ENGLISH   |   KANNADA

Blogದಿನಾಂಕ:11.02.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.02.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 193       No of Comments: 0

1

ಕೊಲೆ ಪ್ರಕರಣ

01

ಉದಯಗಿರಿ ಠಾಣೆ.

ಪಿರ್ಯಾದಿ ಫೌಜಿಯಾ, #365, 13 ನೇ ಕ್ರಾಸ್, ಗೌಸಿಯಾ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 11/02/2020 ರಂದು ಬೆಳಿಗ್ಗೆ 5-00 ಗಂಟೆಗೆ ಪಿರ್ಯಾದಿಯ ಗಂಡನಾದ ಸಲೀಂ 50 ವರ್ಷದವರು ಎದ್ದು ನಮಾಜ್ ಮಾಡಲು ಮಸೀದಿಗೆ ಹೋಗಲು ಮನೆ ಒಳಗೆ ಬಂದು ಅವರ ಮಗಳಾದ ಹಸೀನಾಳಿಗೆ ನಿನ್ನ ಗಂಡ ನದೀಂ ಅಹಮದ್ ಖಾನ್ ಬಂದು ಮನೆಯ ಹೊರಗೆ ಕುಳಿತ್ತಿದ್ದಾನೆಂದು ಹೇಳಿ ಮುಖ ತೊಳೆದುಕೊಂಡು ನಮಾಜ್ ಗೆ ಹೋಗಲು ಮನೆಯಿಂದ ಹೊರಗೆ ಹೋದರು. ಸ್ವಲ್ಪ ಹೊತ್ತಲೇ ಹೊರಗೆ ಜೋರಾಗಿ ಕೂಗಾಟ ಕೇಳಿಸಿ ಪಿರ್ಯಾದಿ ಮತ್ತು ಅವರ ಮಗಳು ಹಸೀನಾ ಮತ್ತು ಮೌಸಿನಾ ಮನೆಯ ಹೊರಗಡೆ ಬಂದು ನೋಡಿದಾಗ ಪಿರ್ಯಾದಿಯ ಗಂಡ ಸಲೀಂ ರವರು ಪಿರ್ಯಾದಿಯ ಅಳಿಯ ನದೀಂ ಅಹಮದ್ ಖಾನ್ ಗೆ ಚಾಕುವನ್ನು ಏಕೆ ತಂದಿದ್ದೀಯಾ ಎಂದು ಕೇಳಿದ್ದು, ಅದಕ್ಕೆ ಆತನ ನಿನ್ನ ಮಗಳ ಮೇಲೆ ನನಗೆ ಅನುಮಾನ ಇದೆ, ಅವಳು ಒಳ್ಳೆಯ ನಡತೆಯವಳಲ್ಲ ಮನೆ ಬಿಟ್ಟು ಬಂದು 4 ದಿನ ಆಗಿದೆ. ಗಂಡನನ್ನು ಸರಿಯಾಗಿ ನೋಡಿ ಕೊಳ್ಳುವುದಿಲ್ಲ. ಅವಳನ್ನು ಇವತ್ತು ಕೊಲ್ಲದೇ ಬಿಡುವುದಿಲ್ಲವೆಮದು ಕೂಗಡಾಡುತ್ತಾ ಮನೆಯ ಒಳಗಡೆ ನುಗ್ಗಲು ಪ್ರಯತ್ನಿಸಿದ್ದವನನ್ನು ಪಿರ್ಯಾದಿಯ ಗಂಡ ಮನೆಯಿಂದ ಸ್ವಲ್ಪ ದೂರಕ್ಕೆ ಎಳೆದುಕೊಂಡು ಹೋಗಿದ್ದು, ಆಗ ಪಿರ್ಯಾದಿಯ ಅಳಿಯ ಪಿರ್ಯಾದಿಯ ಗಂಡನಿಗೆ ನಿನ್ನಿಂದಲ್ಲೇ ಹಸೀನಾ ಹೆಚ್ಚಿಕೊಂಡಿರುವುದು. ನೀನು ಇದ್ದರೆ ತಾನೇ ಅವಳಿಗೆ ಸಪೋರ್ಟ ಮಾಡುವುದು ಮೊದಲು ನಿನ್ನನ್ನೇ ಮುಗಿಸುತ್ತೇನೆಂದು ಅವರ ಮೇಲೆ ಕೂಗಾಡುತ್ತಾ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿಯ ಗಂಡ ಸಲೀಂ ರವರ ಎಡಭಾಗದ ಕತ್ತಿನ ಮೇಲೆ ಮತ್ತು ಎಡ ಕೆನ್ನೆಯ ಮೇಲೆ ಬಲವಾಗಿ ಹೊಡೆದು ಹಲ್ಲೆ ಮಾಡಿ ಓಡಿ ಹೋಗಿರುತ್ತಾನೆ. ನಂತರ ಚಿಕಿತ್ಸೆಗಾಗಿ ಆಸ್ಷತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಸದರಿ ಆರೋಪಿ  ನದೀಂ ಅಹಮದ್ ಖಾನ್ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ.

