ENGLISH   |   KANNADA

Blogದಿನಾಂಕ:08.02.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.02.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 180       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

04

ಮೇಟಗಳ್ಳಿ ಠಾಣೆ

ಫಿರ್ಯಾದಿ ಮಂಜುನಾಥ ರವರು ದಿನಾಂಕ: 08/02/2020 ರಂದು ಮದ್ಯಾಹ್ನ 12:15 ರ ಸಮಯದಲ್ಲಿ  DRM ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ   ಮಂಜುನಾಥ್‌ ರವರು ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಸಾರಂಶವೇನೇಂದರೆ, ಚಂದ್ರಕಲಾ ಪ್ಯೂರ್‌ ಸ್ಪಿರಿಟ್‌ನ ಮ್ಯಾನೇಜರ್‌ ಆಗಿದ್ದು ಬಿ.ಎಂ.ಶ್ರೀನಗರದಲ್ಲಿರುವ ಚಂದ್ರಕಲ ರೆಡ್ಡಿ ಬಾರ್‌ನಲ್ಲಿ ದಿನಾಂಕಃ 07/02/2020ರಂದು ಇದ್ದಾಗ ರಾತ್ರಿ ಸುಮಾರು 10-15ಗಂಟೆ ಸಮಯದಲ್ಲಿ ಕುಂಡ ಎಂಬುವನರು ಹರಿದು ಹೋಗಿರುವ ನೋಟನ್ನು ತಂದು ಮದ್ಯ ಕೇಳಿದಾಗ  ಹರಿದು ಹೋಗಿರುವ ನೋಟು ಬದಲು ಬೇರೆ ನೋಟು ಕೊಡಿ ಎಂದು ಹೇಳಿದ್ದಕ್ಕೆ ಬೇರೆ ನೋಟು ಕೊಟ್ಟು ಮದ್ಯ ತೆಗೆದುಕೊಂಡು ಬಾರ್‌ನಲ್ಲಿಯೇ ಕುಡಿಯಲು ಶುರು ಮಾಡಿದಾಗ ಟೈಂ ಆಗಿದೆ ಬಾರ್‌ನಲ್ಲಿ ಕುಡಿಯಲು ಅವಕಾಶ ಇಲ್ಲ ಎಂದು ಹೇಳಿದ್ದಕ್ಕೆ ಜಗಳ ಶುರು ಮಾಡಿ ಕ್ಲೀನರ್ ರಂಗನಾಥ್‌ ನ ಜೊತೆ ಜಗಳ ಮಾಡುತ್ತಿದ್ದಾಗ ಅಲ್ಲಿಗೆ ಬಂದ ರಾಟು ಬಂದು ರಂಗನಾಥ್‌ಗೆ ಕೈಯಿಂದ ಹಲ್ಲೆ ಮಾಡುತ್ತಿದ್ದಾಗ ನಾನು ಸ್ಟಾಲೀನ್, ಮನು, ಮಹದೇವಸ್ವಾಮಿ ಎಲ್ಲರೂ ಸೇರಿ ಜಗಳ ಬಿಡಿಸಿ ಪೊಲೀಸರಿಗೆ ಫೋನ್‌ ಮಾಡುತ್ತಿದ್ದಾಗ ಅವರುಗಳು ನಮ್ಮನ್ನು ಕುರಿತು ನಾಳೆ ನಿಮ್ಮನ್ನು ಉಳಿಸುವುದಿಲ್ಲ, ಈ ಬಾರ್ ನಮ್ಮದೆ ಕಣ್ರೋ ಎಂದು ಬಾಯಿಗೆ ಬಂದಂತೆ ಬೈಯ್ಯುತ್ತಾ ಕೂಗಾಡಿದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ಅಮೂಲ್ ಎಂಬುವನು ಬಾರ್‌ನಲ್ಲಿದ್ದ ಬಿಯರ್ ಬಾಟೆಲ್‌ ಅನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತ ಗಾಯ ಮಾಡಿದನು. ಸ್ಟಾಲೀನ್‌ಗೂ ಸಹ ಹಲ್ಲೆ ಮಾಡಿದ್ದು ಗಾಯವಾಗಿರುತ್ತೆ. ಆಗ ಅಂಗಡಿಯ ಶೆಟರ್‌ ಕ್ಲೋಸ್ ಮಾಡಿದೆವು. ಹೊರಗಡೆಯಿಂದ ಅವರು ಶೆಟರ್‌ಗೆ ಕಲ್ಲುಗಳನ್ನು ಎಸೆದು ಹೊರಗೆ ಬಂದರೆ ನಿಮ್ಮನ್ನು ಸಾಯಿಸುತ್ತೇವೆಂದು ಬೆದರಿಕೆ ಹಾಕುತ್ತಿದ್ದರು. ಪೊಲೀಸರು ಬಂದಾಗ ಅವರು ಓಡಿ ಹೋದರು. ನಮ್ಮ ಮೇಲೆ ಹಲ್ಲೆ ಮಾಡಿ ನಿಂದಿಸಿ, ಜೀವ ಬೆರಿಕೆ ಹಾಕಿದ ಕುಂಡ, ರಾಟು, ಮತ್ತು ಅಮೂಲ್ ಎಂಬುವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ದೂರು.  

