ENGLISH   |   KANNADA

Blogದಿನಾಂಕ:13.06.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.06.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 138       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಫಿರ್ಯಾದಿ ಮಧು ವಿಕಾಸ್ ರವರು ದಿ:13/01/2020 05-10 ಗಂಟೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಕೆಎಸ್ಆರ್ ಟಿಸಿ ಬಸ್ ಸ್ಟಾಂಡ್ ಬಳಿ ನಿಂತಿದ್ದಾಗ ಒಂದು ಬಿಳಿ ಬಣ್ಣದ ಸ್ವಿಫ್ಟ್ ಕಾರು ಚಾಲಕ ಬಂದು ಬೆಂಗಳೂರಿಗೆ ಹೋಗುತ್ತಿರುವದಾಗಿ ತಿಳಿಸಿದ ಮೇರೆಗೆ ತುರ್ತು ಕೆಲಸವಿದ್ದರಿಂದ ಕಾರಿನಲ್ಲಿ ಹತ್ತಿ ಹೋಗುತಿದ್ದಾಗ ,ಕಾರಿನಲ್ಲಿ ಮೂರು ಜನರಿದ್ದು ಕಾರು ಕೋಲಂಬಿಯಾ ಏಷಿಯಾ ದಿಂದ ಬೆಂಗಳೂರು ಕಡೆ ಹೋಗದೆ ಕೆ ಆರ್ ಎಸ್ ಕಡೆ ಹೋಗುತ್ತಿದ್ದಾಗ ಕೇಳಿದ್ದಕ್ಕೆ ಹಿಂಬದಿ ಕೂತಿದ್ದ ವ್ಯಕ್ತಿಯು ಚಾಕುವನ್ನು ತೆಗೆದು ಕುತ್ತಿಗೆಗೆ ಹಿಡಿದು  ನಿನ್ನ ಬಳಿ ಇರುವುದನೆಲ್ಲ ಕೊಡು ಇಲ್ಲದಿದ್ದರೆ ಚುಚ್ಚಿ ಬಿಡುವುದಾಗಿ ಹೆದರಿಸಿ,ಕೈಯಿಂದ ಹೊಡೆದು, ನನ್ನ ಬಳಿಯಿದ್ದ ಉಂಗುರ,ಕತ್ತಿನಲ್ಲಿದ್ದ 10ಗ್ರಾಂ  ತೂಕದ ಚೈನ್ ಜೇಬಿನಲ್ಲಿದ್ದ ಪರ್ಸ್ ತೆಗೆದು ಅದರಲಿದ್ದ 500 ರೂ ಹಾಗು ಇಂಡಿಯನ್ ಬ್ಯಾಂಕ್ ಎಟಿಯಂ ಕಾರ್ಡ್ ಹಾಗು ಎಸ ಬಿ ಐ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಪಿನ್ ನಂ ಕೇಳಿ ತಪ್ಪು ಕೊಟ್ಟಿದಕ್ಕೆ ಚೆಕ್ ಮಾಡಿಕೊಂಡು ಬಂದು ತಪ್ಪು ಕೊಡುತ್ತೀಯಾ ಎಂದು ಚಾಕುವಿನಿಂದ ಮಂಡಿಗೆ ಚುಚ್ಚಿದರು ಆಗ ಭಯದಿಂದ ಸರಿಯಾದ ನಂಬರ್ ಕೊಟ್ಟೆ ,ಆಗ ಕಾರನ್ನು ಒಂಟಿಕೊಪ್ಪಲು ದೇವಸ್ಥಾನದ ರಸ್ತೆಯಲ್ಲಿ ಬಂದು ಕಾರ್ಡ್ಗಳಿಂದ 20,000 ಹಾಗು 24000 ರೂಗಳನ್ನು ಡ್ರಾ ಮಾಡಿ ಅಲ್ಲಿಂದ ಕೆಆರ್ ಆಸ್ಪತ್ರೆ ಹತ್ತಿರ ಬಂದು ನನ್ನ ಪರ್ಸ್, ಕಾರ್ಡ್ ಗಳು ಹಾಗು ಮೊಬೈಲ್ ಫೋನ್ ಅನ್ನು ವಾಪಸ್ಸು ಕೊಟ್ಟು ಕಾರಿನಿಂದ  ಕೆಳಗೆ ತಳ್ಳಿ ಹೋಗಿರುತ್ತಾರೆ ,ಕಾರ್ ನಂಬರ್ ನೋಡಲು ಸಾದ್ಯವಾಗಿರುವದಿಲ್ಲ ,ಆದ್ದರಿಮದ ನನಗೆ ಬೆದರಿಕೆ ಹಾಕಿ ನನ್ನ ಬಳಿ ಚಿನ್ನ ಹಾಗು ಹಣವನ್ನು ಕಿತ್ತುಕೊಂಡು ಹೋಗಿರುವವರ ವಿರುದ್ದ ಕಾನೂನು ಕ್ರಮಕ್ಕೆ ದೂರು.