ಪಿರ್ಯಾದಿ ರಾಮಣ್ಣ ರವರು ತಮ್ಮ ಬಾಬ್ತು ಹೋಂಡಾ ಆಕ್ಟೀವಾ ಸ್ಕೂಟರ್ ಅನ್ನು ದಿನಾಂಕ:11.02.2020 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ವಿಜಯನಗರ 02 ನೇ ಹಂತದಲ್ಲಿರುವ ಗೋವಿಂದಪ್ಪ ರವರ ಮನೆಯ ಮುಂದೆ ಕೀ ಸಮೇತ ನಿಲ್ಲಿಸಿ ಹೋಗಿ 20 ನಿಮಿಷ ಬಿಟ್ಟು ಬಂದು ನೋಡಲಾಗಿ ಸ್ಕೂಟರ್ ಕಳುವಾಗಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ.  

ಪಿರ್ಯಾದಿ ಚೈತ್ರ, #1824, 03 ನೇ ಕ್ರಾಸ್, ಮಹದೇವಪುರ ರವರು ನೀಡಿದ ದೂರೆಂದರೆ, ಪಿರ್ಯಾದಿ & ಆರೋಪಿ-ಪುನೀತ್ ಪರಸ್ಪರ ಪ್ರೀತಿಸಿ ದಿನಾಂಕ:10.04.2019 ರಂದು ಮದುವೆಯಾಗಿದ್ದು, ಮದುವೆಯಾದ ಸ್ವಲ್ಪ ದಿನದಲ್ಲಿಯೇ ಆರೋಪಿಯು ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ದಿನಾಂಕ:09.01.2020 ರಂದು ಮುಂಜಾನೆ ಸುಮಾರು 2.30 ಗಂಟೆಯಲ್ಲಿ ಆರೋಪಿಯು ಫಿರ್ಯಾದಿಯೊಂದಿಗೆ ವಿನಾ ಕಾರಣ ಜಗಳ ತೆಗೆದು, ಪಿರ್ಯಾದಿಯು ತಾನಾಗಿಯೇ ಸಾಯದಿದ್ದರೆ, ತಾನೇ ನೇಣು ಹಾಕಿ ಸಾಯಿಸುವುದಾಗಿ ಹೇಳಿ ಪ್ರಾಣ ಬೆದರಿಕೆ ಹಾಕಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.   

9

ರಸ್ತೆ ಅಪಘಾತ

02

ಕೆ ಆರ್ ಸಂಚಾರ ಠಾಣೆ.