ದೇವರಾಜ ಠಾಣೆ

ದಿನಾಂಕ 08.02.2020 ರಂದು ಪಿರ್ಯಾದಿ ನಾಗೇಶ್ ರವರು ಎಂದಿನಂತೆ ಬೋಟಿ ಬಜಾರ್ ರಸ್ತೆಯಲ್ಲಿರುವ ಎಸ್.ಎ.ಎನ್.ಎಸ್.ಟ್ರಾವೆಲ್ಸ್ ನ ಮುಂಭಾಗದಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಬೆಳಿಗ್ಗೆ ಸುಮಾರು 10.00 ಗಂಟೆ ಸಮಯದಲ್ಲಿ ತಮ್ಮ ಆಫೀಸ್ ನ ಎದುರು ಇರುವ ಸಿ.ಸಿ.ಸಿ.ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಾಪ್ ಹಾಗೂ ಶಿವುರವರುಗಳು ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುತ್ತಿದ್ದು ಜಗಳ ಬಿಡಿಸಲು ಹೋದ ಪಿರ್ಯಾದಿಯವರಿಗೆ ಇಬ್ಬರು ಸೇರಿ ನೀನ್ ಯಾರು ಕೇಳೊದಕ್ಕೆ ಎಂದು ಏಕಾಏಕಿ ಪ್ರತಾಪ್ ಎಂಬುವನು ಕೈಯಲ್ಲಿದ್ದ ಕೀ ಬಂಚ್ ನಿಂದ ಪಿರ್ಯಾದಿಯವರ ಕಣ್ಣಿಗೆ ಹೊಡೆದು ಗಾಯವನ್ನುಂಟು ಮಾಡಿದ್ದು. ಸದರಿಯವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

ಉದಯಗಿರಿ ಠಾಣೆ

ದಿನಾಂಕ: 03/02/2020 ರಂದು ರಾತ್ರಿ ಸುಮಾರು 9-45 ಗಂಟೆಯಲ್ಲಿ ಪಿರ್ಯಾದಿ ನಯನ ಮತ್ತು ಅವರ ಮಗ ಮನೆಯಲ್ಲಿದ್ದಾಗ ಇಂದ್ರ ಮತ್ತು ದಿನೇಶ್ ಎಮಬುವವರು ಪಿತ್ರಾರ್ಜಿತಾ ಆಸ್ತಿಯ ವಿಚಾರವಾಗಿ ಬಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇಂದ್ರ ಏಕಾಏಕಿ ಪಿರ್ಯಾದಿಯ ಮುಂದಲೆ ಜುಟ್ಟು ಹಿಡಿದು ಎಳೆದಾಡಿ, ಮೈಕೈಗೆ ಹೊಡೆದು ನೋವುಮಟು ಮಾಡಿದ್ದು, ಅಷ್ಟರಲ್ಲಿ ಪಿರ್ಯಾದಿಯ ಗಂಡ ಶಿವರಾಜ್ ಜಗಳ ಬಿಡಿಸಲು ಬಂದಿದ್ದು, ಆತನಿಗೂ ಸಹ ಇಂದ್ರ ಮತ್ತು ದಿನೇಶ್ ರವರುಗಳು ಸೇರಿಕೊಂಡು ಕೈಗಳಿಂದ ಹೊಡೆದು ನೋವುಮಟು ಮಾಡಿರುತ್ತಾರೆ. ಮತ್ತೊಂದು ಸಲ ಮನೆ ವಿಚಾರಕ್ಕೆ ಬಂದರೆ ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಸದರಿಯವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಕುವೆಂಪುನಗರ ಠಾಣೆ