4

ಹಲ್ಲೆ ಪ್ರಕರಣ      

01

ಲಕ್ಷ್ಮೀಪುರಂ ಠಾಣೆ

ದಿನಾಂಕ: 10-01-2020 ರಂದು ಮಧ್ಯಾಹ್ನ ಸುಮಾರು 12:30 ಗಂಟೆ ಸಮಯದಲ್ಲಿ ಫಿರ್ಯಾದಿ ರಮ್ಯ ರವರು  ಕೃಷ್ಣಮೂರ್ತಿಪುರಂ ನಲ್ಲಿರುವತಮ್ಮ ಮನೆಯಲ್ಲಿ ಇದ್ದಾಗ ಒಬ್ಬ ಅಸಾಮಿಯು ಫಿರ್ಯಾದುದಾರರ ಮನೆಯ ಬಾಗಲು ತಟ್ಟಿ ಕೋರಿಯರ್ ಇದೆ, ನಾನು ಎಂ.ಎಲ್.ಎ ಕಡೆಯವನು ಎಂದು ಹೇಳಿದಾಗ ಫಿರ್ಯಾಧುದಾರರು ನಾವು ಹೊಸದಾಗಿ ಬಂದಿದ್ದೇವೆ ಎಂದು ಹೇಳಿದಾಗ ಸದರಿ ಅಸಾಮಿಯು ಹೆಲ್ಮೆಟ್ ಲ್ಲಿಯೇ ಮನೆಯೊಳಗೆ ಬಂದು ಫಿರ್ಯಾದುದಾರರನ್ನು ಕೊಲೆ ಮಾಡುವ ಉದ್ದೇಶದಿಂದ ತಾನು ತಂದಿದ್ದ ಚಾಕುವಿನಿಂದ ಫಿರ್ಯಾದುದಾರರ ಎಡಭಾಗದ ಹುಬ್ಬು, ಎಡಕೆನ್ನೆ, ಬಲಕಣ್ಣಿನ ಕೆಳಗೆ ಎಡ ಕಂಕುಳಿನಿಂದ ಮುಂಗೈವರೆಗೆ, ಬಲಗೈನ ಮುಂಗೈ ಹತ್ತಿರ ಹೊಟ್ಟೆಯ ಎಡಭಾಗ, ಕಾಲಿಗೆ ಹೊಡೆದು ತಾನು ಬಂದಿದ್ದ ಬೈಕ್ನಲ್ಲಿ ಹೊರಟು ಹೋಗಿದ್ದು, ಕೂಡಲೇ ಫಿರ್ಯಾದುದಾರರು ಕೂಗಿಕೊಂಡಾಗ ನಾಗೇಂದ್ರ, ಜ್ಯೋತಿ ಎಂಬವರು ಫಿರ್ಯಾದುದಾರರನ್ನು ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಿದ್ದು, ಘಟನೆಯ ಬಗ್ಗೆ ಫಿರ್ಯಾದುದಾರರು ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರ.ವ.ವರದಿ.

