ENGLISH   |   KANNADA

Blogದಿನಾಂಕ;10.01.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.01.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 171       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ಅಶೋಕಪುರಂ ಠಾಣೆ

ದಿನಾಂಕಃ-10.01.2020 ರಂದು 11-45 ಗಂಟೆಗೆ ಫಿರ್ಯಾದಿ ಶ್ರೀಮತಿ ವಿನುತ.ಸಿ ರವರು ನನ್ನ ಗಂಡ ಆರೋಪಿ ರವಿಕುಮಾರ್ .ವಿರುದ್ದ ಹಾಕಿರುವ ಪ್ರಕರಣ ಸಂಖ್ಯೆ 25/2020 ಕ್ಕೆ ಸಂಬಂಧಿಸಿದಂತೆ ಜಯನಗರ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿ ವಾಪಾಸ್ ಮನೆಗೆ ನನ್ನ ಚಿಕ್ಕಪ್ಪನ ಮಗಳಾದ ಸೌಮ್ಯಳೊಂದಿಗೆ ಬೇಕರಿ ಬಳಿ ರಸ್ತೆ ದಾಟುತ್ತಿರುವಾಗ ಬೈಕ್ನಲ್ಲಿ ಬಂದಂತಹಾ ನನ್ನ ಗಂಡ ರವಿಕುಮಾರ್ ಹಾಗೂ ಆತನ ಇಬ್ಬರು ಸ್ನೇಹಿತರು ನಾನು ಹಾಕಿದ್ದ ಚೂಡಿದಾರದ ವೇಲನ್ನು ಕುತ್ತಿಗೆಗೆ ಸುತ್ತಿ ನೀನು ಬದುಕಿದ್ದರೆ ತಾನೆ ನನ್ನ ಮೇಲೆ ಕೇಸು ಹಾಕುವುದು ಎಂದು ವೇಲ್ ನಿಂದ ನನ್ನ ಕುತ್ತಿಗೆಗೆ ಬಿಗಿದನು ಆಗ ಆತನ ಸ್ನೇಹಿತರಿಬ್ಬರು ನನ್ನ ಚೂಡಿದಾರವನ್ನು ಹಿಡಿದು ಎಳೆದಾಡಿ ಹರಿದು ಹಾಕಿದರು. ಆಗ ನನ್ನ ಅಕ್ಕ ಸೌಮ್ಯ ಎಷ್ಠು ಕಿರುಚಿದರು ಬಿಡದೆ ಇದ್ದಾಗ ಅಲ್ಲೇ ಇದ್ದ ಸಾರ್ವಜನಿಕರು ಹಾಗೂ ಕೆಲವು ವಕೀಲರುಗಳು ಬರುವಷ್ಠರಲ್ಲಿ ಆತನ ಸ್ನೇಹಿರುಗಳ ಜೊತೆ ಸ್ಕೂಟರಿನಲ್ಲಿ ಹೋಗಿರುತ್ತಾನೆ. ನಂತರ ನಾನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಚರ್ಚಿಸಿ ತಡವಾಗಿ ಬಂದು ದೂರು ನೀಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೇನೆ.