ದಿ:07/02/2020 ರಂದು ಸಂಜೆ 1900 ಗಂಟೆ ಸಮಯದಲ್ಲಿ ಪಿರ್ಯಾದಿ   ತೇಜ ರವರ   ಗಂಡ ನಾಗೇಂದ್ರ, ವಿವಾಹ ವಿಚ್ಚೇದನಕ್ಕೆ ಸಂಬಂಧಿಸಿದಂತೆ, ಶ್ರೀರಾಂಪುರ 2ನೇ ಹಂತ, ಬಿಇಎಂಎಲ್ ಬಡಾವಣೆಯಲ್ಲಿರುವ  ಪಿರ್ಯಾದಿ ಮಾಲೀಕತ್ವದ ಬ್ಯಾಂಗಲ್ಸ್ ಸ್ಟೋರ್ ಒಳಗೆ ಬಂದು, ಪಿರ್ಯಾದಿ ಜೊತೆ ಗಲಾಟೆ ಮಾಡಿ, ಪಿರ್ಯಾದಿ ಮುಂದೆ ಹೋಗದಂತೆ ತಡೆದು, ಕೊಲೆ ಬೆದರಿಕೆ ಹಾಕಿದ್ದು  ನಾಗೇಂದ್ರರವರ ವಿರುದ್ದ  ಕಾನೂನು ಕ್ರಮ ಜರುಗಿಸುವಂತೆ ಈ ದಿನ ಠಾಣೆಗೆ ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಹೆಬ್ಬಾಳ ಠಾಣೆ

ದಿ:21.01.2020 ರಂದು  ರಾತ್ರಿ  ಸುಮಾರು 2230 ಗಂಟೆಯ ಸಮಯದಲ್ಲಿ  ಪಿರ್ಯಾದಿ ವಿಕಾಸ ಗುರುನಾಥ ರವರು ಸುಬ್ರಹ್ಮಣ್ಯ ನಗರ ಹೆಬ್ಬಾಳ ದಲ್ಲಿರುವ ವಾಸವಾಗಿರುವ ಮನೆಯ ಕಾಂಪೌಂಡ್ ನ  ಹೊರಬಾಗದಲ್ಲಿ ತಮ್ಮ    ಯಮಾಹ  ಕಂಪನಿಯ  RX-135 CC  ಬೈಕ್  ಇದರ  ನೊಂದಣಿ  ಸಂಖ್ಯೆ  KA-03, HX-7487   ಬೈಕ್ ಗೆ  ಬೀಗ ಹಾಕಿ  ನಿಲ್ಲಿಸಿದ್ದು  ನಂತರ  ದಿ:22.01.2020  ರಂದು  ಬೆಳಿಗ್ಗೆ  ಸುಮಾರು 10.30 ಗಂಟೆಯ  ಸಮಯದಲ್ಲಿ     ಬೈಕ್  ಅನ್ನು  ನೋಡಲಾಗಿ  ಕಾಣದೇ  ಇದ್ದಾಗ  ಇವರು  ಎಲ್ಲಾ ಕಡೆ ಹುಡುಕಿ  ಎಲ್ಲೂ     ಬೈಕ್ ಪತ್ತೆಯಾಗದ  ಕಾರಣ  ಕಳ್ಳತನ ವಾಗಿರುವ    ತಮ್ಮ   ಬೈಕ್ ಅನ್ನು  ಪತ್ತೆ ಮಾಡಿಕೊಡುವಂತೆ  ಕೋರಿ  ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ  ದೂರು.