5

ಮನೆಕಳವುಪ್ರಕರಣ

01

ಅಶೋಕಪುರಂ ಠಾಣೆ

ದಿನಾಂಕ: 13.01.2020 ರಂದು ಸಂಜೆ  6.30 ಗಂಟೆ ಸಮಯದಲ್ಲಿ ಪಿರ್ಯಾದಿಯವರಾದ ಶ್ರೀಮತಿ ರೇಖಾ ಪ್ರಭಾಕರ್ ರವರ ದೊಡ್ಡಪ್ಪನವರು ಪಿರ್ಯಾಧಿಯವರಿಗೆ ನೀಡಿದ್ದ ಮನೆ ನಂ. 239, , 4ನೆ ಮೈನ್, ಜಯನಗರ, ಮೈಸೂರು ಈ ಮನೆಯನ್ನು ನೀಡಿದ್ದು, ದಿನಾಂಕ: 06.09.19 ರಿಂದ ಸದರಿ ಮನೆಯಲ್ಲಿ ಪಿರ್ಯಾದಿಯವರು ವಾಸವಾಗಿದ್ದು, ದಿನಾಂಕ: 05.11.2019 ರಂದು ಪಿರ್ಯಾದಿಯವರು ತಮ್ಮ ತಾಯಿ ಹಾಗೂ ಗಂಡನೊಂದಿಗೆ ಜೆ.ಎಸ್.ಎಸ್ ಆಸ್ಪತ್ರೆಗೆ ಹೋಗಿದ್ದ ಸಮಯದಲ್ಲಿ ಸದರಿ ಮನೆಗೆ ಶಿವಕುಮಾರ್, ಆತನ ಹೆಂಡತಿ ಸುಧಾ, ಬಸವೇಶ್ @ ನವೀನ್ ಮತ್ತು ಇತರೆ ಇಬ್ಬರು ಅತಿಕ್ರಮ ಪ್ರವೇಶ ಮಾಡಿ ಮೇನ್ ಗೇಟ್, ಮನೆಯ ಮೈನ್ ಡೋರ್, ಮನೆಯ ಒಳಭಾಗದ ಬಾಗಿಲುಗಳನ್ನು ಮುರಿದು, ಮನೆಯಲ್ಲಿಟ್ಟಿದ್ದ ಚಿನ್ನ, ಬೆಳ್ಳಿ, ಬೆಲೆ ಬಾಳುವ ವಸ್ತುಗಳು ಮತ್ತು ಮನೆಯ ರಿಪೇರಿಗಾಗಿ ಇಟ್ಟಿದ್ದ ಸುಮಾರು 1,00,000/- ರೂ ನಗದು ಹಣವನ್ನು ಲೂಟಿ ಮಾಡಿಕೊಂಡು ಹೋಗಿರುವದಲ್ಲದೇ ಸದರಿ ಮನೆಯಲ್ಲಿ ಕಾನೂನು ಬಾಹಿರವಾಗಿ ತಮ್ಮ ವಶಕ್ಕೆ ಪಡೆದುಕೊಂಡಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮ ಚಿನ್ನ, ಬೆಳ್ಳಿ, ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ವಾಪಸ್ಸು ಕೊಡಿಸಿ ಕೊಡುವಂತೆ ನೀಡಿದ ದೂರು.