ದಿನಾಂಕ;11/02/2020 ರಂದು ಬೆಳಿಗ್ಗೆ 07.40 ಗಂಟೆಯಲ್ಲಿ ಪಿರ್ಯಾದಿ ಆರ್.ಕೆ ರವಿಕೃಷ್ಣಕುಮಾರ್ ರವರು  ತಮ್ಮ ಇನೋವಾ ಕಾರ್ ನಂ KA-51-MH-0189 ರಲ್ಲಿ ಉತ್ತನಹಳ್ಳಿ ದೇವಸ್ಥಾನಕ್ಕೆ ಹೋಗುತ್ತಿದ್ದು ರಿಂಗ್ ರಸ್ತೆಯಲ್ಲಿ ಜೆ.ಪಿ.ನಗರದ ಕಡೆಯಿಂದ ಹೋಗಿ ನಂಜನಗೂಡು ರಸ್ತೆ ಜಂಕ್ಷನ್ ಡಾ.ಎ.ಪಿ.ಜೆ ಅಬ್ದುಲ್ ಕಲಂ ವೃತ್ತದಲ್ಲಿ   ಸಿಗ್ನಲ್ ಗೆ ಕಾಯುತ್ತ ನಿಲ್ಲಿಸಿಕೊಂಡಿದ್ದು  ಗ್ರೀನ್ ಸಿಗ್ನಲ್ ಬಂದ ನಂತರ ಕಾರನ್ನು ಮುಂದೆ ಸ್ವಲ್ಪ ಚಾಲನೆ ಮಾಡಿದಾಗ ಬಲಭಾಗದಿಂದ ನಂಜನಗೂಡು ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಂ KA-19-F-3180 ರ ಚಾಲಕ ರಮಾಕಾಂತ ತಿಮ್ಮಣ್ಣ ಗೌಡ  ಎಂಬುವನು ಬಸ್ಸನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು  ಕಾರಿನ ಮುಂಭಾಗದಲ್ಲಿ ಹೋಗುವಾಗ  ಬಸ್ಸಿನ ಎಡಬಾಗದ ಬಾಡಿ ಕಾರಿನ ಮುಂಭಾಗಕ್ಕೆ ಡಿಕ್ಕಿಯಾಗಿದ್ದು  ಕಾರು ಎಡಕ್ಕೆ ತಿರುಗಿಕೊಂಡು ನಿಂತಿದ್ದು  ಪಿರ್ಯಾದುದಾರರಿಗೆ  ಕಾರಿನ ಬಾಡಿ ತಲೆಗೆ ಬಡಿದು ಪೆಟ್ಟಾಗಿದ್ದು ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ ಸ್ನೇಹಿತರಾದ ದೀಪಕ್ ರವರು ಬಂದು ಉಪಚರಿಸಿದ್ದು,  ನಂತರ ಬಸ್ಸು ಮತ್ತು ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದು,  ಈ ಅಪಘಾತಕ್ಕೆ ಕಾರಣನಾದ  ಬಸ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

