ENGLISH   |   KANNADA

Blogದಿನಾಂಕ:10.02.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.02.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 186       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ವಿಜಯನಗರ ಠಾಣೆ.

ಪಿರ್ಯಾದಿ ಪುಟ್ಟಸ್ವಾಮಿಗೌಡ ರವರು ಎಸ್.ವಿ.ಇ.ಐ ಶಾಲೆಯಲ್ಲಿ ಮುಖ್ಯ ಆಢಾಳಿತಾಧಿಕಾರಿಗಳಾಗಿದ್ದು,ದಿ:08.02.2020 ರಂದು ಸಂಜೆ 4-30 ಗಂಟೆ ಸಮಯದಲ್ಲಿ ತರಗತಿಗಳನ್ನು ಕ್ಲೋಸ್ ಮಾಡಿ, ಕಛೇರಿ ಬೀಗ ಹಾಕಿಕೊಂಡು ಹೋಗಿದ್ದು, ದಿ:10.02.2020 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಶಾಲೆಗೆ ಬಂದು ನೋಡಿದಾಗ ಶಾಲಾ ಕಛೇರಿಯ ಹಿಂಬದಿಯ ಕಿಟಕಿಯ 03 ಸರಳುಗಳನ್ನು ಮುರಿದು, ಸ್ವಲ್ಪ ಹಣ, ಎನ್.ವಿ.ಆರ್ ಮತ್ತು ಸ್ವಿಚ್  ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಮೊತ್ತ 22,000/-ರೂಗಳಿಗೂ ಮೇಲಾಗಿರುತ್ತದೆಂದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು.

6

ಸಾಮಾನ್ಯಕಳವು

01

ಮಂಡಿ ಠಾಣೆ.

ದಿ:09.02.2020 ರಂದು ಫಿರ್ಯಾದಿ ಮಹೇಶ, ಹೆಚ್ ಸಿ-590,  ಗರುಡಾ-4 ವಾಹನದಲ್ಲಿ ಕರ್ತವ್ಯಕ್ಕೆ ನೇಮಕವಾಗಿದ್ದು, ಅದರಂತೆ ಗರುಡಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್  ಮಾಡಿಕೊಂಡು ಮಧ್ಯರಾತ್ರಿ 02.15 ಗಂಟೆಯಲ್ಲಿ ಎಸ್.ಅರ್ ರಸ್ತೆ ಹೈವೇ ಸರ್ಕಲ್ ನಿಂದ ಕಿವುಡು ಮೂಗರ ಶಾಲೆ ಕಡೆ ರೌಂಡ್ಸ್ ಮಾಡಿಕೊಂಡು ಹೋಗುತ್ತಿದ್ದಾಗ ಕನ್ನಿಕಾಂಭ ವೇ ಬ್ರಿಡ್ಜ್ ಮುಂದೆ ನಿಂತಿದ್ದ ಲಾರಿ ಬಳಿ ನಾಲ್ಕು ಜನ ಆಸಾಮಿಗಳು ಬ್ಯಾಟರಿಗಳನ್ನು ಬಿಚ್ಚುತ್ತಿರುವುದು ಕಂಡು ಬಂದಿದ್ದು ಹತ್ತಿರ ಹೋಗುವಷ್ಟರಲ್ಲಿ ಗರುಡಾ ವಾಹನವನ್ನು ನೋಡಿ ಆ ನಾಲ್ಕು ಜನ ಆಸಾಮಿಗಳು ತಾವು ತಂದಿದ್ದ ಆಟೋರಿಕ್ಷಾ ನಂ.ಕೆಎ-09 5714 ಅನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ.  ಲಾರಿಯಲ್ಲಿ ಬ್ಯಾಟರಿ ಕಳ್ಳತನ ಮಾಡಲು ಬಂದಿದ್ದ ಪ್ಯಾಸೆಂಜರ್ ಆಟೋರಿಕ್ಷಾವನ್ನು ಬೆಳಗಿನ ಜಾವ 3.00 ಗಂಟೆಗೆ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ದೂರು.

7

ವಾಹನ ಕಳವು

02

ನರಸಿಂಹರಾಜ ಠಾಣೆ.