ಆಲನಹಳ್ಳಿ ಠಾಣೆ

ಪಿರ್ಯಾದಿ  ಕುಮಾರ್ ರವರು ತನಿಷ್ಕ ಬಾರ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದು. ಎಂದಿನಂತೆ ದಿನಾಂಕ:-09-01-2020 ಬೆಳಿಗ್ಗೆ ಬಾರ್ಗೆ ಬಂದು ವ್ಯಾಪಾರ ಮಾಡುತ್ತಿದ್ದು. ರಾತ್ರಿ ಸುಮಾರು 10-50 ಗಂಟೆಯಲ್ಲಿ ಚೋರನಹಳ್ಳಿ ವಾಸಿ ಆರೋಪಿ ಗುರುಮೂರ್ತಿ ಬಾರ್ ಗೆ ಬಂದು ಜೊತೆ ಬಂದಿದ್ದ ಗಿರೀಶ್ ಮತ್ತು ಬಸವರಾಜು ರವರು ನಿನಗೆ ಯಾವ ಸಾಲ ಕೊಡಬೇಕು  ಅವಾಚ್ಯ ಶಬ್ದಗಳಿಂದ ಬೈಯ್ದು, , ಅಲ್ಲೆ ಇದ್ದ ಗುರುಮೂರ್ತಿರವರು ನಾನು ಬಂದು ಎಣ್ಣೆ ಕೇಳಿದರೆ ಕೊಡಬೇಕು ನಾನು ಪಂಚಾಯಿತಿ ಮೆಂಬರ್ ಎಂದು ದಮಕಿ ಹಾಕಿದ್ದು. ಗಿರೀಶ್ ರವರು ಖಾಲಿ ಬಾಟಲಿ ಬಾರ್ ಒಳಗೆ ಎಸೆದಾಗ 3,000/- ರೂ ಬೆಲೆಯ ಎರಡು ಬಕಾಡರ್ಿ ರಮ್ ಬಾಟಲಿ ಹೊಡೆದು ಹೋಗಿರುತ್ತದೆ. ಆಗ ನಾನು ಹೆದರಿ ಬಾರ್ ನಿಂದ ಹೊರಗೆ  ಓಡಿಹೋಗಲು ಹೋದಾಗ ಇವರುಗಳು ನನ್ನನ್ನು ಅಡ್ಡಗಟ್ಟಿ ಕೈಗಳಿಂದ ಹೊಡೆದು ಕೊ??  ಬೆದರಿಕೆ ಹಾಕುತ್ತಿದ್ದಾಗ. ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ ಮತ್ತು ಯೋಗೆಂದ್ರ ಕುಮಾರ್ ಜಗಳ ಬಿಡಿಸಿರುತ್ತಾರೆ. ಈ ವಿಚಾರವನ್ನು ಅಂಗಡಿ ಮಾಲೀಕರಿಗೆ ತಿಳಿಸಿರುತ್ತೇನೆ. ಗುರುಮೂರ್ತಿ, ಗಿರೀಶ್ ಮತ್ತು ಬಸವರಾಜು ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರ.ವ.ವರದಿ.  

5

ಮನೆಕಳವುಪ್ರಕರಣ

01

ಮಂಡಿ ಠಾಣೆ

ಫಿರ್ಯಾದಿ ಅನಿಲನ್ ದಿ:09-01-2020 ರಂದು ಬೆಳಿಗ್ಗೆ 08-30 ಗಂಟೆಗೆ ಉಮರ್ ಖಯಂ ರಸ್ತೆ ತಿಲಕ್ ನಗರದಲ್ಲಿರುವ ಮನೆಯ ಡೋರ್ ಲಾಕ್ ಮಾಡಿಕೊಂಡು ಡೋರ್ ಕೀ ಅನ್ನು ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಸುಜುಕಿ ಸಮುರಾಯ್ ಸ್ಕೂಟರ್ನ ಟ್ಯಾಂಕ್ ಪೌಚ್ ನಲ್ಲಿಟ್ಟು ಸದ್ವಿದ್ಯಾ ಕಾಲೇಜಿಗೆ ಹೋಗಿರುತ್ತಾನೆ. ನಂತರ ಬಂದು ಪೌಚ್ ನೋಡಿದಾಗ ಪೌಚ್ನಲ್ಲಿ  ಮನೆ ಕೀ ಇರಲಿಲ್ಲ. ನಂತರ ಬಾಗಿಲ ಬಳಿ ಬಂದು ನೋಡಿದಾಗ ಡೋರ್ ಪಕ್ಕದಲ್ಲಿದ್ದ ಕಿಟಕಿ ಓಪನ್ ಆಗಿದ್ದು, ಕಿಟಕಿ ಮೂಲಕ ಹೊರಗಡೆಯಿಂದ ಕೈ ಹಾಕಿ ಡೋರ್ ಲಾಕ್ನಲ್ಲಿರುವ ಬೋಲ್ಟ್ ಅನ್ನು ತೆಗೆದು, ಮನೆ ಬಾಗಿಲು ತೆರೆದು ಒಳಗೆ ಹೋದಾಗ ಮನೆಯ ಬಾಗಿಲ ಮುಂದೆ ನೆಲದಲ್ಲಿ ಬಾಗಿಲ ಡೋರ್ ಲಾಕ್ ಕೀ ಬಿದ್ದಿರುತ್ತದೆ. ನಂತರ ರೂಂನೊಳಗೆ ಹೋಗಿ ನೋಡಿದಾಗ ಬೀರುವಿನ ಬಾಗಿಲು ಮತ್ತು ವಾರ್ಡ್ ರೋಬ್ ಬಾಗಿಲು ತೆರೆದಿರುವುದು ಕಂಡು ಬಂದಿದ್ದು,  ಕಳ್ಳತನವಾಗಿರುವ ಚಿನ್ನದ ಆಭರಣಗಳು ಹಾಗೂ ನಗದು ಹಣವು ಸೇರಿದಂತೆ ಒಟ್ಟು ಮೌಲ್ಯ ರೂ 2,83,000 ಆಗುತ್ತದೆ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ

6

ಸಾಮಾನ್ಯಕಳವು

-

ಜಯಲಕ್ಷ್ಮೀಪುರಂ ಠಾಣೆ

ದಿನಾಂಕಃ 10-01-2020 ರಂದು ಫಿರ್ಯಾದಿ ಪ್ರಹ್ಲಾದ್ ಕುಲಕರ್ಣಿ ರವರು ಅರ್ಚಕ ವೃತ್ತಿ ಮಾಡಿಕೊಂಡು ಜಯಲಕ್ಷ್ಮೀಪುರಂನ ರಾಘವೇಂದ್ರಸ್ವಾಮಿ ಮಠದಲ್ಲಿ ವಾಸ್ತವ್ಯವಿದ್ದು, ನನಗೆ ಭಕ್ತಾದಿಗಳಿಂದ ಕಾಣಿಕೆ ರೂಪದಲ್ಲಿ ಬಂದಿದ್ದ ಸುಮಾರು 20,000/-ರೂಗಳನ್ನು ಮಠದ ವತಿಯಿಂದ ನೀಡಲಾದ  ಲಾಕರ್ ನಲ್ಲಿ ಇಟ್ಟಿದ್ದು, ದಿನಾಂಕಃ 23-12-2019 ರಂದು  ಯಾರೋ ದುರಾತ್ಮರು ಲಾಕರ್ ಅನ್ನು ಮೀಟಿ ಡ್ಯಾಮೇಜ್ ಮಾಡಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾಗಿರುವ ನನ್ನ ಹಣವನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಶಿಲ್ಪಾ ರವರು ದಿನಾಂಕ:22.05.2005 ರಂದು ಆರೋಪಿ-1 ಮಹದೇವುರವರನ್ನು 2ನೇ ಕ್ರಾಸ್, ಕೆ.ಜಿ ಕೊಪ್ಪಲ್ ನಟರಾಜ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1 ರವರಿಗೆ 1 ಲಕ್ಷ ರೂಪಾಯಿ ನಗದು ಹಣ ಮತ್ತು ಚಿನ್ನವನ್ನು ಕೊಟ್ಟಿರುತ್ತಾರೆ. ಆರೋಪಿ-1, ಆರೋಪಿ-2 ನಿಂಗಮ್ಮ, ಆರೋಪಿ-3 ಲೀಲಾವತಿಯವರು  ಹೆಚ್ಚಿನ ವರದಕ್ಷಿಣೆ ಹಣವನ್ನು ತರುವಂತೆ ಪಿರ್ಯಾದಿಗೆ ಬೈದು ಹೊಡೆದು, ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದು, ಆರೋಪಿ-1 ರವರು ಆರೋಪಿ-4 ಮಧುರವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ನೀಡುತ್ತಿರುವುದಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.   