 ಪಿರ್ಯಾದಿ ಪುಟ್ಟಗೌರಮ್ಮ ರವರು ಕೆ.ಆರ್.ಎಸ್ ಗೆ ಹೋಗಲು ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಕೆ.ಆರ್.ಪೇಟೆಗೆ ಹೋಗುವ ಬಸ್ ನಂಬರ್ KA-11-F-0486 ರಲ್ಲಿ ಮುಂದಿನ ಬಾಗಿಲಿನ ಹತ್ತಿರ ಇರುವ ಸೀಟ್ ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದು, ಬಸ್ಸಿನ ಚಾಲಕ 100 ಅಡಿ ರಸ್ತೆಯಲ್ಲಿ ವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದು, ಶಾಂತಲಾ ಟಾಕೀಸ್ ಸಿಗ್ನಲ್ ಹತ್ತಿರ ಹೋದಾಗ ನಿಲ್ಲಲು ಸಿಗ್ನಲ್ ಬಂದಿದ್ದು, ಕಾರಿನ ಚಾಲಕ ಕಾರನ್ನು ನಿಲ್ಲಿಸಿದಾಗ ಬಸ್ಸಿನ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದು, ಕಾರಿನ ಹಿಂಭಾಗಕ್ಕೆ ಸ್ವಲ್ಪ ಡಿಕ್ಕಿ ಮಾಡಿದಾಗ ಪಿರ್ಯಾದುದಾರರು ಬ್ರೇಕ್ ಹಾಕಿದ ರಭಸಕ್ಕೆ ಮುಂದಕ್ಕೆ ಉರುಳಿ ಮುಂದಿನ ಬಾಗಿಲಿನ ಮುಖಾಂತರ ಹೊರಕ್ಕೆ ಬಿದ್ದು ಹೋಗಿದ್ದು, ಬಲಗೈಗೆ ಒಳೇಟಾಗಿದ್ದು, ಬಸ್ಸಿನ ಚಾಲಕ ಬಸಪ್ಪ ಹಲಗಿ ಎಂಬುವನು ತನ್ನ ಫೋನ್ ನಂಬರ್ 9845663187 ನ್ನು ನೀಡಿ ಚಿಕಿತ್ಸೆ ಮಾಡಿಸುವಂತೆ, ಚಿಕಿತ್ಸೆ ವೆಚ್ಚವನ್ನು ನೀಡುವುದಾಗಿ ತಿಳಿಸಿ ಬೇರೆ ಬಸ್ಸಿನಲ್ಲಿ ಕಳುಹಿಸಿದ್ದು, ನಂತರ ಪಿರ್ಯಾದುದಾರರಿಗೆ ಕೈ ಊದಿಕೊಂಡಿದ್ದರಿಂದ ದಿನಾಂಕ 01/02/2020 ರಂದು ಬೆಳಿಗ್ಗೆ ಜೆ.ಎಸ್.ಎಸ್ ಆಸ್ಪತ್ರೆಗೆ ಪರೀಕ್ಷಿಸಿಕೊಂಡಾಗ ಬಲಗೈನಲ್ಲಿ ಮೂಳೆ ಮುರಿದಿರುವುದಾಗಿ ತಿಳಿಸಿದ್ದು, ಬಸ್ಸಿನ ಚಾಲಕ ಫೋನ್ ನಲ್ಲಿ ಮಾತನಾಡಿ ಚಿಕಿತ್ಸೆಗೆ ಸಹಕರಿಸದಿದ್ದು, ದಿನಾಂಕ 06/02/2020 ರಂದು ಎಂ.ಎಲ್.ಸಿ ಮಾಡಿಸಿ ಆಸ್ಪತ್ರೆಗೆ ದಾಖಲಾಗಿ 09/02/2020 ರವರೆಗೆ ಚಿಕಿತ್ಸೆ ಪಡೆದುಕೊಂಡು ಡಿಸ್ ಚಾರ್ಜ್ ಆಗಿದ್ದು ಈ ದಿನ ಬಂದು ದೂರು ನೀಡುತ್ತಿದ್ದು, ಅಪಘಾತಕ್ಕೆ ಕಾರಣನಾದ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.

10

ವಂಚನೆ ಪ್ರಕರಣ 

01

ದೇವರಾಜ ಠಾಣೆ.