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ 07/02/2020 ರಂದು ಬೆಳಿಗ್ಗೆ  ಸುಮಾರು 10.30  ಗಂಟೆಯಲ್ಲಿ ಪಿರ್ಯಾದಿ ಶ್ರೀನಿವಾಸ ರವರ ತಂದೆಯಾದ ರಮೇಶರವರು ಬೈಸಿಕಲನ್ನು ಚಾಲನೆ  ಮಾಡಿಕೊಂಡು ಸಯ್ಯಾಜಿರಾವ್ ರಸ್ತೆಯಲ್ಲಿ ಆರ್ ಎಂ ಸಿ ಮಾರ್ಕೆಟ್ ಕಡೆಯಿಂದ ಮಿಷನ್ ಆಸ್ಪತ್ರೆ ಕಡೆಗೆ ಹೋಗುತ್ತಿದ್ದಾಗ; ಇದೇ ವೇಳೆಗೆ ಮೋಟಾರ್ ಸೈಕಲ್ ನಂಬರ್ KA-09 K-1332 ರ ಸವಾರ ಮೋಟಾರ್ ಸೈಕಲನ್ನು ಪಂಚಮುಖಿ ಗಣಪತಿ ದೇವಸ್ಥಾನದ ಕಡೆಯಿಂದ ಡಫ್ & ಡಮ್ ಸ್ಕೂಲ್ ಜಂಕ್ಷನ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ತಂದೆಯವರ ಬೈಸಿಕಲ್ ಗೆ ಢಿಕ್ಕಿ ಮಾಡಿದಾಗ ಬೈಸಿಕಲ್ ಸಮೇತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದವರನ್ನು ಅಲ್ಲಿದ್ದವರು ಎತ್ತಿ ಉಪಚರಿಸಿ ಚಿಕಿತ್ಸೆಗೆ ಕೆ ಆರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು; ಪಿರ್ಯಾದುದಾರರ ತಂದೆ ಅಪಘಾತ ನಡೆದ ಗಾಬರಿಯಲ್ಲಿ ಢಿಕ್ಕಿ ಮಾಡಿದ ಮೋಟಾರ್ ಸೈಕಲ್ ಸವಾರನ ಹೆಸರು ತಿಳಿದುಕೊಂಡಿರುವುದಿಲ್ಲ. ಪಿರ್ಯಾದಿಯವರು ಅವರ ತಂದೆ ರಮೇಶರವರಿಗೆ  ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಅಪಘಾತ ಮಾಡಿರುವ ಮೋಟಾರ್ ಸೈಕಲ್ ಸವಾರನ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರವ ವರದಿ.

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ:-08-02-2020 ರಂದು ಮದ್ಯಾಹ್ನ ಸುಮಾರು 01.00 ಗಂಟೆ ಸಮಯದಲ್ಲಿ ಪಿರ್ಯಾದಿ ಶೇಷಾದ್ರಿ ರವರು  ಸ್ನೇಹಿತರಾದ ಒಬೇದ್ ಜಯಪ್ರಸಾದ್ ರವರು ಹೋಂಡಾ ಆಕ್ಟೀವಾ ಸ್ಕೂಟರ್ ನಂಬರ್ KA-09 HH-6648 ನ್ನು ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಕಿವುಡು-ಮೂಗರ ಶಾಲೆ ಕಡೆಯಿಂದ ಹಳೇ ಆರ್.ಎಂ.ಸಿ ವೃತ್ತದ  ಕಡೆಗೆ ಚಾಲನೆ ಮಾಡಿಕೊಂಡು ಎಸ್.ಬಿ.ಐ ಬ್ಯಾಂಕ್ ಎದುರು ಹೋಗುತ್ತಿದ್ದಾಗ ಇದೇ ವೇಳೆಗೆ ಹಿಂಭಾಗದಿಂದ ಟಿಪ್ಪರ್ ಲಾರಿ ನಂಬರ್ KA-03-D-5481 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಓಬೇದ್ ಜಯ ಪ್ರಸಾದ್ ರವರ ಸ್ಕೂಟರ್ ಹಿಂಭಾಗಕ್ಕೆ ಡಿಕ್ಕಿಮಾಡಿ ಬೀಳಿಸಿದಾಗ ಸ್ಕೂಟರ್ ಎಡಭಾಗಕ್ಕೆ ಬಿದ್ದಿದ್ದು, ಓಬೇದ್ ಜಯ ಪ್ರಸಾದ್ ರವರು ಬಲಭಾಗಕ್ಕೆ ಬಿದ್ದಾಗ ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲುಕಿ ಒಬೇದ್ ಜಯ ಪ್ರಸಾದ್ ರವರ ತಲೆಯು ಜಜ್ಜಿದಂತಾಗಿ ಮೆದುಳು ಮಾಂಸ ಹೊರಬಂದು ರಕ್ತ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಆದುದರಿಂದ ಈ ಅಪಘಾತಕ್ಕೆ  ಕಾರಣನಾದ ಟಿಪ್ಪರ್ ಲಾರಿ ನಂಬರ್ KA-03-D-5481 ರ ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರನ್ನು ಸ್ವೀಕರಿಸಿ ಠಾಣಾ  ಮೊ ನಂ:13/2020, ಕಲಂ:279,  304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.