 

9

ರಸ್ತೆ ಅಪಘಾತ

02

ದೇವರಾಜ ಸಂಚಾರ ಠಾಣೆ

ದಿನಾಂಕ 09.01.2020 ರಂದು ಬೆಳಿಗ್ಗೆ ಸುಮಾರು 11:30 ಗಂಟೆ ಸಮಯದಲ್ಲಿ ಪಿರ್ಯಾದಿಯವರಾದ  ರಮೇಶ್ ಹೆಚ್ ರವರು ತಮ್ಮ ಹೀರೋ ಹೋಂಡಾ ಗ್ಲಾಮರ್ ಬೈಕ್ ನಂಬರ್ ಕೆಎ-09 ಇಜಿ- 0211 ರಲ್ಲಿ ಕೆ.ಎಸ್.ಆರ್.ಟಿ.ಸಿ. ಗ್ರಾಮಾಂತರ ಬಸ್ ನಿಲ್ದಾಣದ ಹಿಂಭಾಗವಿರುವ ಕೇಶವ ಅಯ್ಯಂಗಾರ್ ರಸ್ತೆಯಲ್ಲಿ ಇರ್ವಿನ್ ರಸ್ತೆ ಕಡಗೆ ಹೋಗುವಾಗ ಸಾರ್ವಜನಿಕ ಶೌಚಾಲಯದ ಹತ್ತಿರ ಇರ್ವಿನ್ ರಸ್ತೆ ಬಿ.ಎನ್ ರಸ್ತೆ ಕಡೆಯಿಂದ ವೇಗವಾಗಿ ಬಂದ ಹೊಸ ಹೀರೋ ಹೋಂಡಾ ಪ್ಯಾಶನ್ ಪ್ರೊ(ನಂಬರ್ ಇರವುದಿಲ್ಲ) ಬೈಕ್ ಸವಾರ ಪಿರ್ಯಾದಿಯವರಿಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿಯವರಿಗೆ ಬಲಗೈ ಬೆರಳಿಗೆ ಪೆಟ್ಟಾಗಿದ್ದು ಕೆ.ಆರ್.ಆಸ್ಪತ್ರೆಯಲ್ಲಿ ಎಂಎಲ್.ಸಿ. ಅಡಿಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಈ ಅಪಘಾತಕ್ಕೆ ಹೊಸ ಹೀರೋ ಹೋಂಡಾ ಪ್ಯಾಶನ್ ಪ್ರೊ(ನಂಬರ್ ಇರುವುದಿಲ್ಲ) ಬೈಕ್ ಸವಾರನ ವೇಗ ಮತ್ತು ನಿರ್ಲಕ್ಷತೆ ಚಾಲನೆ ಕಾರಣವಾಗಿದ್ದು ಆತನವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವಾಗಿರುತ್ತೆ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

