ENGLISH   |   KANNADA

Blogದಿನಾಂಕ;11.01.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.01.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 224       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಕುವೆಂಪುನಗರ ಠಾಣೆ

ಪಿರ್ಯಾದಿ ಗೌರಮ್ಮ ರವರು  ದಿನಾಂಕ: 10/01/2020 ರಂದು ಬೆಳಿಗ್ಗೆ 11.00 ಗಂಟೆಗೆ ನಮ್ಮ ಸೊಸೆಯಾದ ಅರ್ಪಿತರವರ ಜೊತೆ ಸ್ಕೂಟರ್‌‌‌ನಲ್ಲಿ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ಗೆ  ಹೋಗಿದ್ದು, ಅಲ್ಲಿ ಚೆಕ್ ಮೂಲಕ 20,000ರೂ ಹಣವನ್ನು ಡ್ರಾ ಮಾಡಿಕೊಂಡು, ಸದರಿ ಹಣವನ್ನು ವ್ಯಾನಿಟಿ ಬ್ಯಾಗ್‌‌ನಲ್ಲಿ ಇಟ್ಟುಕೊಂಡು ವಾಪಸ್ ಸಮಯ ಸುಮಾರು 12.00 ಗಂಟೆಗೆ ಮನೆಗೆ ಬಂದು, ಹಾಲ್‌‌‌‌‌ನಲ್ಲಿದ್ದ ಟೇಬಲ್ ಮೇಲೆ ಬ್ಯಾಗನ್ನು ಇಟ್ಟು ರೂಮಿಗೆ ಹೋಗಿದ್ದು, ವಾಪಸ್ ಮಧ್ಯಾಹ್ನ 12.45 ಗಂಟೆ ಸಮಯದಲ್ಲಿ ಬಂದು ವ್ಯಾನಿಟಿ ಬ್ಯಾಗ್ ಇಟ್ಟಿದ್ದ ಸ್ಥಳವನ್ನು ನೋಡಲಾಗಿ ಬ್ಯಾಗ್ ಕಳ್ಳತನವಾಗಿದ್ದು, ಬ್ಯಾಗ್‌‌‌‌‌‌‌ನಲ್ಲಿಟ್ಟಿದ್ದ ನಗದು ಹಣ 20,000ರೂ, ನೋಕಿಯಾ ಕೀ ಪ್ಯಾಡ್ ಮೊಬೈಲ್ (ಸಿಮ್ 9900140004), ಚೆಕ್‌‌ಬುಕ್, ಪಾಸ್‌‌‌‌ಬುಕ್ ಇದ್ದು, ಇವುಗಳೂ ಸಹ ಕಳ್ಳತನವಾಗಿದ್ದು, ವ್ಯಾನಿಟಿ ಬ್ಯಾಗ್ ಅನ್ನು ಪತ್ತೆಮಾಡಿ, ಬ್ಯಾಗ್‌‌‌‌‌‌ನಲ್ಲಿದ್ದ ನಗದು ಹಣ 20,000ರೂ, ಮೊಬೈಲ್, ಚೆಕ್‌‌‌ಬುಕ್, ಪಾಸ್‌‌‌ಬುಕ್ ಇವುಗಳನ್ನು ಪತ್ತೆಮಾಡಿ ಕೊಟ್ಟು, ಕಳ್ಳತನಮಾಡಿಕೊಂಡು ಹೋಗುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