6

ಸಾಮಾನ್ಯಕಳವು

01

ಕೃಷ್ಣರಾಜ ಠಾಣೆ

ದಿನಾಂಕ ;13/01/2020 ರಂದು 14-15 ಗಂಟೆಯಲ್ಲಿ ಪಿರ್ಯಾದುದಾರರಾದ ಶ್ರೀಮತಿ ರಾಣಿ ಎಂ,ಆರ್, ರವರು ದಿನಾಂಕ:08.01.2020 ರಂದು ನನ್ನ ತಮ್ಮನಿಗೆ ಹುಷಾರಿಲ್ಲದ ಕಾರಣ JSS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಕೊಡಿಸುತ್ತಿದ್ದು ಅವನನ್ನು ನೋಡಿಕೊಳ್ಳಲು ನಾನು ಇದ್ದು ದಿನಾಂಕ:13.01.2020 ರಂದು ಬೆಳಿಗ್ಗೆ 08-45 ರಲ್ಲಿ ಸ್ನಾನ ಮಾಡಲು ಸ್ನಾನದ ರೂಂ ಗೆ ಹೋಗಿ ನನ್ನ ಬಾಬ್ತು ತಾಳಿ ಸಮೇತ 45ಗ್ರಾಂ  ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿಟ್ಟು ಅಲ್ಲಿ ಸ್ನಾನದ ರೂಂನಲ್ಲಿ ಇಟ್ಟಿದ್ದು ಸ್ನಾನ ಮುಗಿಸಿ ನನ್ನ ತಮ್ಮನ ಬೆಡ್ ಹತ್ತಿರ ಹೋಗಿ ನಂತರ ಕೊರಳಿನಲ್ಲಿ ಮಾಂಗಲ್ಯ ಸರ ಇಲ್ಲದಿದ್ದಾಗ ತಕ್ಷಣ ಬಾತ್ ರೂಂಗೆ  ಹೋಗಿ ನೋಡಲಾಗಿ ನನ್ನ ಮಾಂಗಲ್ಯ ಸರವನ್ನು  ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮಾಂಗಲ್ಯ ಸರದ ಒಟ್ಟು  ಅಂದಾಜು ಮೌಲ್ಯ 1,30,000 ರೂ,ಗಳಾಗಿರುತ್ತದೆ. ಆದ್ದರಿಂದ ಕಳ್ಳತನವಾಗಿರುವ ನನ್ನ ಚಿನ್ನದ ಮಾಂಗಲ್ಯ ಸರವನ್ನು  ಪತ್ತೆ ಮಾಡಿಕೊಡಬೇಕೆಂದು ನೀಡಿದ  ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

7

ವಾಹನ ಕಳವು

01

ನಜರ್ ಬಾದ್ ಠಾಣೆ

ಫಿರ್ಯಾದಿ ಸುಧಾಕರ್ ರವರು  ದಿನಾಂಕ:03/01/2020 ರಂದು ಬೆಳಗ್ಗೆ 08-45 ಗಂಟೆಗೆ ನನ್ನ ಹೆಂಡತಿ ಎಂದಿನಂತೆ ಟಿ.ವಿ.ಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ನಲ್ಲಿ ಕಾವೇರಿ ಸಿಲ್ಕ್ ಎಂಪೋರಿಯಂ ಗೆ ಕೆಲಸಕ್ಕೆ ಬಂದು ಸ್ಕೂಟರನ್ನು ಸಂದೇಶ್ ಪ್ರಿನ್ಸ್ ಹೋಟೆಲ್ ಮುಂಭಾಗ ಇರುವ ಕುಪ್ಪಣ್ಣ ಪಾರ್ಕ್ ಕಾಂಪೌಂಡ್ ಬಳಿ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ನಂತರ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 07-00 ಗಂಟೆಗೆ ಬಂದು ಸ್ಕೂಟರ್ ನ್ನು ನೋಡಿದಾಗ ಸ್ಕೂಟರ್ ಇರಲಿಲ್ಲ ಎಂದು ನನಗೆ ತಿಳಿಸಿರುತ್ತಾಳೆ. ನಾವು ಈ ವರೆಗೆ ನನ್ನ ಸ್ಕೂಟರನ್ನು ಟ್ರಾಫಿಕ್ ಪೊಲೀಸ್ ಸ್ಟೇಷನ್ ಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ಎಲ್ಲಿಯೂ ಸಿಗಲಿಲ್ಲ. ನನ್ನ ಸ್ಕೂಟರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಆದ್ದರಿಂದ ಕಳ್ಳತನವಾಗಿರುವ ನನ್ನ ಟಿ.ವಿ.ಎಸ್ ಸ್ಕೂಟಿ ಪೆಪ್ ಪ್ಲಸ್ ನಂ-ಕೆಎ-09 ಹೆಚ್ ಬಿ-3155 ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ; 06-01-2020  ರಂದು  ರಾತ್ರಿ 11:00 ಗಂಟೆ ಸಮಯದಲ್ಲಿ  ಪಿರ್ಯಾದಿ ಶಿವರಾಮೇಗೌಡ ರವರ ಮಗ ಅಭಿಷೇಕ್ ತಮ್ಮ ಮೋ,ಸೈ  ನಂ  ಕೆಎ-54-ಹೆಚ್ -9830  ಇದನ್ನು ಬಸಪ್ಪ ಆಸ್ಪತ್ರೆ ಹತ್ತಿರ ಮೈಸೂರು-ಹುಣಸೂರು  ಮುಖ್ಯರಸ್ತೆ   ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ಧಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ  ಮೋ,ಸೈ ಕೆಎ-03-ಈಎಕ್ಸ್-5490 ಇದರ ಸವಾರ  ಅತೀ ವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಅಭೀಷೇಕ್ ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಅವರ ಬಲಕಾಲಿನ ಮೂಳೆ ಮುರಿದಿದ್ದು ಮೈ-ಕೈಗೆ  ತೀವ್ರ ಪೆಟ್ಟಾಗಿದ್ದ ಅವರನ್ನು ಸ್ನೇಹಿತನ ಸಹಾಯದಿಂದ ಜೆ,ಎಸ್,ಎಸ್,  ಆಸ್ಪತ್ರೆಗೆ ದಾಖಲಿಸಿದ್ದು ,ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ  ಮೋ,ಸೈ ಕೆಎ-03-ಈಎಕ್ಸ್-5490  ಇದರ ಚಾಲಕ  ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ್ದ ಲಿಖಿತ ದೂರಿನ ಮೇರೆಗೆ ಪ್ರ ವ ವರದಿ.