ಸಿದ್ಧಾರ್ಥನಗರ ಸಂಚಾರ ಠಾಣೆ

ಫಿರ್ಯಾದಿ ಜ್ಯೋತಿಷ ರವರು ದಿನಾಂಕ 08.02.2020 ರಂದು ಬೆಳಿಗ್ಗೆ ಸುಮಾರು 09.00 ಗಂಟೆ ಸಮಯದಲ್ಲಿ ನಂದನ ರವರು ತಮ್ಮ ಕೆಎ.55.ಡಬ್ಲೂ. 3311 ನಂಬರಿನ ಪಲ್ಸರ್ ಮೋಟಾರ್ ಸೈಕಲ್ ಅನ್ನು ಚಾಮುಂಡಿ ವಿಹಾರ್ ಸ್ಟೆಡಿಯಂ ರಸ್ತೆ ನಜರ್ ಬಾದ್ ಕಡೆಯಿಂದ ಡಿಪಿಒ ವೃತ್ತದ ಕಡೆಗದಂತೆ ಚಾಮುಂಡಿ ಸ್ಟೆಡಿಯಂ ಗೇಟ್ ಮುಂದೆ ರಸ್ತೆ ಮದ್ಯದಲ್ಲಿ ಸವಾರಿ  ಮಾಡಿಕೊಂಡು ಹೋಗುತ್ತಿರುವಾಗ  ಎದುರುಕಡೆಯಿಂದ ಅಂದರೆ ಡಿಪಿಒ ವೃತ್ತದ ಕಡೆಯಿಂದ ಕೆಎ.09.ಎಂಡಿ.0380 ನಂಬಿರನ ಕಾರ್ ಚಾಲಕರಾದ ಗಣೇಶ ನಾಯಕ ರವರು ಚಾಲನೆ ರಸ್ತೆ ಮದ್ಯದಲ್ಲಿ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್ ಮತ್ತು ಕಾರು ರಸ್ತೆ ಮದ್ಯದಲ್ಲಿ ಕಾರು ಮತ್ತು ಮೋಟಾರ್ ಸೈಕಲ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೊಟಾರ್ ಸೈಲಕಲ ಸವಾರ ಮೇಲಕ್ಕೆ ಹಾರಿ ರಸ್ತೆ ಮೇಲೆ ಬಿದ್ದ ಪರಿಣಾಮ ನಂದನರವರಿಗೆ ಬಲಕಾಲಿಗೆ ಮತ್ತು ಬೆನ್ನಿಗೆ ಪೆಟ್ಟಾಗಿತ್ತು. ಅಪಘಾತದಿಂದ  ಎರಡು ವಾಹನಗಳು ಜಖಂಗೊಂಡಿದ್ದವು, ಗಾಯಾಳು ನಂದನರವರನ್ನು ಚಿಕಿತ್ಸೆ ಸಲುವಾಗಿ ಗೋಪಾಲಗೌಡ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ನಂತರ ಪಿರ್ಯಾದಿ ಠಾಣೆಗೆ ಹಾಜರಾಗಿ ಈ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ 