01

ವಿ.ವಿ ಪುರಂ ಠಾಣೆ

ಪಿರ್ಯಾದಿ ಲಕ್ಷ್ಮೀ ರವರು  ದಿ-11-01-2020ದಿ:29.12.19 ರಂದು ನಾನು ಬೆಂಗಳೂರಿಗೆ ಹೋಗುವಾಗ ಮನೆಗೆ ಡೋರ್‌ಲಾಕ್‌ ಹಾಕಿಕೊಂಡು ಹೋಗಿದ್ದೆನು ದಿ:09.01.20 ರಂದು ನಾನು ಮೈಸೂರಿನಲ್ಲಿರುವ ನನ್ನ ಮನೆಗೆ ಹೋದಾಗ  ಬೇರೆ ಡೋರ್‌ಲಾಕ್‌ನ್ನು ಅಳವಡಿಸಿತ್ತು. ಬಾಗಿಲನ್ನು ಶಬ್ದಮಾಡಿದಾಗ,  ಮಹೇಶ್ವರಿ  ಆಕೆಯ ಗಂಡ ಕೃಷ್ಣಪ್ಪ  ರವರು ಬಾಗಿಲನ್ನು  ತೆರೆದರು, ಅವರಿಗೆ  ನೀವು ಯಾರು.  ಏಕೆ  ನನ್ನ  ಮನೆಯಲ್ಲಿರುತ್ತೀರಿ,  ಡೋರ್‌ಲಾಕ್‌ನ್ನು  ಏಕೆ ಬದಲಾಯಿಸಿರುತ್ತೀರೆಂದು ಕೇಳಿದಾಗ, ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ತಂಗಿ ಶೀಲಾ ಮತ್ತು ಆಕೆಯ ಗಂಡ ಕಳೆದ 30ವರ್ಷಗಳಿಂದ ಈ ಮನೆಯಲ್ಲಿ  ನಿಮ್ಮ ಸೇವೆ ಮಾಡಿಕೊಂಡಿದ್ದಾಳೆ. ಈ ಮನೆ ನನ್ನ ತಂಗಿಗೆ ಸೇರಬೇಕು. ನೀನು ಮನೆಯ ಒಳಗಡೆ ಬಂದರೆ ನಿನ್ನನ್ನು ಕೊಲೆಮಾಡುತ್ತೇನೆಂದು  ಪ್ರಾಣ ಬೆದರಿಕೆ ಹಾಕಿದರು. ನಾವು ಮನೆಯ ಹೊರಗಡೆ  ಇರುವಾಗ್ಗೆ  ದರ್ಶನ್‌ ಮತ್ತ ಆತನ ಸ್ನೇಹಿತರು ಕೈಗಳಲ್ಲಿ ದೊಣ್ಣೆ ಮತ್ತು ರಾಡುಗಳನ್ನು ಹಿಡಿದುಕೊಂಡು ನಮ್ಮನ್ನು  ನೋಡಿ, ನೀನು ಈ ಮನೆಯ ವಿಚಾರಕ್ಕೆ ಬಂದರೆ ನಿನ್ನನ್ನು ಮುಗಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿದರು. ಮೇಲ್ಕಂಡ ಆರೋಪಿಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಕಟ್ಟಿಕೊಂಡು ನನ್ನ ಮನೆಗೆ ಅತಿಕ್ರಮ ಪ್ರವೇಶಮಾಡಿ, ನನ್ನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಪ್ರಾಣ ಬೆದರಿಕೆ ಹಾಕಿರುವರ ವಿರುದ್ದ  ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ದಾಖಲಿಸಿದ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

02

ಮಹಿಳಾ ಠಾಣೆ

ಪಿರ್ಯಾದಿಯಾದ ಜೋಸ್ಫೀನ್ ಮೇರಿ ಮತ್ತು  ಆರೋಪಿ ಮೋಹನ್ ರವರು ಪರಸ್ಪರ ಪ್ರೀತಿಸಿ ದಿ:21.04.2008 ಮದುವೆಯಾಗಿ, ಮದುವೆಯಾದ ಸ್ವಲ್ಪ ದಿನಗಳ ಕಾಲ ಮಾತ್ರ ಚೆನ್ನಾಗಿದ್ದು, ನಂತರದಲ್ಲಿ  ಪಿರ್ಯಾದಿಗೆ ಸರಿಯಾಗಿ ಊಟ ಬಟ್ಟೆಗೆ ತಂದು ಕೊಡದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಹೆಚ್ಚಿನ ವರದಕ್ಷಿಣೆಯನ್ನು ತವರು ಮನೆಯಿಂದ ತರುವಂತೆ ಹಿಂಸೆ ನೀಡಿದ್ದು, ಪಿರ್ಯಾದಿಯು ತವರು ಮನೆಯಿಂದ ಹೆಚ್ಚಿನ ಹಣವನ್ನು ತರಲು ಸಾಧ್ಯವಾಗದಿದ್ದಾಗ ಬೇರೆ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದಾಗ ಪಿರ್ಯಾದಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಲ್ಲಿ ಆರೋಪಿಯು ಬೇರೆ ಹುಡುಗಿಯನ್ನು ಮದುವೆಯಾಗುವುದಿಲ್ಲ ಹಾಗೂ ಹೆಚ್ಚಿನ ವರದಕ್ಷಿಣೆ ತರುವಂತೆ ಪಿರ್ಯಾದಿಯನ್ನು ಹಿಂಸೆ ನೀಡುವುದಿಲ್ಲವೆಂದು ಹೇಳಿ ಇತ್ತಿಚೆಗೆ ಆರೋಪಿಯು ಬೇರೆ ಹುಡುಗಿಯನ್ನು ಮದುವೆಯಾಗಿದ್ದು, ಈ ವಿಚಾರ ತಿಳಿದು ಫಿರ್ಯಾದಿಯು ಆರೋಪಿಯ ಮನೆಗೆ ಹೋದಾಗ ಆರೋಪಿಯು ಪಿರ್ಯಾದಿಗೆ ಬಾಯಿಗೆ ಬಂದಂತೆ ಬೈದು, ಹೊಡೆದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.

ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಸೌಮ್ಯ ಕೆ ರವರು ದಿನಾಂಕ:15.08.2018 ರಂದು ಆರೋಪಿ-1 ಯತೀಶ್ ರವರೊಂದಿಗೆ ಗುರುಹಿರಿಯರ ಸಮ್ಮಖದಲ್ಲಿ ಸಂಪ್ರದಾಯವಾಗಿ ಪೊಲೀಸ್ ಭವನದಲ್ಲಿ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1, ಆರೋಪಿ-2 ಚಿಂತಾಮಣಿ, ಆರೋಪಿ-3 ಪುರುಷೋತ್ತಮ ರವರ ಬೇಡಿಕೆಯ ಮೇರೆಗೆ ಸಾಕಷ್ಟು ವರದಕ್ಷಿಣೆ ಕೊಟ್ಟಿರುತ್ತಾರೆ. ಮದುವೆಯಾದ ನಂತರ ಪಿರ್ಯಾದಿಯು ಆರೋಪಿ-1,2,3 ರವರೊಂದಿಗೆ ವಾಸವಾಗಿದ್ದು, ಆ ಸಮಯದಲ್ಲಿ ಪಿರ್ಯಾದಿಗೆ ಬೈಯ್ದು, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡಿ, ಪಿರ್ಯಾದಿಯ ತಂದೆ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ್ದು, ನಿವೃತ್ತಿಯ ಹಣದಲ್ಲಿ 10 ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ತರುವಂತೆ ಕಿರುಕುಳ ನೀಡಿ, ಪಿರ್ಯಾದಿಯ ಒಡವೆಗಳೆಲ್ಲವನ್ನು ಗಿರಿವಿ ಇಟ್ಟಿಕೊಂಡಿದ್ದು, ಪಿರ್ಯಾದಿಯ ತಂದೆ ಹಬ್ಬಕ್ಕೆ ಕರೆಯಲು ಮನೆಗೆ ಬಂದಾಗ ಅವರನ್ನು ಬೈದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಿರ್ಯಾದಿಗೆ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಇಲ್ಲಸಲ್ಲದ ಆರೋಪ ಮಾಡಿ, ಗೃಹಬಂಧನದಲ್ಲಿಸಿ, ಹೆಚ್ಚಿನ ವರದಕ್ಷಿಣೆ ಹಣ ತರುವುದಾದರೆ ಮಾತ್ರ ಹೆಂಡತಿ ಎಂದು ನೋಡಿಕೊಳ್ಳುತ್ತೇನೆ ಹೇಳಿ ದೈಹಿಕವಾಗಿ ಮಾನಸಿಕವಾಗಿ ತೊಂದರೆ ನೀಡುತ್ತಿರುವ ಆರೋಪಿ-1,2,3 ರವರುಗಳ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.

 

9

ರಸ್ತೆ ಅಪಘಾತ

01

ವಿ.ವಿ ಪುರಂ ಸಂಚರ ಠಾಣೆ

ದಿನಾಂಕ; 10-01-2020  ರಂದು  ಸಂಜೆ 05:47 ಗಂಟೆ ಸಮಯದಲ್ಲಿ  ಪಿರ್ಯಾಧಿ ಪ್ರಸಾದ್ ಎನ್  ರವರ ಭಾವ ನಂದಕಿಶೋರ್ ಅವರು ತಮ್ಮ  ಮೋ,ಸೈ  ನಂ ಕೆ,ಎ-09- ಈವಿ-8174 ಇದನ್ನು  ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ ಹಿನಕಲ್ ರಿಂಗ್ ರಸ್ತೆ ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ಧಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ ಐ-20 ಕಾರು ಚಾಲಕ ಸವಾರ ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು   ಪಿರ್ಯಾಧಿಯವರ ವಾಹನಕ್ಕ ಡಿಕ್ಕಿ ಮಾಡಿ ಹೊರಟುಹೋಗಿರುತ್ತಾನೆ ಇದರಿಂದ ನಂದಕಿಶೋರ್ ಅವರ ತಲೆ ಹಾಗೂ ಮುಖಕ್ಕೆ ತೀವ್ರ ಪೆಟ್ಟಾಗಿದ್ದ ಅವರನ್ನು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಸೆಗಾಗಿ ಅಪಲೋ ಆಸ್ಪತ್ರೆಗೆ ದಾಖಲಿಸಿದ್ದು ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ ಐ-20 ಕಾರು  ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ್ದ ಲಿಖಿತ ದೂರಿನ ಮೇರೆಗೆ ಪ್ರ ವ ವರದಿ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

 

                            MYSURU CITY TRAFFIC VIOLATION CASES

                                            DATE  :11-01-2020

SLNO

                  HEADS

                          NO. OF CASES

DR

KR

NR

SN

VV

TOTAL

1

TOTAL NUMBER OF FTVRS

36

40

23

-

93

192

2

TOTAL NUMBER OF CRR'S

137

204

293

394

352

1,380

3

TOTAL FINE AMOUNT COLLECTED

26,500

39,900

44,900

56,400

47,500

2,15,200

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

1

1

8

INTERCEPTOR CASES

-

-

120

-

-

120

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

3

8

4

8

3

26Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®