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 13.01.2020 ರಂದು ಸಾಯಂಕಾಲ ಸುಮಾರು 05.15 ಗಂಟೆ ಸಮಯದಲ್ಲಿ ಪಿರ್ಯಾದಿ ಸುನೀಲ್ ರವರು  ತಮ್ಮ ಕೆಎ-55.ಕ್ಯ-.4029 ನಂಬರಿನ ಸುಜುಕಿ ಆಕ್ಸಿಸ್ 125 ಸ್ಕೂಟರ್ ಅನ್ನು ಚಾಲನೆ ಮಾಡಿಕೊಂಡು ಸಿದ್ದಾರ್ಥನಗರ ಜ್ಞಾನ ಮಾರ್ಗ 2 ನೇ ಕ್ರಾಸ್ ಅಲ್ಲಿ ಜ್ಞಾನ ಮಾರ್ಗ ಕಡೆಗಾದಂತೆ ಹೋಗುತ್ತಿರುವಾಗ ಜ್ಞಾನ ಮಾರ್ಗ ವಿನಾಯ ಮಾರ್ಗ ಕಡೆಯಿಂದ  ಎಂ ಎಂ ರಸ್ತೆ ಕಡೆಗಾದಂತೆ ಕೆಎ.04.ಎಂವಿ.9953 ನಂಬರಿನ ಬ್ರಿಜ್ಜಾ ಕಾರ್ ಚಾಲಕನಾದ ಪುನೀತ್ ಕಾರನ್ನು ಬಹಳ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕುಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಸ್ಕೂಟರ್ ಸಮೇತ ರಸ್ತೆ ಮೇಲೆ ಬಿದ್ದು ಅವರ ಎಡಭುಜಕ್ಕೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆ ಸಲುವಾಗಿ ಮಹದೇಶ್ವರ ನರ್ಸಿಂಗ್ ಹೊಂ ಕರೆದುಕೊಂಡು ಹೋಗಿ ದಾಖಲಿಸಿದ್ದು, ನಂತರ ಪಿರ್ಯಾದಿ ಮಹದೇಶ್ವರ ನರ್ಸಿಂಗ್ ಹೊಂ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಸಲುವಾಗಿ ಜೆ ಎಸ್ ಎಸ್ ಆಸ್ಪತ್ರೆಗೆ ಬಂದು ದಾಖಲಾಗಿ ಆಸ್ಪತ್ರೆಯಲ್ಲಿ ಮೇಲ್ಕಂಡ ಕಾರು ಮತ್ತು ಚಾಲಕನಾದ ಪುನೀತ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ.ವ.ವರದಿ.