ಪಿರ್ಯಾದಿ ಜೊನ್ನಾಲ ಸಾಯಿ ಕಿಶೋರ ರೆಡ್ಡಿ, #336, 07 ನೇ ಮುಖ್ಯ ರಸ್ತೆ, ಹನುಮಂತರನಗರ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  AP-26 BB-9554 ನಂಬರಿನ ಕಪ್ಪು ಮತ್ತು ಬಿಳಿ ಬಣ್ಣದ KTM  DUKE 200 ಬೈಕ್ ಅನ್ನು ದಿಃ-17.01.2020 ರಂದು ರಾತ್ರಿ ಸುಮಾರು 11-45 ಗಂಟೆಯಲ್ಲಿ ತಮ್ಮ  ಮನೆಯ ಮುಂದೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದು, ಮತ್ತೆ ದಿ.18.01.2020 ರಂದು ಬೆಳಗ್ಗೆ ನೋಡಲಾಗಿ ನನ್ನ ಬೈಕ್ ಕಾಣಲಿಲ್ಲ. ನಂತರ ನಾನು ಅಕ್ಕಪಕ್ಕದ ರಸ್ತೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಆದ್ದರಿಂದ ಸದರಿ ಬೈಕನ್ನು ಪತ್ತೆ ಮಾಡಿಕೊಡಲು ನೀಡಿದ ದೂರು.

 

ವಿ ವಿ ಪುರಂ ಠಾಣೆ.

ದಿನಾಂಕ:10.02.2020  ರಂದು 16.00  ಗಂಟೆ ಸಮಯದಲ್ಲಿ ಪಿರ್ಯಾದಿ ಪ್ರಜ್ವಲೇಶ್ ರವರು ಠಾಣೆಗೆ ಹಾಜರಾಗಿ  ನೀಡಿದ ದೂರೆಂದರೆ,  ದಿನಾಂಕ:08.02.2020 ರಂದು ಬೆಳಗಿನ ಜಾವ ಟಿ.ವಿ.ಎಸ್ ಜುಪಿಟರ್ ಸ್ಕೂಟರ್ ನಂ. KA-45 EB-1080   ರಲ್ಲಿ  ಸುಮಾರು 03.30 ಗಂಟೆ ಸಮಯದಲ್ಲಿ ವಾಲ್ಮೀಕಿ ರಸ್ತೆಯ 1 ನೇ ಮೈನ್ ನಲ್ಲಿ  ತಮ್ಮ  ಸ್ಕೂಟರ್ ನ್ನು ನಿಲ್ಲಿಸಿ ಸ್ವಲ್ಪ ದೂರ ಹೋಗಿ ಮೂತ್ರ ವಿಸರ್ಜನೆ ಮಾಡಿ ವಾಪಸ್ ಬರುವಷ್ಟರಲ್ಲಿ ಯಾರೋ ನನ್ನ ಸ್ಕೂಟರ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ  ಸ್ಕೂಟರ್  ಬೆಲೆ.45.000/-ರೂ ಆಗಿದ್ದು ಪತ್ತೆ ಮಾಡಿ  ಬೈಕ್ ನ್ನು ನನಗೆ ಕೊಡಿಸಬೇಕೆಂದು ನೀಡಿದ ದೂರು. 

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ದಿವ್ಯ, #604, 02 ನೇ ಕ್ರಾಸ್, ಯರಗನಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ಆರೋಪಿ-1 ಮಂಜುನಾಥ್ ರವರನ್ನು ದಿ:22.06.2016 ರಂದು ಗುರುಹಿರಿಯರ ಸಮಕ್ಷಮ ಮದುವೆಯಾಗಿರುತ್ತಾರೆ. ಮದುವೆಯಾದ ಸ್ವಲ್ಪ ದಿನಗಳ ಕಾಲ ಅನ್ಯೋನ್ಯತೆಯಿಂದ ಇದ್ದು, ನಂತರದ ದಿನಗಳಲ್ಲಿ ಆರೋಪಿ-1, ಆರೋಪಿ-2 ನಿಂಗರಾಜು, ಆರೋಪಿ-3 ಪ್ರೇಮ, ಆರೋಪಿ-4 ಲಿಲಾವತಿ, ಆರೋಪಿ-5 ಕೆಂಡಗಣ್ಣಸ್ವಾಮಿ ರವರುಗಳು ಫಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆಯಾಗಿ 5 ಲಕ್ಷ ರೂಪಾಯಿ ಹಣವನ್ನು ತರುವಂತೆ ಹಾಗೂ ತವರು ಮನೆಯ ಆಸ್ತಿಯನ್ನು ಆರೋಪಿ-1 ರವರ ಹೆಸರಿಗೆ ಬರೆಯಿಸಿಕೊಂಡು ಬರುವಂತೆ ಹಿಂಸೆ ನೀಡಿ ಹಲವಾರು ಬಾರಿ ಹಲ್ಲೆ ನಡೆಸಿದ್ದು, ನಂತರ ಪಿರ್ಯಾದಿಗೆ ಮಗುವಾದಾಗಲೂ ಸರಿಯಾಗಿ ನೊಡಿಕೊಳ್ಳದೇ, ದಿ:20.12.2018 ರಂದು ಆರೋಪಿ-1,2,3,4,5 ರವರುಗಳು ಪಿರ್ಯಾದಿಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಕಳುಹಿಸಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.            