ಪಿರ್ಯಾದಿ ರಮೇಶ್ ಬಾಬು, ಮ್ಯಾನೇಜರ್ ರವರು ನೀಡಿದ ದೂರೆಂದರೆ, ಜಗನ್ಮೋಹನ ಅರಮನೆ ಹತ್ತಿರ ಚೋಳ ಮಂಡಲಮ್ ಇನ್ವೆಸ್ಟ್ ಮೆಂಟ್ ಪ್ರೈವೇಟ್ & ಫೈನಾನ್ಸ್ ಕಂಪೆನಿ, ಪರವಾಗಿ ಗ್ರಾಹಕರಿಂದ ಪ್ರತಿದಿನ ಹಣವನ್ನು ಸಂಗ್ರಹಿಸಿ ಸಂಬಂಧ ಪಟ್ಟ ಬ್ಯಾಂಕ್ ಗಳಿಗೆ ಜಮಾ ಮಾಡುವುದಾಗಿದ್ದು. ಅದರಂತೆ ಪ್ರೈವೇಟ್ ಲಿ.ಬ್ಯಾಂಕ್ ಪರವಾಗಿ ಏಜೆನ್ಸಿ ಕೆಲಸ ಮಾಡುತ್ತಿದ್ದ ಸೋಮೇಶರವರು ದಿ.29-01-2020 ರಿಂದ 01-02-2020 ರವರೆಗೆ ಮೈಸೂರಿನಲ್ಲಿರುವ ಹಲವು ಗ್ರಾಹಕರಿಂದ ಒಟ್ಟು 30.96.901 ರೂ/ ಗಳಷ್ಟು ಹಣವನ್ನು ಸಂಗ್ರಹ ಮಾಡಿ ಸಂಬಂಧ ಪಟ್ಟ ಬ್ಯಾಂಕ್ ಗಳಿಗೆ ಹಣವನ್ನು ಡೆಪೋಸಿಟ್ ಮಾಡದೆ ಮತ್ತು ಕೆಲಸಕ್ಕೂ ಬಾರದೆ ಹಣವನ್ನು ತೆಗೆದುಕೊಂಡು ಹೋಗಿ ಸ್ವಂತಕ್ಕೆ ಬಳಸಿ ಕಂಪನಿಗೆ ನಂಬಿಕೆ ದ್ರೋಹ & ಮೋಸ ಮಾಡಿದ್ದು, ಸದರಿರವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.  

11

ಮನುಷ್ಯ  ಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

01

ವಿದ್ಯಾರಣ್ಯಪುರಂ ಠಾಣೆ.

ದಿ;10-02-2020 ರಂದು ಬೆಳಿಗ್ಗೆ 7-05 ಗಂಟೆಯಲ್ಲಿ ವೆಂಕಟೇಶ, 28 ವರ್ಷ ರವರು ಕೆ ಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಎಂ.ಎಲ್‌.ಸಿ ಮೆಮೋವನ್ನು ದಿ;09-02-2020 ರಂದು ನೀಡಿದ್ದು ಪರಿಶೀಲಿಸಲಾಗಿ ವೆಂಕಟೇಶ ಬಿನ್‌‌ ಪುಟ್ಟಣ್ಣ, 28 ವರ್ಷ, ಹೊಸಹಳ್ಳಿ, ಚನ್ನಪಟ್ಟಣ ತಾಲ್ಲೂಕು, ರವರು ದಿನಾಂಕ;08-02-2020 ರಂದು ಸ್ಟರ್ಲಿಂಗ್‌ ಚಿತ್ರಮಂದಿರದ ಹತ್ತಿರ ಕೆಲಸ ಮಾಡುವ ಸ್ಥಳದಲ್ಲಿ ಎತ್ತರದ ಸ್ಥಳದಿಂದ ಬಿದ್ದು ಪೆಟ್ಟಾಗಿ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸುವ ಬಗ್ಗೆ.

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

DATE  :11-02-2020

SLNO

HEADS

                                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

154

179

153

-

165

651

2

TOTAL NUMBER OF CRR'S

578

266

315

565

405

2,129

3

TOTAL FINE AMOUNT COLLECTED

1,16,400

49,700

52,100

80,600

68,100

3,66,900

4

POLICE NOTICE ISSUED

-

 

 

-

 

-

5

PARKING TAGS

-

/

 

-

 

-

6

FATAL

-

 

 

-

 

-

7

NON FATAL

-

2

 

-

 

2

8

INTERCEPTOR CASES

-

57

110

-

85

252

9

SUSPENSION OF D.L.

-

-

 

-

 

-

11

Sec 283 IPC CASES

-

-

 

-

 

-

12

Sec 353 IPC CASES

-

-

 

-

 

-

13

TOWING CASES

-

17

2

5

9

33Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®