01

ವಿ.ವಿ ಪುರಂ ಠಾಣೆ

ದಿನಾಂಕ: 10.01.2020 ರಂದು ಮದ್ಯಾಹ್ನ 14.15 ಗಂಟೆಯ ಸಮಯದಲ್ಲಿ ಪಿರ್ಯಾದಿಯವರಾದ ಶ್ರೀ ಮೋಹನ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಸಂ: MAG(3)ಮಿಸ್:116/2018 ದಿನಾಂಕ: 28.06.2018 ಮತ್ತು ಮಾನ್ಯ ತಹಸೀಲ್ದಾರ್ ಕಾರ್ಯಾಲಯ, ಮೈಸೂರು ಸಂ: MAG(2)ಮಿಸ್: 209/19-2020 ದಿನಾಂಕ: 29.12.2019 ರ ಆದೇಶದ ಮೇರೆಗೆ ಮೆ: ಲೆಂಡ್ಲಿ ಬಾಟ್ಲಿಂಗ್ ಕಂಪನಿ ಮಾಲೀಕರು ಸಿ.ಎ ನಾಗೇಶ್ ರಾವ್ ಬಿನ್ ಲೇಟ್ ಪಿ. ಮಹದೇವರಾವ್, ನಂ: 305, ಜೇರೆನಿಯಂ ಸಂಕಲ್ಪ ಸೆಂಟ್ರಲ್ ಪಾರ್ಕ್, ಯಾದವಗಿರಿ ಮೈಸೂರು ರವರಿಗೆ ಸೇರಿದ ಸ್ಥಿರಾಸ್ತಿ  ಸ್ವತ್ತು ನಂ: 183, ಇಂಡಸ್ಟ್ರಿಯಲ್ ಎಸ್ಟೇಟ್, ಯಾದವಗಿರಿ ಮೈಸೂರು ಕೈಗಾರಿಕಾ ನಿವೇಶನ, ಇಂಡಸ್ಟ್ರಿಯಲ್ ಫ್ಯಾಕ್ಟರಿ, ಮೈಸೂರು ಮಹಾನಗರ ಪಾಲಿಕೆ ಸೇರಿದ ಜಾಗ, ಮೈಸೂರು ಸ್ವತ್ತನ್ನು The Securitization and Reconstruction of Financial Assets and Enforcement of Security Interest Act-2002 ರ ವಿಧಿ 14 (1) ರಡಿ ಭೌತಿಕವಾಗಿ ವಶಪಡಿಸಿ ಸ್ವಾಧೀನಕ್ಕೆ ಪಡೆಯುವ ಸಲುವಾಗಿ ರಾಜಸ್ವ ನಿರೀಕ್ಷಕರಾದ ಮಹೇಂದ್ರ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಕೆ.ಎಂ ಕುಟ್ಟಪ್ಪ, ಬ್ಯಾಂಕ್ ಸಿಬ್ಬಂದಿಯವರಾದ ಪಿ.ಮಂಜುನಾಥ, ಬ್ಯಾಂಕಿನ ಅಧಿಕೃತಿ ಅಧಿಕಾರಿ, ಗೋಪಾಲಕೃಷ್ಣ, ಹೆಚ್.ಮಂಜುನಾಥ, ಮೈಸೂರು ನಗರದ ಶಾಖಾ ವ್ಯವಸ್ಥಾಪಕನಾದ ನಾನು ಹಾಗೂ ಪೊಲೀಸ್ ಸಿಬ್ಬಂದಿಯವರಾದ ಎ.ಎಸ್.ಐ ನಾಗರಾಜ ನಾಯಕ, ಮುಖ್ಯಪೇದೆ ಗೋವಿಂದರಾಜು, ನಾಗೇಂದ್ರ, ಶಿಲ್ಪಶ್ರೀ ರವರುಗಳು ಬೆಳಿಗ್ಗೆ 11.15 ಗಂಟೆಯ ಸಮಯದಲ್ಲಿ ಮೇಲ್ಕಂಡ ಸ್ವತ್ತಿನ ಸ್ಥಳಕ್ಕೆ ಹೋಗಿದ್ದು, ಸ್ವತ್ತು ಬಾಗಿಲು ತೆರೆದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ವಿಚಾರವನ್ನು ತಿಳಿಸಿ, ಒಳಗಡೆ ಮಹಜರು ಮಾಡುತ್ತಿದ್ದ ಸಮಯದಲ್ಲಿ ಅಲ್ಲಿಗೆ ಬಂದ ನಾಗೇಶ್ ರಾವ್ ಮತ್ತು ಲಕ್ಷ್ಮಣ್ ರಾವ್ ರವರು ಸ್ವತ್ತಿನ ಒಳಗಡೆಯಿದ್ದ ನಮ್ಮಗಳನ್ನು ಕೂಡಿಹಾಕಿ ಹೊರಗಿನಿಂದ ಬಾಗಿಲನ್ನು ಹಾಕಿಕೊಂಡು ನಮ್ಮನ್ನು ಅಕ್ರಮವಾಗಿ ಕೂಡಿಹಾಕಿದ್ದು, ಅಲ್ಲದೇ ನಾವುಗಳು ಸರ್ಕಾರಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಿದ್ದು, ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ.ಪ್ರ.ವ.ವರದಿ.  

 

 

 

 

 

                            MYSURU CITY TRAFFIC VIOLATION CASES

                               DATE  :10-01-2020

SLNO

            HEADS

                  NO. OF CASES

DR

KR

NR

SN

VV

TOTAL

1

TOTAL NUMBER OF FTVRS

17

174

140

176

123

630

2

TOTAL NUMBER OF CRR'S

398

362

453

447

407

2,067

3

TOTAL FINE AMOUNT COLLECTED

79,200

60,700

65,800

58,900

62,200

3,26,800

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

 

-

-

-

-

7

NON FATAL

1

 

-

-

1

2

8

INTERCEPTOR CASES

-

-

110

-

 

110

9

SUSPENSION OF D.L.

-

-

 

-

 

-

10

Sec 283 IPC CASES

-

-

 

-

 

-

11

Sec 353 IPC CASES

-

-

 

-

 

-

12

TOWING CASES

11

15

3

5

2

36Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®