರಟುಹೋಗಿರುತ್ತಾನೆ ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ  ಕಾರು  ನಂ  ಕೆಎ-03-ಏಎಫ್-9852 ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ್ದ ಲಿಖಿತ ದೂರಿನ ಮೇರೆಗೆ ಪ್ರ ವ ವರದಿ.

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 09.01.2020 ರಂದು ಸಂಜೆ ಸುಮಾರು 07.45 ಗಂಟೆ ಸಮಯದಲ್ಲಿ ಪಿರ್ಯಾದಿ ಸುಮಿತ್ರ ರವರ ಅಳಿಯರವರಾದ ಶ್ರೀ ಆಕಾಶ ಕೆ. ರವರು ಕೆಎ.55.ಎಲ್.5497 ನಂಬರಿನ ಯಮಹಾ ವೈಬಿಆರ್ ಮೋಟಾರ್ ಸೈಕಲ್ ಅನ್ನು ಚಾಲನೆ ಮಾಡಿಕೊಂಡು ಕಾರಂಜಿಕೆರೆ ರಸ್ತೆಯಲ್ಲಿ ಸರ್ಕಸ್ ಗ್ರೌಂಡ್ ಕಡೆಯಿಂದ ಬುಲ್ವರ್ಡ ವೃತ್ತದ ಕಡೆಗಾದಂತೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅವರ ಎದುರು ಕಡೆಯಿಂದ ಅಂದರೆ ಬುಲ್ವರ್ಡ ವೃತ್ತದ ಕಡೆಯಿಂದ ಯಾವುದೋ ಒಬ್ಬ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಅನ್ನು ಬಹಳ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿರವರ ಅಳಿಯ ಶ್ರೀ ಆಕಾಶ ರವರಿಗೆ ಡಿಕ್ಕಿ ನಿಲ್ಲಿಸದೇ ಹೋರಟು ಹೋದನು. ಡಿಕ್ಕಿ ಮಾಡಿದ ಪರಿಣಾಮ ಆಕಾಶರವರು ಮೊಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ಅವರ ತಲೆಗೆ ಪೆಟ್ಟಾಗಿ ರಕ್ತ ಸ್ರಾವವಾಗಿ ಅವರ ಮುಖಕ್ಕೆ ತಲೆಗೆ ಮತ್ತು ಕೈಕಾಲುಗಳಿಗೆ ಪೆಟ್ಟಾಗಿ ಚಿಕಿತ್ಸೆ ಬಗ್ಗೆ ಅವರನ್ನು ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದ ವಿಚಾರ ತಿಳಿದು ಆಸ್ಪತ್ರೆಗೆ ಬಂದ ಪಿರ್ಯಾದಿ ಆಸ್ಪತ್ರೆಯಲ್ಲಿ ಡಿಕ್ಕಿ ಮಾಡಿ ನಿಲ್ಲಿಸದೇ ಹೋರಟು ಹೋಗಿರುವ ಯಾವುದೋ ಮೋಟಾರ್ ಸೈಕಲ್ ಮತ್ತು ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಗೋಪಾಲಗೌಡ ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                           MYSURU CITY TRAFFIC VIOLATION CASES

                                      DATE  :09-01-2020

SLNO

                HEADS

                         NO. OF CASES

DR

KR

NR

SN

VV

TOTAL

1

TOTAL NUMBER OF FTVRS

123

103

65

-

123

414

2

TOTAL NUMBER OF CRR'S

439

444

264

687

463

2,297

3

TOTAL FINE AMOUNT COLLECTED

91,700

72,100

39,200

95,500

63,100

3,61,600

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

1

1

2

8

INTERCEPTOR CASES

-

-

103

-

-

103

9

SUSPENSION OF D.L.

-

-

 

-

-

-

10

Sec 283 IPC CASES

-

-

 

-

 

-

11

Sec 353 IPC CASES

-

-

 

-

 

-

12

TOWING CASES

11

15

3

10

8

47



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com