10

ವಂಚನೆ ಪ್ರಕರಣ 

01

ವಿಜಯನಗರ ಠಾಣೆ

ದಿನಾಂಕ 08/02/2020 ರಂದು 15-00 ಗಂಟೆಯಲ್ಲಿ ಪಿರ್ಯಾದುದಾರರಾದ ಕಾರ್ತಿಕ್ ರವರು ಮಾಂಡೋವಿ ಮೋಟಾರ್ಸ್ ಪ್ರೈ ಲಿ, ಟ್ರೂ ವಾಲ್ಯೂ ಡಿಪಾರ್ಟ್ ಮೆಂಟ್ ನಲ್ಲಿ ಅಸಿಸ್ಟಂಟರ್ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ 31/01/2020 ರಂದು ಮಧ್ಯಾಹ್ನ ಸುಮಾರು 03-50 ಗಂಟೆಯಲ್ಲಿ ಸುಮಾರು 35 ರಿಂದ 38 ವರ್ಷದ ಇಬ್ಬರು ಅಪರಿಚಿತ ಇರಾನಿ ಪ್ರಜೆಗಳೆಂತೆ ಕಾಣುವ ಆಸಾಮಿಗಳು ಟ್ರೂ ವಾಲ್ಯೂ ಗೆ ಬಂದು ನಮ್ಮ ಬಳಿ ಒಂದು ವಿಗ್ರಹವನ್ನು ಖರೀದಿ ಮಾಡಿದರು. ನಂತರ ತಮಗೆ 2018 ನೇ ಇಸವಿಯ 2000/- ರೂ ಮುಖ ಬೆಲೆಯ ನೋಟು ಬೇಕಾಗಿದೆ ಎಂದು ತಿಳಿಸಿದರು. ಅಗ ನಾನು ಕ್ಯಾಷ್ ಕ್ಯಾಬೀನ್ಗೆ ಹೋದಾಗ ಅವರಿಬ್ಬರು ನನ್ನನ್ನು ಹಿಂಬಾಲಿಸಿಕೊಂಡು ಬಂದರು. ನಾನು ನೋಟ್ ಅನ್ನು ಹುಡುಕುತ್ತಿದ್ದಾಗ ಅವರು ಸಹ 2018ನೇ ಇಸವಿಯ ನೋಟನ್ನು ಹುಡುಕುವ ನೆಪದಲ್ಲಿ ನನ್ನ ಬಳಿಯಿಂದ ನೋಟುಗಳನ್ನು ಪಡೆದು, ಪರಿಶೀಲನೆ ಮಾಡಿ, ಹಣವನ್ನು ವಾಪಾಸ್ಸು ಕೊಟ್ಟು ಅವರು ಹೊರಟು ಹೋದರು. ಸ್ವಲ್ಪ ಸಮಯದ ನಂತರ ನನಗೆ ಅನುಮಾನ ಬಂದು, ಸ್ಟೇಟ್ಮೆಂಟ್ ನೋಡಿದಾಗ 2000/- ರೂ ಮುಖ ಬೆಲೆಯ 63 ನೋಟುಗಳು ಕಡಿಮೆ ಇರುವುದು ಕಂಡು ಬಂತು. ಸದರಿ ಇಬ್ಬರು ಅಪರಿಚಿತ ಆಸಾಮಿಗಳು ನನ್ನ ಗಮನವನ್ನು ಬೇರೆಡೆ ಸೆಳೆದು 2000/- ರೂ ಮುಖ ಬೆಲೆಯ 63 ನೋಟುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಮ್ಮ ಕಛೇರಿಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ದೂರು ನೀಡುತ್ತಿದ್ದು, ಇಬ್ಬರು ಅಪರಿಚಿತ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

11

ಮನುಷ್ಯ  ಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                               MYSURU CITY TRAFFIC VIOLATION CASES

                                             DATE  :08-02-2020

SLNO

                  HEADS

                                  NO. OF CASES

DR

KR

NR

SN

VV

TOTAL

1

TOTAL NUMBER OF FTVRS

236

100

39

-

158

533

2

TOTAL NUMBER OF CRR'S

472

171

228

545

440

1,856

3

TOTAL FINE AMOUNT COLLECTED

1,03,000

34,700

48,400

82,100

84,000

3,52,200

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

1

-

-

1

7

NON FATAL

-

-

1

1

-

2

8

INTERCEPTOR CASES

-

90

110

-

92

292

9

SUSPENSION OF D.L.

-

-

 

-

-

-

11

Sec 283 IPC CASES

-

-

 

-

-

-

12

Sec 353 IPC CASES

-

-

 

-

-

-

13

TOWING CASES

-

12

2

7

17

38Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®