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ: 11-01-2020 ರಂದು ರಾತ್ರಿ 20-00 ಗಂಟೆ ಸಮಯದಲ್ಲಿ ಪಿರ್ಯಾದಿ ರಾಜಶೇಖರ್ ರವರು ಹೋಂಡಾ ಆಕ್ಟೀವಾ ಸ್ಕೂಟರ್ ನಂ. KA-09-HV-6729 ರಲ್ಲಿ ಕುವೆಂಪುನಗರ, ಉದಯರವಿ ರಸ್ತೆಯಲ್ಲಿ ಶಾಂತಿಸಾಗರ ಕಾಂಪ್ಲೆಕ್ಸ್‌ ಕಡೆಯಿಂದ ಆಂದೋಲನ ಸರ್ಕಲ್‌ ಕಡೆಗೆ ಚಾಲನೆ ಮಾಡಿಕೊಂಡು ಅಮ್ಮ ಕಾಂಪ್ಲೆಕ್ಸ್‌ ಹತ್ತಿರ, ಗೋಲ್ಡ್‌ ಜಿಮ್‌ ಮುಂಭಾಗ ಹೋಗುತ್ತಿದ್ದಾಗ ರಸ್ತೆಯಲ್ಲಿ ಹಳ್ಳ ತೆಗೆದಿದ್ದರಿಂದ ನಾನು ಸ್ಕೂಟರ್‌ಗೆ ಬ್ರೇಕ್‌ ಹಾಕಿ ನಿಧಾನವಾಗಿ ಹೋಗುತ್ತಿದ್ದಾಗ ನನ್ನ ಹಿಂಭಾಗದಿಂದ ಅದೆ ಮಾರ್ಗವಾಗಿ ಹೋಂಡಾಯ್‌ ವರ್ನ ಕಾರ್ ನಂ. KA-09-MA-5328 ಚಾಲಕ ಪವನ ರವರು ವಾಹನದ ಅಂತರವನ್ನು ಕಾಪಾಡಿಕೊಳ್ಳದೆ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಪಿರ್ಯಾದಿ ಸ್ಕೂಟರ್‌ನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯು ಸ್ಕೂಟರ್‌ ಸಮೇತ ಕೆಳಗೆ ಬಿದ್ದರು. ತಕ್ಷಣ ಅಲ್ಲಿನ ಸಾರ್ವಜನಿಕರು ಪಿರ್ಯಾದಿಯನ್ನು ಉಪಚರಿಸಿ, ಡಿಕ್ಕಿ ಮಾಡಿದ ಕಾರಿನಲ್ಲೆ ಚಿಕಿತ್ಸೆಗಾಗಿ ಕಾಮಾಕ್ಷಿ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿಂದ ಅದೆ ದಿನ ಕೆ.ಆರ್.ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದಿದ್ದು, ನೋವು ಜಾಸ್ತಿಯಾದ್ದರಿಂದ ಈ ದಿನ ಜೆ.ಎಸ್‌.ಎಸ್‌.ಆಸ್ಪತ್ರೆಗೆ ಹೋಗಿ ತೋರಿಸಿದಾಗ ಚಿಕಿತ್ಸೆ ಮಾಡುತ್ತಿದ್ದ ಡಾಕ್ಟರ್‌ ಎಕ್ಸರೇ ಮಾಡಿ ನೋಡಿ ಒಂದು ಮೂಳೆ ಜರುಗಿದ್ದು, ಮೂರು ದಿನಗಳವರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯಲು ಸೂಚಿಸಿರುತ್ತಾರೆಂದು ನನ್ನ ಈ ಸ್ಥಿತಿಗೆ ಕಾರಣನಾದ ಹೋಂಡಾಯ್‌ ವರ್ನ ಕಾರ್ ನಂ. KA-09-MA-5328 ಚಾಲಕ ಪವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ಜೆ.ಎಸ್‌.ಎಸ್‌.ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                  MYSURU CITY TRAFFIC VIOLATION CASES

                                                      DATE  :14-01-2020

SLNO

                     HEADS

                 NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

200

4

-

50

254

2

TOTAL NUMBER OF CRR'S

131

161

194

122

115

723

3

TOTAL FINE AMOUNT COLLECTED

25,600

38,200

38,000

19,300

26,300

1,47,400

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

 

-

-

-

-

7

NON FATAL

-

1

-

1

1

3

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

11

Sec 283 IPC CASES

-

-

-

-

 

-

12

Sec 353 IPC CASES

-

-

-

-

 

-

13

TOWING CASES

5

10

7

3

2

27Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®