 

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ:-10.02.2020 ರಂದು ಸಂಜೆ 4.30 ಗಂಟೆಯಲ್ಲಿ ಪಿರ್ಯಾದಿ ಹೇಮಂತ್ ರವರ  ತಂದೆ ಸಿದ್ದರಾಮು ರವರು ಕೆಎ.12.ಹೆಚ್.7941 ನಂಬರಿನ ಟಿವಿಎಸ್ ಅಪ್ಪಾಚೆ ಮೋಟಾರ್ ಸೈಕಲ್ ಅನ್ನು ಕೆಪಿಎ ರಸ್ತೆಯಲ್ಲಿ ಪೋರಂ ಮಾಲ್ ಕಡೆಯಿಂದ ಡಿಪಿಓ ಸರ್ಕಲ್ ಕಡೆಗೆ ಸವಾರಿ ಮಾಡಿಕೊಂಡು ಕೆಪಿಎ ಗೇಟ್ ಮುಂದೆ ಬರುತ್ತಿದ್ದ ವೇಳೆ ಎದುರಿನಿಂದ ಅಂದರೆ ಡಿಪಿಓ ಸರ್ಕಲ್ ಕಡೆಯಿಂದ ಕೆಎ.55.5031 ನಂಬರಿನ ಪ್ಯಾಸೆಂಜರ್ ಆಟೋರಿಕ್ಷಾ ಅನ್ನು ಅದರ ಚಾಲಕ ತುಂಬಾವೇಗವಾಗಿ & ನಿರ್ಲಕ್ಷತೆಯಿಂದ ರಸ್ತೆಯ ತೀರಾ ಬಲಕ್ಕಾದಂತೆ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ತಂದೆಯ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಸಿದ್ದರಾಮು ರವರು ವಾಹನ ಸಮೇತ ರಸ್ತೆ ಮೇಲೆ ಬಿದ್ದು ಎರಡೂ ಕೈಗಳಿಗೆ & ಬಲಕಾಲಿಗೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆಗೆ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ್ದು  ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಪ್ಯಾಸೆಂಜರ್ ಆಟೋರಿಕ್ಷಾ & ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.    

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯ  ಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

01

ವಿದ್ಯಾರಣ್ಯಪುರಂ ಠಾಣೆ.

ದಿ;10-02-2020 ರಂದು ಬೆಳಿಗ್ಗೆ 7-05 ಗಂಟೆಯಲ್ಲಿ ವೆಂಕಟೇಶ, 28 ವರ್ಷ ರವರು ಕೆ ಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಎಂ.ಎಲ್‌.ಸಿ ಮೆಮೋವನ್ನು ದಿ;09-02-2020 ರಂದು ನೀಡಿದ್ದು ಪರಿಶೀಲಿಸಲಾಗಿ ವೆಂಕಟೇಶ ಬಿನ್‌‌ ಪುಟ್ಟಣ್ಣ, 28 ವರ್ಷ, ಹೊಸಹಳ್ಳಿ, ಚನ್ನಪಟ್ಟಣ ತಾಲ್ಲೂಕು, ರವರು ದಿನಾಂಕ;08-02-2020 ರಂದು ಸ್ಟರ್ಲಿಂಗ್‌ ಚಿತ್ರಮಂದಿರದ ಹತ್ತಿರ ಕೆಲಸ ಮಾಡುವ ಸ್ಥಳದಲ್ಲಿ ಎತ್ತರದ ಸ್ಥಳದಿಂದ ಬಿದ್ದು ಪೆಟ್ಟಾಗಿ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸುವ ಬಗ್ಗೆ.

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

MYSURU CITY TRAFFIC VIOLATION CASES

DATE  :10-02-2020

SLNO

HEADS

                                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

226

238

220

88

156

928

2

TOTAL NUMBER OF CRR'S

554

277

245

134

398

1,608

3

TOTAL FINE AMOUNT COLLECTED

95,000

49,600

56,300

27,200

74,600

3,02,700

4

POLICE NOTICE ISSUED

-

 

 

-

 

-

5

PARKING TAGS

-

/

 

-

 

-

6

FATAL

-

 

 

-

 

-

7

NON FATAL

-

 

 

-

 

-

8

INTERCEPTOR CASES

-

-

100

-

90

190

9

SUSPENSION OF D.L.

-

-

 

-

 

-

11

Sec 283 IPC CASES

-

-

 

-

 

-

12

Sec 353 IPC CASES

-

-

 

-

 

-

13

TOWING CASES

-

2

6

3

17

28Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®